ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ನಾಯ್ಕ ಪರ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಬಿರುಸಿನ ಪ್ರಚಾರ ನಡೆಸಿದರು.
ತೆರಕಣಾಂಬಿ ಮತ್ತು ತೆರಕಣಾಂಬಿಹುಂಡಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿದ ಗಣೇಶ್ ಪ್ರಸಾದ್ ತಮ್ಮ ತಂದೆ ಮಾಜಿ ಸಚಿವ ದಿ.ಮಹದೇವಪ್ರಸಾದ್ ಮತ್ತು ತಾಯಿ ಡಾ.ಮೋಹನಕುಮಾರಿ ಅವಧಿಯಲ್ಲಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸಿದ್ದು, ನೂತನ ಬಸ್ ನಿಲ್ದಾಣ, ಎಪಿಎಂಸಿ ಪ್ರಾಂಗಣ ನಿರ್ಮಾಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಐಟಿಐ ಕಾಲೇಜುಗಳ ನಿರ್ಮಾಣ ಸೇರಿದಂತೆ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ನಾರಾಯಣನಾಯ್ಕ ಅವರಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸೇರ್ಪಡೆ: ಇದೇ ವೇಳೆ ತೆರಕಣಾಂಬಿಹುಂಡಿ ಗ್ರಾಮದ ಬಿಜೆಪಿ ಮುಖಂಡರಾದ ನಂಜಪ್ಪ, ಮಾದಪ್ಪ, ಮನು ಬಿಜೆಪಿ ತೊರೆದು ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮತ ಯಾಚನೆ ವೇಳೆ ಚಾಮುಲ್ ನಿರ್ದೇಶಕರಾದ ನಂಜುಂ ಡಪ್ರಸಾದ್, ಕಣ್ಣೇಗಾಲ ಸ್ವಾಮಿ, ಜಿಪಂ ಸದಸ್ಯರಾದ ಕೆ.ಎಸ್. ಮಹೇಶ್, ಪಿ.ಚನ್ನಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಮಹ ದೇವಪ್ಪ, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ದೇಪಾಪುರ ಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಕರಕಲ ಮಾದಹಳ್ಳಿ ಪ್ರಭುಸ್ವಾಮಿ, ತಾಪಂ ಅಧ್ಯಕ್ಷ ಜಗದೀಶ್‍ಮೂರ್ತಿ, ಗ್ರಾಪಂ ಅಧ್ಯಕ್ಷ ಟಿ.ಎಚ್.ಉಮೇಶ್ ಮುಖಂಡ ಎಸ್.ಆರ್.ಎಸ್. ರಾಜು ಸೇರಿದಂತೆ ಪಕ್ಷದ ಮುಖಂಡರು ಮತ್ತು ಪದಾಧಿಕಾರಿ ಗಳು ಭಾಗವಹಿಸಿದ್ದರು.