ಮೈಸೂರು

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ 6,133 ಮಂದಿ ಪೈಕಿ 359 ವಿದ್ಯಾರ್ಥಿಗಳು ಗೈರು
ಮೈಸೂರು

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ 6,133 ಮಂದಿ ಪೈಕಿ 359 ವಿದ್ಯಾರ್ಥಿಗಳು ಗೈರು

June 30, 2018

ಮೈಸೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ.ಮೊದಲ ದಿನವಾದ ಇಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ಗಣಿತಶಾಸ್ತ್ರ ಪರೀಕ್ಷೆಗಳಿಗೆ ಒಟ್ಟು 6133 ಮಂದಿ ನೋಂದಣಿ ಮಾಡಿಕೊಂಡಿದ್ದರಾದರೂ, ಆ ಪೈಕಿ 5,774 ಮಂದಿ ಪರೀಕ್ಷೆ ಬರೆದಿದ್ದು, 259 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ಡಾ. ದಯಾನಂದ ತಿಳಿಸಿದ್ದಾರೆ. ಮೈಸೂರಿನ ಮಹಾರಾಣಿ ಪದವಿ ಪೂರ್ವ ಕಾಲೇಜು, ಶಾರದಾ ವಿಲಾಸ, ಸೆಂಟ್ ಫಿಲೋಮಿನಾ, ಡಿ.ಬನುಮಯ್ಯ, ಮರಿಮಲ್ಲಪ್ಪ, ಎಸ್‍ಬಿಆರ್‍ಆರ್, ಮಹಾಜನ,…

ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ
ಮೈಸೂರು

ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ

June 30, 2018

ಆತಂಕದಲ್ಲಿ ದಿನ ದೂಡುತ್ತಿರುವ ಯಲ್ಲಮ್ಮ ಕಾಲೋನಿ ನಿವಾಸಿಗಳು ಮೈಸೂರು: ಸ್ವಚ್ಛ ನಗರ ಹೆಗ್ಗಳಿಕೆಗೆ ಪಾತ್ರವಾದ ಮೈಸೂರಿನ ಹಲವು ಬಡಾವಣೆಗಳಲ್ಲಿ ಸ್ವಚ್ಛ ನಗರಿ ಎಂಬ ಹೆಸರಿಗೆ ಅಪವಾದ ಎಂಬಂತೆ ಚರಂಡಿ, ರಸ್ತೆಗಳು ನಾರುತ್ತಿವೆ. ಇದ್ಯಾವುದೂ ಗೊತ್ತಿಲ್ಲದಂತೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಮೌನ ವಹಿಸಿದ್ದು, ಇದರಿಂದ ಆ ಪ್ರದೇಶದ ನಾಗರಿಕರು ರೋಗ ರುಜಿನಗಳ ಆತಂಕದಿಂದ ದಿನ ದೂಡುವಂತಾಗಿದೆ. ಮೈಸೂರಿನ ಬನ್ನಿಮಂಟಪದ ಶ್ರೀನಿವಾಸ ಟಾಕೀಸ್ ಹಿಂಭಾಗದಲ್ಲಿರುವ ಬರೀ ಪರಿಶಿಷ್ಟರೇ ವಾಸಿಸುತ್ತಿರುವ ಯಲ್ಲಮ್ಮ ಕಾಲೋನಿಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ನಿವಾಸಿಗಳು ಎಂಥಾ…

ಸಂಸದರಿಂದ ವಿಶೇಷ ಚೇತನರಿಗೆ  ತ್ರಿಚಕ್ರ ವಾಹನ ವಿತರಣೆ
ಮೈಸೂರು

ಸಂಸದರಿಂದ ವಿಶೇಷ ಚೇತನರಿಗೆ  ತ್ರಿಚಕ್ರ ವಾಹನ ವಿತರಣೆ

June 30, 2018

ಮೈಸೂರು:  ಮೈಸೂರಿನ ತಿಲಕ್‍ನಗರದ ಅಂಗವಿಕಲ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ಸಂಸದ ಆರ್.ಧ್ರುವನಾರಾಯಣ್ ಅವರು ಹೆಗ್ಗಡದೇವನಕೋಟೆ ತಾಲೂಕಿನ 32 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಮೈಸೂರು ಜಿಲ್ಲೆಗೆ 210 ತ್ರಿಚಕ್ರ ವಾಹನಗಳು ಮಂಜೂರಾಗಿದ್ದು, ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದ ವಿಕಲಚೇತನರಲ್ಲಿ 32 ಮಂದಿಯನ್ನು ಆಯ್ಕೆ ಮಾಡಿ, ಅವರಿಗೆ ವಿತರಿಸಲಾಗಿದೆ. ಜಿಲ್ಲೆಯ ಉಳಿದ ವಿಕಲಚೇತನರಿಗೆ ಸದ್ಯದಲ್ಲೇ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಹೀರೊ ಡ್ಯೂಯಟ್‍ನ ಪ್ರತಿ ವಾಹನಕ್ಕೆ ರೂ.65,500 ವೆಚ್ಚವಾಗಿದ್ದು, ಇಂದು ಒಟ್ಟು ರೂ.20 ಲಕ್ಷ ವೆಚ್ಚದಲ್ಲಿ…

ಇಂದು ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ

June 30, 2018

ಮೈಸೂರು: ಮೈಸೂರಿನ ವಿಜಯನಗರ ಕೇಂದ್ರೀಯ ಜಲ ಸಂಗ್ರಹಾ ಗಾರದ ಆವರಣದಲ್ಲಿರುವ ಟ್ಯಾಂಕ್ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ಜೂ.30 ಮತ್ತು ಜುಲೈ 1ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣ ವಿಲಾಸ ನೀರು ಸರಬರಾಜು ಪಶ್ಚಿಮ ವಿಭಾಗದ ಸಹಾ ಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಆರ್‍ಎಂಪಿ, ಬಿಇಎಂಎಲ್, ವಿಜಯನಗರ 3ನೇ ಹಂತ, ಹೆಬ್ಬಾಳು 1, 2 ಮತ್ತು 3ನೇ ಹಂತ, ಕೆಹೆಚ್‍ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕ ನಗರ, ಬಿ.ಎಂ.ಶ್ರೀ.ನಗರ, ಬೃಂದಾ ವನ…

ಅಪ್ರಾಪ್ತೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಜೈಲಿಗೆ
ಮೈಸೂರು

ಅಪ್ರಾಪ್ತೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಜೈಲಿಗೆ

June 30, 2018

ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆತ್ನಿಸಿದ ಯುವಕನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಯತ್ರಿಪುರಂ ನಿವಾಸಿ ಹೇಮಂತ ಕುಮಾರ್(20) ಬಂಧಿತ ಆರೋಪಿಯಾಗಿದ್ದು, ಇಂದು ಸಂಜೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್ ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಪ್ರಾಪ್ತೆ ಬಾಲಕಿ ಕಣ್ಮರೆಯಾಗಿದ್ದು, ಆ ಬಗ್ಗೆ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಹೇಮಂತ ಕುಮಾರ್ ಆಕೆಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂಬುದು ತಿಳಿದ ಕಾರಣ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು ಎಂದು…

ಭದ್ರತಾ ಸಿಬ್ಬಂದಿ ನೇಮಕಕ್ಕೆ ಹೊಸ ಟೆಂಡರ್‍ಗೆ ಸೂಚನೆ
ಮೈಸೂರು

ಭದ್ರತಾ ಸಿಬ್ಬಂದಿ ನೇಮಕಕ್ಕೆ ಹೊಸ ಟೆಂಡರ್‍ಗೆ ಸೂಚನೆ

June 29, 2018

ಮೈಸೂರು:  ಪಾಲಿಕೆಗೆ ಸೇರಿದ ಕಟ್ಟಡಗಳು, ಉದ್ಯಾನಗಳು, ವಾಣಿವಿಲಾಸ ವಾಟರ್ ವಕ್ರ್ಸ್, ವಾಹನ ನಿಲುಗಡೆ ಸ್ಥಳಗಳ ಭದ್ರತೆಗೆ ಕಾವಲುಗಾರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲು ಹೊಸದಾಗಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಕೌನ್ಸಿಲ್‍ಗೆ ಸ್ಪಷ್ಟಪಡಿಸಿದರು. ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮಾತಿಗಿಳಿದ ಮಾಜಿ ಮೇಯರ್ ಪುರುಷೋತ್ತಮ್ ಅವರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಸಮರ್ಪಕವಾಗಿ ವೇತನ ನೀಡದೆ ವಂಚಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು….

ಸರ್ವರ್ ವೈಫಲ್ಯ: ವಿವಿಧ ಫಲಾನುಭವಿಗಳ ಪರದಾಟ
ಮೈಸೂರು

ಸರ್ವರ್ ವೈಫಲ್ಯ: ವಿವಿಧ ಫಲಾನುಭವಿಗಳ ಪರದಾಟ

June 29, 2018

ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳಿಂದ ಸಬೂಬು ಹೇಳಿಕೆ ಮೈಸೂರು: ಮೈಸೂರಿನ ಮಿನಿ ವಿಧಾನಸೌಧದಲ್ಲಿ ನಾಡ ಕಚೇರಿಯಲ್ಲಿ ಕಳೆದ 20 ದಿನಗಳಿಂದ ಸರ್ವರ್ ಕೈಕೊಟ್ಟಿದ್ದು, ರೈತರು ವಂಶವೃಕ್ಷ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದೃಢೀಕರಣ ಪತ್ರ ಪಡೆಯಲು ಪರದಾಡುವಂತಾಗಿದೆ. ಮಿನಿ ವಿಧಾನಸೌಧದಲ್ಲಿರುವ ಭೂಮಿ ಕೇಂದ್ರ, ನಾಡ ಕಚೇರಿ ಮಾತ್ರವಲ್ಲದೆ ಮೈಸೂರು ಜಿಲ್ಲೆಯ ಎಲ್ಲಾ ನಾಡ ಕಚೇರಿಯಲ್ಲಿಯೂ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ರೈತರಿಗೆ ಬೇಕಾದ 38 ಬಗೆಯ ಸೇವೆ ಒದಗಿಸಲು ತೊಡಕಾಗಿದೆ. ಬೆಂಗಳೂರಿನಲ್ಲಿರುವ `ಭೂಮಿ…

ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ
ಮೈಸೂರು

ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ

June 29, 2018

ಮೈಸೂರು : ರಂಗಭೂಮಿಯಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ವತಿಯಿಂದ ನಡೆದ ‘ಡಾ. ಸುಭದ್ರಮ್ಮ ಮನ್ಸೂರು ರಂಗಯಾನ’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟಿಸುತ್ತಾ ಹಾಡುಗಾರ್ತಿಯಾಗಿ ಬೆಳೆದ ಸುಭದ್ರಮ್ಮ ನವರ ಪರಿಚಯ ಸಮುದ್ರದ ಪರಿಚಯವಾದಂತೆ. ಸಂಗೀತ ಎಂಬುದು ಅವರ ಹುಟ್ಟಿನಿಂದ ಬಂದಿದ್ದು, ಸುಭದ್ರಮ್ಮರ ಆಗಮನ…

ಇಂದಿನಿಂದ ಆರ್.ಟಿ.ಓ ಸ್ಕ್ವಾಡ್‍ನಿಂದ ಖಾಸಗಿ ಶಾಲಾ ವಾಹನಗಳ ತಪಾಸಣೆ
ಮೈಸೂರು

ಇಂದಿನಿಂದ ಆರ್.ಟಿ.ಓ ಸ್ಕ್ವಾಡ್‍ನಿಂದ ಖಾಸಗಿ ಶಾಲಾ ವಾಹನಗಳ ತಪಾಸಣೆ

June 29, 2018

ಮೈಸೂರು:  ಮಕ್ಕಳ ಸುರಕ್ಷತೆಯತ್ತ ಗಮನ ಹರಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ನಾಳೆ (ಜೂ.29)ಯಿಂದ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಖಾಸಗಿ ಶಾಲಾ-ಕಾಲೇಜುಗಳ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ. ಮಕ್ಕಳನ್ನು ಕರೆತಂದು ತರಗತಿ ಮುಗಿದ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಜತೆಗೆ ಅನುಭವಿ ಚಾಲಕರು ಮತ್ತು ಜವಾಬ್ದಾರಿಯುತ ಅಟೆಂಡರ್‍ಗಳನ್ನು ನೇಮಿಸಿಕೊಳ್ಳಬೇಕೆಂಬುದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ನಾಲ್ವರು ಮೋಟಾರು ವಾಹನ ನಿರೀಕ್ಷಕರನ್ನೊಳಗೊಂಡ ತಂಡವೊಂದನ್ನು ರಚಿಸಲಾಗಿದ್ದು, ಅವರು ಶುಕ್ರವಾರ…

ಮಳೆ ನೀರು ಸರಾಗವಾಗಿ ಹರಿದು ಹೋಗಲು 72 ಕಿ.ಮೀ. ರಾಜಕಾಲುವೆ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಮಳೆ ನೀರು ಸರಾಗವಾಗಿ ಹರಿದು ಹೋಗಲು 72 ಕಿ.ಮೀ. ರಾಜಕಾಲುವೆ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ

June 29, 2018

ಮಳೆ ಹಾವಳಿ ತಡೆಗೆ ಅಧಿಕಾರಿಗಳೊಂದಿಗೆ ಶಾಸಕ ರಾಮದಾಸ್ ಸಭೆ ಮೈಸೂರು: ಮಳೆಗಾಲ ಆರಂಭವಾಗಿದ್ದು, ಕೆ.ಆರ್.ಕ್ಷೇತ್ರ ಸೇರಿದಂತೆ ಮೈಸೂರಿನಲ್ಲಿ 72 ಕಿ.ಮೀ. ರಾಜಕಾಲುವೆಯ ನಕ್ಷೆ ಸಿದ್ಧಪಡಿಸುವುದರೊಂದಿಗೆ ಒಂದು ತಿಂಗಳೊಳಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಶಾಸಕ ಎಸ್.ಎ.ರಾಮದಾಸ್ ಅವರು ಮುಡಾ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು ನಗರ ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಕೆ.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸಮ್ಮುಖದಲ್ಲಿ ನಡೆದ ವಿವಿಧ ಇಲಾಖೆಯ…

1 1,517 1,518 1,519 1,520 1,521 1,611
Translate »