ದಸರಾ ವಸ್ತುಪ್ರದರ್ಶನಕ್ಕೆ ಸೆ.26ರಂದೇ ಸಿಎಂ ಬೊಮ್ಮಾಯಿ ಚಾಲನೆ
ಮೈಸೂರು

ದಸರಾ ವಸ್ತುಪ್ರದರ್ಶನಕ್ಕೆ ಸೆ.26ರಂದೇ ಸಿಎಂ ಬೊಮ್ಮಾಯಿ ಚಾಲನೆ

August 25, 2022

ಮೈಸೂರು, ಆ.24(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತ ಗೊಂಡಿದ್ದ ದಸರಾ ವಸ್ತುಪ್ರದರ್ಶನವನ್ನು ಈ ಬಾರಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಪ್ರವಾಸಿಗರ ಸ್ನೇಹಿಯಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧÀ್ಯP್ಷÀ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಮೈಸೂರಿನ ದಸರಾ ವಸ್ತುಪ್ರದರ್ಶನÀ ಆವರಣ ದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದಿನ ವಸ್ತುಪ್ರದರ್ಶನಗಳ ಕುರಿತಂತೆ ಸಾಹಿತಿಗಳು, ಗಣ್ಯರು, ಸಾರ್ವಜನಿಕರು, ಪ್ರವಾಸಿಗರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಸಕ್ತ ಸಾಲಿನ ದಸರಾ ವಸ್ತುಪ್ರದರ್ಶನವನ್ನು ವಿಶಿಷ್ಟ ಕಾರ್ಯಕ್ರಮದೊಂದಿಗೆ ಜನರಿಗೆ ಮನರಂಜನೆ, ಮಾಹಿತಿ ನೀಡುವ ಕೇಂದ್ರವಾಗಿ ಮಾರ್ಪಡಿಸಲು ಚಿಂತಿಸಲಾಗಿದೆ. ಸೆ.26ರಿಂದ ಡಿ.24ರವರೆಗೆ 90 ದಿನಗಳ ಕಾಲ ಈ ಸಾಲಿನ ದಸರಾ ವಸ್ತು ಪ್ರದರ್ಶನ ಜರುಗಲಿದೆ ಎಂದರು.

ನವರಾತ್ರಿ ಆರಂಭಕ್ಕೂ 15 ದಿನ ಮುನ್ನವೇ ದಸರಾ ವಸ್ತುಪ್ರದರ್ಶನ ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಆದರೆ, ಸಂಪ್ರದಾಯದಂತೆ ನವರಾತ್ರಿಯ ಆರಂಭದ ದಿನವೇ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. ಹಾಗಾಗಿ ಸೆ.26ರಂದು ಮುಖ್ಯಮಂತ್ರಿಗಳೇ ವಸ್ತುಪ್ರದರ್ಶನವನ್ನು ಉದ್ಘಾ ಟಿಸಲಿದ್ದಾರೆ. ವಿವಿಧÀ ಇಲಾಖೆಗಳ 48 ಮಳಿಗೆಗಳಿರಲಿವೆ. ಸೆ.20ಕ್ಕೆ ಎ¯್ಲÁ ಸಿದ್ಧತೆಗಳನ್ನೂ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿ ಈಗಾಗಲೇ ವಿವಿಧ ಇಲಾಖೆಗಳಿಗೆ ಪತ್ರ ಕೂಡ ಬರೆಯಲಾಗಿದೆ ಎಂದರು.

ಮರಳಿನ ಆಕೃತಿಗಳು: ವಸ್ತುಪ್ರದರ್ಶನದಲ್ಲಿ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಮೂರು, ಯೋಗದ ಭಂಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಜಾದಿ ಕಾ ಅಮೃತ ಮಹೋತ್ಸ ವದ ಅಂಗವಾಗಿ ಸಾವರ್ಕರ್ ಸೇರಿದಂತೆ 4 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಆಕೃತಿಯನ್ನು ಮರಳಿ ನಲ್ಲೇ ಮೈಸೂರಿನ ಹೆಸರಾಂತ ಮರಳು ಕಲಾವಿದೆ ಎಂ.ಎನ್.ಗೌರಿ ಅವರಿಂದ ರೂಪಿಸಿ, ಪ್ರದರ್ಶಿ ಸಲಾಗುತ್ತದೆ. ವಸ್ತುಪ್ರದರ್ಶನ ಆವರಣದ ಕಾವೇರಿ ಕಲಾ ಗ್ಯಾಲರಿಯೂ ಮುಂದಿನ ತಿಂಗಳ ಎರಡನೇ ವಾರದಲ್ಲಿ ಉದ್ಘಾಟನೆಗೊಂಡು, ಜನಸಾಮಾನ್ಯರ ವೀಕ್ಷಣೆಗೆ ಲಭÀ್ಯವಾಗಲಿದೆ. ಇದೇ ಮೊದಲ ಬಾರಿಗೆ ಯೋಗ 3ಡಿ ವಿಡೀಯೋ ಮ್ಯಾಪಿಂಗ್ ನಿರ್ಮಿ ಸಲಾಗುತ್ತಿದೆ ಎಂದು ಹೇಳಿದರು.

ಡಿಜಿಟಲ್ ಆ್ಯಪ್: ಸಾರ್ವಜನಿಕರಿಗೆ ವಸ್ತುಪ್ರದರ್ಶ ನದಲ್ಲಿ ಮಳಿಗೆಗಳ ಮಾಹಿತಿ ನೀಡುವ ಸಲುವಾಗಿ ಡಿಜಿಟಲ್ ಆ್ಯಪ್ ಸೌಲಭÀ್ಯ ಕಲ್ಪಿಸಲಾಗಿದೆ. ಟಿಕೆಟ್ ಕೌಂಟರ್ ಬಳಿ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿ ಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮ ಕೈಗೊಳ್ಳ ಲಾಗಿದೆ. ಇದರಿಂದ ಯಾವ ಮಳಿಗೆ ಯಾವ ಕಡೆ ಇದೆ. ಅದರಲ್ಲೇನು ಮಾಹಿತಿ ಇದೆ ಎಂದು ಸುಲಭ ವಾಗಿ ತಿಳಿಯಬಹುದು. ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ವಸ್ತುಪ್ರದರ್ಶನ ಪ್ರಾಧಿಕಾರದ ಮಳಿಗೆ ಗಳಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗು ತ್ತಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ವಸ್ತುಪ್ರದರ್ಶನ ಆವರಣ ಪ್ಲಾಸ್ಟಿಕ್ ಮುಕ್ತ ವಲಯವೆಂದು ಘೋಷಿಸಲಾಗಿದೆ. ಮಾಹಿತಿ ಕೇಂದ್ರ, ಪೆÇಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕ ತೆರೆಯುವಂತೆ ಸಂಬಂಧÀಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಈ ಬಾರಿಯ ದಸರಾ ವಸ್ತುಪ್ರದರ್ಶನಕ್ಕೆ ಗ್ಲೋಬಲ್ ಇ-ಟೆಂಡರ್ ಕರೆಯಲಾಗಿದ್ದು, ಮುಂದಿನ ಹತ್ತು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎ ಮತ್ತು ಬಿ ಬ್ಲಾಕ್ ಮಳಿಗೆಗಳು, ಸಿ ಬ್ಲಾಕ್ ಮಳಿಗೆಗಳು, ತಿಂಡಿ ತಿನಿಸು ಮಳಿಗೆಗಳನ್ನು ತೆರೆಯಲು ಉz್ದÉೀಶಿಸಲಾಗಿದೆ. ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಇಲಾಖೆ ಮಳಿಗೆಗಳಿರುತ್ತವೆ. ಮನೊರಂಜನಾ ಪಾರ್ಕ್, ಸ್ಕೈಟ್ರ್ಯಾಕ್ ಮಾನೋ ರೈಲು, ದೋಣಿ ವಿಹಾರ ಸೇರಿದಂತೆ ಹಲವು ಮನರಂಜನಾ ತಾಣಗಳಿರುತ್ತವೆ. ವಸ್ತುಪ್ರದರ್ಶನ ಹೇಗಿರಬೇಕು ಎಂಬ ಬಗ್ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿದ್ದು, ಆ.30ರೊಳಗೆ ತಿಳಿಸಬಹುದು ಎಂದರು.

Translate »