ತಿಂಗಳ ಮುಂಚೆಯೇ ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭ
ಮೈಸೂರು

ತಿಂಗಳ ಮುಂಚೆಯೇ ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭ

May 3, 2018

ಮೈಸೂರು: ಫಲಿ ತಾಂಶ ಸುಧಾರಿಸುವ ಉದ್ದೇಶದಿಂದ ಈ ಬಾರಿ ದ್ವಿತೀಯ ಪಿಯುಸಿ ತರಗತಿಗಳು ಒಂದು ತಿಂಗಳು ಮುಂಚಿತವಾಗಿ ಇಂದಿ ನಿಂದ ರಾಜ್ಯಾದ್ಯಂತ ಆರಂಭವಾಗಿವೆ.

ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರ ಆದೇಶದಂತೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ, ಅನುದಾ ನಿತ ಹಾಗೂ ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರಗತಿಗಳು ಇಂದು ಆರಂಭಗೊಂಡಿವೆ.

ಮೈಸೂರು ನಗರದ 60 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 243 ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರ ಗತಿಗಳು ಆರಂಭವಾಗಿದ್ದು, ಆ ಬಗ್ಗೆ ಫೋಟೋ ಸಮೇತ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಹಾಜರಾತಿ ವರದಿಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಕಳುಹಿಸಿ ಕೊಟ್ಟಿದ್ದಾರೆ ಎಂದು ಮೈಸೂರು ಜಿಲ್ಲೆಯ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಉಪ ನಿರ್ದೇಶಕ ಡಾ. ದಯಾನಂದ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಪಿಯು ಮಂಡಳಿ ನಿರ್ದೇ ಶಕಿ ಸಿ.ಶಿಖಾ ಅವರು ಸುತ್ತೋಲೆ ಹೊರ ಡಿಸಿ, ಮೇ 2ರಿಂದಲೇ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿ ಗಳಿಗೆ ಪಠ್ಯಕ್ರಮಗಳನ್ನು ಬೋಧಿಸಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಸಮನಾಗಿ ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಬರಬೇಕು ಎಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಮೇ 2 ರಿಂದಲೇ ಉಪ ನ್ಯಾಸಕರು ತರಗತಿಗಳನ್ನು ಆರಂಭಿಸ ಬೇಕೆಂದು ನಿರ್ದೇಶನ ನೀಡಿದ್ದರು ಎಂದೂ ಡಾ. ದಯಾನಂದ ತಿಳಿಸಿದರು.
ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಎಲ್ಲರೂ ಕರ್ತವ್ಯಕ್ಕೆ ಹಾಜ ರಾಗಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಕೇವಲ ಶೇ.50ರಷ್ಟಿರುವುದು ಕಂಡು ಬಂದಿದೆ ಎಂದು ಹೇಳಿದರು.

ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಗಳು ಹಾಜರಾತಿ ವರದಿಯನ್ನು ತಾವು ಇಂದು ಮಧ್ಯಾಹ್ನವೇ ಪದವಿ ಪೂರ್ವ ಶಿಕ್ಷಣ ಮಂಡಳಿ ಉಪನಿರ್ದೇಶಕರ ಕಚೇರಿಗೆ ಕಳು ಹಿಸಿಕೊಟ್ಟಿರುವುದಾಗಿಯೂ ಡಾ. ದಯಾ ನಂದ `ಮೈಸೂರು ಮಿತ್ರÀ’ನಿಗೆ ತಿಳಿಸಿದರು.
ಮೇ 2 ರಿಂದಲೇ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಬೇಕೆಂಬ ಶಿಖಾ ಅವರ ಆದೇಶಕ್ಕೆ ಉಪನ್ಯಾಸಕರು ರಾಜ್ಯಾ ದ್ಯಂತ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ತಾವು ಪಿಯುಸಿ ಪರೀಕ್ಷೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನಮಗೆ ರಜೆ ಇಲ್ಲದಂತಾಗಿದೆ ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿ ದ್ದರಾದರೂ, ಇದೀಗ ಸರ್ಕಾರಿ ಆದೇಶ ದಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈವರೆಗೆ ಮೇ ಕಡೇ ವಾರ ಅಥವಾ ಜೂನ್ ಮೊದಲ ವಾರ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದವು. ಸರ್ಕಾರದ ಕಟ್ಟುನಿಟ್ಟಿನ ಆಜ್ಞೆಯಂತೆ ಈ ಬಾರಿಯೂ ಮೇ ತಿಂಗಳ ಆರಂಭದಲ್ಲಿ ತರಗತಿಗಳನ್ನು ಆರಂಭಿಸಿರುವುದರಿಂದ 2019ರಲ್ಲಿ ಫಲಿತಾಂಶ ಉತ್ತಮವಾಗುವ ನಿರೀಕ್ಷೆ ಇದೆ.

Translate »