ಸಂಸದರಿಂದ ವಿಶೇಷ ಚೇತನರಿಗೆ  ತ್ರಿಚಕ್ರ ವಾಹನ ವಿತರಣೆ
ಮೈಸೂರು

ಸಂಸದರಿಂದ ವಿಶೇಷ ಚೇತನರಿಗೆ  ತ್ರಿಚಕ್ರ ವಾಹನ ವಿತರಣೆ

June 30, 2018

ಮೈಸೂರು:  ಮೈಸೂರಿನ ತಿಲಕ್‍ನಗರದ ಅಂಗವಿಕಲ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ಸಂಸದ ಆರ್.ಧ್ರುವನಾರಾಯಣ್ ಅವರು ಹೆಗ್ಗಡದೇವನಕೋಟೆ ತಾಲೂಕಿನ 32 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಮೈಸೂರು ಜಿಲ್ಲೆಗೆ 210 ತ್ರಿಚಕ್ರ ವಾಹನಗಳು ಮಂಜೂರಾಗಿದ್ದು, ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದ ವಿಕಲಚೇತನರಲ್ಲಿ 32 ಮಂದಿಯನ್ನು ಆಯ್ಕೆ ಮಾಡಿ, ಅವರಿಗೆ ವಿತರಿಸಲಾಗಿದೆ. ಜಿಲ್ಲೆಯ ಉಳಿದ ವಿಕಲಚೇತನರಿಗೆ ಸದ್ಯದಲ್ಲೇ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಹೀರೊ ಡ್ಯೂಯಟ್‍ನ ಪ್ರತಿ ವಾಹನಕ್ಕೆ ರೂ.65,500 ವೆಚ್ಚವಾಗಿದ್ದು, ಇಂದು ಒಟ್ಟು ರೂ.20 ಲಕ್ಷ ವೆಚ್ಚದಲ್ಲಿ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.ಈ ಸಂದರ್ಭದಲ್ಲಿ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಗೀತಾ ಇನ್ನಿತರರು ಉಪಸ್ಥಿತರಿದ್ದರು.

Translate »