ವಿಶೇಷ ಅಭಿಯಾನದಲ್ಲಿ 20,000 ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ
ಮೈಸೂರು

ವಿಶೇಷ ಅಭಿಯಾನದಲ್ಲಿ 20,000 ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ

August 28, 2022

ಮೈಸೂರು, ಆ.27(ಆರ್‍ಕೆ)-ಮತದಾರರ ಗುರುತಿನ ಚೀಟಿ(ಎಪಿಕ್)ಗೆ ಆಧಾರ್ ಸಂಖ್ಯೆ ಜೋಡಣೆಯ ವಿಶೇಷ ಅಭಿಯಾನ ಮೈಸೂರಿನಲ್ಲಿ ಶನಿವಾರ ನಡೆಯಿತು. ರಾಜ್ಯ ಚುನಾವಣಾ ಆಯೋ ಗದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾದ ಈ ವಿಶೇಷ ಅಭಿಯಾನದಲ್ಲಿ 20 ಸಾವಿರ ಮತದಾರರ ಗುರುತಿನ ಚೀಟಿಗೆ ಅವರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಯಿತು.

ಮತಗಟ್ಟೆ ಮಟ್ಟದ ಅಧಿಕಾರಿ (ಃಐಔ)ಗಳು ಮತ್ತು ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರು (ಃಐಂ) ಇಂದು ಬೆಳಗ್ಗೆ 7 ರಿಂದ 10ರವರೆಗೆ ಮನೆ ಮನೆಗೆ ತೆರಳಿ ಅಭಿಯಾನದ ಬಗ್ಗೆ ತಿಳಿಸಿದರು. ಅದೇ ವೇಳೆ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆದು ಜೋಡಣೆ ಕಾರ್ಯ ನಡೆಸಿದರು. ಬೆಳಗ್ಗೆ 10 ಗಂಟೆಯಿಂದ ಮತಗಟ್ಟೆಗಳಲ್ಲಿ ಈ ಪ್ರಕ್ರಿಯೆ ನಡೆಸಲಾಯಿತು.

ಮೈಸೂರಿನ ಮೇದರ ಬ್ಲಾಕ್‍ನ ಸಮುದಾಯ ಭವನ (18ನೇ ವಾರ್ಡ್)ದಲ್ಲಿ ಪಾಲಿಕೆಯ ಉಪ ಆಯುಕ್ತೆ ಎಂ.ಕೆ.ಸವಿತಾ, ಸ್ಥಳೀಯ ಕಾರ್ಪೊ ರೇಟರ್ ರವೀಂದ್ರ ನೇತೃತ್ವದಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಜಿ.ಚಂದ್ರಶೇಖರ್, ಸಹಾಯಕಿ ಅಶ್ವಿನಿ ಸಾರ್ವಜನಿಕರ ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಿದರು. ಅದೇ ರೀತಿ 6ನೇ ವಾರ್ಡ್ ಗೋಕುಲಂ 3ನೇ ಹಂತದ ಸಾಂಸ್ಕøತಿಕ ಭವನದಲ್ಲಿ ರೆವಿನ್ಯೂ ಇನ್ಸ್‍ಪೆಕ್ಟರ್ ವಿ.ಪರಮೇಶ್, 19ನೇ ವಾರ್ಡ್ ವಿವಿ ಮೊಹಲ್ಲಾದ ನಿರ್ಮಲಾ ಕಾನ್ವೆಂಟ್‍ನಲ್ಲಿ ವೈ.ಡಿ.ಬೆಟ್ಟಸ್ವಾಮಯ್ಯ, 21ನೇ ವಾರ್ಡ್ ಕುಕ್ಕರಹಳ್ಳಿ ಸರ್ಕಾರಿ ಶಾಲೆಯಲ್ಲಿ ಕೆ.ಎಸ್.ನವೀನ್‍ಕುಮಾರ್ ಹಾಗೂ 22ನೇ ವಾರ್ಡಿನ ಮಾತೃ ಮಂಡಳಿ ಶಾಲೆಯಲ್ಲಿ ರೆವಿನ್ಯೂ ಇನ್ಸ್‍ಪೆಕ್ಟರ್ ಎನ್.ಮೋಹನ್ ವಿಶೇಷ ಅಭಿಯಾನ ನಡೆಸಿದರು.

ಮಕ್ಕಳ ಮೂಲಕ ಮಾಹಿತಿ: ಮನೆ ಬಳಿ ಹೋದರೂ ಲಭ್ಯವಾಗದವರು ಹಾಗೂ ಮತಗಟ್ಟೆ ಗಳಿಗೆ ಬಾರದ ಮತದಾರರ ಮಾಹಿತಿಯನ್ನು ಶಾಲಾ ಮಕ್ಕಳ ಮೂಲಕ ಸಂಗ್ರಹಿಸಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗೆ ಸಂಗ್ರಹಿಸಿದ ಮತದಾರರ ಚೀಟಿ ಹಾಗೂ ಆಧಾರ್ ಸಂಖ್ಯೆ ಯನ್ನು ಡೇಟಾ ಎಂಟ್ರಿ ಆಪರೇಟರ್‍ಗಳ ಮೂಲಕ ಜೋಡಣೆ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮತದಾರರ ಸಹಾಯಕ ನೋಂದ ಣಾಧಿಕಾರಿಗಳು, ನಿಮ್ಮಲ್ಲಿನ ವಿದ್ಯಾರ್ಥಿಗಳ ಪೋಷಕರ ಹೆಸರು, ಮತದಾರರ ಗುರುತಿನ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂನೆಯಲ್ಲಿ ನಮೂದಿಸಿ ಕಳುಹಿಸುವಂತೆ ಶಾಲಾ ಶಿಕ್ಷಕರಿಗೆ ಮನವಿ ಮಾಡಿ, ಪತ್ರದ ಮಾದರಿ ಹಾಗೂ ಮುದ್ರಿತ ನಮೂನೆಯ ಪ್ರತಿಗಳನ್ನು ಅವರಿಗೆ ನೀಡಿದ್ದಾರೆ. ಮಕ್ಕಳು ತಮ್ಮ ಪೋಷಕರಿಂದ ಭರ್ತಿ ಮಾಡಿಸಿ ತಂದು ಶಾಲಾ ಶಿಕ್ಷಕರಿಗೆ ತಲುಪಿಸಿದ ಬಳಿಕ ಅವುಗಳನ್ನು ಪಾಲಿಕೆ ಅಧಿಕಾರಿಗಳು ಸಂಗ್ರಹಿಸಿ ಮುಂದಿನ ಕ್ರಮ ವಹಿಸಲಿದ್ದಾರೆ.
ಇಂದು ವಿಶೇಷ ಅಭಿಯಾನ ನಡೆಸಿ ಸಾವಿರಾರು ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರೆಯಲಿದ್ದು ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ, ಸಹಕರಿಸಬೇಕು. ಆನ್‍ಲೈನ್ ಮೂಲಕವೂ ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಅಕ್ರಮ ತಡೆಗೆ ನೆರವು: ಎಪಿಕ್ ಹಾಗೂ ಆಧಾರ್ ಸಂಖ್ಯೆ ಜೋಡಣೆಯಿಂದ ಚುನಾವಣಾ ಅಕ್ರಮ ಹಾಗೂ ಗೊಂದಲ ತಡೆಯಬಹುದು ಎನ್ನಲಾಗಿದೆ. ವ್ಯಕ್ತಿಯೊಬ್ಬ ಖಾಯಂ ಹಾಗೂ ತಾತ್ಕಾಲಿಕ ವಿಳಾಸ ಹೊಂದಿರುವ 2 ಮತದಾರರ ಚೀಟಿ ಹೊಂದಿರಬಹುದು. ಇದರಿಂದ ಮತದಾರರ ಸಂಖ್ಯೆ ಖಚಿತವಾಗಿ ಲಭ್ಯವಾಗುವುದಿಲ್ಲ. ಅಲ್ಲದೆ ನಕಲಿ ಮತದಾನವೂ ನಡೆಯಬಹುದು. ಇಲ್ಲವೇ ಎರಡೂ ಕಡೆಯೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಬಹುದು. ಎಪಿಕ್ ಹಾಗೂ ಆಧಾರ್ ಸಂಖ್ಯೆ ಜೋಡಣೆ ಮಾಡಿದರೆ ಈ ರೀತಿಯ ದೋಷಗಳಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ 2015ರಲ್ಲಿ ಮೊದಲ ಬಾರಿಗೆ ಎಪಿಕ್ ಆಧಾರ್ ಜೋಡಣೆ ಯೋಜನೆ ರೂಪಿಸಿತ್ತಾದರೂ ಅದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ನಂತರ ಚುನಾವಣಾ ಆಯೋಗ 2019ರಲ್ಲಿ ಮತದಾನ ಸುಧಾರಣೆಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಶಿಫಾರಸ್ಸಿನಲ್ಲಿ ಈ ಅಂಶವೂ ಇತ್ತು. ಕೇಂದ್ರ ಸರ್ಕಾರ ಚುನಾವಣಾ ಸುಧಾರಣಾ ಮಸೂದೆ ಮಂಡಿಸಿ, ಅನುಮೋದನೆ ಪಡೆದಿದ್ದರಿಂದ ಅದೀಗ ಕಾಯಿದೆಯಾಗಿದೆ.

Translate »