ನಾಯಕರ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ನಾಯಕರ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಬಿಡುಗಡೆ

January 21, 2021

ಮೈಸೂರು, ಜ.20(ಪಿಎಂ)- ಮೈಸೂರು ಜಿಲ್ಲೆಯ ನಾಯಕರ ಶಿಕ್ಷಕರ ಕ್ಷೇಮಾಭಿ ವೃದ್ಧಿ ಸಂಘದ 2021ನೇ ಸಾಲಿನ ಕ್ಯಾಲೆಂ ಡರ್ ಅನ್ನು ಬುಧವಾರ ಬಿಡುಗಡೆ ಮಾಡ ಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ಸಮುದಾಯ ಹಾಗೂ ಬಿಜೆಪಿ ಮುಖಂಡ ಸುಬ್ಬಣ್ಣ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಳಿಕ ಮಾತ ನಾಡಿದ ಅವರು, ಮೈಸೂರು ನಗರದಲ್ಲಿ ಸ್ವಂತ ಕಟ್ಟಡದಲ್ಲಿ ಕಚೇರಿ ತೆರೆಯುವ ಶಕ್ತಿ ಸದರಿ ಸಂಘಕ್ಕೆ ಬರಲಿ. ಇದಕ್ಕೆ ಅಗತ್ಯ ಸಹಕಾರ ಕೊಡುವುದಾಗಿ ತಿಳಿಸಿ ದರು. ಸಮುದಾಯದ ಮುಖಂಡ ದ್ಯಾವಪ್ಪನಾಯಕ, ಮೈಸೂರು ಜಿಲ್ಲೆ ಸರ್ಕಾರಿ ನೌಕರರ ಸಂಘದ ನಿರ್ದೇಶಕ ರೇವಣ್ಣ, ಮೈಸೂರು ತಾಲೂಕು ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಜವರೇಗೌಡ, ನಂಜನಗೂಡು ತಾಲೂಕಿನ ನಾಯಕ ನೌಕರರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತ ನಾಯಕ, ತಾಂಡವಪುರ ಗ್ರಾಪಂ ಸದಸ್ಯ ಸಿ.ಎಲ್.ಚಂದ್ರು, ನಾಯಕರ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ನಾಗ ಲಿಂಗಪ್ಪ ಮತ್ತಿತರರು ಹಾಜರಿದ್ದರು.

 

Translate »