36ನೇ ವಾರ್ಡ್ ಯರಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮೈಸೂರು

36ನೇ ವಾರ್ಡ್ ಯರಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

January 21, 2021

ಮೈಸೂರು, ಜ.20(ಆರ್‍ಕೆಬಿ)- ಮೈಸೂರಿನ 36ನೇ ವಾರ್ಡ್‍ನ ಯರಗನಹಳ್ಳಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮಹಾನಗರಪಾಲಿಕೆಯ 14ನೇ ಹಣಕಾಸು ಅನುದಾನದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇ ಗೌಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇರಲಿಲ್ಲ. ಶುದ್ಧ ನೀರಿಗಾಗಿ ಪರದಾಡುತ್ತಿದ್ದ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಪಾಲಿಕೆ ವತಿಯಿಂದ 7 ಲಕ್ಷ ರೂ. ವೆಚ್ಚದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ನಿವಾಸಿಗಳು ಇದರ ಸದುಪ ಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಸ್.ಮಾದೇಗೌಡ, ಮುಖಂಡರಾದ ನಂಜಪ್ಪ, ಪುಟ್ಟಮಾದು, ವೈ.ಆರ್.ಪುಟ್ಟಸ್ವಾಮಿ, ವೈ.ಸಿ.ವೆಂಕಟೇಶ್, ವೈ.ಸಿ.ರಾಮು, ತಿಮ್ಮಣ್ಣ, ಲಾರಿ ವೆಂಕಟೇಗೌಡ, ರಘು, ಆನಂದ, ವಾಣಿವಿಲಾಸ ನೀರು ಸರಬರಾಜು ಅಧಿಕಾರಿಗಳು ಉಪಸ್ಥಿತರಿದ್ದರು.

Translate »