ಸಾಲಿಗ್ರಾಮ ಕೆರೆಗೆ ಜಿಪಂ ಸದಸ್ಯ ಸಾರಾ ನಂದೀಶ್ ಬಾಗಿನ
ಮೈಸೂರು

ಸಾಲಿಗ್ರಾಮ ಕೆರೆಗೆ ಜಿಪಂ ಸದಸ್ಯ ಸಾರಾ ನಂದೀಶ್ ಬಾಗಿನ

July 27, 2018

ಭೇರ್ಯ:  ಹಾರಂಗಿ ನಾಲಾ ಆಧುನೀಕರಣದಿಂದ ಈ ಭಾಗದ ರೈತರು ಒಂದು ಬೆಳೆ ಬೆಳೆಯಬಹುದು ಎಂದು ಮಿರ್ಲೆ ಜಿಪಂ ಸದಸ್ಯ ಸಾರಾ ನಂದೀಶ್ ತಿಳಿಸಿದರು. ಸಾಲಿಗ್ರಾಮದ ಕೆರೆ ಸಂಪೂರ್ಣ ವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜತೆಗೂಡಿ ಬಾಗಿನ ಅರ್ಪಿಸಿ ಮಾತನಾಡಿದರು.

ಹಾರಂಗಿ ನಾಲೆ ಬೂದನೂರು ಹಳ್ಳ ಮತ್ತು ಶಿಡ್ಲಹಳ್ಳಿದವರೆಗೆ ಹರಿಯುತ್ತಿದ್ದು, ಮುಂದೆ ನೀರು ಹರಿಸಲು ನೀರಾವರಿ ಅಧಿಕಾರಿಗಳು ಶ್ರಮವಹಿಸಬೇಕಾಗಿತ್ತು. ಕೊನೆ ಹಂತವರೆಗೆ ನೀರು ಇದುವರೆವಿಗೂ ಹರಿದಿಲ್ಲ ಎಂದ ಅವರು ಈ ಬಾರಿ ವರುಣನ ಕೃಪೆಯಿಂದ ಎಲ್ಲೆಡೆ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದ್ದು, ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾ ಗುತ್ತದೆ ಎಂದರು.

ಸಾಲಿಗ್ರಾಮ ಹೋಬಳಿ ಕೆಡಗ ಗ್ರಾಮದ ಬಳಿ ಕಾವೇರಿ ನದಿಯಿಂದ ಏತ ನೀರಾ ವರಿ ಯೋಜನೆಗೆ ಸುಮಾರು 60 ಕೋಟಿ ವೆಚ್ಚದಲ್ಲಿ ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು. ಕೆಡಗ, ಮಾವನೂರು, ಹೊನ್ನೇನಹಳ್ಳಿ, ಬೆಟ್ಟಹಳ್ಳಿ, ಮಲುಗನಹಳ್ಳಿ, ಹರದನಹಳ್ಳಿ, ಶೀಗವಾಳು, ಕಾಳಮ್ಮನಕೊಪ್ಪಲು, ಸೇರಿ ದಂತೆ ಮೂಡಲಬೀಡು, ಮೇಲೂರು, ಬಾಚಹಳ್ಳಿ, ಸಂಕನಹಳ್ಳಿ, ಕೊಡಿಯಾಲ, ಬಟಿಗನಹಳ್ಳಿಗಳ ಮೂಲಕ ಭೇರ್ಯ ಗ್ರಾಮದವರೆಗೆ ಹಾರಂಗಿ ನಾಲೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.

ಸಚಿವ ಸಾ.ರಾ.ಮಹೇಶ್ ಅವರು ಬರುವ ಆಗಸ್ಟ್ 3 ಮತ್ತು 4ರಂದು ಮಿರ್ಲೆ ಜಿ.ಪಂ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದ್ದು, ಗ್ರಾಮ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷರಾದ ಪ್ರಕಾಶ್, ಎಸ್.ವಿ.ನಟರಾಜ್, ಸದಸ್ಯರಾದ ಕೋಟೆಗೌಡ, ರವೀಶ್, ಲಕ್ಷಮ್ಮ, ಯಶೋದಮ್ಮ, ಮಂಜುನಾಥ್, ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ.ಅಶೋಕ್, ಗ್ರಾಪಂ ಮಾಜಿ ಸದಸ್ಯ ಅಯಾಜ್, ಸಾಲಿಗ್ರಾಮ ಹೋಬಳಿ ಜೆಡಿಎಸ್ ಅಧ್ಯಕ್ಷ ತಿಮ್ಮಪ್ಪ, ಮುಖಂಡ ನಾಗರಾಜು, ವಾಹನ ಚಾಲಕ ಸಂಘದ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಯುವ ಮುಖಂಡ ಬದ್ರೆನಾಗರಾಜು, ಚಂದು ಮತ್ತಿತರರು ಇದ್ದರು.

Translate »