ಔತಣ ಕೂಟದ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಮೈಸೂರು

ಔತಣ ಕೂಟದ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ

July 4, 2018

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಶಾಸಕ ರಿಗೆ ಔತಣಕೂಟ ಏರ್ಪ ಡಿಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ.

ಈ ಔತಣ ಕೂಟದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರಾದ ಸತೀಶ್ ಜಾರಕಿ ಹೊಳಿ, ರಾಮಲಿಂಗಾ ರೆಡ್ಡಿ, ರೋಷನ್‍ಬೇಗ್ ಮತ್ತು ಹೆಚ್.ಕೆ. ಪಾಟೀಲ್ ಅವರು ಭಾಗವಹಿಸಿರಲಿಲ್ಲ. ಇವರಲ್ಲಿ ರಾಮಲಿಂಗಾರೆಡ್ಡಿ ಅವರು ವೈಯಕ್ತಿಕ ಕಾರಣಗಳಿಂದ ಔತಣ ಕೂಟದಲ್ಲಿ ಭಾಗವಹಿಸಲಿಲ್ಲ. ಅಲ್ಲದೇ ಅವರು ಇಂದು ಸದನಕ್ಕೂ ಹಾಜರಾಗಿರ ಲಿಲ್ಲ. ಆದ್ದರಿಂದ ಅವರ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೆಸರೇಳಲು ಇಚ್ಛಿಸದ ಕಾಂಗ್ರೆಸ್ ಶಾಸಕರೊಬ್ಬರು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಸಿದ್ದ ರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಪ್ರತೀ ಬಾರಿ ಅಧಿವೇಶನ ನಡೆದಾಗಲೂ ಔತಣ ಕೂಟ ಏರ್ಪಡಿಸುತ್ತಿದ್ದರು. ಆದರೆ ಈಗ ಅವರು ಏರ್ಪಡಿಸಿರುವ ಔತಣ ಕೂಟ ಶಕ್ತಿ ಪ್ರದರ್ಶನವೆಂದೇ ಬಿಂಬಿಸಲಾಗುತ್ತಿದೆ.

Translate »