ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ
ಮೈಸೂರು

ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ

July 27, 2018

ತಿ.ನರಸೀಪುರ:  ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಿನ್ನೆಲೆ ಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಾಯಕ ಶಿವಕುಮಾರ್ ನೇತೃತ್ವದಲ್ಲಿ ಪಟ್ಟಣದ ಟೀಷಾಪ್, ಚಿಲ್ಲರೆ ಅಂಗಡಿ ಹಾಗೂ ಬಾರ್‍ಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಯಿತು.

ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆ ಯಲ್ಲಿ ಶಾಲಾ ಕಾಲೇಜಿನ 100 ಮೀಟರ್ ಅಂತರ ದೊಳಗೆ ತಂಬಾಕು ಉತ್ಪನ್ನ ಹಾಗೂ ಬೀಡಿ ಸಿಗರೇಟ್ ಮಾರಾಟ ಮಾಡುತ್ತಿದ್ದವರ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿ ಗಳ ತಂಡ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕುರಿತು ನಾಮಫಲಕ ಅಳವಡಿಸದ ಮಾಲೀಕರಿಗೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳಿಗೆ ದಂಡ ವಿಧಿಸಿ ಒಂದೇ ದಿನದಲ್ಲಿ 10.200 ರೂ. ವಸೂಲಿ ಮಾಡಿದರು. ಅಧಿಕಾರಿಗಳ ದಿಢೀರ್ ದಾಳಿಯನ್ನು ನೋಡಿದ ಕೆಲವರು ಕ್ಷಣಾರ್ಧ ದಲ್ಲೇ ತಮ್ಮ ಅಂಗಡಿಗಳನ್ನು ಮುಚ್ಚಿ ಪರಾರಿ ಯಾದರು. ಆದರೂ ಬಿಡದ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ದಂಡ ವಿಧಿಸುವ ಜೊತೆಗೆ ಮುಂದಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳ ಚಿಲ್ಲರೆ ವ್ಯಾಪಾರ ನಡೆಸದಂತೆ ಎಚ್ಚರಿಕೆ ನೀಡಿ ನಾಮಫಲಕ ಅಳವಡಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಾಯಕ ಶಿವಕುಮಾರ್ ಮಾತನಾಡಿ, ಜನರಿಗೆ ಅರಿವು ಮೂಡಿಸಲು ದಿಢೀರ್ ದಾಳಿ ನಡೆಸಿ ಕಡಿಮೆ ಪ್ರಮಾಣ ದಂಡ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆದರೆ ದಂಡದ ಜೊತೆಗೆ ಕಾನೂನಿನಡಿ ಶಿಕ್ಷೆ ಕೊಡಿಸಲು ಕ್ರಮವಹಿಸಲಾಗು ವುದೆಂದರು. ತಾಲೂಕು ಆರೋಗ್ಯಧಿಕಾರಿ ಬಿ.ಎಲ್. ಶ್ರೀನಿವಾಸ್, ಪುರಸಭೆ ಆರೋ ಗ್ಯಾಧಿಕಾರಿ ಚೇತನ್‍ಕುಮಾರ್, ಆರೋಗ್ಯ ಸಿಬ್ಬಂದಿ ರಾಜಣ್ಣ ಇತರರು ಇದ್ದರು.

Translate »