ನರಸೀಪುರ ಆಸ್ಪತ್ರೆಗೆ ಶಾಸಕದ್ವಯರ ಭೇಟಿ, ಪರಿಶೀಲನೆ
ಮೈಸೂರು

ನರಸೀಪುರ ಆಸ್ಪತ್ರೆಗೆ ಶಾಸಕದ್ವಯರ ಭೇಟಿ, ಪರಿಶೀಲನೆ

July 27, 2018

ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಹಾಗೂ ತಿ.ನರಸೀಪುರ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಔಷದ ಉಗ್ರಾಣ, ಡಯಾಲಿ ಸಿಸ್ ಘಟಕ, ವಾರ್ಡ್‍ಗಳು, ಹೆರಿಗೆ ಕೊಠಡಿ ಹಾಗೂ ಶೌಚಗೃಹ ಸೇರಿದಂತೆ ಆಸ್ಪತ್ರೆಯ ಒಳ ಹಾಗೂ ಹೊರಾಂಗಣವನ್ನು ಜಂಟಿ ಯಾಗಿ ಪರಿಶೀಲನೆ ನಡೆಸಿದ ಶಾಸಕರು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.

ತ್ವರಿತಗತಿಯಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನನ್ವಯ ಕಾರ್ಡ್ ವಿತರಣೆ ಕೊಠಡಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಶಾಸಕ ಯತೀಂದ್ರ, ಸ್ಥಳದಿಂದಲೇ ಆರೋಗ್ಯ ಇಲಾಖೆ ಜೆಡಿಗೆ ಕರೆ ಮಾಡಿ ಮಾತನಾಡಿದರು. ತುರ್ತಾಗಿ ಮತ್ತೆರೆಡು ಕಾರ್ಡ್ ಪ್ರೀಟಿಂಗ್ ಮಿಷನ್ ತರಿಸಿಕೊಂಡು ತ್ವರಿತ ವಾಗಿ ಆರೋಗ್ಯ ಕಾರ್ಡ್ ವಿತರಿಸುವಂತೆ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಸಾರ್ವಜನಿಕರಿಂದ ದೂರಿನ ಸುರಿಮಳೆ: ಆಸ್ಪತ್ರೆಯಲ್ಲಿ ಹೆರಿಗೆ, ಸಣ್ಣಪುಟ್ಟ ಅಪರೇ ಷನ್ ಹಾಗೂ ಉಚಿತ ಡಯಾಲಿಸಿಸ್ ಮಾಡಲು ಹಣ ನೀಡಬೇಕು. ಹಣ ನೀಡದ ರೋಗಿಗಳಿಗೆ ಇಲ್ಲಿನ ವೈದ್ಯರು, ಸಿಬ್ಬಂದಿ ಗಳು ಚಿಕಿತ್ಸೆ ನೀಡಲು ಸಾಧ್ಯವಿಲ್ಲ.

ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ಇದ್ದು, ಮಲಗಿಸಿ ಇಂಜೆಕ್ಷನ್ ನೀಡಬೇಕಾದ ಆಸ್ಪತ್ರೆಯ ನರ್ಸ್ ಗಳು ಮಹಿಳೆಯರು, ಮಕ್ಕಳು, ವೃದ್ದರು ಎನ್ನದೇ ನಿಲ್ಲಿಸಿಕೊಂಡೇ ರೋಗಿಗಳಿಗೆ ಇಂಜೆ ಕ್ಷನ್ ಕೊಡುತ್ತಿದ್ದಾರೆಂದು ಸಾರ್ವಜನಿಕರು ದೂರಿದರು. ದೂರು ಆಲಿಸಿ ಮಾತನಾಡಿದ ಶಾಸಕ ಡಾ.ಯತೀಂದ್ರ ಆಸ್ಪತ್ರೆಗೆ ಬೇಕಾದ ಸೌಲಭ್ಯ ಗಳ ಕುರಿತು ಪಟ್ಟಿ ಮಾಡಿ ವರದಿ ನೀಡುವಂತೆ ಆಡಳಿತಾಧಿಕಾರಿಗೆ ಸೂಚಿಸಿದ್ದು, ಬೇಕಾದ ಅಗತ್ಯ ಸೌಕರ್ಯವನ್ನು ಒದಗಿಸಲು ಕ್ರಮವಹಿಸಲಾಗುವುದು.

ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ಹಾಗೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಕೊರತೆಯಿದ್ದು, ಸಂಬಂಧಪಟ್ಟ ಸಚಿವರು ಹಾಗೂ ಆರೋಗ್ಯ ಇಲಾಖೆ ಮೇಲಾ ಧಿಕಾರಿಗಳ ಗಮನಕ್ಕೆ ತಂದೂ ಸಮಸ್ಯೆ ಬಗೆಹರಿ ಸುತ್ತೇನೆ ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್‍ಮುದ್ದೇ ಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಹೆಳವರಹುಂಡಿ ಸೋಮು, ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂತೃಪ್ತಿಕುಮಾರ್, ಗುತ್ತಿಗೆ ದಾರ್ ಪ್ರಸಾದ್, ಹಿರಿಯ ಮುಖಂಡ ಪಿ.ಸ್ವಾಮಿನಾಥ್‍ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ತಾಲೂಕು ಆರೋಗ್ಯಾ ಧಿಕಾರಿ ಬಿ.ಎಲ್.ಶ್ರೀನಿವಾಸ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗೋವಿಂದರಾಜು, ಡಾ.ಗೊವಿಂದಶೆಟ್ಟಿ ಇತರರು ಇದ್ದರು.

Translate »