ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಕಾರ್ಗಿಲ್ ದಿವಸ್ ಆಚರಣೆ
ಮೈಸೂರು

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಕಾರ್ಗಿಲ್ ದಿವಸ್ ಆಚರಣೆ

July 27, 2018

ಮೈಸೂರು:  19ನೇ ಕಾರ್ಗಿಲ್ ದಿವಸ್ ಅಂಗವಾಗಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಮಹಾರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಬಳಿಕ ಮಾತನಾಡಿ, ಯೋಧರಲ್ಲಿರುವ ಶಿಸ್ತು, ರಾಷ್ಟ್ರೀಯತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ದೇಶವನ್ನು ರಕ್ಷಿಸುವ ಯೋಧರ ಬಗೆಗಷ್ಟೇ ಅಲ್ಲದೆ ನಾಡು- ನುಡಿ ವಿಚಾರದಲ್ಲೂ ಆತ್ಮಗೌರವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಉಪಕುಲಸಚಿವ ಡಾ.ಶೈಲ್ವಪಿಳ್ಳೈ ಅಯ್ಯಂಗಾರ್, ಮಹಾರಾಜ ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀಧರ್‍ರಾಜೇ ಅರಸ್, ಉಪಪ್ರಾಂಶುಪಾಲ ಡಾ.ಡಿ.ಮಹೇಶ್, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ವಿದ್ಯಾರ್ಥಿ ಘಟಕ ಕಾರ್ಯದರ್ಶಿ ಸಾರಂಗ್‍ಪಾಣಿ, ಕನ್ನಡ ಕ್ರಾಂತಿದಳ ಯುವ ಘಟಕದ ಅಧ್ಯಕ್ಷ ತೇಜಸ್ವಿಕುಮಾರ್, ರಾಜೇಶ್‍ಗಡಿ ಇನ್ನಿತರರು ಉಪಸ್ಥಿತರಿದ್ದರು.

Translate »