ಮೈಸೂರು: ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಹತ್ಯೆಗೈಯ್ಯಲು ಶ್ರೀರಂಗಪಟ್ಟಣ ಮೂಲದ ಅನಿಲ್ ಎಂಬಾತ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ವಿಷಯ ಈಗ ಬಹಿರಂಗಗೊಂಡಿದೆ.
ಪತ್ರಕರ್ತೆ ಗೌರಿಲಂಕೇಶ್ ಕೊಲೆ ಆರೋಪಿ ಹೊಟ್ಟೆ ಮಂಜ ವಿಚಾರಣೆ ವೇಳೆ ಈ ವಿಷಯವನ್ನು ವಿಶೇಷ ತನಿಖಾ ದಳ (SIಖಿ)ದ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೈಯ್ಯಲು ತಾನು ಶ್ರೀರಂಗಪಟ್ಟಣದ ಅನಿಲ್ ಎಂಬಾತನಿಗೆ ಸುಪಾರಿ ನೀಡಿದ್ದಾಗಿ ಹೊಟ್ಟೆ ಮಂಜ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ನಿನ್ನಿಂದ ಧರ್ಮದ ಕೆಲಸವಾಗಬೇಕಾಗಿದೆ. ಭಗವಾನ್ ಹತ್ಯೆಯೇ ಆ ಧರ್ಮದ ಕೆಲಸ ಎಂದು ಹೇಳಿ ಹೊಟ್ಟೆ ಮಂಜ ಅನಿಲ್‍ಗೆ ಹೇಳಿದ್ದ ಎಂಬುದೀಗ ತನಿಖೆ ವೇಳೆ ಬಹಿರಂಗಗೊಂಡಿದೆ.
ಅದಕ್ಕಾಗಿ ಕೊಳ್ಳೇಗಾಲದ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಟ್ರೈನಿಂಗ್ ನೀಡಲಾಗಿತ್ತಲ್ಲದೆ, ಮೈಸೂರಿನಲ್ಲಿ ಏರ್‍ಗನ್ ಅನ್ನೂ ಖರೀದಿಸಲಾಗಿತ್ತು ಎಂಬ ವಿಷಯವನ್ನು ಎಸ್‍ಐಟಿ ಅಧಿಕಾರಿಗಳು ಹೊಟ್ಟೆ ಮಂಜನಿಂದ ಬಾಯ್ಬಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.