ಮನೆಗಳ್ಳರ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ
ಮೈಸೂರು

ಮನೆಗಳ್ಳರ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ

June 26, 2018

ಮೈಸೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿ, ಬಂಧಿತ ರಿಂದ 81 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ.

ಮೇಟಗಳ್ಳಿಯ ಅಂಬೇಡ್ಕರ್ ಜ್ಞಾನ ಲೋಕದ ನಿವಾಸಿ ರವಿ ಅಲಿಯಾಸ್ ಬಾಂಡ್ ಅಲಿಯಾಸ್ ಬಾಂಡ್ ರವಿ, ಬಿಎಂಶ್ರೀ ನಗರದ ಗೋಪಿನಾಥ್ ಅಲಿ ಯಾಸ್ ಗೋಪಿ(28) ಬಂಧಿತರು. ಜೂ.24 ರಂದು ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿ ಕಳವು ಮಾಡಿದ್ದ ವಸ್ತು ಗಳನ್ನು ಇವರಿಬ್ಬರು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳನ್ನು ಹೆಚ್ಚಿನ ವಿಚಾ ರಣೆ ನಡೆಸಿದಾಗ ನಜರ್‍ಬಾದ್, ವಿಜಯ ನಗರ ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

Translate »