ಮೈಸೂರು

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

June 21, 2018

ಮೈಸೂರು: ಮೈಸೂರು-ಹುಣಸೂರು ಮುಖ್ಯ ರಸ್ತೆಯನ್ನು ಜಲದರ್ಶಿನಿ ಅತಿಥಿ ಗೃಹದ ಬಳಿ ಅಗಲೀಕರಣದೊಂದಿಗೆ ನೇರಗೊಳಿಸುವ ಕಾಮಗಾರಿಯಲ್ಲಿ ಬಾರೀ ಹಗರಣ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಕಾರ್ಯಕರ್ತರು ಜಲದರ್ಶಿನಿ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರಿನ ಕಲಾಮಂದಿರದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ಈ ಹಿಂದೆ ಅಪಘಾತಗಳು ಸಂಭವಿಸುತ್ತಿದ್ದವು. ಕಡಿದಾದ ತಿರುವಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿ ಅಮಾಯಕರು ಬಲಿಯಾಗುತ್ತಿದ್ದರು. ಆದರೆ ಜಲದರ್ಶಿನಿಯ ಮುಂಭಾಗದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ರಸ್ತೆ ನೇರಗೊಳಿಸುವ ಕಾಮಗಾರಿ…

ನಾಳೆಯಿಂದ ಮೈಸೂರಲ್ಲಿ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ, ಮಾರಾಟ
ಮೈಸೂರು

ನಾಳೆಯಿಂದ ಮೈಸೂರಲ್ಲಿ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ, ಮಾರಾಟ

June 21, 2018

ಮೈಸೂರು:  ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಜೂ.22ರಿಂದ 24ರವರೆಗೆ `ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಗೋಲ್ಡನ್ ಕ್ರೀಪರ್ ಎಂಟರ್‍ಪ್ರೈಸಸ್‍ನ ಜಗದೀಶ್ ತಿಳಿಸಿದರು. ಹೋಟೆಲ್‍ನಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೂ.22ರಂದು ಮಧ್ಯಾಹ್ನ 12.15ಕ್ಕೆ ನಟಿ ಶೃತಿ ಹರಿಹರನ್ ಉದ್ಘಾಟಿಸಲಿದ್ದಾರೆ ಎಂದರು. ಮದುವೆ ಹಾಗೂ ಹಬ್ಬದ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗುತ್ತಿದೆ. ಮೈಸೂರು ಜನರ ಅಭಿರುಚಿಗೆ ತಕ್ಕಂತೆ…

ಆರು ಮಂದಿ ಯೋಗ ಸಾಧಕರಿಗೆ ಸನ್ಮಾನ
ಮೈಸೂರು

ಆರು ಮಂದಿ ಯೋಗ ಸಾಧಕರಿಗೆ ಸನ್ಮಾನ

June 21, 2018

ಮೈಸೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆರು ಮಂದಿ ಯೋಗ ಸಾಧಕರಿಗೆ ಬುಧವಾರ `ಯೋಗ ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹಿಮಾಲಯ ಕಲಾ ಸಾಹಿತ್ಯ ವೇದಿಕೆ ಹಾಗೂ ಮೈಸೂರು ಯೋಗ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಯೋಗಪಟುಗಳಾದ ಮೈಸೂರಿನ ವಿ.ಸೋಮಶೇಖರ್, ರಮೇಶ್, ಕೆಆರ್ ನಗರದ ಪಿ.ಆರ್.ವಿಶ್ವನಾಥಶೆಟ್ಟಿ, ಮೈಸೂರಿನ ಯೋಗಪಟುಗಳಾದ ಶಶಿಕುಮಾರ್, ಎನ್.ಆರ್.ಸಂದೀಪ್, ಕೆ.ಆರ್.ಪಾರ್ವತಮ್ಮ ಅವರಿಗೆ ಯೋಗ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಮಾಜ…

ಜು.16ರಿಂದ ಮೈಸೂರು ವಿವಿ ಕ್ರೀಡೆಗಳಿಗೆ ತಂಡಗಳ ಆಯ್ಕೆ
ಮೈಸೂರು

ಜು.16ರಿಂದ ಮೈಸೂರು ವಿವಿ ಕ್ರೀಡೆಗಳಿಗೆ ತಂಡಗಳ ಆಯ್ಕೆ

June 21, 2018

ಮೈಸೂರು:  ವರ್ಷಪೂರ್ತಿ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡೆಗಳಿಗೆ ಜುಲೈ 16ರಿಂದ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ಇರುವ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಭಾಂಗಣದಲ್ಲಿ ಇಂದು ನಡೆದ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಗಳ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ಮೈಸೂರು, ಮಂಡ್ಯ, ಹಾಸನ…

ಮಾಜಿ ಪೊಲೀಸ್ ಕಮೀಷ್ನರ್‍ರಿಂದ ಮೈಸೂರಲ್ಲಿ `ಪುಸ್ತಕ ಮಾತು’
ಮೈಸೂರು

ಮಾಜಿ ಪೊಲೀಸ್ ಕಮೀಷ್ನರ್‍ರಿಂದ ಮೈಸೂರಲ್ಲಿ `ಪುಸ್ತಕ ಮಾತು’

June 21, 2018

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 24 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋ ಜಿಸಿರುವ `ಪುಸ್ತಕ ಮಾತು’ (Book talk) ಕಾರ್ಯಕ್ರಮದಲ್ಲಿ ಮಾಜಿ ಮೈಸೂರು ನಗರ ಪೊಲೀಸ್ ಕಮೀಷ್ನರ್ ಸಿ. ಚಂದ್ರಶೇಖರ್ ಅವರು ಭಾಷಣ ಮಾಡುವರು. ಮೈಸೂರು ಸಾಹಿತ್ಯ ಸಂಘ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಬರಹಗಾರ ವೈ.ಎನ್. ಹರಾರಿ ಅವರ `Homo Deus: A Brief History of tomorrow’ ಕೃತಿ ಕುರಿತಂತೆಯೂ ಅವರು ಚರ್ಚಿಸಲಿದ್ದಾರೆ. ಚಂದ್ರಶೇಖರ ಅವರು ಸ್ವತಃ ಇತಿಹಾಸ ವಿದ್ಯಾರ್ಥಿಯಾಗಿದ್ದು,…

ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಜೆ.ಕೆ. ಟೈರ್ಸ್ ವತಿಯಿಂದ  ಬೃಹತ್ ರಕ್ತದಾನ ಶಿಬಿರ
ಮೈಸೂರು

ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಜೆ.ಕೆ. ಟೈರ್ಸ್ ವತಿಯಿಂದ  ಬೃಹತ್ ರಕ್ತದಾನ ಶಿಬಿರ

June 21, 2018

ಮೈಸೂರು : ಜೆ.ಕೆ.ಸಮೂಹ ಸಂಸ್ಥೆಯ ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಅವರ 85ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ವ್ಯಾಪ್ತಿಯ ಸುಮಾರು 5 ಕಡೆ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಮೈಸೂರಿನ ಜೀವಧಾರ ಬ್ಲಡ್‍ಬ್ಯಾಂಕ್, ಲಯನ್ಸ್ ಬ್ಲಡ್‍ಬ್ಯಾಂಕ್, ಸ್ವಾಮಿ ವಿವೇಕಾನಂದ ಬ್ಲಡ್‍ಬ್ಯಾಂಕ್, ಜೀವ ರಕ್ಷಾ ಬ್ಲಡ್‍ಬ್ಯಾಂಕ್ ಸಹಯೋಗದಲ್ಲಿ ಬುದವಾರ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, ಪತ್ರಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ…

ಪ್ರಧಾನ ಮಂತ್ರಿ ಪರಿಹಾರ ನಿಧಿ ವಿತರಣೆ
ಮೈಸೂರು

ಪ್ರಧಾನ ಮಂತ್ರಿ ಪರಿಹಾರ ನಿಧಿ ವಿತರಣೆ

June 21, 2018

ಮೈಸೂರು: ಶ್ರವಣದೋಷದಿಂದ ಬಳಲುತ್ತಿದ್ದ ಮಹಿಳೆಗೆ ಶ್ರವಣ ಉಪಕರಣ ಖರೀದಿಸಲು ಪ್ರಧಾನಿಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ 23,100ರೂ.ಗಳನ್ನು ಸಂಸದ ಪ್ರತಾಪಸಿಂಹ ಹಸ್ತಾಂತರಿಸಿದರು. ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಶ್ರೀಮತಿ ತಾಯಮ್ಮ ಅವರು ಶ್ರವಣದೋಷದಿಂದ ಬಳಲುತ್ತಿದ್ದರು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರಿಗೆ ಶ್ರವಣ ಉಪಕರಣ ಖರೀಸುವಂತೆ ಸೂಚಿಸಿದ್ದರು. ಶ್ರವಣ ಉಪಕರಣ ಖರೀದಿಸಲು ಪರಿಹಾರವಾಗಿ ಸಂಸದರು ಶಿಫಾರಸು ಮಾಡಿದ್ದ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜುರಾಗಿತ್ತು.ಈ ಹಣದ ದಾಖಲೆಗಳನ್ನು ತಾಯಮ್ಮ ಅವರ ಮಗನಿಗೆ ಸಂಸದರು…

ನರ್ಮ್ ಯೋಜನೆಯಡಿ ನಿರ್ಮಿಸಿದ ಮನೆಗಳ ಅಧ್ವಾನ ಖಂಡಿಸಿ ಕಾಪೋರೇಟರ್ ಎಸ್‍ಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು

ನರ್ಮ್ ಯೋಜನೆಯಡಿ ನಿರ್ಮಿಸಿದ ಮನೆಗಳ ಅಧ್ವಾನ ಖಂಡಿಸಿ ಕಾಪೋರೇಟರ್ ಎಸ್‍ಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ

June 21, 2018

ಮೈಸೂರು:  ಶಿಥಿಲಾವಸ್ಥೆಯಲ್ಲಿರುವ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳಲ್ಲಿ ದುರಸ್ಥಿ ಮಾಡುವುದರೊಂದಿಗೆ, ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಬನ್ನಿಮಂಟಪದ ಹೈವೇ ವೃತ್ತದ ಬಳಿ ಇರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದೆ ಬುಧವಾರ ಬೆಳಿಗ್ಗೆ ಪಾಲಿಕೆ ಸದಸ್ಯ ಎಸ್‍ಎಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನರ್ಮ್ ಯೋಜನೆಯಲ್ಲಿ ಕೊಳಗೇರಿ ನಿವಾಸಿಗಳಿಗಾಗಿ ನಿರ್ಮಿಸಿರುವ ವಸತಿ ಸಮುಚ್ಛಯಗಳು ಕಳಪೆ. ಇದರಿಂದ ಅಲ್ಲಿನ ನಿವಾಸಿಗಳು…

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು
ಮೈಸೂರು

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು

June 21, 2018

ಮೈಸೂರು: ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ನಾಳೆ (ಜೂ. 21)ಯಿಂದ 28ರವರೆಗೆ ನಡೆಯಲಿವೆ. ಮೈಸೂರಿನ ಜಯಲಕ್ಷ್ಮಿಪುರಂನ ವಿವೇಕಾನಂದ ಪ್ರೌಢಶಾಲೆ, ಸತ್ಯಸಾಯಿ ಪ್ರೌಢಶಾಲೆ, ಪೀಪಲ್ಸ್ ಪಾರ್ಕ್‍ನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಎನ್‍ಆರ್ ಮೊಹಲ್ಲಾದ ಸರ್ಕಾರಿ ಹೈಸ್ಕೂಲ್, ಗಾಯಿತ್ರಿಪುರಂನ ಶ್ರೀಕಂಠೇಶ್ವರ ಪ್ರೌಢ ಶಾಲೆ, ಸೇಂಟ್ ಆಂಟೋಣ ಹೈಸ್ಕೂಲ್, ನಜರ್‍ಬಾದಿನ ವಿಭಜಿತ ಮಹಾರಾಜ ಕಾಲೇಜು, ತಿಲಕನಗರದ ಫಾರೂಕಿಯಾ ಹೈಸ್ಕೂಲ್, ಸರಸ್ವತಿಪುರಂನ ಜೆಎಸ್‍ಎಸ್ ಬಾಲಕಿಯರ ಪ್ರೌಢಶಾಲೆ, ಚಾಮುಂಡಿಪುರಂನ ಸೇಂಟ್ ಮೇರಿಸ್ ಹೈಸ್ಕೂಲ್, ವಿದ್ಯಾರಣ್ಯಪುರಂನ ಟಿ.ಎಸ್. ಸುಬ್ಬಣ್ಣ, ಸಾರ್ವಜನಿಕ ಪ್ರೌಢಶಾಲೆ, ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆ,…

ರೂಪದರ್ಶಿಯರ ಆಕರ್ಷಕ ನಡಿಗೆ
ಮೈಸೂರು

ರೂಪದರ್ಶಿಯರ ಆಕರ್ಷಕ ನಡಿಗೆ

June 21, 2018

ಮೈಸೂರು: ಬಣ್ಣದ ಉಡುಗೆ ತೊಟ್ಟ ರೂಪದರ್ಶಿಯರು ವಿವಿಧ ಬಗೆಯ ಆಭರಣಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ವಿವಿಧ ವಿನ್ಯಾಸದ ಆಭರಣಗಳನ್ನು ತೊಟ್ಟ ನಟಿ ಶೃತಿ ಹರಿಹರನ್, ರೂಪದರ್ಶಿಯರೊಂದಿಗೆ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಆ ಮೂಲಕ ಫ್ಯಾಷನ್ ಷೋಗೆ ಮೆರಗು ತಂದುಕೊಟ್ಟರು. ನಂತರ ಉದ್ಯಮಿಗಳಾದ ಚೈತ್ರಾ ರಂಗಸ್ವಾಮಿ, ಕೀರ್ತನಾ ಗೋಪಾಲ್, ರೋಷಿಣ ಪ್ರಕಾಶ್, ಸುದೀಕ್ಷಾ ಅವರು ಚಿನ್ನಾಭರಣಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ನವನವೀನ ಹಾಗೂ…

1 1,536 1,537 1,538 1,539 1,540 1,611
Translate »