ಮೈಸೂರು

ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿಗೆ ಅಗ್ನಿ ಶಮನದ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ
ಮೈಸೂರು

ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿಗೆ ಅಗ್ನಿ ಶಮನದ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ

July 26, 2018

ಮೈಸೂರು: ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ಎರಡು ದಿನಗಳ ಅಗ್ನಿಶಾಮಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅಗ್ನಿಶಾಮಕ ದಳದ ನುರಿತ ಅಧಿಕಾರಿಗಳು ಹೊತ್ತಿ ಉರಿಯುತ್ತಿರುವ ಕಟ್ಟಡಗಳಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಅನುಸರಿಸ ಬೇಕಾದ ತಂತ್ರಗಳು, ಬೆಂಕಿ ಆರಿಸುವಿಕೆ ಕುರಿತು ಪ್ರಾತ್ಯಕ್ಷಿತೆ ನೀಡಿದರು. ಹಾಗೆಯೇ ಅಗ್ನಿಶಾಮಕ ಸಿಬ್ಬಂದಿ ಅಗ್ನಿದಹನ ಸಿದ್ದಾಂತ, ಅಗ್ನಿಯ ವರ್ಗೀಕರಣ ಮತ್ತು ಬೆಂಕಿ ಆರಿಸುವ ವಿಧಾನಗಳನ್ನು ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಹಂಚಿಕೊಂಡರು. ಈ ಸಂದರ್ಭ ಕೊಲಂಬಿಯಾ ಏಷಿಯಾ ಆಸ್ಪತ್ರೆ…

ಮೈಸೂರಲ್ಲಿ ಮಾರಕ ಡೆಂಗ್ಯೂ, ಚಿಕನ್ ಗುನ್ಯಾ ಅರಿವು ಜಾಥ
ಮೈಸೂರು

ಮೈಸೂರಲ್ಲಿ ಮಾರಕ ಡೆಂಗ್ಯೂ, ಚಿಕನ್ ಗುನ್ಯಾ ಅರಿವು ಜಾಥ

July 26, 2018

ಮೈಸೂರು: ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ಕುರಿತು ಮೈಸೂರಿನ ಕುವೆಂಪುನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜಾಗೃತಿ ಜಾಥದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಿತ್ತಿ ಪತ್ರ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕುವೆಂಪುನಗರ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಜಾಗೃತಿ ಜಾಥಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು, ಪಾಲಿಕೆ ಸದಸ್ಯರಾದ ಎಂ.ಕೆ.ಶಂಕರ್ ಹಾಗೂ ಕೆ.ವಿ.ಮಲ್ಲೇಶ್ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾದ ಜಾಥ…

ಮೈಸೂರಲ್ಲಿ ಉದ್ಯೋಗ ಮೇಳ ಪಾಲ್ಗೊಂಡಿದ್ದ 720 ಮಂದಿಯಲ್ಲಿ 180 ಜನರಿಗೆ ಉದ್ಯೋಗ ಭಾಗ್ಯ
ಮೈಸೂರು

ಮೈಸೂರಲ್ಲಿ ಉದ್ಯೋಗ ಮೇಳ ಪಾಲ್ಗೊಂಡಿದ್ದ 720 ಮಂದಿಯಲ್ಲಿ 180 ಜನರಿಗೆ ಉದ್ಯೋಗ ಭಾಗ್ಯ

July 26, 2018

ಮೈಸೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಡಿ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 720 ಉದ್ಯೋಗಾಕಾಂಕ್ಷಿಗಳ ಪೈಕಿ 180 ಮಂದಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ವಿಶ್ವ ಕೌಶಲ್ಯ ದಿನದ ಅಂಗವಾಗಿ ಮೈಸೂರಿನ ಎನ್‍ಆರ್ ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗ ಮತ್ತು ಚಾಮರಾಜನಗರ, ಮಂಡ್ಯ ಸೇರಿದಂತೆ ಇನ್ನಿತರ ಜಿಲ್ಲೆಗಳ…

ಮಹಾರಾಜ ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ಥಿ ಕಾರ್ಯ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ತಪಾಸಣೆ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜನೆ
ಮೈಸೂರು

ಮಹಾರಾಜ ಪದವಿ ಪೂರ್ವ ಕಾಲೇಜು ಕಟ್ಟಡ ದುರಸ್ಥಿ ಕಾರ್ಯ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ತಪಾಸಣೆ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜನೆ

July 26, 2018

ಮೈಸೂರು: ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನ ಕಟ್ಟಡದ ದುರಸ್ಥಿ ಕಾಮಗಾರಿಯಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಬುಧವಾರ ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕದ ಸಹಯೋಗದಲ್ಲಿ `ಸ್ಫೂರ್ತಿ’ ಮಹಿಳಾ ಘಟಕ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು, ಇದರಲ್ಲಿ 120ಕ್ಕೂ ಹೆಚ್ಚು ಮಂದಿ ವಿವಿಧ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡರು. `ಹೆಲ್ತ್ ಆನ್ ವೀಲ್ಸ್’ ಕಾರ್ಯಕ್ರಮದಡಿ ಸ್ಫೂರ್ತಿ ಮಹಿಳಾ ಘಟಕ, ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟೆಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ…

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸುರಕ್ಷತೆಗೆ ಕ್ಷಿಪ್ರ ಕಾಮಗಾರಿ ಆರಂಭ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸುರಕ್ಷತೆಗೆ ಕ್ಷಿಪ್ರ ಕಾಮಗಾರಿ ಆರಂಭ

July 26, 2018

ಮೈಸೂರು: ಅನಾಮಿಕ ಕಾಮುಕ ದಾಳಿ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆ ಆಡಳಿತವು ನರ್ಸಿಂಗ್ ಹಾಸ್ಟೆಲ್ ಕಟ್ಟಡದಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಆರಂಭಿಸಿದೆ. ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಸ್ಪತ್ರೆ ಸರ್ಜಿಕಲ್ ಬ್ಲಾಕ್ ಪಕ್ಕದಲ್ಲಿರುವ ನರ್ಸಿಂಗ್ ಹಾಸ್ಟೆಲ್ ಮತ್ತು ಬಿಎಸ್ಸಿ ನರ್ಸಿಂಗ್ ಹಾಸ್ಟೆಲ್‍ಗಳ ಪರಿಶೀಲನೆ ನಡೆಸಿ ಕಟ್ಟಡಗಳ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಇಂದು ಬೆಳಗ್ಗೆಯಿಂದಲೇ ಕಾಮಗಾರಿ ಆರಂಭವಾಗಿದ್ದು, ಕಟ್ಟಡಗಳ ಸುತ್ತ ಯಾರೂ ಸುಳಿಯದಂತೆ ಕಬ್ಬಿಣದ ಗ್ರಿಲ್ ಮತ್ತು ಮೆಸ್…

ಕೆ.ಆರ್.ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿಗಳು ರಜೆ ಮೇಲೆ ಮನೆಗೆ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿಗಳು ರಜೆ ಮೇಲೆ ಮನೆಗೆ

July 26, 2018

ಮೈಸೂರು: ಅನಾಮಿಕನೋರ್ವ ಆತಂಕ ಹುಟ್ಟಿಸಿದ್ದಾನೆಂದು ಹೇಳಲಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದ ನರ್ಸಿಂಗ್ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳನ್ನು ರಜೆ ಮೇಲೆ, ಮನೆಗೆ ಕಳುಹಿಸಲಾಗಿದೆ. ಘಟನೆಯಿಂದ ಆತಂಕಗೊಂಡು, ಮಾನಸಿಕವಾಗಿ ವಿಚಲಿತರಾಗಿದ್ದ 112 ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಹಾಗೂ 165 ಮಂದಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳನ್ನು ಜು 31ರವರೆಗೆ ರಜೆ ಮೇಲೆ ಅವರ ಪೋಷಕರನ್ನು ಕರೆಸಿ ಕಳುಹಿಸಿಕೊಡಲಾಗಿದೆ ಎಂದು ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ|| ಎಂ.ಎಸ್.ರಾಜೇಶ್‍ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಸಂಜೆಯೇ ಬಹುತೇಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳನ್ನು ತೆರವುಗೊಳಿಸಿ ಲಗೇಜ್‍ನೊಂದಿಗೆ ತೆರಳಿದರೆ,…

ರಾತ್ರಿ 12 ಗಂಟೆ ನಂತರ ಓಡಾಡುವವರ ಫೋಟೋ ತೆಗೆದು ವಿಚಾರಣೆ
ಮೈಸೂರು

ರಾತ್ರಿ 12 ಗಂಟೆ ನಂತರ ಓಡಾಡುವವರ ಫೋಟೋ ತೆಗೆದು ವಿಚಾರಣೆ

July 26, 2018

ಮೈಸೂರು: ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರು ಎಚ್ಚರದಿಂದಿರಬೇಕು. ಏಕೆಂದರೆ ಮೈಸೂರು ಪೊಲೀಸರು ತಡೆದು ನಿಲ್ಲಿಸಿ ಫೋಟೋ ತೆಗೆದು, ವಿಚಾರಣೆ ಮಾಡುತ್ತಿದ್ದಾರೆ. ಅಪರಾಧಗಳನ್ನು ತಡೆಗಟ್ಟಲು ಮೈಸೂರು ನಗರದಾದ್ಯಂತ ಕಾನೂನು ಸುವ್ಯವಸ್ಥೆ(ಐ&ಔ) ಪೊಲೀಸರು ರಾತ್ರಿ ಗಸ್ತನ್ನು ಚುರುಕುಗೊಳಿಸಿದ್ದು, ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರ ನಿಲ್ಲಿಸಿ, ಅವರ ಫೋಟೋ ತೆಗೆದು ವಿಚಾರಣೆ ಮಾಡಲಿದ್ದಾರೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ|| ವಿಕ್ರಂ ವಿ.ಅಮಟೆ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಹೆಸರು, ವಿಳಾಸ, ವೃತ್ತಿ, ಎಲ್ಲಿಂದ ಎಲ್ಲಿಗೆ…

ದಲಿತರ ವಿಳ್ಯೆದೆಲೆ ತೋಟಗಳ ಉಳಿಸಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ, ಧರಣಿ
ಮೈಸೂರು

ದಲಿತರ ವಿಳ್ಯೆದೆಲೆ ತೋಟಗಳ ಉಳಿಸಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ, ಧರಣಿ

July 26, 2018

ಮೈಸೂರು: ದಲಿತರ ವಿಳ್ಯೆದೆಲೆ ತೋಟಗಳನ್ನು ಉಳಿಸಬೇಕು. 245 ವಿಳ್ಯೆದೆಲೆ ವ್ಯವಸಾಯಗಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಆಶ್ರಯದಲ್ಲಿ ನೂರಾರು ಮಂದಿ ಬುಧವಾರ ಮೈಸೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ಮೈಸೂರು ನ್ಯಾಯಾಲಯ ಎದುರಿನ ಗಾಂದಿ ಪುತ್ಥಳಿ ಬಳಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಅಲ್ಲಿ ಧರಣಿ ಕುಳಿತರು. ವಿಳ್ಯೆದೆಲೆ ಬೆಳೆದು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಕೆಲವು ರಿಯಲ್…

ತಮ್ಮ ವಿವಿಧ ಬೇಡಿಕೆಗೆ ಸ್ಪಂದಿಸದ  ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು

ತಮ್ಮ ವಿವಿಧ ಬೇಡಿಕೆಗೆ ಸ್ಪಂದಿಸದ  ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

July 26, 2018

ಮೈಸೂರು:  ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರ್ವಾಧಿಕಾಯಂತೆ ವರ್ತಿಸುತ್ತಿದ್ದಾರೆ ಎಂದು ಖಂಡಿಸಿ, ಜೊತೆಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‍ನ ಕಾರ್ಯಕರ್ತೆಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಕೆಲಸಗಳ ಬಗ್ಗೆ ಅಸಡ್ಡೆ ಧೋರಣೆ ಅನುಸರಿಸುತ್ತಿದ್ದಾರೆ. ಇದರ ಫಲವಾಗಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ಸಲ್ಲಬೇಕಾದ ಹಲವಾರು ಸೌಲಭ್ಯಗಳನ್ನು ವಂಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಉಡಾಫೆ ಉತ್ತರ…

ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ
ಮೈಸೂರು

ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ

July 26, 2018

ಮೈಸೂರು: ಗುರು ಪೂರ್ಣಿಮೆ ಅಂಗವಾಗಿ ಮೈಸೂರಿನ ವಿವಿಧೆಡೆ ಗುರು ಪೂಜಾ ಕಾರ್ಯಕ್ರಮಗಳನ್ನು ಜುಲೈ 27ರ ಶುಕ್ರವಾರದಂದು ಹಮ್ಮಿ ಕೊಳ್ಳಲಾಗಿದೆ. ಆಲನಹಳ್ಳಿ: ಇಲ್ಲಿನ ರುಕ್ಮಿಣಿ ರಾಮ ಚಂದ್ರ ಕಲ್ಯಾಣ ಮಂಟಪದಲ್ಲಿ ಗುರು ಪೂಜಾ ಕಾರ್ಯಕ್ರಮ ಏರ್ಪಡಿಸ ಲಾಗಿದ್ದು ಬೆಳಗ್ಗೆ 6ಕ್ಕೆ ಕಾಕಡಾರತಿ, 7.30ಕ್ಕೆ ಗಣಪತಿ ಹೋಮ, ದತ್ತಾ ತ್ರೆಯ ಹೋಮ, ಅಭಿಷೇಕ ಸೇರಿ ದಂತೆ ಇತರ ಪೂಜಾ ಕಾರ್ಯಗಳು ನಡೆಯಲಿದೆ. ನಂತರ 10 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಅಂಗವಿಕಲ ಶಾಲಾ ಮಕ್ಕಳಿಂದ ಪೂಜೆ, ಸುಮಂಗಲೀ ಪೂಜೆ, ಪೂರ್ಣಾಹುತಿ…

1 1,467 1,468 1,469 1,470 1,471 1,611
Translate »