ಮಲ್ಕುಂಡಿ: ಬಿಜೆಪಿ ಗೆಲುವಿಗೆ ಸಹಕರಿಸಿದ ಪಕ್ಷದ ಕಾರ್ಯ ಕರ್ತರು ಹಾಗೂ ಕ್ಷೇತ್ರದ ಜನತೆಗೆ ಸದ ಚಿರಋಣಿಯಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹರ್ಷವರ್ಧನ್ ತಿಳಿಸಿದರು.
ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಗ್ರಾಮದ ನಾಯಕರ ಬೀದಿಯಲ್ಲಿ 20 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಅವರ ಹಾದಿಯಲ್ಲಿ ನಡೆದು ಅದೇ ರೀತಿಯಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ.
ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿ ಮಾದರಿ ಕ್ಷೇತ್ರವಾನ್ನಾಗಿ ಮಾಡು ತ್ತೇನೆ ಎಂದರು. ಇದೇ ವೇಳೆ ಶಾಲೆಯ ಮಕ್ಕಳಿಗೆ ಉಚಿತ ಶೂ ವಿತರಿಸಲಾಯಿತು. ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಚಿಕ್ಕರಂಗನಾಯಕ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಿಂಗಾರಿಪುರ ರಂಗ ರಾಜ್, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ಹಾಡ್ಯ ಶಂಕರ, ಎಸ್‍ಡಿಎಂಸಿ ಅಧ್ಯಕ್ಷ ರಮೇಶ್, ಗ್ರಾಪಂ ಸದಸ್ಯರಾದ ಕಾಂತರಾಜ್, ನಾಗರಾಜ್, ಗೋವಿಂದ ರಾಜ್, ಮತ್ತಿತ್ತರು ಹಾಜರಿದ್ದರು.