ನಂಜನಗೂಡು/ತಿ.ನರಸೀಪುರ, ಡಿ. 9-ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ಹಳೆಯ ಕ್ಷೇತ್ರವಾದ ವರುಣಾದಲ್ಲಿ ಮಿಂಚಿನ ಸಂಚಾರ ಮಾಡಿದರು. ಕ್ಷೇತ್ರದಲ್ಲಿ ಮೂರು ಕಾರ್ಯಕ್ರಮಗಳಿಗೆ ಹಾಜ ರಾದ ಅವರು, ತಾವು ಮುಖ್ಯಮಂತ್ರಿ ಆಗಿದ್ದಾಗ ಮಂಜೂರು ಮಾಡಿದ್ದು, ಈಗ ಪೂರ್ಣಗೊಂಡಿರುವ ಯೋಜನೆಗಳನ್ನು ಉದ್ಘಾಟಿಸಿದರು.ಅವರು ಹೋದೆ ಡೆಯೆಲ್ಲಾ ಅಭೂತಪೂರ್ವ ಸ್ವಾಗತ ದೊರಕಿದ್ದು, “ಮುಂದಿನ ಸಿಎಂ ಸಿದ್ದರಾಮಯ್ಯ” ಎಂಬ ಘೋಷಣೆ ಜೊತೆಗೆ ವರುಣಾದಲ್ಲೇ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದು ಕಂಡುಬಂತು. ಎಲ್ಲಾ ಕಡೆಯೂ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರಕ್ಕೆ…
ಜನವರಿ 1ರಿಂದ ಕಂಡ ಕಂಡಲ್ಲಿ ಕಸ ಸುರಿಯುವವರಿಗೆ `ದಂಡ’ ಪ್ರಯೋಗ
December 10, 2022ಮೈಸೂರು, ಡಿ.9(ಆರ್‍ಕೆ)-ಮೈಸೂರು ನಗರವನ್ನು ಸ್ವಚ್ಛವಾಗಿರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಾಲಿಕೆಯು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ `ಭಾರೀ ದಂಡ’ ಪ್ರಯೋಗದ ಎಚ್ಚರಿಕೆ ನೀಡಿದೆ. 2023ರ ಜನವರಿ 1 ರಿಂದ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವ ವರಿಗೆ `ದಂಡ’ದ ಬರೆ ಹಾಕಲು ನಿರ್ಧರಿಸಿದೆ. ರಸ್ತೆ ಬದಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನದಲ್ಲಿ ಕಸ ಹಾಕುವುದು, ಕಂಡ…
ಗುಜರಾತ್‍ನಲ್ಲಿ ಆಮ್ ಆದ್ಮಿಯಿಂದ ಕಾಂಗ್ರೆಸ್‍ಗೆ ಹಿನ್ನೆಡೆ
December 9, 2022ಮೈಸೂರು,ಡಿ.8(ಎಂಟಿವೈ)- ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ ಗಳನ್ನು ವಿಭಜನೆ ಮಾಡಿದ್ದರಿಂದ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಹಿನ್ನಡೆ ಯಾಗುತ್ತದೆ ಎಂಬ ಮಾಹಿತಿ ನಮಗೆ ಇತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪರ ಒಲವು ಇದೆ ಎಂಬುದು ತಿಳಿದಿತ್ತು. ನಮಗೆ ದೊರೆತ ಮಾಹಿತಿಯಂತೆ ಬಿಜೆಪಿ ಮತ ವಿಭಜನೆ ಮಾಡಲು ಆಮ್ ಆದ್ಮಿಗೆ ಫಂಡ್ ನೀಡಿದೆ. ಈ ಬಾರಿ ಕಾಂಗ್ರೆಸ್…
ಕನ್ನಡದ 12 ನಾಟಕ ಸೇರಿದಂತೆ ಒಟ್ಟು 20 ಪ್ರದರ್ಶನ
December 9, 2022ಮೈಸೂರು,ಡಿ.8(ಎಂಟಿವೈ)-ರಂಗಾಯಣದ ಪ್ರಸಕ್ತ ಸಾಲಿನ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು `ಭಾರತೀಯತೆ’ ಶೀರ್ಷಿಕೆಯಲ್ಲಿ ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮದ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪಲು ಕ್ರಮ ಕೈಗೊಳ್ಳಲಾಗಿದ್ದು, ರಂಗಾಯಣ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಈ ಬಾರಿ ವಿಶಿಷ್ಟ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ. ರಂಗಉತ್ಸವದ ರಸದೌತಣ ಉಣಬಡಿಸಲು ಸಕಲ ಸಿದ್ಧತೆ ಯನ್ನು ಮಾಡಿಕೊಳ್ಳಲಾಗಿದ್ದು, ಶುಕ್ರವಾರದಿಂದ(ಡಿ.9) ಬಹು ರೂಪಿಯ…
ಮೈಸೂರು ಜಿಲ್ಲೆಯ 9,276 ಹೊಸ ಇವಿಎಂ ಕಾರ್ಯಕ್ಷಮತೆ ಖಾತರಿ
December 7, 2022ಮೈಸೂರು, ಡಿ. 6(ಆರ್‍ಕೆ)-ಮುಂಬರುವ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹೈದರಾಬಾದ್‍ನಿಂದ ತಂದಿರುವ ವಿದ್ಯುನ್ಮಾನ ಮತಯಂತ್ರ ಗಳ ಪೈಕಿ 9,276ರ ಕಾರ್ಯಕ್ಷಮತೆ ಖಾತರಿಯಾಗಿದ್ದು, ಉಳಿದ 4 ದೋಷಪೂರಿತವಾಗಿವೆ. ಅವುಗಳನ್ನು ಹೈದರಾಬಾದ್‍ನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‍ಗೆÀ ಕಳಿಸಲಾಗಿದೆ. ಹೊಸ 9,280 ವಿದ್ಯುನ್ಮಾನ ಮತಯಂತ್ರ (ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್)ಗಳನ್ನು ನೋಡಲ್ ಅಧಿಕಾರಿಯೂ ಆದ ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ನೇತೃತ್ವದಲ್ಲಿ ಭಾರೀ ಭದ್ರತೆ ಯೊಂದಿಗೆ ಹೈದರಾಬಾದ್‍ನಿಂದ ಮೈಸೂರಿಗೆ ತರಲಾಗಿತ್ತು. ಮೈಸೂರಿನ ಸಿದ್ಧಾರ್ಥ ಬಡಾವಣೆಯ ಬನ್ನೂರು…
ಪೂರ್ಣ ಬೆಂಬಲ ಘೋಷಿಸಿದ ಬೆಳವಾಡಿ ಶಿವಮೂರ್ತಿ
December 6, 2022ಮೈಸೂರು, ಡಿ. 5- ಚಾಮುಂಡೇ ಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರ ವಿರುದ್ಧ ಬಂಡಾಯ ವೆದ್ದಿದ್ದ ಜೆಡಿಎಸ್‍ನ ಪಂಚ ಮುಖಂಡರ ಪೈಕಿ ಓರ್ವರು ಇಂದು ಜಿ.ಟಿ. ದೇವೇಗೌಡರಿಗೆ ಬೆಂಬಲ ಸೂಚಿ ಸುವ ಮೂಲಕ ಉಳಿದ ಬಂಡಾಯ ಗಾರರಿಗೆ ಶಾಕ್ ನೀಡಿದ್ದಾರೆ. ಐವರು ಮುಖಂಡರ ಪೈಕಿ ಬೆಳ ವಾಡಿ ಶಿವಮೂರ್ತಿಯವರು ಇಂದು ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿ ಮಾಡಿ, ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದರು. ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಶಿವಮೂರ್ತಿ ನಾನು ಅಪ್ಪಟ ಜೆಡಿಎಸ್ ಕಾರ್ಯಕರ್ತ….
ಈ ಮಾಸಾಂತ್ಯಕ್ಕೆ ಹಿಂದುಳಿದ ಸಮುದಾಯಗಳ ವಿಶೇಷ ಅಧಿವೇಶನ
December 6, 2022ಮೈಸೂರು,ಡಿ.5(ಎಂಟಿವೈ)- ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ ಅಂತ್ಯದ ವೇಳೆಗೆ ಹಿಂದುಳಿದ ಸಮುದಾಯಗಳ ವಿಶೇಷ ಅಧಿವೇಶನ ನಡೆಸಲು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೋಷಿತ ಸಮುದಾಯಗಳ ಹಿತಕಾಯಲು ಶ್ರಮಿಸುತ್ತಿರುವ `ರಾಜಕೀಯ ಶಕ್ತಿ’ ಬೆಂಬಲಿಸಲು ಹಿಂದುಳಿದ ಸಮುದಾಯಗಳ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗ ಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ…
ಒಮ್ಮೆಗೆ ನೀರಿನ ಬಿಲ್ ಪಾವತಿಗೆ ನೀರಸ ಪ್ರತಿಕ್ರಿಯೆ
December 6, 2022ಮೈಸೂರು, ಡಿ.5(ಆರ್‍ಕೆ)- ಬಾಕಿ ಉಳಿಸಿಕೊಂಡಿರುವ ನೀರಿನ ತೆರಿಗೆಯನ್ನು ಒಂದೇ ಬಾರಿ ಪಾವತಿಸಲು ಮೈಸೂರು ನಾಗರಿಕರು ಹಿಂದೇಟು ಹಾಕುತ್ತಿದ್ದು, ಈ ಮೂಲಕ ನೀರಿನ ಬಾಕಿ ತೆರಿಗೆ ಸಂಗ್ರಹಕ್ಕೆ ಮೈಸೂರು ಮಹಾನಗರ ಪಾಲಿಕೆ ರೂಪಿಸಿರುವ ಯೋಜನೆಗೆ ಹಿನ್ನಡೆಯಾದಂತಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ಕೋಟಿ ರೂ.ಗೂ ಹೆಚ್ಚು ನೀರಿನ ತೆರಿಗೆ ಬಾಕಿ ಉಳಿದಿದೆ. ಇದನ್ನು ಹೇಗಾ ದರೂ ಸಂಗ್ರಹಿಸಬೇಕೆಂಬ ನಿಟ್ಟಿನಲ್ಲಿ ಗ್ರಾಹಕರಿಗೊಂದು ವಿಶೇಷ ಆಫರ್ ನೀಡಲಾಗಿತ್ತು. ನೀರಿನ ತೆರಿಗೆ ಒಟ್ಟು ಮೊತ್ತದಲ್ಲಿ ಅಸಲನ್ನು ಸಂಪೂರ್ಣವಾಗಿ ಪಾವತಿಸಿದರೆ ಕಠಿಣ ಕ್ರಮದಿಂದ ಪಾರಾಗಬಹುದು…
ಮೈಸೂರಲ್ಲಿ ಸಂಸದರು, ಶಾಸಕರ ಕಚೇರಿಗೆ ಕಬ್ಬು ಬೆಳೆಗಾರರ ಮುತ್ತಿಗೆ
December 6, 2022ಮೈಸೂರು,ಡಿ.5(ಎಂಟಿವೈ)- ಕಬ್ಬಿಗೆ ಸೂಕ್ತ ಎಫ್‍ಆರ್‍ಪಿ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಕಳೆದ 14 ದಿನಗಳಿಂದ ಬೆಂಗ ಳೂರಿನ ಫ್ರ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸು ತ್ತಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಸಂಸದ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮೈಸೂರಿನ ಜಲದರ್ಶಿನಿಯಲ್ಲಿರುವ ಸಂಸದ ಪ್ರತಾಪಸಿಂಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಬಳಿಕ ಸಂಸದ ಶ್ರೀನಿವಾಸಪ್ರಸಾದ್ ನಿವಾಸ, ಶಾಸಕ ಎಲ್. ನಾಗೇಂದ್ರ,…
ಮೈಸೂರಲ್ಲಿ ಭಕ್ತಿ ಭಾವದ ಹನುಮ ಸ್ಮರಣೆ
December 6, 2022ಮೈಸೂರು, ಡಿ.5(ಆರ್‍ಕೆಬಿ)- ಹನುಮ ಜಯಂತಿ ಅಂಗವಾಗಿ ಮೈಸೂರಿನ ವಿವಿಧೆಡೆ ಸೋಮವಾರ ಭಕ್ತಿ ಭಾವದಿಂದ ಹನುಮ ಸ್ಮರಣೆ ಮಾಡಲಾಯಿತು. ಹನುಮ ದೇವಾಲ ಯದಲ್ಲಿ ಹೋಮ, ಹವನ, ಹನುಮನಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನೆರವೇರಿದವು. ಮುಂಜಾನೆಯಿಂದಲೇ ಜನರು ದೇವರಿಗೆ ಭಕ್ತಿಯಿಂದ ನಮಿಸಿದರು. ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾ ನಂದ ಆಶ್ರಮದ ಕಾರ್ಯಸಿದ್ಧಿ ಹನುಮಾನ್ ದೇವ ಸ್ಥಾನದಲ್ಲಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಂಜನೇಯ ನಿಗೆ ವಿಶೇಷ ಅಭಿಷೇಕ, ದೇವರಿಗೆ ಕದಳಿ ಅಲಂಕಾರ ಮಾಡಲಾಗಿತ್ತು. ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳು…