ಮಾಜಿ ಪೊಲೀಸ್ ಕಮೀಷ್ನರ್‍ರಿಂದ ಮೈಸೂರಲ್ಲಿ `ಪುಸ್ತಕ ಮಾತು’
ಮೈಸೂರು

ಮಾಜಿ ಪೊಲೀಸ್ ಕಮೀಷ್ನರ್‍ರಿಂದ ಮೈಸೂರಲ್ಲಿ `ಪುಸ್ತಕ ಮಾತು’

June 21, 2018

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 24 ರಂದು ಬೆಳಿಗ್ಗೆ 10.30 ಗಂಟೆಗೆ ಆಯೋ ಜಿಸಿರುವ `ಪುಸ್ತಕ ಮಾತು’ (Book talk) ಕಾರ್ಯಕ್ರಮದಲ್ಲಿ ಮಾಜಿ ಮೈಸೂರು ನಗರ ಪೊಲೀಸ್ ಕಮೀಷ್ನರ್ ಸಿ. ಚಂದ್ರಶೇಖರ್ ಅವರು ಭಾಷಣ ಮಾಡುವರು.

ಮೈಸೂರು ಸಾಹಿತ್ಯ ಸಂಘ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಬರಹಗಾರ ವೈ.ಎನ್. ಹರಾರಿ ಅವರ `Homo Deus: A Brief History of tomorrow’ ಕೃತಿ ಕುರಿತಂತೆಯೂ ಅವರು ಚರ್ಚಿಸಲಿದ್ದಾರೆ. ಚಂದ್ರಶೇಖರ ಅವರು ಸ್ವತಃ ಇತಿಹಾಸ ವಿದ್ಯಾರ್ಥಿಯಾಗಿದ್ದು, ವಿಷಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.

ಹರಾರಿ ಪರಿಚಯ: 1976ರ ಫೆಬ್ರವರಿ 26 ರಂದು ಜನಿಸಿದ ಹರಾರಿ ಅವರು, ಜೆರುಸಲೇಮ್‍ನ ಹೆಬ್ರೀವ್ ವಿಶ್ವವಿದ್ಯಾನಿಲಯದ ಇಸ್ರೇಲಿ ಇತಿಹಾಸಕಾರರಾಗಿ ಹಾಗೂ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 2002ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಿಂದ ಪಿಹೆಚ್‍ಡಿ ಪಡೆದಿರುವ ಅವರು, ವಿಶ್ವ ಇತಿಹಾಸ ಮತ್ತು ಮಧ್ಯಕಾಲೀನ ಇತಿಹಾಸ ಜ್ಞಾನ ಹೊಂದಿದ್ದಾರೆ. ಅವರು `Sapiens: A Brief History of Humankind’ ಕರ್ತೃವೂ ಹೌದು.

Translate »