ಮೈಸೂರು

ಖ್ಯಾತ ಕ್ಯಾನ್ಸರ್ ವಿಕಿರಣ ತಜ್ಞ  ಡಾ.ಎಂ.ಎಸ್.ವಿಶ್ವೇಶ್ವರ ಇನ್ನಿಲ್ಲ
ಮೈಸೂರು

ಖ್ಯಾತ ಕ್ಯಾನ್ಸರ್ ವಿಕಿರಣ ತಜ್ಞ ಡಾ.ಎಂ.ಎಸ್.ವಿಶ್ವೇಶ್ವರ ಇನ್ನಿಲ್ಲ

August 18, 2022

ಮೈಸೂರು, ಆ.17(ಆರ್‍ಕೆ)-ಮೈಸೂರಿನ ಖ್ಯಾತ ಕ್ಯಾನ್ಸರ್ ವಿಕಿರಣತಜ್ಞ (ರೇಡಿಯೇಷನ್ ಆಂಕಾಲಜಿಸ್ಟ್) ಡಾ. ಎಂ.ಎಸ್. ವಿಶ್ವೇಶ್ವರ(59) ಅವರು ಇಂದು (ಬುಧವಾರ) ಮಧ್ಯಾಹ್ನ ನಿಧನ ರಾದರು. ಮೈಸೂರಿನ ವಿಜಯ ನಗರ 3ನೇ ಹಂತ ನಿವಾಸಿಯಾದ ಡಾ.ವಿಶ್ವೇಶ್ವರ ಅವರು ಪತ್ನಿ ಶ್ರೀಮತಿ ಜಲಜಾ, ಪುತ್ರ ರಾಘವ್, ಪುತ್ರಿ ಡಾ.ರಾಧಿಕಾ, ಸ್ನೇಹಿತರು, ವೈದ್ಯ ವೃಂದ, ವಿದ್ಯಾರ್ಥಿ ಬಳಗ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ(ಆ.18) ಬೆಳಗ್ಗೆ 11.30 ಗಂಟೆಗೆ ವಿದ್ಯಾರಣ್ಯ ಪುರಂನ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೈಸೂರು…

ದಸರಾ ಗಜಪಡೆಗೆ ನಿತ್ಯವೂ ರಸಗವಳ!
ಮೈಸೂರು

ದಸರಾ ಗಜಪಡೆಗೆ ನಿತ್ಯವೂ ರಸಗವಳ!

August 17, 2022

ಮೈಸೂರು,ಆ.16-ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ‘ಬಲ’ ನೀಡಲು ಅರಣ್ಯ ಇಲಾಖೆ, ಪೌಷ್ಠಿಕ ಆಹಾರ ನೀಡಲು ಆರಂಭಿಸಿದೆ. ಎರಡು ವರ್ಷಗಳ ಬಳಿಕ ಜಂಬೂಸವಾರಿ ಮೆರ ವಣಿಗೆ ಈ ಬಾರಿ ಸಂಪ್ರದಾಯದಂತೆ ಬನ್ನಿಮಂಟ ಪದ ಪಂಜಿನ ಕವಾಯತು ಮೈದಾನದವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ವೈಭವದ ದಸರಾ ಮಹೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಗಜಪಡೆಯನ್ನು ಸನ್ನದ್ದುಗೊಳಿ ಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹೊತ್ತಿದ್ದು, ಅದಕ್ಕಾಗಿ ಈಗಿನಿಂದಲೇ ಆನೆಗಳ ಶಕ್ತಿವರ್ಧನೆಗೆ ಪೌಷ್ಠಿಕ…

ಮುಡಾ ಅವ್ಯವಹಾರಗಳ ತನಿಖೆಗೆ ತಾಂತ್ರಿಕ ಸಮಿತಿ
ಮೈಸೂರು

ಮುಡಾ ಅವ್ಯವಹಾರಗಳ ತನಿಖೆಗೆ ತಾಂತ್ರಿಕ ಸಮಿತಿ

August 17, 2022

ಮೈಸೂರು,ಆ.16(ಆರ್‍ಕೆ)-ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಭಾರೀ ಅವ್ಯವಹಾರ, ಅನುದಾನ ದುರ್ಬಳಕೆ ಸೇರಿ ದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರ್ಕಾರ ತಾಂತ್ರಿಕ ಸಮಿತಿ ರಚಿಸಿದೆ. ತಾಂತ್ರಿಕ ಸಮಿತಿ ಅಧ್ಯಕ್ಷರಾಗಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಟಿ.ವಿ.ಮುರಳಿ, ಆಗಸ್ಟ್ 11ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದು, ಪ್ರಾಧಿಕಾರದಲ್ಲಿ ಅನುದಾನ ದುರ್ಬ ಳಕೆ, ಬದಲಿ ನಿವೇಶನಗಳ ಹಂಚಿಕೆ, ಭೂ ಸ್ವಾಧೀನ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ಕಾಯ್ದೆ, ನಿಯಮ, ವಲಯ ನಿಯಮಗಳಿಗೆ ವಿರುದ್ಧವಾಗಿ…

ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮತ್ತೊಂದು ನಿರ್ಮಾಣ ತೆರವು
ಮೈಸೂರು

ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮತ್ತೊಂದು ನಿರ್ಮಾಣ ತೆರವು

August 17, 2022

ಮೈಸೂರು, ಆ. 16(ಆರ್‍ಕೆ)- ಮೈಸೂರಿನ ಹೃದಯ ಭಾಗದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಯಾಗಿದ್ದ ಧಾರ್ಮಿಕ ಕೇಂದ್ರದ ಕಟ್ಟಡದ ಕೆಲ ಭಾಗವನ್ನು ತೆರವುಗೊಳಿಸಲಾಗಿದೆ. ಗುರುತಿಸಲಾದ ನಿರ್ಮಾಣದ ಭಾಗವನ್ನು ವಕ್ಫ್ ಬೋರ್ಡ್‍ನಿಂದಲೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿ ಸಹಕಾರ ನೀಡಿದ್ದು, ಉಳಿದ ಕಾಂಪೌಂಡ್ ಗೋಡೆ ಯನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ರಾತ್ರಿ ಜೆಸಿಬಿ ಮೂಲಕ ತೆರವುಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಂದು ಶಾಸಕ ಎಲ್. ನಾಗೇಂದ್ರ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಕಾರ್ಪೊರೇಟರ್ ಗಳಾದ ಎಂ.ಡಿ.ನಾಗರಾಜ್, ಸತೀಶ್, ಪಾಲಿಕೆ…

ಮೈಸೂರು ಜೈಲಿನಿಂದ 20 ಖೈದಿಗಳ ಬಿಡುಗಡೆ
ಮೈಸೂರು

ಮೈಸೂರು ಜೈಲಿನಿಂದ 20 ಖೈದಿಗಳ ಬಿಡುಗಡೆ

August 17, 2022

ಮೈಸೂರು, ಆ. 16(ಆರ್‍ಕೆ)- 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ನಡತೆ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾ ಗೃಹದ 20 ಮಂದಿ ಸಾಜಾ ಬಂಧಿಗಳನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಕೇಂದ್ರ ಸರ್ಕಾರದ ಮಾರ್ಗಸೂಚಿಯ ನ್ವಯ ರಾಜ್ಯ ಸರ್ಕಾರದ ಆದೇಶದಂತೆ ಬಿಡುಗಡೆಯಾದ 20 ಮಂದಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಬೀಳ್ಕೊಟ್ಟರು. ಈ ಸಂದರ್ಭ ಮಾತ ನಾಡಿದ ಅವರು, ತಿಳಿದೋ, ತಿಳಿಯ ದೆಯೋ ಒಂದು ಕ್ಷಣದ ಕೋಪ ನಿಗ್ರಹಿ ಸಲಾರದೆ ಮಾಡಿದ ತಪ್ಪಿನಿಂದ ಜೈಲು ವಾಸ…

ಸೈಬರ್ ಅಪರಾಧ: ಓರ್ವನ ಸೆರೆ, ನಗದು ಸೇರಿ 17.41 ಲಕ್ಷ ರೂ. ಮೌಲ್ಯದ ವಸ್ತು ವಶ
ಮೈಸೂರು

ಸೈಬರ್ ಅಪರಾಧ: ಓರ್ವನ ಸೆರೆ, ನಗದು ಸೇರಿ 17.41 ಲಕ್ಷ ರೂ. ಮೌಲ್ಯದ ವಸ್ತು ವಶ

August 17, 2022

ಮೈಸೂರು, ಆ.16(ಆರ್‍ಕೆ)-ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವ ಸೆನ್ ಪೊಲೀಸ್ ಠಾಣೆ ಅಧಿಕಾರಿಗಳು, 15.05 ಲಕ್ಷ ರೂ. ನಗದು ಸೇರಿದಂತೆ ಒಟ್ಟು 17,41,000 ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 2020ರ ನವೆಂಬರ್ 1 ರಿಂದ ಡಿಸೆಂ ಬರ್ 24ರವರೆಗೆ ಯುವಕನೋರ್ವ (ಆ ವೇಳೆ ಅಪ್ರಾಪ್ತನಾಗಿದ್ದ) ವ್ಯಕ್ತಿಯೊಬ್ಬರ ಹೆಚ್‍ಡಿಎಫ್‍ಸಿ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ನಂಬರ್‍ನಲ್ಲಿ 21,02,041 ರೂ. ಹಣವನ್ನು ಖಾತೆದಾರರ ಗಮನಕ್ಕೆ ಬಾರದೆ ವರ್ಗಾವಣೆ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು….

ಬುಡಸಹಿತ ಉರುಳಿಬಿದ್ದ ಗುಲ್‍ಮೊಹರ್ ಮರ: ಅದೃಷ್ಟವಶಾತ್ ಹೆಚ್ಚಿನ ಹಾನಿ ಇಲ್ಲ
ಮೈಸೂರು

ಬುಡಸಹಿತ ಉರುಳಿಬಿದ್ದ ಗುಲ್‍ಮೊಹರ್ ಮರ: ಅದೃಷ್ಟವಶಾತ್ ಹೆಚ್ಚಿನ ಹಾನಿ ಇಲ್ಲ

August 17, 2022

ಮೈಸೂರು,ಆ.16(ಎಸ್‍ಬಿಡಿ)- ಮೈಸೂ ರಿನಲ್ಲಿ ಗುಲ್‍ಮೊಹರ್ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟ ವಶಾತ್ ಸಾವು-ನೋವು ಸಂಭವಿಸಿಲ್ಲ. ನಗರದ ನಾರಾಯಣಶಾಸ್ತ್ರಿ ರಸ್ತೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ಬಳಿ ಯಿದ್ದ ಗುಲ್‍ಮೊಹರ್ ಮರ ಮಂಗಳ ವಾರ ಸಂಜೆ ಸುಮಾರು 5.30ರ ವೇಳೆಯಲ್ಲಿ ಬುಡ ಸಮೇತ ರಸ್ತೆ ಅಡ್ಡಲಾಗಿ ಉರುಳಿ ಬಿದ್ದಿದೆ. ಈ ವೇಳೆ ಮರದ ದೊಡ್ಡ ಕೊಂಬೆ ಗಳು ಅಪ್ಪಳಿಸಿದ್ದರಿಂದ ಎದುರು ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಒಂದು ಆಟೋಗೆ ಹಾನಿ ಯಾಗಿದೆ….

ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಧ್ವಜ ಉತ್ಸವ
ಮೈಸೂರು

ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಧ್ವಜ ಉತ್ಸವ

August 13, 2022

ಮೈಸೂರು,ಆ.12(ಎಂಟಿವೈ)- ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಪ್ರಭಾತ್ ಪೇರಿ ನಡೆಸುವ ಮೂಲಕ ದೇಶ ಭಕ್ತಿ ಸಾರಿದರು. ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಹಮ್ಮಿ ಕೊಂಡಿರುವ ಅಮೃತ ಸಪ್ತಾಹ ಕಾರ್ಯ ಕ್ರಮದ ಅಂಗವಾಗಿ ಶುಕ್ರವಾರ ಮೈಸೂರು ಅರಮನೆ ಆವರಣದಿಂದ ಆರಂಭವಾದ ಬೃಹತ್ ಪ್ರಭಾತ್ ಪೇರಿ(ಮೆರವಣಿಗೆ)ಯಲ್ಲಿ ಕೆ.ಆರ್.ಕ್ಷೇತ್ರದ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿ ಗಳು ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ಸಾಗುವ ಮೂಲಕ ದೇಶಭಕ್ತಿ ಮೆರೆದರು….

ಮೈಸೂರಲ್ಲಿ ಯುವಜನ ಮಹೋತ್ಸವಕ್ಕೆ ಸಿಎಂ ಚಾಲನೆ
ಮೈಸೂರು

ಮೈಸೂರಲ್ಲಿ ಯುವಜನ ಮಹೋತ್ಸವಕ್ಕೆ ಸಿಎಂ ಚಾಲನೆ

August 12, 2022

ಮೈಸೂರು, ಆ.11(ಆರ್‍ಕೆ)-ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರು ವಾರ ನಡೆದ ಯುವಜನ ಮಹೋತ್ಸವದಲ್ಲಿ ಹಿಂದೆಂದೂ ಕಂಡರಿಯದಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮದಲ್ಲಿ ಮಿಂದೆದ್ದರು. ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾ ನಿಲಯವು ಏರ್ಪಡಿಸಿದ್ದ ಯುವಜನ ಮಹೋ ತ್ಸವ ಸಮಾರಂಭದಲ್ಲಿ ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ಪದವಿ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕøತಿಕ ಉತ್ಸವಕ್ಕೆ ಈ ಪ್ರಮಾಣ ದಲ್ಲಿ ಜಮಾವಣೆಯಾಗಿದ್ದುದು ಇಡೀ ರಾಜ್ಯದಲ್ಲೇ ಪ್ರಥಮವಾಗಿದ್ದು, ಇತಿಹಾಸ…

ರಮಾಬಾಯಿನಗರದವರ ನೀರಿನ ದರ ಕಡಿತಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
ಮೈಸೂರು

ರಮಾಬಾಯಿನಗರದವರ ನೀರಿನ ದರ ಕಡಿತಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

August 12, 2022

ಮೈಸೂರು, ಆ.11- ಇಂದು ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ನಿವಾರಣೆ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚರ್ಚಿಸಿದರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಂಬಂಧಿಸಿದ ಸ್ಥಳಿಯ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿಸಲ್ಪಟ್ಟ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಮಾಬಾಯಿನಗರ ನಿವಾಸಿಗಳಿಗೆ ನಗರಪಾಲಿಕೆ ಅವೈಜ್ಞಾನಿಕವಾಗಿ ನೀರಿನ ದರವನ್ನು ನಿಗದಿಪಡಿಸಿದೆ ಎಂದು ಅಲ್ಲಿನ ನಿವಾಸಿಗಳು ಶಾಸಕ ಜಿ.ಟಿ.ದೇವೇಗೌಡರ ಗಮನಕ್ಕೆ…

1 36 37 38 39 40 1,611
Translate »