ಮೈಸೂರು

ಕೃಷಿ ಕಾಯ್ದೆ ವಿರುದ್ಧ ಜ.26ರಂದು ಬೆಂಗಳೂರಲ್ಲಿ ರೈತರ ಬೃಹತ್ ರ್ಯಾಲಿ
ಮೈಸೂರು

ಕೃಷಿ ಕಾಯ್ದೆ ವಿರುದ್ಧ ಜ.26ರಂದು ಬೆಂಗಳೂರಲ್ಲಿ ರೈತರ ಬೃಹತ್ ರ್ಯಾಲಿ

January 22, 2021

ಮೈಸೂರು, ಜ.21(ಆರ್‍ಕೆಬಿ)- ಕೇಂದ್ರ ಸರ್ಕಾ ರದ ಕೃಷಿ ಕಾಯಿದೆ ವಿರೋಧಿಸಿ ಎರಡು ತಿಂಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ, ರಾಜ್ಯದ ರೈತರು ಜ.26ರಂದು ಬೆಂಗ ಳೂರಿನಲ್ಲಿ ಪರೇಡ್ ನಡೆಸಲಿದ್ದೇವೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾ ಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಮೂರು ಕೃಷಿ ಕಾಯಿದೆ ವಿರುದ್ಧ ದೆಹಲಿಯಲ್ಲಿ ರೈತರು ಪ್ರತಿ ಭಟನೆ ನಡೆಸುತ್ತಿದ್ದು, ಕೇಂದ್ರ…

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನ
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನ

January 22, 2021

ಮೈಸೂರು, ಜ.21(ಪಿಎಂ)- ಮೇಟಗಳ್ಳಿ ಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ (ಜಿಲ್ಲಾ ಕೋವಿಡ್ ಆಸ್ಪತ್ರೆ) ಗುರುವಾರ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಕೊರೊನಾ ತಡೆ ಲಸಿಕೆ (ಕೋವಿಶೀಲ್ಡ್) ಹಾಕಲಾಯಿತು. ಗುರುವಾರದಿಂದ 3 ದಿನಗಳು ಈ ಲಸಿಕೆ ನೀಡುವ ಅಭಿಯಾನ ನಡೆಯಲಿದ್ದು, ಮೊದಲ ದಿನವಾದ ಇಂದು ಆಸ್ಪತ್ರೆಯಲ್ಲಿ 3 ಲಸಿಕಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಿ, 100 ಮಂದಿಗೆ ಲಸಿಕೆ ನೀಡಲಾಯಿತು. ಅಂತೆಯೇ ದಿನಕ್ಕೆ 100 ಮಂದಿಯಂತೆ ಇನ್ನು 2 ದಿನದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂ ದಿಗೂ ಲಸಿಕೆ ನೀಡುವ ಗುರಿ ಹೊಂದ ಲಾಗಿದೆ. ಆಸ್ಪತ್ರೆಯಲ್ಲಿ…

ರಾಜ್ಯದಲ್ಲಿ ಕೊರೊನಾ ಇಳಿಮುಖ; 815 ಸೋಂಕಿತರು ಗುಣಮುಖ
ಮೈಸೂರು

ರಾಜ್ಯದಲ್ಲಿ ಕೊರೊನಾ ಇಳಿಮುಖ; 815 ಸೋಂಕಿತರು ಗುಣಮುಖ

January 22, 2021

ಮೈಸೂರು,ಜ.21(ವೈಡಿಎಸ್)-ರಾಜ್ಯದಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾವಿನ ಸಂಖ್ಯೆಯೂ ಕಡಿಮೆ ಯಾಗುತ್ತಿದೆ. ಗುರುವಾರ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ 35 ಜನರಿಗೆ ಸೋಂಕು ದೃಢಪಟ್ಟಿದ್ದು, 31 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಸಾವು ಪ್ರಕರಣ ವರದಿಯಾಗಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,132ಕ್ಕೆ ಏರಿಕೆಯಾಗಿದ್ದು, ಈವರೆಗೆ 51,883 ಮಂದಿ ಗುಣಮುಖರಾದಂತಾ ಗಿದೆ. ಇದುವರೆಗೆ 1,022 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 227 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 64 ಮಂದಿ ಸೋಂಕಿತರು ಮನೆ ಯಲ್ಲೇ ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ…

ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಸ್ವಾಭಿಮಾನಿ ಬಣ ಪ್ರತಿಭಟನೆ
ಮೈಸೂರು

ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಸ್ವಾಭಿಮಾನಿ ಬಣ ಪ್ರತಿಭಟನೆ

January 22, 2021

ಮೈಸೂರು,ಜ.21(ಎಂಟಿವೈ)-ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿಯ ಗಡಿಭಾಗ ವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ಉದ್ಧಟತನದ್ದಾಗಿದೆ ಎಂದು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು, ಗುರುವಾರ ಬೆಳಿಗ್ಗೆ ಮೈಸೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ ವಿರುದ್ಧ ಘೋಷಣೆ ಕೂಗಿದರು. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಪದೇ ಪದೆ ಕ್ಯಾತೆ ತೆಗೆಯುತ್ತಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ಸ್ಥಾನದಲ್ಲಿರುವ ಉದ್ಧವ್ ಠಾಕ್ರೆ ಅವರೇ ಸೌಹಾರ್ದತೆ ಕದಡುತ್ತಿದ್ದಾರೆ. ಕನ್ನಡಿಗರ ಭಾವನೆ ಕೆರಳಿಸುತ್ತಿದ್ದಾರೆ…

ಎರಡು ಟೆಂಪೊಗಳಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ಮೈಸೂರು ಭಾಗದ 100 ರೈತರ ತಂಡ
ಮೈಸೂರು

ಎರಡು ಟೆಂಪೊಗಳಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ಮೈಸೂರು ಭಾಗದ 100 ರೈತರ ತಂಡ

January 21, 2021

ಮೈಸೂರು,ಜ.20(ಪಿಎಂ)-ಕೇಂದ್ರ ಸರ್ಕಾ ರದ ಮೂರು ಕೃಷಿ ಸಂಬಂಧಿತ ನೂತನ ಕಾಯ್ದೆಗಳ ವಿರುದ್ಧ ಗಣರಾಜ್ಯೋತ್ಸವ ದಿನ ದಂದು ರೈತರು ನಡೆಸಲು ಮುಂದಾಗಿ ರುವ ಟ್ರ್ಯಾಕ್ಟರ್ ಪರೇಡ್‍ನಲ್ಲಿ ಭಾಗವಹಿ ಸಲು ಮೈಸೂರು ಭಾಗದ ರೈತರು ನಿರ್ಧರಿ ಸಿದ್ದು, 100ಕ್ಕೂ ಹೆಚ್ಚು ರೈತರು ಬುಧವಾರ ಮೈಸೂರಿಂದ ಪ್ರಯಾಣ ಬೆಳೆಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ದೆಹಲಿ ಪ್ರಯಾಣ ಬೆಳೆಸಿರುವ ರೈತರ ತಂಡಕ್ಕೆ ಮೈಸೂರಿನ ಗನ್‍ಹೌಸ್ ಸಮೀಪದ ಕುವೆಂಪು ಉದ್ಯಾ ನವನದ ಬಳಿ ಬೀಳ್ಕೊಡಲಾಯಿತು. ಇದಕ್ಕೂ ಮುನ್ನ ಚಾಮರಾಜನಗರ…

ಮೈಸೂರು ಜಿಲ್ಲೆಯಲ್ಲಿ ಈವರೆಗೆ 6,043 ಮಂದಿಗೆ ಕೊರೊನಾ ಲಸಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಈವರೆಗೆ 6,043 ಮಂದಿಗೆ ಕೊರೊನಾ ಲಸಿಕೆ

January 21, 2021

ಮೈಸೂರು, ಜ.20(ಆರ್‍ಕೆ)- ಜನವರಿ 16ರಿಂದ 20ರವರೆಗೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಒಟ್ಟು 6,043 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ಹಾಕಲಾಗಿದೆ. ಒಟ್ಟು 9,353 ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತಾದರೂ, ಈವರೆಗೆ 6,043 ಮಂದಿ ಮಾತ್ರ ಲಸಿಕಾ ಚುಚ್ಚುಮದ್ದು ಪಡೆದಿದ್ದು, ಶೇ.64.61ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೋವಿಡ್-19 ನೋಡಲ್ ಅಧಿಕಾರಿ ಡಾ.ಎಲ್.ರವಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಜ.16ರಂದು ಉದ್ದೇಶಿತ 860ರ ಪೈಕಿ 454 ಮಂದಿ, ಜ.18ರಂದು 4,601ರ ಪೈಕಿ 2,731 ಹಾಗೂ ಇಂದು (ಜ.20)…

ಮೈಸೂರು ಜಿಲ್ಲೆಯಲ್ಲಿ 24 ಮಂದಿಗೆ ಸೋಂಕು, 43 ಸೋಂಕಿತರು ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 24 ಮಂದಿಗೆ ಸೋಂಕು, 43 ಸೋಂಕಿತರು ಗುಣಮುಖ

January 21, 2021

ಮೈಸೂರು, ಜ.20(ವೈಡಿಎಸ್)- ಮೈಸೂರು ಜಿಲ್ಲೆ ಯಲ್ಲಿ ಬುಧವಾರ 24 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದೇ ವೇಳೆ 43 ಸೋಂಕಿತರು ಗುಣ ಕಂಡಿದ್ದಾರೆ. ಇಂದು ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,097ಕ್ಕೆ ಏರಿಕೆ ಯಾಗಿದ್ದು, ಈವರೆಗೆ 51,852 ಮಂದಿ ಗುಣಮುಖರಾದಂತಾಗಿದೆ. ಇದುವರೆಗೆ 1,022 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 223 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 66 ಮಂದಿ ಸೋಂಕಿತರು ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರ…

ಕೋವಿಡ್-19 ಐಸೋಲೇಷನ್ ರೈಲ್ವೇ ಬೋಗಿಗಳೀಗ ವಾಹನ ಸಾಗಣೆಗೆ ಬಳಕೆ
ಮೈಸೂರು

ಕೋವಿಡ್-19 ಐಸೋಲೇಷನ್ ರೈಲ್ವೇ ಬೋಗಿಗಳೀಗ ವಾಹನ ಸಾಗಣೆಗೆ ಬಳಕೆ

January 21, 2021

ಸುಸ್ಥಿತಿಯಲ್ಲಿರುವ ಬೋಗಿಗಳು ಪ್ರಯಾಣಿಕರ ಸಂಚಾರಕ್ಕೆ ಬಳಕೆ ಮೈಸೂರು,ಜ.20(ಆರ್‍ಕೆ)-ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಗಾಗಿ ಬಳಸಿಕೊಳ್ಳಲು ರೈಲ್ವೇ ಇಲಾಖೆ ಸಿದ್ಧಪಡಿಸಿದ್ದ ರೈಲು ಬೋಗಿಗಳೀಗ ದ್ವಿಚಕ್ರ ವಾಹನ ಸಾಗಿಸಲು ಬಳಕೆಯಾಗಲಿವೆ. ಕೋವಿಡ್-19 ಅಟ್ಟಹಾಸ ತೀವ್ರಗೊಂಡಿದ್ದಾಗ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದ್ದ ಆಸ್ಪತ್ರೆ, ಇನ್ನಿತರ ಸ್ಥಳಗಳು ಸಾಲದೆ ಬಂದರೆ, ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ಇಲಾಖೆಯು ಹಳೆಯದಾದ ರೈಲು ಬೋಗಿಗಳನ್ನು ಕೋವಿಡ್-19 ಐಸೋ ಲೇಷನ್ ಕೋಚ್‍ಗಳನ್ನಾಗಿ ಪರಿವರ್ತಿಸಿ, ಮೀಸಲಾಗಿರಿಸಿತ್ತು. ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ 128 ಕೋಚ್‍ಗಳನ್ನು ಹೀಗೆ ಪರಿವರ್ತಿಸಿ ಮೈಸೂರಿನ ಅಶೋಕಪುರಂ…

ಜ್ವರ, ಉಸಿರಾಟ ಸಮಸ್ಯೆ: ಶಶಿಕಲಾ ಆಸ್ಪತ್ರೆಗೆ ದಾಖಲು
ಮೈಸೂರು

ಜ್ವರ, ಉಸಿರಾಟ ಸಮಸ್ಯೆ: ಶಶಿಕಲಾ ಆಸ್ಪತ್ರೆಗೆ ದಾಖಲು

January 21, 2021

ಚೆನ್ನೈ,ಜ.20-ಕಳೆದ 4 ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನನ್ನ ಕಕ್ಷಿದಾರರಾದ ವಿ.ಕೆ.ಶಶಿಕಲಾ ಅವರಿಗೆ ಅನಾರೋಗ್ಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಅವರಿಗೆ ಜ್ವರ ಮತ್ತು ಉಸಿರಾಟ ಸಮಸ್ಯೆ ಕಾಣಿಸಿ ಕೊಂಡಿದೆ. ಆದರೆ, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಜೈಲಿನಿಂದ ಮಾಹಿತಿ ದೊರೆತಿದೆ ಎಂದು ಶಶಿಕಲಾ ಅವರ ವಕೀಲ ಎನ್.ರಾಜಾ ಸೆಂಥೂರ್ ಪಾಂಡಿಯನ್…

36ನೇ ವಾರ್ಡ್ ಯರಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮೈಸೂರು

36ನೇ ವಾರ್ಡ್ ಯರಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

January 21, 2021

ಮೈಸೂರು, ಜ.20(ಆರ್‍ಕೆಬಿ)- ಮೈಸೂರಿನ 36ನೇ ವಾರ್ಡ್‍ನ ಯರಗನಹಳ್ಳಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮಹಾನಗರಪಾಲಿಕೆಯ 14ನೇ ಹಣಕಾಸು ಅನುದಾನದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇ ಗೌಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇರಲಿಲ್ಲ. ಶುದ್ಧ ನೀರಿಗಾಗಿ ಪರದಾಡುತ್ತಿದ್ದ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ಪಾಲಿಕೆ ವತಿಯಿಂದ 7 ಲಕ್ಷ ರೂ. ವೆಚ್ಚದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ನಿವಾಸಿಗಳು…

1 313 314 315 316 317 1,611
Translate »