ಮೈಸೂರು: ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಮೈಸೂರು ಕಾಮರ್ಸ್ ಅಕಾಡೆಮಿಯಲ್ಲಿ ಜೂ. 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಭವಿಷ್ಯದ ಡಿಜಿಟಲ್ ಮಾರ್ಕೆಟಿಂಗ್ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಉದ್ಯೋಗವಕಾಶಗಳು, ಉದ್ಯಮವನ್ನು ಆರಂಭಿಸಲು ಡಿಜಿಟಲ್ ಮಾರ್ಕೆಟಿಂಗ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಚರ್ಚಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9686612979, 6362332986 ಅನ್ನು ಸಂಪರ್ಕಿಸಬಹುದು.
ಶಾಲಾ-ಕಾಲೇಜು ವಾಹನ ತಪಾಸಣೆ
June 14, 2018ಮೈಸೂರು: ಮೈಸೂರು ಪೂರ್ವ ಉಪ ಸಾರಿಗೆ ಆಯುಕ್ತರು ಹಾಗೂ ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಬರುವ ಶಾಲಾ ಕಾಲೇಜು ವಾಹನಗಳ ತಪಾಸಣೆ ಜೂನ್ 15 ರಂದು ಬೆಳಿಗ್ಗೆ 10-30 ರಿಂದ 12-30 ರವರೆಗೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಶಾಲಾ ಕಾಲೇಜು ವಾಹನಗಳ ಮಾಲೀಕರು ವಾಹನಗಳ ಜೊತೆಗೆ ಚಾಲ್ತಿಯಲ್ಲಿರುವ ವಾಹನದ ದಾಖಲಾತಿ, ಚಾಲಕರ ಚಾಲನಾ, ಅನುಜ್ಞಾ ಪತ್ರಯೊಂದಿಗೆ ಹಾಜರಾಗು ವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
June 14, 2018ಮೈಸೂರು: ಸ್ಟಾಫ್ ಸೆಲೆಕ್ಷನ್ ಕಮೀಷನ್‍ನ ವತಿಯಿಂದ ನಡೆಸಲಾಗುವ ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್-2018 (ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆ ಗಳಿಗೆ) ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಚಿತವಾದ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ಜೂ. 18 ರಿಂದ ಜೂ. 29 ರವರೆಗೆ ಅಪರಾಹ್ನ 1.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಸ್ಟಡಿ ಸರ್ಕಲ್‍ನಲ್ಲಿ ಆಯೋಜಿಸಲಾಗಿದೆ. ಸದರಿ ತರಬೇತಿಗೆ ಅರ್ಹ ಆಸಕ್ತ ಅಭ್ಯರ್ಥಿಗಳು ಭಾವಚಿತ್ರದೊಂದಿಗೆ ಜೂ.15ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಖುದ್ದಾಗಿ ನೋಂದಾಯಿಸಿಕೊಳ್ಳಬಹುದಾಗಿದೆ….
ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
June 14, 2018ಮೈಸೂರು: 2018-19ನೇ ಸಾಲಿನ ಎರಡನೇ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿಗಳನ್ನು ಕರೆಯಲಾಗಿದೆ. 2 ವರ್ಷದ ಐಟಿಐ ಉತ್ತೀರ್ಣರಾದ ಸಾಮಾನ್ಯ ಅಭ್ಯರ್ಥಿಗಳನ್ನು ಹಾಗೂ ಇತರೆ ವರ್ಗ ರೂ. 100ಗಳ ಹಾಗೂ ಎಸ್‍ಟಿ, ಎಸ್‍ಸಿ, ಕ್ಯಾಟಗೇರಿ-1 ಅಭ್ಯರ್ಥಿಗಳು ರೂ. 50ಗಳ ಶುಲ್ಕವನ್ನು ಆಯಾ ಸಂಸ್ಥೆಗಳಲ್ಲೇ ಪಾವತಿಸಿ, ಅದರ ರಶೀದಿಯ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸತಕ್ಕದ್ದು. ಅರ್ಜಿಯನ್ನು www.dte.kar.nic.in ವೆಬ್‍ಸೈಟ್‍ನಿಂದ download ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೂ.26ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು, ಪೋಷಕರು www.dte.kar.nic.in ಹಾಗೂ ಸಂಸ್ಥೆಯ ಸೂಚನಾ…
ಬೇಡಿಕೆ ಈಡೇರಿಸಲು ಮನವಿ ಮಾಡಿದರೆ ವರ್ಗಾವಣೆ ಶಿಕ್ಷೆ: ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜಿ ಕಾರ್ಮಿಕರ ಪ್ರತಿಭಟನೆ
June 14, 2018ಮೈಸೂರು: ಕಾನೂನಿನಂತೆ ಸೌಲಭ್ಯ ನೀಡಲು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್‍ನ ಆಡಳಿತ ಮಂಡಳಿ 90 ಮಂದಿ ಕಾರ್ಮಿಕರನ್ನು ಸಂಸ್ಥೆಯ ಆಂಧ್ರಪ್ರದೇಶದ ಘಟಕಕ್ಕೆ ಸಾಮೂಹಿಕ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ಸಿಐಟಿಯು, ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಂಸ್ಥೆಯ ಮೈಸೂರು ಘಟಕದಲ್ಲಿ ಮಹಿಳಾ ಕಾರ್ಮಿಕರು ಸೇರಿದಂತೆ ಸುಮಾರು 450 ಮಂದಿ ಕಾರ್ಮಿಕರು 10 ವರ್ಷಗಳಿಂದ ದುಡಿಯುತ್ತಿದ್ದೇವೆ. ಕಾನೂನಿನಂತೆ ಸೌಲಭ್ಯಗಳನ್ನು…
ಮಂಗಳವಾರ ಪಿರಿಯಾಪಟ್ಟಣದಲ್ಲಿ 63 ಮಿಮೀ ಮಳೆ
June 14, 2018ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಮಂಗಳವಾರ 63 ಮಿಮೀ ಮಳೆಯಾಗಿದೆ. ಹೆಚ್.ಡಿ.ಕೋಟೆ 12.8, ಮೈಸೂರು 0.25 ಮಿಮೀ ಮಳೆಯಾಗಿದ್ದು, ಕೆ.ಆರ್.ನಗರದಲ್ಲಿ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಅಂತೆಯೇ ನಂಜನಗೂಡು, ಹುಣಸೂರು, ತಿ.ನರಸೀಪುರ ತಾಲೂಕಿನಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಂಟ್ರೋಲ್ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ 88.6 ಅಡಿ ನೀರಿದ್ದು, 22,871 ಕ್ಯೂಸೆಕ್ ಒಳ ಹರಿವಿದೆ. 380 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2273.05 ಅಡಿ ನೀರಿದ್ದು, 23,971 ಕ್ಯೂಸೆಕ್ ಒಳ ಹರಿವಿದೆ….
ಅತಿಥಿ ಉಪನ್ಯಾಸಕ: ಅರ್ಜಿ ಆಹ್ವಾನ
June 14, 2018ಮೈಸೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಮೈಸೂರು ತಾಲ್ಲೂಕಿನ ದೊಡ್ಡಕಾನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿಗೆ (ಆಂಗ್ಲ ಮಾಧ್ಯಮ), 2018-19ನೇ ಸಾಲಿನ ಪ್ರಥಮ (Science & Commerce) ಮತ್ತು ದ್ವಿತೀಯ (Science & Commerce) ಪಿಯುಸಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಅಕೌಂಟೆನ್ಸಿ ವಿಷಯ ಬೋಧಿಸಲು ಅರ್ಹ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, # 446, ಎಸ್‍ಕೆಎರ್ ವಿದ್ಯಾಸಂಸ್ಥೆ,…
ಸಾಮೂಹಿಕ ಉಪನಯನ
June 14, 2018ಮೈಸೂರು: ಶ್ರೀ ವೀರಾಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣದ ಅಂಗವಾಗಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 7ರಂದು ವಿವಿ ಮೊಹಲ್ಲಾದಲ್ಲಿ ರುವ ಆಂಡಾಳ್ ಮಂದಿರದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಸ್ವಸ್ತಿರ್ವಾಚನ, ಅನೋಘ್ನೆ ವೇದಘೋಷ, ಸಭಾ ಪ್ರಾರ್ಥನೆ, ವಿಶ್ವಕ್ಷೇನ ಪೂಜೆ, ಉದಕ ಶಾಂತಿ, ಅಂಕುರಾರ್ಪಣೆ, ಮಹಾಮಂಗಳಾ ರತಿ, ತೀರ್ಥ-ಪ್ರಸಾದ ವಿನಿಯೋಗವಿರುತ್ತದೆ. ಜುಲೈ 8ರಂದು ಬೆಳಿಗ್ಗೆ ಸುಪ್ರಭಾತ, ವೇದ ಪಾರಾಯಣ, ಪುಣ್ಯಾಹ, ಉಪನಯನ ಕಾರ್ಯಕ್ರಮ, ಶುಭ ಮುಹೂರ್ತದಲ್ಲಿ ಬ್ರಹ್ಮೋಪದೇಶ ನಂತರ ಸಮಾಶ್ರಯಣ, ಶಾತ್ತುಮುರೈ ಮಹಾಮಂಗಳಾರತಿ…
ಮೈಸೂರು ವಿವಿ ಕುಲಸಚಿವರಾಗಿ ಪ್ರೊ.ಆರ್.ರಾಜಣ್ಣ
June 14, 2018ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ(ಆಡಳಿತ) ಡಿ.ಭಾರತಿ ಅವರನ್ನು ವರ್ಗಾಯಿಸಿ, ಇವರ ಜಾಗಕ್ಕೆ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಆರ್.ರಾಜಣ್ಣ ಅವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಹಿರಿಯ ಕೆಎಎಸ್ ಅಧಿಕಾರಿ ಡಿ.ಭಾರತಿ ಅವರ ಸೇವೆಯನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಗೆ ವಹಿಸಲಾಗಿದೆ.
ಬಾರ್ ಸಿಬ್ಬಂದಿ ಮೇಲೆ ಹಲ್ಲೆ
June 14, 2018ಮೈಸೂರು: ಹಣಕಾಸಿನ ವಿಚಾರವಾಗಿ ಬಾರ್ ಕ್ಯಾಷಿಯರ್ ಮತ್ತು ಸಿಬ್ಬಂದಿ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಘಟನೆ ಬನ್ನಿಮಂಟಪದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ನಡೆದಿದೆ. ಬಾರ್ ಕ್ಯಾಷಿಯರ್ ವೆಂಕಟೇಶ್ ಹಾಗೂ ರವಿ ಹಲ್ಲೆಗೊಳಗಾದವರು. ಜೂ.10 ರಂದು ರಾತ್ರಿ 10.30ರ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು 1,030 ರೂ. ಬೆಲೆಬಾಳುವ ಡ್ರಿಂಕ್ಸ್ ಖರೀದಿಸಿದ್ದಾರೆ. 800 ರೂ.ಗಳನ್ನು ಕೊಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಅರಿತ ಬಾರ್ ಸಿಬ್ಬಂದಿ ವೆಂಕಟೇಶ್ ಮತ್ತು ಇತರರು ಡ್ರಿಂಕ್ಸ್…