ಮೈಸೂರು: ಈ ಕೆಳಕಂಡವರನ್ನು ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ಜಿಲ್ಲೆ 317 ಎ ಪ್ರಾದೇಶಿಕ 10 ವಲಯ 1ರ 2018-19 ಸಾಲಿನ ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಲಯನ್ ಎಸ್.ಚಂದ್ರಶೇಖರ್ (ಅಧ್ಯಕ್ಷರು), ಲಯನ್ ಕೆ.ಆರ್.ಯೋಗಾನರಸಿಂಹನ್ (ಕಾರ್ಯ ದರ್ಶಿ), ಲಯನ್ ಎ.ಪಿ.ಭರತೇಶ್ (ಖಜಾಂಚಿ), ಲಯನ್ ರವಿರತ್ನಾಕರ್ (ನಿಕಟ ಪೂರ್ವ ಅಧ್ಯಕ್ಷರು), ಲಯನ್ ಹೆಚ್.ಎಸ್.ಜಗದೀಶ್ (ಉಪಾಧ್ಯಕ್ಷ 1), ಲಯನ್ ಜೆ.ರಾಧಾಕೃಷ್ಣ (ಉಪಾಧ್ಯಕ್ಷ 2), ಲಯನ್ ಮೋಹನ್ (ಜಂಟೀ ಕಾರ್ಯದರ್ಶಿ), ಲಯನ್ ವೆಂಕಟೇಶ್ ಪ್ರಸಾದ್ (ಕ್ಲಬ್ ಸದಸ್ಯ ನೋಂದಾವಣ ಸಮಿತಿ…
ಬೆಳೆ ಸಾಲ ಮನ್ನಾದಿಂದ ನನಗೆ ಕಮಿಷನ್ ಸಿಗಲ್ಲ…!?
June 26, 2018ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನೂರಕ್ಕೂ ಹೆಚ್ಚು ಶಾಸಕರು ಸೋತಿದ್ದಾರೆ. ಅವರು, ಅನುಮೋದನೆ ನೀಡಿದ ಬಜೆಟ್ ಮುಂದುವರೆಸಬೇಕೇ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ಹಳೆಯ ಬಜೆಟ್‍ನ್ನೇ ಮುಂದುವರೆಸಿದರೆ, ಈಗ ಆಯ್ಕೆಯಾಗಿ ಬಂದವರಿಗೆ ಹಕ್ಕುಚ್ಯುತಿಯಾಗಲ್ಲವೆ? ಯಾರಾದರೂ ಹಕ್ಕುಚ್ಯುತಿ ಮಂಡನೆ ಮಾಡಿ ದರೆ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ. ವಿಧಾನಸೌಧದ…
ಕಾವೇರಿ ನೀರು ಹಂಚಿಕೆ ವಿಚಾರ: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ
June 26, 2018ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಕೇಶ್ ಸಿಂಗ್, ಹೆಚ್.ಎನ್. ಪ್ರಸನ್ನ ಹೆಸರು ಶಿಫಾರಸ್ಸು ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿದ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಇಬ್ಬರು ಪ್ರತಿನಿಧಿ ಗಳ ಹೆಸರನ್ನು ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರವನ್ನು ಕಡೆಗಾಣಿಸಿ, ನಿರ್ವ ಹಣಾ ಪ್ರಾಧಿಕಾರ ಜುಲೈ 2 ರಂದು ಮೊದಲ ಸಭೆ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ತರಾತುರಿಯಾಗಿ ಈ ನೇಮಕಾತಿಯಾಗಿದೆ. ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‍ಸಿಂಗ್ ಹಾಗೂ ಕಾವೇರಿ ಜಲ ನಿಗಮದ ವ್ಯವಸ್ಥಾಪಕ…
ದೇವಾಲಯ ಗೋಪುರಗಳಿಗೆ ಕುಂಭಾಭಿಷೇಕ
June 26, 2018ಮೈಸೂರು: ಚಾಮುಂಡಿಬೆಟ್ಟದ ನಾಡದೇವಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಸೋಮವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾಜಗೋಪುರ ಹಾಗೂ ವಿಮಾನ ಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯ ಗಳು ವಿಜೃಂಭಣೆಯಿಂದ ನೆರವೇರಿದವು. ದೇವಾಲಯದ ರಾಜಗೋಪುರ ಹಾಗೂ ವಿಮಾನಗೋಪುರದಲ್ಲಿದ್ದ ದೇವತೆಗಳ ವಿಗ್ರಹಗಳು ಗಾಳಿ, ಮಳೆ ಹಾಗೂ ಕೋತಿಗಳ ಹಾವಳಿಯಿಂದಾಗಿ ವಿರೂಪಗೊಂಡಿದ್ದವು. ಅಲ್ಲದೆ ಗೋಪುರದ ಗೋಡೆಗಳ ಮೇಲೆ ಗಿಡಗಳು ಬೆಳೆದು, ಗೋಡೆಗಳು ಶಿಥಿಲಗೊಳ್ಳುತ್ತಿದ್ದವು. ಇದರಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿತ್ತು. ರಾಜಗೋಪುರ, ವಿಮಾನಗೋಪುರ ಹಾಗೂ ಧ್ವಜಸ್ತಂಭದ ದುರಸ್ತಿ ಕಾರ್ಯ ಮಾಡಿಸಲು…
ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಬಿಜೆಪಿ ಸಂಭವನೀಯರ ಪಟ್ಟಿ ರೆಡಿ
June 26, 2018ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ 28 ಲೋಕ ಸಭಾ ಕ್ಷೇತ್ರಗಳಿಗೂ ಸಂಭವನೀಯ ಪಟ್ಟಿ ಅಂತಿಮಗೊಳಿಸಿದೆ. ರಾಜ್ಯ ಮುಖಂಡರು ಆರ್‍ಎಸ್‍ಎಸ್ ನಾಯಕರೊಟ್ಟಿಗೆ ಚುನಾವಣೆ ಸಂಬಂಧ ಸುದೀರ್ಘ ಚರ್ಚೆ ನಡೆಸಿ, ಅಭ್ಯರ್ಥಿ ಗಳ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಬಹುತೇಕ ಹಾಲಿ ಸಂಸದರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿ ಸಲು ಅವಕಾಶ ನೀಡಿದ್ದು, ಕಳೆದ ಚುನಾವಣೆಯಲ್ಲಿ ಜಯ ಗಳಿಸದ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗೆ ಒತ್ತು ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 17 ಸಂಸದರು ಗೆದ್ದಿದ್ದ ಬಿಜೆಪಿಗೆ ಈ…
ಅಮಿತ್ ಶಾ, ಬಿಎಸ್‍ವೈ ಭೇಟಿ: ಆಪರೇಷನ್ ಕಮಲ ಸಾಧ್ಯತೆ
June 26, 2018ಬೆಂಗಳೂರು: ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಹಾಗೂ ರೈತರ ಸಾಲ ಮನ್ನಾಕ್ಕೆ ಸಂಬಂಧಿ ಸಿದಂತೆ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನಡುವೆ ಜಟಾಪಟಿ ನಡೆ ಯುತ್ತಿರುವುದರ ನಡುವೆಯೇ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಇಂದು ಗುಜರಾತ್‍ನ ಅಹಮದ ಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರ ಕಚ್ಚಾಟದಿಂದ ಕುಸಿದು ಬಿದ್ದರೆ…
ವಿದೇಶಿ ವಿದ್ಯಾರ್ಥಿಗಳ ವೀಸಾ ವಿಸ್ತರಣೆಗೆ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಶ್ರೀಕಾಂತ ಕಾಲೇಜು ಪ್ರಿನ್ಸಿಪಾಲ್ ವಿರುದ್ಧ ಕೇಸ್
June 26, 2018ಮೈಸೂರು: ವಿಶ್ವ ವಿದ್ಯಾನಿಲಯದಿಂದ ಮಾನ್ಯತೆ ಪಡೆಯದೆ ಇದ್ದರೂ ವಿವಿಧ ಡಿಪ್ಲೊಮಾ ಕೋರ್ಸ್‍ಗಳಿಗೆ ವಿದೇಶಿಗರಿಗೆ ಪ್ರವೇಶಾತಿ ನೀಡಿ, ಅವರ ವೀಸಾ ವಿಸ್ತರಣೆಗಾಗಿ ನಕಲಿ ಪ್ರಮಾಣ ಪತ್ರ ನೀಡುತ್ತಿದ್ದ ಆರೋಪದಡಿ ಮೈಸೂರಿನ ಕಾಲೇಜೊಂದರ ಪ್ರಾಂಶು ಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್(ಸಿಎಸ್‍ಬಿ) ವಿಭಾಗದ ಪೊಲೀಸರು ವಿದೇಶಿ ವಿದ್ಯಾರ್ಥಿ ಗಳ ವಾಸ ವಿಸ್ತರಣೆಗೆ ಸಂಬಂಧಪಟ್ಟ ಕಡತ ಗಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ದಲ್ಲಿ, ಮೈಸೂರಿನ ಕೆ.ಆರ್.ಮೊಹಲ್ಲಾ ದಲ್ಲಿರುವ ಶ್ರೀಕಾಂತ ಮಹಿಳಾ ಪದವಿ ಕಾಲೇಜಿನಿಂದ ಅನೇಕ ವಿದೇಶಿಗರಿಗೆ ವಿವಿಧ ಡಿಪ್ಲೊಮಾ…
ಮೈಸೂರು ಸಯ್ಯಾಜಿರಾವ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ `ಅಡ್ಡ’ ದಾರಿ
June 26, 2018ಮೈಸೂರು: ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೃಷ್ಣರಾಜ ವೃತ್ತದಿಂದ ಸರ್ಕಾರಿ ಆಯುರ್ವೇದ ವೃತ್ತದವರೆಗೆ ಅಳವಡಿಸಿ ರುವ ಬ್ಯಾರಿಕೇಡ್‍ಗಳು ಅಸ್ತವ್ಯಸ್ತವಾಗಿದ್ದು, ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಸರಿಸಿ, ಅಡ್ಡಾ ದಿಡ್ಡಿ ವಾಹನ ಚಾಲಿಸುವ ಪರಿಪಾಟ ಇಂದಿಗೂ ಮುಂದುವರಿದಿದೆ. ಪರಿಣಾಮ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ, ಸಾರ್ವಜನಿಕರು ತೊಂದರೆ ಅನುಭವಿ ಸುವಂತಾಗಿದೆ. ದಸರಾ ಜಂಬೂ ಸವಾರಿ ಇದೇ ಮಾರ್ಗವಾಗಿ ಸಾಗುವು ದರಿಂದ ಶಾಶ್ವತ ರಸ್ತೆ ವಿಭಜಕವನ್ನು ಅಳವಡಿಸದೆ, ಬ್ಯಾರಿಕೇಡ್‍ಗಳನ್ನು ಜೋಡಿಸಿ, ತಾತ್ಕಾಲಿಕ ವಿಭಜಕವನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‍ಗಳನ್ನು…
ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು
June 26, 2018ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣದ ತನಿಖೆಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಕುವೆಂಪುನಗರ ಎನ್ ಬ್ಲಾಕ್, ಕೆಎಸ್ ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಕೆ.ಜೆ. ಲೀಲಾದೇವಿ ಅವರ ಮನೆಗೆ ಜೂ.22 ರಂದು ಪಾಲಿಕೆ ಅಧಿಕಾರಿಗಳೆಂದು ಹೇಳಿ ಕೊಂಡು ಬಂದಿದ್ದ ಇಬ್ಬರು ಖದೀಮರು, ಮನೆಯನ್ನು ಅಳತೆ ಮಾಡಿ, ಆಸ್ತಿ ಕಾರ್ಡ್ ನೀಡುವುದಾಗಿ ನಂಬಿಸಿ, ಮನೆಯ ಮಾಲೀಕರಾದ ಲೀಲಾದೇವಿ ಹಾಗೂ ಕೆಲಸದಾಕೆ ಮಂಗಳಮ್ಮ ಅವರನ್ನು ಟೆರೇಸ್‍ಗೆ ಕರೆದೊಯ್ದು, ಅದೇ ಸಮಯಕ್ಕೆ…
ಡಾ.ಅಂಬೇಡ್ಕರ್ ಚಿಂತನೆ ಸರ್ವಕಾಲಿಕ ಅನ್ವಯ
June 26, 2018ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನ್ನೂರು ಚೆನ್ನಪ್ಪ ಅಭಿಪ್ರಾಯಪಟ್ಟರು. ಪುರಭವನದಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 127ನೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು, ದಲಿತರು, ಶೋಷಿತರು, ಮಹಿಳೆಯರಿಗೆ ಸಮಾನತೆ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಸಂವಿಧಾನ ರಚನೆ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ…