ಮೈಸೂರು, ಜ.20(ಪಿಎಂ)- ಮೈಸೂರು ಜಿಲ್ಲೆಯ ನಾಯಕರ ಶಿಕ್ಷಕರ ಕ್ಷೇಮಾಭಿ ವೃದ್ಧಿ ಸಂಘದ 2021ನೇ ಸಾಲಿನ ಕ್ಯಾಲೆಂ ಡರ್ ಅನ್ನು ಬುಧವಾರ ಬಿಡುಗಡೆ ಮಾಡ ಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ಸಮುದಾಯ ಹಾಗೂ ಬಿಜೆಪಿ ಮುಖಂಡ ಸುಬ್ಬಣ್ಣ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತ ನಾಡಿದ ಅವರು, ಮೈಸೂರು ನಗರದಲ್ಲಿ ಸ್ವಂತ ಕಟ್ಟಡದಲ್ಲಿ ಕಚೇರಿ ತೆರೆಯುವ ಶಕ್ತಿ ಸದರಿ ಸಂಘಕ್ಕೆ ಬರಲಿ. ಇದಕ್ಕೆ ಅಗತ್ಯ ಸಹಕಾರ ಕೊಡುವುದಾಗಿ ತಿಳಿಸಿ ದರು. ಸಮುದಾಯದ ಮುಖಂಡ…
ಜ.26ರಂದು ಬನ್ನಿಮಂಟಪದಲ್ಲಿ ಗಣರಾಜ್ಯೋತ್ಸವ
January 21, 2021ಮೈಸೂರು, ಜ.20- ಜನವರಿ 26 ರಂದು ನಡೆ ಯುವ ಗಣರಾಜ್ಯೋತ್ಸವ ಸಮಾರಂಭವನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿ ಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥ್‍ಸ್ವಾಮಿ ತಿಳಿಸಿದರು. ಗಣರಾಜ್ಯೋತ್ಸವ ದಿನಾಚರಣೆ ಕುರಿತು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಅಗತ್ಯ ವಿರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಬಾರಿಯ ಗಣರಾಜ್ಯೋತ್ಸವ…
ಮೈಸೂರು ವಿವಿ ಪ್ರಾಧ್ಯಾಪಕರಿಗೆ ಪದೋನ್ನತಿ ಪಡೆದ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ವಿಸ್ತರಣೆ
January 21, 2021ಮೈಸೂರು,ಜ.20-ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ರಿಗೆ ಪದೋನ್ನತಿ ಹೊಂದಿದ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ವಿಸ್ತರಿಸುವ ಪ್ರಸ್ತಾವನೆಗೆ ವಿವಿಯ ಸಿಂಡಿಕೇಟ್ ಅನುಮೋದನೆ ನೀಡಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪದೋನ್ನತಿ ಹೊಂದಿದ ಅಧ್ಯಾಪಕರಿಗೆ ಅವರವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ನೀಡಬೇಕೆಂದು ನಿರ್ಧರಿಸಲಾಗಿದೆ. ಯುಜಿಸಿ ನಿಯಮಾವಳಿ ಪ್ರಕಾರ ಯಾವುದೇ ಸಹಾಯಕ ಪ್ರಾಧ್ಯಾಪಕರಿಗೆ ಎಜಿಪಿ 7-8 ಸಾವಿರ, ಸಹಪ್ರಾಧ್ಯಾಪಕರಿಗೆ 9 ಸಾವಿರ, ಪ್ರಾಧ್ಯಾ ಪಕರಿಗೆ 10 ಸಾವಿರ ರೂ.ಗಳನ್ನು ಪದೋನ್ನತಿ ಹೊಂದಿದ ದಿನ ದಿಂದಲೇ ಈ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ….
ಇನ್ನೆರಡು ದಿನಗಳಲ್ಲಿ ಶಾಲಾ ಕಾಲೇಜುಗಳ ಶುಲ್ಕ ಘೋಷಣೆ
January 21, 2021ಬೆಂಗಳೂರು, ಜ. 20- ಅನುದಾನಿತ ಶಾಲೆಗಳ ಶುಲ್ಕವನ್ನು ಇನ್ನೆರಡು ದಿನಗಳಲ್ಲಿ ನಿಗದಿಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಬುಧವಾರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶುಲ್ಕ ನಿಗದಿ ಪಡಿಸುವ ಕುರಿತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕಿದೆ. ಒಂದೆಡೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಪೆÇೀಷಕರ ಆರ್ಥಿಕ ಸ್ಥಿತಿಗತಿ ಹಾಗೂ ಹದಗೆಟ್ಟಿರುವ ಶಾಲೆಗಳ ಸ್ಥಿತಿಗತಿ ಗಳನ್ನು ಕೂಡ ಪರಿಗಣಿಸಬೇಕಿದೆ ಎಂದರು. ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಇನ್ನೂ ಪರಿಶೀಲಿಸಿಲ್ಲ. ಯಾರಿಗೂ…
ಒಂದು ಕುಟುಂಬಕ್ಕೆ ಒಂದೇ ಹುದ್ದೆ ನೀತಿ ಜಾರಿಗೆ ತನ್ನಿ
January 21, 2021ಬೆಂಗಳೂರು,ಜ.20-ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಗುಡುಗಿದ್ದಾರೆ. ಒಂದೇ ಕುಟುಂಬಕ್ಕೆ ಎಂಎಲ್‍ಎ, ನಿಗಮ ಮಂಡಳಿ, ಲೋಕಸಭೆ, ರಾಜ್ಯಸಭೆ, ಪಕ್ಷದ ಜವಾಬ್ದಾರಿ ಎಲ್ಲವೂ ಕೊಡಬಾರದು ಎಂದು ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಒಂದು ಕುಟುಂಬದ ಒಬ್ಬರಿಗೇ ಮಾತ್ರ ಅಧಿಕಾರ ಕೊಡಬೇಕು ಎಂದು ನಾನು ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ…
ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಈ ಬಾರಿಯೂ ಅಗ್ರಸ್ಥಾನ
January 21, 2021ಬೆಂಗಳೂರು, ಜ.20(ಕೆಎಂಶಿ)- ನೀತಿ ಆಯೋಗ ಬಿಡುಗಡೆ ಮಾಡಿರುವ ಆವಿಷ್ಕಾರ ಸೂಚ್ಯಂಕ 2020ರ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ. `ನೀತಿ ಆಯೋಗ ಪ್ರಕಟಿಸಿರುವ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಸತತ 2ನೇ ಬಾರಿಗೆ ಕರ್ನಾಟಕ ಅಗ್ರ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ವಿಷಯ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾ ವರಣದಿಂದಾಗಿ ರಾಜ್ಯ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಬೃಹತ್…
ಕೇಂದ್ರ ಬಜೆಟ್: ಜ.30ರಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ
January 21, 2021ನವದೆಹಲಿ,ಜ.20-ಫೆಬ್ರವರಿ 1ರಂದು 2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಜ.30ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜ.30ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಯವರು ಸರ್ವಪಕ್ಷ ಸಭೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಕೇಂದ್ರ ಬಜೆಟ್ 2021-22 ಅನ್ನು ಮಂಡಿಸಲಿ ದ್ದಾರೆ. ಬಜೆಟ್ ಅಧಿವೇಶನವು ಜ.29ರಿಂದ ಫೆಬ್ರವರಿ 15ರವರೆಗೆ ಮತ್ತು ಮಾ.8ರಿಂದ ಏ.8ರವರೆಗೆ ಎರಡು ಭಾಗಗಳಲ್ಲಿ ನಡೆಯಲಿದೆ….
ಮೈಸೂರು ಪೊಲೀಸ್ ಶ್ವಾನದಳದ `ಸೀಮಾ’ ಇನ್ನಿಲ್ಲ
January 21, 2021ಮೈಸೂರು, ಜ.20(ವೈಡಿಎಸ್)- ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ `ಸೀಮಾ’ ಎಂಬ ಶ್ವಾನ ಬುಧವಾರ ಸಾವನ್ನಪ್ಪಿದೆ. 2009ರ ನ.14 ರಿಂದ ಸೂಕ್ತ ತರಬೇತಿಯೊಂದಿಗೆ ಇಲಾ ಖೆಗೆ ಸೇರಿದ ಸೀಮಾ, ಹಲವು ಡಾಗ್ ಶೋ, ಮಾಕ್ ಡ್ರಿಲ್(ಅಣುಕು ಕಾರ್ಯಾ ಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬದ ಭದ್ರತೆ ಬಂದೋಬಸ್ತ್‍ಗಳ ಕರ್ತವ್ಯದ ಸಂದರ್ಭ ಎಎಸ್‍ಸಿ ತಂಡದೊಂ ದಿಗೆ ಉತ್ತಮ ಕರ್ತವ್ಯ ನಿರ್ವಹಿಸಿತ್ತು. 11 ವರ್ಷ 2 ತಿಂಗಳು ಪೊಲೀಸ್…
ಆರ್‍ಟಿಓ ಪಶ್ಚಿಮ ಕಚೇರಿ ಸೇವೆಗಳಲ್ಲಿ ಅನಾನುಕೂಲ; ಆರೋಪ
January 21, 2021ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘ ಪ್ರತಿಭಟನೆ ಮೈಸೂರು,ಜ.20(ಪಿಎಂ)- ಮೈಸೂರು ಚಾಮರಾಜಪುರಂನಲ್ಲಿರುವ ಪಶ್ಚಿಮ ಪ್ರಾದೇ ಶಿಕ ಸಾರಿಗೆ ಕಚೇರಿಯಲ್ಲಿ (ಆರ್‍ಟಿಓ ಪಶ್ಚಿಮ) ಕಲಿಕಾ ಪರವಾನಗಿ ಪಡೆಯುವುದೂ ಸೇರಿ ದಂತೆ ಇನ್ನಿತರ ಕಾರ್ಯಗಳಲ್ಲಿ ಸಾಕಷ್ಟು ಅನಾನುಕೂಲ ಇದ್ದು, ಇದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘದ (ಆರ್‍ಟಿಓ ಮೈಸೂರು ಪಶ್ಚಿಮ) ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ವಾಣಿವಿಲಾಸ ರಸ್ತೆಯಲ್ಲಿರುವ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಸಾರಿಗೆ ಕಚೇರಿಗೆ ಸಂಬಂಧಿಸಿದಂತೆ ಕಲಿಕಾ ಪರವಾನಗಿ ಪಡೆಯಲು…
ಮೈಸೂರು ಬೀದಿಬದಿ ವರ್ತಕರಿಗೆ ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠದ ಸನ್ಮಾನ
January 21, 2021ಮೈಸೂರು,ಜ.20(ಎಂಟಿವೈ)-`ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನ’ ಆಚರಣೆ ಅಂಗವಾಗಿ ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠದಿಂದ ಮೈಸೂ ರಿನಲ್ಲಿ ಬುಧವಾರ ಬೀದಿಬದಿ ವ್ಯಾಪಾರಿಗಳಲ್ಲಿ 6 ಮಂದಿಯನ್ನು ಸನ್ಮಾನಿಸಲಾಯಿತು. ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಸಚಿನ್ ರಾಜೇಂದ್ರ ಭವನದಲ್ಲಿ ನಡೆದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಹೂವಿನ ವ್ಯಾಪಾರಿ ಎಂ.ಆನಂದಕುಮಾರ್, ನಿಂಬೆಹಣ್ಣು ವ್ಯಾಪಾರಿ ವಿಶೇಷಚೇತನ ನಾಗರಾಜು, ಚುರುಮುರಿ ವ್ಯಾಪಾರಿ ವೆಂಕಟರಮಣ, ವಿಳ್ಳೇದೆಲೆ ವ್ಯಾಪಾರಿ ಪುಟ್ಟಮ್ಮ, ತರಕಾರಿ ವ್ಯಾಪಾರಿ ಭಾಗ್ಯಮ್ಮ, ಬೀದಿಬದಿ ಸ್ವಉದ್ಯೋಗ ನಡೆಸುತ್ತಿರುವ ಪದವೀಧರ ರಾಘ ವೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ…










