ಕೊಳ್ಳೇಗಾಲ: ಸಂಸದ ಧ್ರುವನಾರಾಯಣ್ ಆದೇಶದ ಮೇರೆಗೆ ಕಾಡಂಚಿನ ಗ್ರಾಮಗಳ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಕಾಡು ಬಿಟ್ಟು ಹೊರ ಬರುವವರಿಗೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಏಡುಕೊಂಡಲು ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಾದ ದೊಡ್ಡಾಣೆ, ತುಳಸಿಕೆರೆ, ಮೆದುಗನಾಣೆ, ಎಲಚಿಕೆರೆ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಮತ್ತು ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಡನ್ನು ಉಳಿಸುವ ಗುರುತರ ಹೊಣೆ ಅರಣ್ಯ ಇಲಾಖೆ ಜೊತೆಗೆ ಕಾಡು ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸ ಮಾಡುವ ಜನರ ಮೇಲಿದೆ. ನಿಮ್ಮೆಲ್ಲರ ಸಹಕಾರದಿಂದ ನಾವು ಅರಣ್ಯ ಉಳಿಸುವ ಕಾರ್ಯ ಮಾಡುತ್ತಿದ್ದೇವೆ. ನಿಮಗೆ ತೊಂದರೆ ಕೊಡಬೇಕೆಂಬ ಉದ್ದೇಶ ನಮ್ಮದಲ್ಲ. ನಾವು ಕಾಡು ಹಾಗೂ ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡುವಾಗ ಕಾನೂನು ಕ್ರಮ ಕೈಗೊಳ್ಳ ಬೇಕಾದುದು ಅನಿವಾರ್ಯ ಎಂದರು.
ಜಿಪಂ ಸಿಇಓ ಡಾ.ಹರೀಶ್‍ಕುಮಾರ್ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜನರಿಗೆ ತೊಂದರೆ ಕೊಡುವ ಮನೋಭಾವವಿಲ್ಲ. ಅಂತಹ ಧೋರಣೆಯಿಂದ ಯಾರೂ ಕೆಲಸ ಮಾಡು ವುದಿಲ್ಲ. ಕಾಡಿನ ರಕ್ಷಣೆ ವಿಷಯದಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದು ಕೊಳ್ಳಬೇಕಾಗುತ್ತದೆ. ತಪ್ಪು ಮಾಡಿದವ ರನ್ನು ಬೆದರಿಸುವುದು ಸಹಜ. ಮತ್ತೊಮ್ಮೆ ಇಂಥಹ ತಪ್ಪು ಮಾಡದಂತೆ ನೋಡಿಕೊ ಳ್ಳಬೇಕು. ಹೀಗಾಗಿ ನಿಮಗೆ ಅವಶ್ಯಕವಾಗಿ ಬೇಕಾದ ಮರಳು ಸೇರಿದಂತೆ ಇತರೆ ವಸ್ತು ಗಳನ್ನು ಪಡೆಯುವ ಮುನ್ನ ಹಿರಿಯ ಅಧಿ ಕಾರಿಗಳ ಅನುಮತಿ ಪಡೆಯುವಂತೆ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನ ಬಳಸಿಕೊಂಡು ಮೂಲ ಸೌಕರ್ಯಗಳ ಪ್ರಯೋಜನ ಪಡೆದು ಕೊಳ್ಳಿ. ಸದ್ಯದಲ್ಲೇ ಜೀವ ವೈವಿಧ್ಯ ಸಮಿತಿ ರಚನೆ ಮಾಡಲಾಗುವುದು. ಅರಣ್ಯ ಕಾಯ್ದೆ ಉಲ್ಲಂಘಿಸುವವರನ್ನು ನಿಯಂತ್ರಿಸುವ ಕಾರ್ಯ ನೀವು ಮಾಡಿ ಎಂದರು.
ಬೇಡಿಕೆಗೆ ಸ್ಪಂದನೆ ದೊರೆತಿದೆ: ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತ ನಾಡಿ, ಅರಣ್ಯ ಹಾಗೂ ಕಾಡಂಚಿನಲ್ಲಿ ವಾಸ ಮಾಡುವ ಜನರಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಅವಕಾಶ ನೀಡುವ ಜೊತೆಗೆ ಪುನರ್ವಸತಿ ಬಯಸುವವರಿಗೆ ಸೂಕ್ತ ಪರಿಹಾರ ಕೊಡಿ ಸುವ ಕಾರ್ಯವನ್ನು ಮಾಡಬೇಕು. ನಮ್ಮ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಸಂದರ್ಭ ಎಸಿಎಫ್ ಗಳಾದ ವನಿತಾ, ಪ್ರಶಾಂತ್, ಮುಖಂಡ ಕರಿಯಪ್ಪ, ಶಾಂತ ಕುಮಾರ್, ತುಳಸಿಕರೆ ಮಹ ದೇವ, ಚಿನ್ನಪ್ಪ, ಮಹದೇವ ದೊಡ್ಡಾಣೆ, ಮಹದೇವ ಶಿವಣ್ಣ ಇನ್ನಿತರರಿದ್ದರು.