ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ 6,133 ಮಂದಿ ಪೈಕಿ 359 ವಿದ್ಯಾರ್ಥಿಗಳು ಗೈರು
ಮೈಸೂರು

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ 6,133 ಮಂದಿ ಪೈಕಿ 359 ವಿದ್ಯಾರ್ಥಿಗಳು ಗೈರು

June 30, 2018

ಮೈಸೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ.ಮೊದಲ ದಿನವಾದ ಇಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ಗಣಿತಶಾಸ್ತ್ರ ಪರೀಕ್ಷೆಗಳಿಗೆ ಒಟ್ಟು 6133 ಮಂದಿ ನೋಂದಣಿ ಮಾಡಿಕೊಂಡಿದ್ದರಾದರೂ, ಆ ಪೈಕಿ 5,774 ಮಂದಿ ಪರೀಕ್ಷೆ ಬರೆದಿದ್ದು, 259 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕ ಡಾ. ದಯಾನಂದ ತಿಳಿಸಿದ್ದಾರೆ.

ಮೈಸೂರಿನ ಮಹಾರಾಣಿ ಪದವಿ ಪೂರ್ವ ಕಾಲೇಜು, ಶಾರದಾ ವಿಲಾಸ, ಸೆಂಟ್ ಫಿಲೋಮಿನಾ, ಡಿ.ಬನುಮಯ್ಯ, ಮರಿಮಲ್ಲಪ್ಪ, ಎಸ್‍ಬಿಆರ್‍ಆರ್, ಮಹಾಜನ, ಜೆಎಸ್‍ಎಸ್ ಪಿಯು ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ 14 ಕೇಂದ್ರಗಳಲ್ಲಿ ಪರೀಕ್ಷೆಗಳು ಯಾವುದೇ ಗೊಂದಲವಿಲ್ಲದೆ ನಡೆದಿವೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಗಳಿಂದ ಸಿಬ್ಬಂದಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.

Translate »