ಮೈಸೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿ, ಬಂಧಿತ ರಿಂದ 81 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ಮೇಟಗಳ್ಳಿಯ ಅಂಬೇಡ್ಕರ್ ಜ್ಞಾನ ಲೋಕದ ನಿವಾಸಿ ರವಿ ಅಲಿಯಾಸ್ ಬಾಂಡ್ ಅಲಿಯಾಸ್ ಬಾಂಡ್ ರವಿ, ಬಿಎಂಶ್ರೀ ನಗರದ ಗೋಪಿನಾಥ್ ಅಲಿ ಯಾಸ್ ಗೋಪಿ(28) ಬಂಧಿತರು. ಜೂ.24 ರಂದು ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿ ಕಳವು ಮಾಡಿದ್ದ ವಸ್ತು ಗಳನ್ನು ಇವರಿಬ್ಬರು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ…
ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು
June 25, 2018ಮೈಸೂರು: ಪ್ರಥಮ ಸ್ವಚ್ಛನಗರಿ ಎಂಬ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮೈಸೂರು ಜನತೆಗೆ ನಿರಾಸೆಯಾಗಿದ್ದು, 2018ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ 8ನೇ ಸ್ಥಾನಕ್ಕೆ ಕುಸಿದಿದೆ. ಆದರೆ 3 ರಿಂದ 10 ಲಕ್ಷ ಜನ ಸಂಖ್ಯೆಹೊಂದಿರುವ ದೇಶದ 220 ನಗರಗಳ ಪೈಕಿ ಪಾರಂಪರಿಕ ನಗರಿ ಮೈಸೂರಿಗೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಬಂದಿರುವುದು ಹೆಗ್ಗಳಿಕೆಯಾಗಿದೆ. ಮಧ್ಯಪ್ರದೇಶದ ಇಂದೂರಿನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛನಗರ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ಮೇಯರ್ ಬಿ.ಭಾಗ್ಯವತಿ, ಪಾಲಿಕೆ ಕಮೀಷ್ನರ್…
ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯಪುಸ್ತಕ ನೋಡಿಕೊಂಡೆ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ: ಶಿಕ್ಷಣ ಸಚಿವ ಎನ್.ಮಹೇಶ್
June 25, 2018ಚಾಮರಾಜನಗರ: ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳು ಪಠ್ಯಪುಸ್ತಕ ನೋಡಿಕೊಂಡೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆ ನಡೆಸಿದ್ದೇನೆ ಎಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು. ನಗರದ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್)ದ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ನಗರದ ಜೆ. ಹೆಚ್.ಪಾಟೀಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.80, ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ…
ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲು ಚಿಂತನೆ
June 25, 2018ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮ ನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಅವ ರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಇಂದಿಲ್ಲಿ ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ಕೇಂದ್ರ ಮಟ್ಟದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿ ನೆಟ್ ದರ್ಜೆಯ ಸ್ಥಾನಮಾನ ಇದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಅಧಿ ಕೃತವಾಗಿ ನೀಡಲು ಚಿಂತನೆ ನಡೆಸ ಲಾಗಿದ್ದು,…
ಉಂಡುವಾಡಿಯಿಂದ ಮೈಸೂರಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ಸಾಧ್ಯತೆ
June 25, 2018ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಅಧಿಕಾರಿಗಳ ಸಭೆ ಮೈಸೂರು: ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇ ಶಿತ ಯೋಜನೆ ಯನ್ನು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸೇರ್ಪಡೆಮಾಡಿ, ಅನುದಾನ ಕಾಯ್ದಿರಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಂದು ಸಂಬಂಧಪಟ್ಟ ಅಧಿ ಕಾರಿಗಳು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಹಾತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, ಹಿಂದಿನ ಕಾಂಗ್ರೆಸ್ ಸರ್ಕಾರದ…
ಇಂದು ಚಾಮುಂಡೇಶ್ವರಿ ದೇವಸ್ಥಾನದ ಕುಂಭಾಭಿಷೇಕ
June 25, 2018ಮೈಸೂರು: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ಭಾನುವಾರ ಕುಂಭಾಭಿಷೇಕ ಹಾಗೂ ಜೀರ್ಣೋದ್ಧಾರ ಗೊಂಡ ಗೋಪುರದ ಕಳಸಾರೋಹಣದ ವಿವಿಧ ಧಾರ್ಮಿಕ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ್ದು, ನಾಳೆ (ಜೂ.25) ಬೆಳಿಗ್ಗೆ 9.55ಕ್ಕೆ ರಾಜಗೋಪುರ ಹಾಗೂ ವಿಮಾನ ಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕ ಜರುಗಲಿದೆ. ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ದೇವಾ ಲಯದ ಗೋಪುರದಲ್ಲಿರುವ ವಿಗ್ರಹಗಳು ಭಿನ್ನವಾಗಿದ್ದವು. ಈ ಹಿನ್ನೆಲೆ ಯಲ್ಲಿ ಕಳೆದ ಒಂದು ವರ್ಷದಿಂದ ಗೋಪುರದಲ್ಲಿದ್ದ ವಿಗ್ರಹಗಳ ದುರಸ್ತಿ ಕಾಮಗಾರಿ ಹಾಗೂ…
ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ :ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ಕೊಲೆ ಕೇಸ್
June 25, 2018ಕುಶಾಲನಗರ: ಇಲ್ಲಿಗೆ ಸಮೀ ಪದ ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಅನು ಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೇರಿದಂತೆ ಐವರ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಸೀಮಾ ತ್ರಿಪಾಠಿ, ಕನ್ನಡ ಶಿಕ್ಷಕ ಮಂಜಪ್ಪ, ಕಂಪ್ಯೂಟರ್ ಶಿಕ್ಷಕ ಗೋವಿಂದರಾಜು, ವಾರ್ಡನ್ ಸುನೀಲ್ ಮತ್ತು ಮ್ಯಾಥ್ಯು ಅವರು ಗಳು ಆರೋಪಕ್ಕೆ ಗುರಿಯಾದವರಾಗಿದ್ದು, ಮೃತ ವಿದ್ಯಾರ್ಥಿ ಎನ್.ಪಿ.ಚಿಂಗಪ್ಪ ತಂದೆ ಸೈನಿಕ ಶಾಲೆಯ ಹಾಕಿ ಕೋಚ್…
ಪ್ರೊ. ಕೆ.ಎಸ್.ಭಗವಾನ್ ಹತ್ಯೆಗೆ ಶ್ರೀರಂಗಪಟ್ಟಣ ಯುವಕನಿಗೆ ಸುಪಾರಿ
June 25, 2018ಮೈಸೂರು: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಹತ್ಯೆಗೆ ಗೌರಿ ಲಂಕೇಶ್ ಹತ್ಯೆ ಆರೋಪಿ ಹೊಟ್ಟೆ ಮಂಜ, ಶ್ರೀರಂಗಪಟ್ಟಣ ಮೂಲದ ಯುವಕನೊಬ್ಬನಿಗೆ ಸುಪಾರಿ ನೀಡಿದ್ದ ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ಪತ್ರಕರ್ತೆ ಗೌರಿಲಂಕೇಶ್ ಕೊಲೆ ಆರೋಪಿ ಹೊಟ್ಟೆ ಮಂಜ ವಿಚಾರಣೆ ವೇಳೆ ಈ ವಿಷಯವನ್ನು ವಿಶೇಷ ತನಿಖಾ ದಳ (SIT)ದ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ. ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೈಯ್ಯಲು ತಾನು ಶ್ರೀರಂಗ ಪಟ್ಟಣದ ಅನಿಲ್ ಎಂಬಾತನಿಗೆ ಸುಪಾರಿ ನೀಡಿದ್ದಾಗಿ ಆತ ಹೇಳಿದ್ದು, ಅದಕ್ಕಾಗಿ ಕೊಳ್ಳೇಗಾಲದ ಅರಣ್ಯ ಪ್ರದೇಶದಲ್ಲಿ ಅನಿಲ್‍ಗೆ…
ಮೈಸೂರಲ್ಲಿ ಹೆಚ್ಚಿದ ಬುಲೆಟ್ ಬೈಕ್‍ಗಳ ಕಳವು
June 25, 2018ಮೈಸೂರು: ಮೈಸೂರು ನಗರದಲ್ಲಿ ಬುಲೆಟ್ ಬೈಕುಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಬುಲೆಟ್ ಬೈಕುಗಳ ಕಳವು ಸಂಬಂಧ ಇತ್ತೀಚೆಗಷ್ಟೇ ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಕ್ರೈಂ ರಿವ್ಯೂ ಸಭೆಯಲ್ಲಿ ದ್ವಿಚಕ್ರ ವಾಹನಗಳು ಅದರಲ್ಲೂ ಬುಲೆಟ್ ಬೈಕುಗಳ ಕಳ್ಳತನ ನಿಯಂತ್ರಿಸುವಂತೆ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. 2018ರ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 123 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದು, 37 ಪತ್ತೆಯಾಗಿವೆ….
ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದು ಶ್ರೀರಂಗಪಟ್ಟಣದ ಅನಿಲ್!
June 25, 2018ಮೈಸೂರು: ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಹತ್ಯೆಗೈಯ್ಯಲು ಶ್ರೀರಂಗಪಟ್ಟಣ ಮೂಲದ ಅನಿಲ್ ಎಂಬಾತ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ವಿಷಯ ಈಗ ಬಹಿರಂಗಗೊಂಡಿದೆ. ಪತ್ರಕರ್ತೆ ಗೌರಿಲಂಕೇಶ್ ಕೊಲೆ ಆರೋಪಿ ಹೊಟ್ಟೆ ಮಂಜ ವಿಚಾರಣೆ ವೇಳೆ ಈ ವಿಷಯವನ್ನು ವಿಶೇಷ ತನಿಖಾ ದಳ (SIಖಿ)ದ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೈಯ್ಯಲು ತಾನು ಶ್ರೀರಂಗಪಟ್ಟಣದ ಅನಿಲ್ ಎಂಬಾತನಿಗೆ ಸುಪಾರಿ ನೀಡಿದ್ದಾಗಿ ಹೊಟ್ಟೆ ಮಂಜ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ನಿನ್ನಿಂದ ಧರ್ಮದ ಕೆಲಸವಾಗಬೇಕಾಗಿದೆ. ಭಗವಾನ್ ಹತ್ಯೆಯೇ ಆ ಧರ್ಮದ ಕೆಲಸ…