ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿಸಲು ಶಿಕ್ಷಕರಿಗೆ ಕರೆ
ಚಾಮರಾಜನಗರ

ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿಸಲು ಶಿಕ್ಷಕರಿಗೆ ಕರೆ

September 6, 2018

ಚಾಮರಾಜನಗರ: ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕ ಳಂತೆ ಕಾಣಬೇಕು. ಪ್ರತಿಯೊಬ್ಬ ವಿದ್ಯಾ ರ್ಥಿಯನ್ನೂ ಒಳ್ಳೆಯ ನಾಗರಿಕರನ್ನಾಗಿ ಸೃಷ್ಠಿಸಬೇಕು ಎಂದು ಸಂಸದ ಆರ್.ಧ್ರುವ ನಾರಾಯಣ್ ಶಿಕ್ಷಕರಿಗೆ ಕರೆ ನೀಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಜೆ.ಹೆಚ್.ಪಟೇಲ್ ಸಭಾಂಗಣ ದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣಾ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
ಶಿಕ್ಷಕರ ಹುದ್ದೆ ಹಾಗೂ ವೈದ್ಯರ ಹುದ್ದೆ ಶ್ರೇಷ್ಠ ಹುದ್ದೆ. ಇದರಲ್ಲಿ ಒಂದು ಹುದ್ದೆ ಯಲ್ಲಿ ಇರುವ ಶಿಕ್ಷಕರು, ಸಮಾಜದ ಸತ್ಪ್ರ ಜೆಗಳನ್ನು ಸೃಷ್ಟಿಸಿದರೆ, ಮತ್ತೊಂದು ಹುದ್ದೆ ಯಲ್ಲಿ ಇರುವ ವೈದ್ಯರು ಪ್ರಾಣ ಉಳಿಸುವ ಪುಣ್ಯಾತ್ಮರು ಎಂದು ಶಿಕ್ಷಕರು ಹಾಗೂ ವೈದ್ಯರ ವೃತ್ತಿಯನ್ನು ಸ್ಮರಿಸಿದರು.

ಯಾವುದೇ ದೇಶ, ರಾಜ್ಯ, ಜಿಲ್ಲೆ ಪ್ರಗತಿ ಆಗಬೇಕಾದರೆ ಅಲ್ಲಿನ ಶೈಕ್ಷಣಿಕ ಪ್ರಗ ತಿಯೂ ಮಾನದಂಡ ಆಗಲಿದೆ ಎಂದ ಧ್ರುವನಾರಾಯಣ್, ಮುಂದುವರೆದ ದೇಶ ಗಳಾದ ಅಮೇರಿಕಾ, ಜಪಾನ್, ಚೈನಾ ಶೈಕ್ಷಣಿಕ ಪ್ರಗತಿಯಲ್ಲಿ ಮುಂದೆ ಇರುವುದು ಇದಕ್ಕೆ ಸಾಕ್ಷಿ. ಶೈಕ್ಷಣಿಕ ಪ್ರಗತಿ ಆಗದೆ ಯಾವುದೇ ದೇಶ, ರಾಜ್ಯ, ಜಿಲ್ಲೆ ಅಭಿವೃದ್ಧಿ ಆಗುವುದಿಲ್ಲ ಎಂದರು.

ಭಾರತ ದೇಶ ಮುಂದಕ್ಕೆ ಬರುತ್ತಿದೆ. ಇದರಲ್ಲಿ ಶಿಕ್ಷಕರ ಪಾತ್ರ ಅನನ್ಯ. ಜಿಲ್ಲೆ ಯಲ್ಲೂ ಸಹ ನಿಮ್ಮ (ಶಿಕ್ಷಕರ) ಕೊಡುಗೆ ಅಪಾರ. ಪ್ರಾಥಮಿಕ ಶಿಕ್ಷಣದ ಹಂತದ ಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡುತ್ತಿರು ವುದು ಪ್ರಗತಿಗೆ ಪೂರಕವಾಗಿದೆ. ಇನ್ನೂ ಹೆಚ್ಚಿನ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಕ್ಕ ಳಂತೆ ಕಾಣುವಂತೆ ಸಲಹೆ ನೀಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣದ ಮಹತ್ವವನ್ನು ತಿಳಿಸಿದವರು. ಅವರೊಬ್ಬ ಆದರ್ಶ ಶಿಕ್ಷಕರಾಗಿದ್ದರು. ಉಪ ರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ಅವರು ಸಲ್ಲಿಸಿದ ಸೇವೆ ಅಪಾರ. ಅವರನ್ನು ಸ್ಮರಿಸು ವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಧ್ರುವನಾರಾಯಣ್ ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್, ಡಾ.ಅಬ್ದುಲ್ ಕಲಾಂ ಅವರು ಶಿಕ್ಷಣದ ಸಂದೇಶ ಸಾರಿ ದವರು. ಅವರನ್ನೂ ಸಹ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಅವರು ದೇಶಕ್ಕೆ ನೀಡಿದ ಕೊಡಗೆ ಅಪಾರ. ಶ್ರೇಷ್ಠ ಉದ್ಯೋಗದಲ್ಲಿ ಇರುವ ಶಿಕ್ಷಕರು, ದೇಶದ ಸತ್‍ಪ್ರಜೆಗಳನ್ನು ರೂಪಿ ಸುವ ಕಾರ್ಖಾನೆ ಇದ್ದಂತೆ ಎಂದರು.
ಶಿಕ್ಷಕರ ನೇಮಕ ಪ್ರಕ್ರಿಯೆ ತಕ್ಷಣವೇ ಆರಂಭವಾಗಲಿದೆ. ಜಿಲ್ಲೆಗೆ ಮತ್ತೆರಡು ಮೊರಾರ್ಜಿ ದೇಸಾಯಿ ಶಾಲೆ ಮಂಜೂ ರಾತಿಗೆ ಕ್ರಮ ವಹಿಸಲಾಗಿದೆ ಎಂದರು.

ಜಿಪಂ ಅಧ್ಯಕ್ಷ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮರುಗದಮಣಿ, ಸದಸ್ಯೆ ಉಮಾವತಿ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಓ ಡಾ.ಕೆ.ಹರೀಶ್ ಕುಮಾರ್, ಡಿಡಿಪಿಐ ಮಂಜುಳ, ಬಿಒ ಎನ್.ಲಕ್ಷ್ಮೀಪತಿ, ಡಿವೈ ಎಸ್ಪಿ ಜಯಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಚಪ್ಪ, ಶ್ಯಾಮಲ, ಶಿಕ್ಷಣ ಸಂಘದ ಅಧ್ಯಕ್ಷರಾದ ಶಿವಣ್ಣ, ನೇತ್ರಾವತಿ, ಮಹದೇವಸ್ವಾಮಿ, ರಂಗ ಸ್ವಾಮಿ, ಸಿದ್ದಮಲ್ಲಪ್ಪ, ಚಂದ್ರಶೇಖರ್, ಪ್ರಕಾಶ್ ಇತರರು ಉಪಸ್ಥಿತರಿದ್ದರು. ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.

Translate »