ಮೈಸೂರು, ಆ.27(ಆರ್‍ಕೆ)-ಮತದಾರರ ಗುರುತಿನ ಚೀಟಿ(ಎಪಿಕ್)ಗೆ ಆಧಾರ್ ಸಂಖ್ಯೆ ಜೋಡಣೆಯ ವಿಶೇಷ ಅಭಿಯಾನ ಮೈಸೂರಿನಲ್ಲಿ ಶನಿವಾರ ನಡೆಯಿತು. ರಾಜ್ಯ ಚುನಾವಣಾ ಆಯೋ ಗದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾದ ಈ ವಿಶೇಷ ಅಭಿಯಾನದಲ್ಲಿ 20 ಸಾವಿರ ಮತದಾರರ ಗುರುತಿನ ಚೀಟಿಗೆ ಅವರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಯಿತು. ಮತಗಟ್ಟೆ ಮಟ್ಟದ ಅಧಿಕಾರಿ (ಃಐಔ)ಗಳು ಮತ್ತು ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರು (ಃಐಂ)…
ಶೇ.40 ಕಮಿಷನ್ ವಿಚಾರ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ
August 27, 2022ಮೈಸೂರು, ಆ.26 (ಆರ್‍ಕೆಬಿ)- ಶೇ.40 ಕಮಿಷನ್ ಆರೋಪಕ್ಕೆ ಸಂಬಂಧಿಸಿ ದಂತೆ ಸರ್ಕಾರ ಹೈಕೋರ್ಟ್ ನ್ಯಾಯಾ ಧೀಶರ ನೇತೃತ್ವದ ಸಮಿತಿ ರಚಿಸಿ, ತನಿಖೆ ನಡೆಸಲಿ. ಅದು ಬಿಟ್ಟು ತಮ್ಮದು ಪ್ರಾಮಾ ಣಿಕ, ಸತ್ಯನಿಷ್ಠ ಸರ್ಕಾರ ಎಂದು ಕೊಚ್ಚಿ ಕೊಳ್ಳುವುದನ್ನು ಬಿಡಲಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಇಂದಿಲ್ಲಿ ಸರ್ಕಾರವನ್ನು ಆಗ್ರಹಿ ಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ…
ಮೈಸೂರಿನಲ್ಲಿ ಧಾರಾಕಾರ ಮಳೆ
August 27, 2022ಮೈಸೂರು, ಆ.26(ಜಿಎ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸತತ ಮೂರನೇ ದಿನವಾದ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಮತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು. ಶುಕ್ರವಾರ ಸಂಜೆ ಆರಂಭವಾದ ಮಳೆ ಮೈಸೂರಿನ ವಿಜಯನಗರ, ಬನ್ನಿಮಂಟಪ, ಕುವೆಂಪುನಗರ, ಯಾದವಗಿರಿ, ಸಿದ್ದಾರ್ಥನಗರ, ಒಂಟಿಕೊಪ್ಪಲ್, ಗೋಕುಲಂ, ಸರಸ್ವತಿಪುರಂ, ಶಾರದಾದೇವಿ ನಗರ, ರಾಮಕೃಷ್ಣನಗರ, ಕೂರ್ಗಳ್ಳಿ, ದಟ್ಟಗಳ್ಳಿ, ಜೆಪಿ ನಗರ, ಅಗ್ರಹಾರ, ಸುಣ್ಣಕೇರಿ, ಲಕ್ಷ್ಮಿ ಪುರಂ, ಜಯಲಕ್ಷ್ಮಿ ಪುರಂ, ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲಿಯೂ ಮಧ್ಯರಾತ್ರಿವರೆಗೂ ಧಾರಾಕಾರವಾಗಿ ಸುರಿಯಿತು. ಮಳೆಯಿಂದ…
ಸೆ.6ರಂದು ಮೈಸೂರು ಮೇಯರ್ ಚುನಾವಣೆ
August 26, 2022ಮೈಸೂರು,ಆ.25(ಎಂಟಿವೈ)-ಮೈಸೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಸೆ.6ರಂದು ನಡೆಯಲಿದೆ. ಅಂದು ಮಧ್ಯಾಹ್ನ 12ಕ್ಕೆ ಪಾಲಿಕೆ ಪ್ರಧಾನ ಕಚೇರಿಯಲ್ಲಿ ಮೇಯರ್, ಉಪಮೇಯರ್ ಸೇರಿದಂತೆ 4 ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಸಮಯ ನಿಗದಿಯಾಗಿದೆ. ಮೇಯರ್ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ವೈ.ಎಸ್.ಪ್ರಕಾಶ್, ಅಧಿಸೂಚನೆ ಹೊರಡಿಸಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳು ವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. ಸೆ.6 ರಂದು ಬೆಳಗ್ಗೆ 9ರಿಂದ 10ಗಂಟೆಯೊಳಗೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು,…
ಅಂತೂ ಐದು ತಿಂಗಳ ನಂತರ ಮೀಸಲಾತಿ ಪ್ರಕಟಿಸಿದ ಸರ್ಕಾರ ಸಾಮಾನ್ಯ ವರ್ಗಕ್ಕೆ ಮೈಸೂರು ಮೇಯರ್
August 25, 2022ಮೈಸೂರು, ಆ.24(ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಗಾದಿಗೆ ಭಾರೀ ಪೈಪೋಟಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಮೇಯರ್ ಸ್ಥಾನ `ಸಾಮಾನ್ಯ’ ವರ್ಗಕ್ಕೆ ಮೀಸಲಾಗಿರುವ ಕಾರಣ ಎಲ್ಲಾ 65 ಕಾರ್ಪೊರೇಟರ್‍ಗಳೂ ಅರ್ಹರಾಗಿದ್ದು, `ಬಿಸಿಎ ಮಹಿಳೆ’ಗೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಿದ್ದಾರೆ. ಯಾವ ಪಕ್ಷಗಳಿಗೂ ನಿರ್ದಿಷ್ಟ ಬಹುಮತ ಇಲ್ಲದಿರುವುದರಿಂದ ಮೈತ್ರಿ ಅನಿವಾರ್ಯ. ಈ ನಿಟ್ಟಿನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಚಟುವಟಿಕೆ ಚುರುಕುಗೊಳ್ಳಲಿದೆ. ಎಲ್ಲಾ ಪಕ್ಷಗಳ ರಾಜ್ಯ ಮಟ್ಟದ ನಾಯಕರು ನೀಡುವ ಸೂಚನೆಯಂತೆ `ಮೈತ್ರಿ’ ಪ್ರಕ್ರಿಯೆ ನಡೆಯಲಿದೆ….
ದಸರಾ ವಸ್ತುಪ್ರದರ್ಶನಕ್ಕೆ ಸೆ.26ರಂದೇ ಸಿಎಂ ಬೊಮ್ಮಾಯಿ ಚಾಲನೆ
August 25, 2022ಮೈಸೂರು, ಆ.24(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತ ಗೊಂಡಿದ್ದ ದಸರಾ ವಸ್ತುಪ್ರದರ್ಶನವನ್ನು ಈ ಬಾರಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಪ್ರವಾಸಿಗರ ಸ್ನೇಹಿಯಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧÀ್ಯP್ಷÀ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದ್ದಾರೆ. ಮೈಸೂರಿನ ದಸರಾ ವಸ್ತುಪ್ರದರ್ಶನÀ ಆವರಣ ದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದಿನ ವಸ್ತುಪ್ರದರ್ಶನಗಳ ಕುರಿತಂತೆ ಸಾಹಿತಿಗಳು, ಗಣ್ಯರು, ಸಾರ್ವಜನಿಕರು, ಪ್ರವಾಸಿಗರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಸಕ್ತ ಸಾಲಿನ ದಸರಾ…
ಮೈಸೂರು ನಗರ ಪಾಲಿಕೆಯ ಮಾಮೂಲಿ ಚಾಳಿ! ದಸರಾ ಸಮೀಪಿಸಿದರೂ ರಸ್ತೆಗಳು ಹೊಂಡಮಯ; ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿ ವರ್ಗ
August 25, 2022ಮೈಸೂರು, ಆ.24(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಇನ್ನೊಂದು ತಿಂಗಳು ಬಾಕಿ ಇದ್ದು, ರಸ್ತೆ ದುರಸ್ತಿಗೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ಈ ಬಾರಿ ಅತ್ಯಂತ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳಾದಿ ಯಾಗಿ ಎಲ್ಲಾ ನಾಯಕರ ಹೇಳಿಕೆಗಳು ದಸರಾ ವೈಭವದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಆದರೆ ಛಿದ್ರ ಛಿದ್ರವಾಗಿರುವ ನಗರದ ರಸ್ತೆಗಳ ದುರಸ್ತಿಗೆ ಯಾರೂ ಗಮನಹರಿಸಿಲ್ಲ. ಇನ್ನೊಂದು ತಿಂಗಳಲ್ಲಿ ನವರಾತ್ರಿ ಉತ್ಸವ ಆರಂಭ(ಸೆ.26)ವಾಗಲಿದೆ. ಆದರೆ ಕೆಲವೆಡೆ ತೇಪೆ ಕಾರ್ಯ ಬಿಟ್ಟರೆ ರಸ್ತೆ ಕಾಮಗಾರಿ ಇನ್ನೂ…
ದಸರಾ ಮಹೋತ್ಸವದ ಪ್ರತಿ ಕಾರ್ಯಕ್ರಮ ಸ್ಥಳದಲ್ಲೂನಾನಾ ಖಾದ್ಯ ಮಳಿಗೆ ತೆರೆಯಲು ಚಿಂತನೆ
August 24, 2022ಮೈಸೂರು, ಆ.23-ಮೈಸೂರು ದಸರಾ ಮಹೋ ತ್ಸವದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳಲ್ಲೂ ಸ್ವಾದಿಷ್ಟ ಖಾದ್ಯಗಳ ಮಳಿಗೆ ತೆರೆಯುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈ ಬಾರಿಯೂ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ `ದಸರಾ ಆಹಾರ ಮೇಳ’ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ರೈತ ದಸರಾ, ಕ್ರೀಡಾ ದಸರಾ, ಪುಸ್ತಕ ಮೇಳ, ಕೃಷಿ ಮೇಳ ಹೀಗೆ ಇತರೆ ನಾನಾ ಕಾರ್ಯ ಕ್ರಮಗಳ ಸ್ಥಳದಲ್ಲೂ ದಸರಾ…
ಮೈಸೂರಲ್ಲಿ ವೀರ್ ಸಾವರ್ಕರ್ ರಥಯಾತ್ರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ
August 24, 2022ಮೈಸೂರು, ಆ. 23(ಆರ್‍ಕೆ)- ಮೈಸೂರಿ ನಲ್ಲಿ ಇಂದಿನಿಂದ ಆರಂಭವಾದ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ವಿಧ್ಯುಕ್ತ ಚಾಲನೆ ನೀಡಿದರು. ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿರುವ 8 ದಿನಗಳ ಈ ರಥ ಯಾತ್ರೆಗೆ ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಸಿರು ನಿಶಾನೆ ತೋರಿದ ಯಡಿಯೂರಪ್ಪ, ಅದೇ ವೇಳೆ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರ ವೇರಿಸಿದರು. ಈ ಸಂದರ್ಭ ಜಿಲ್ಲಾ ಉಸ್ತು ವಾರಿ ಸಚಿವ…
ದಸರಾ ಗಜಪಡೆಗೆ ಇನ್ನು ಮುಂದೆ ಸಂಜೆ ವೇಳೆ ಭಾರ ಹೊರುವ ತಾಲೀಮು
August 24, 2022ಮೊದಲ ಹಂತದಲ್ಲಿ ನಡೆದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ ಐದು ಗಂಡಾನೆಗಳು ನಿರೀಕ್ಷೆಗೂ ಮೀರಿ ಸಾಮಥ್ರ್ಯ ಪ್ರದರ್ಶಿಸಿವೆ. ಇಂದಿನಿಂದ ಎರಡನೇ ಹಂತದ ತಾಲೀಮು ಆರಂ ಭಿಸಲಾಗಿದೆ. ಮೊದಲು 300 ಕೆಜಿ ಮರಳಿನ ಮೂಟೆ ಹೊರಿಸಲಾಗಿತ್ತು. ಇಂದಿನಿಂದ 510 ಕೆಜಿ ಮರಳಿನ ಮೂಟೆ ಹೊರಿಸಲಾಗಿದೆ. ಮೂರನೇ ಹಂತದಲ್ಲಿ 700 ಕೆಜಿ ಹೊರಿಸಲಾಗುತ್ತದೆ. ಸಂಜೆ ವೇಳೆ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸುವುದರಿಂದ ಜಂಬೂಸವಾರಿಯಲ್ಲಿ ಆನೆಗಳು ಸಹಜವಾಗಿ ಭಾರ ಹೊರಲು ಸಹಕಾರಿಯಾಗಲಿದೆ. ಅಲ್ಲದೆ, ಸಂಜೆ ವಾತಾವರಣದಲ್ಲಿ, ವಾಹನಗಳ…