ಮೈಸೂರು: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ಗಂಡಸು ಜುಲೈ 3ರಂದು ಮೃತಪಟ್ಟಿದ್ದು, ಮೃತ ದೇಹವು ಕೆ.ಆರ್. ಆಸ್ಪತ್ರೆಯ ಶವಾ ಗಾರದಲ್ಲಿರುತ್ತದೆ. ಚಹರೆ ಇಂತಿದೆ: ಎತ್ತರ 5.6 ಅಡಿ, ಸಣ್ಣದಾದ ಮೈಕಟ್ಟು, ಕೋಲುಮುಖ, ಗಿಡ್ಡ ಮೂಗು, ಅಗಲವಾದ ಕಿವಿ, ತಲೆಯಲ್ಲಿ 4 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಇರುತ್ತದೆ. ಮೃತನ ಮೈಮೇಲೆ ಆಸ್ಪತ್ರೆಯ ಒಂದು ಹಸಿರು ಬಟ್ಟೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಗಳು ಇರುವುದಿಲ್ಲ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ…
ಸಚಿವ ಸಾರಾ ಮಹೇಶ್ ಗ್ರಾಮ ವಾಸ್ತವ್ಯ ಸಿದ್ಧತೆ ಪರಿಶೀಲನೆ
July 5, 2018ಭೇರ್ಯ: ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರ ಹರದನಹಳ್ಳಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕಾಗಿ ಕೈಗೊಂಡಿರುವ ಸಿದ್ಧತೆಯನ್ನು ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್ ಪರಿಶೀಲಿಸಿದರು. ಹರದನಹಳ್ಳಿಗೆ ಬುಧವಾರ ಭೇಟಿ ನೀಡಿದ್ದ ಅವರು, ಸಚಿವರ ವಾಸ್ತವ್ಯಕ್ಕಾಗಿ ಅಂದು ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳ ವಾಸ್ತವ್ಯ ಹಾಗೂ ಊಟೋಪಚಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಅಲ್ಲದೆ ಹರದನಹಳ್ಳಿ ಹಾಗು ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಹರಿಸಿರುವ ಸಮಸ್ಯೆಗಳು ಹಾಗು ಪರಿಹರಿಸಬೇಕಾದ ಸಮಸ್ಯೆಗಳ ಕುರಿತು ಪಟ್ಟಿ…
ಮೈಸೂರಿನ 12 ಮಂದಿ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ
July 4, 2018ನೇಪಾಳದಲ್ಲಿ ಭಾರೀ ಮಳೆಗೆ ಸಿಲುಕಿರುವ ಮೈಸೂರು ಯಾತ್ರಾರ್ಥಿಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ, ಸುರಕ್ಷಿತವಾಗಿ ಕರೆತರಲು ನಿರಂತರ ಪ್ರಯತ್ನ ಮೈಸೂರು: ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂ ರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತ ದೃಢಪಡಿಸಿಕೊಂಡಿದೆ. ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಒಟ್ಟು 290 ಮಂದಿ ನೇಪಾಳದ ಸಿಮಿಕೋಟ್‍ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿ ಪರದಾಡುತ್ತಿದ್ದಾರೆಂಬ ಮಾಹಿತಿ ಸೋಮವಾರ ರಾತ್ರಿ ಸಿಕ್ಕಿತ್ತು. ಆ ಪೈಕಿ ಮೈಸೂರಿನ 12 ಮಂದಿ ಯಾತ್ರಾರ್ಥಿ ಗಳೂ…
ಒಂದು ದಿನ ಮುಂಚಿತವಾಗಿ ಹೊರಟ ಮೈಸೂರಿನ 6, ಚಾ.ನಗರದ ಇಬ್ಬರು ಸೇರಿ 26 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ವಾಪಸ್
July 4, 2018ಮೈಸೂರು: ಶ್ರೀರಂಗಪಟ್ಟಣದಲ್ಲಿರುವ ಮಂಡಲ್ ಟ್ರಾವಲ್ಸ್ ಮೂಲಕ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 26 ಮಂದಿ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಟ್ರಾವಲ್ಸ್ ಮಾಲೀಕ ಶ್ರೀಕಾಂತ್ ಶರ್ಮ ನೇತೃತ್ವದಲ್ಲಿ ಮೈಸೂರಿನ ಕೃಷ್ಣಕುಮಾರ್, ಸುರೇಶ್, ಮರಿಯಪ್ಪ, ನಾಗರಾಜು ನಾರಾಯಣಮೂರ್ತಿ, ವಿಜಯಲಕ್ಷ್ಮೀ, ಚಾಮರಾಜನಗರದ ನಾಗರಾಜು, ಸೇರಿದಂತೆ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿಯ ಒಟ್ಟು 26 ಯಾತ್ರಾರ್ಥಿ ಗಳು ಇಂದು ಸಂಜೆ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಜೂ.19ರಂದು ಮೈಸೂರಿನಿಂದ ಹೊರಟಿದ್ದ ನಾವು, ಜೂ.28ರಂದು ಮಾನಸ ಸರೋವರದಲ್ಲಿ ನಡೆದ ಪೌರ್ಣಮಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, 3 ದಿನದಲ್ಲಿ ಕೈಲಾಸ…
ರೈತರ ಸಾಲ ಮನ್ನಾಕ್ಕೆ ಖಜಾನೆ ತುಂಬಿಸಲು ಸಂದು ಗೊಂದಿಗೆ ಕೈ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ
July 4, 2018ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಮಾಡಲು ಹೊರಟಿ ರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಯೋಜನೆಗಳಿಗೆ ಮೀಸಲಿರಿಸಿದ ಹಣ ವೆಚ್ಚ ಮಾಡದೆ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇಟ್ಟಿರುವ ಸಾವಿರಾರು ಕೋಟಿ ರೂ. ಗಳನ್ನು ಹಿಂದಕ್ಕೆ ಪಡೆಯಲು ಹಣಕಾಸು ಇಲಾಖೆಗೆ ಆದೇಶ ನೀಡಿದ್ದಾರೆ. ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ, ಮುಜರಾಯಿ, ವಸತಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಳೆದ ಕೆಲವಾರು ವರ್ಷಗಳಿಂದ ಮೀಸಲಿಟ್ಟಿದ್ದ ಹಣವನ್ನು ಅಧಿಕಾರಿಗಳು ವೆಚ್ಚ ಮಾಡಿಲ್ಲ. ಇಲಾಖೆಯ ಗಮನಕ್ಕೂ ತಾರದೆ, ಕೆಲವು ಅಧಿಕಾರಿಗಳು ನೂರಾರು ಕೋಟಿ…
ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ
July 4, 2018ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜು.5ರಂದು ಮಂಡಿಸಲಿರುವ ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಬೆನ್ನಲ್ಲೇ ರೈತರ ಖಾಸಗಿ ಸಾಲ ಮನ್ನಾ ಬಗ್ಗೆ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕಾವೇರಿದ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳು ಚುನಾವಣೆಗೂ ಮುನ್ನ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ…
ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!
July 4, 2018ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು. ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡುತ್ತಿದ್ದರು. ಹೆಚ್.ಡಿ. ರೇವಣ್ಣ ಮಧ್ಯೆ ಎದ್ದು ನಿಂತರಾದರೂ, ಏನೂ ಮಾತನಾಡದೇ ಹಾಗೇ ಕುಳಿತುಕೊಂಡರು. ಮೊದಲ ಬಾರಿಗೆ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ತಾವು ಭಾಗವಹಿಸಿರುವ ಚೊಚ್ಚಲ ಅಧಿವೇಶನದ…
ಹಿನಕಲ್ ರಿಂಗ್‍ರೋಡ್ ಜಂಕ್ಷನ್‍ನ ಫ್ಲೈಓವರ್ ಕಾಮಗಾರಿ ಅಕ್ಟೋಬರ್‍ನಲ್ಲಿ ಪೂರ್ಣ
July 4, 2018ಮೈಸೂರು: 2016ರ ಜೂನ್ ಮಾಹೆಯಲ್ಲಿ ಆರಂಭವಾಗಿದ್ದ ಮೈಸೂರಿನ ಹಿನಕಲ್ ರಿಂಗ್‍ರೋಡ್ ಜಂಕ್ಷನ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ 2018ರ ಅಕ್ಟೋಬರ್ ವೇಳೆಗೆ ಪೂರ್ಣ ಗೊಳ್ಳಲಿದೆ. ಗ್ರೇಡ್ ಸೆಪರೇಟರ್ ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆ ಇದೀಗ ಫ್ಲೈಓವರ್ ಆಗಿ ಪರಿವರ್ತನೆಯಾಗಿದ್ದು, 14.81 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ 2016ರ ಏಪ್ರಿಲ್ 27ರಂದು ಕಾರ್ಯಾದೇಶ (Work order) ನೀಡಲಾಗಿತ್ತಾದರೂ, ಸಂಚಾರ ದಟ್ಟಣೆ, ಪೈಪ್ ಲೈನ್‍ಗಳ ಸ್ಥಳಾಂತರ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದರಿಂದ ಈ ಯೋಜನಾ ವೆಚ್ಚ 19.4…
ರಾಜ್ಯದ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ
July 4, 2018ಬೆಂಗಳೂರು: ಮಾನಸ ಸರೋವರ ಯಾತ್ರೆಗೆ ತೆರ ಳಿರುವ ರಾಜ್ಯದ ಯಾತ್ರಾರ್ಥಿಗಳು ಇದುವರೆಗೆ ಸುರಕ್ಷಿತ ವಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಭಾರೀ ಮಳೆ ಯಿಂದಾಗಿ ಯಾತ್ರಾರ್ಥಿಗಳಿಗೆ ತೊಂದರೆ ಯಾಗಿರುವುದು ನಿಜ. ಯಾತ್ರೆಗೆ ತೆರಳಿದ್ದ 525 ಯಾತ್ರಾರ್ಥಿಗಳ ಪೈಕಿ ರಾಜ್ಯದ 250 ಯಾತ್ರಾರ್ಥಿಗಳಿದ್ದು, ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಯಾತ್ರಾರ್ಥಿಗಳ ರಕ್ಷಣೆಗೆ ಧಾವಿಸುವಂತೆ ಕೇಂದ್ರದ ಗೃಹ ಇಲಾಖೆ, ವಿದೇಶಾಂಗ ವ್ಯವಹಾರಗಳ…
ಔತಣ ಕೂಟದ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
July 4, 2018ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಶಾಸಕ ರಿಗೆ ಔತಣಕೂಟ ಏರ್ಪ ಡಿಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ. ಈ ಔತಣ ಕೂಟದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರಾದ ಸತೀಶ್ ಜಾರಕಿ ಹೊಳಿ, ರಾಮಲಿಂಗಾ ರೆಡ್ಡಿ, ರೋಷನ್‍ಬೇಗ್ ಮತ್ತು ಹೆಚ್.ಕೆ. ಪಾಟೀಲ್ ಅವರು ಭಾಗವಹಿಸಿರಲಿಲ್ಲ. ಇವರಲ್ಲಿ ರಾಮಲಿಂಗಾರೆಡ್ಡಿ ಅವರು ವೈಯಕ್ತಿಕ ಕಾರಣಗಳಿಂದ ಔತಣ ಕೂಟದಲ್ಲಿ ಭಾಗವಹಿಸಲಿಲ್ಲ. ಅಲ್ಲದೇ ಅವರು ಇಂದು ಸದನಕ್ಕೂ ಹಾಜರಾಗಿರ ಲಿಲ್ಲ. ಆದ್ದರಿಂದ ಅವರ ಗೈರು…