ಮೈಸೂರು

ನ.25ರಂದು ಮುಡುಕುತೊರೆಯ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪುನರ್ ನಿರ್ಮಾಣಕ್ಕೆ ಸಿಎಂ ಚಾಲನೆ
ಮೈಸೂರು

ನ.25ರಂದು ಮುಡುಕುತೊರೆಯ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪುನರ್ ನಿರ್ಮಾಣಕ್ಕೆ ಸಿಎಂ ಚಾಲನೆ

November 23, 2020

ಮೈಸೂರು,ನ.22(ಎಂಟಿವೈ)- ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳ ತಲಕಾಡಿನ ಪಂಚಲಿಂಗಗಳಲ್ಲಿ ಒಂದಾ ಗಿರುವ ಹಾಗೂ ಶಿಥಿಲ ಸ್ಥಿತಿಗೆ ತಲುಪಿದ್ದ ಮುಡುಕು ತೊರೆ ಶ್ರೀ ಭ್ರsಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ಸರ್ಕಾರ 30 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲು ಮುಂದಾಗಿದ್ದು, ನ.25ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ನಂದೀಶ್ ಹಂಚೆ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

ವಿವಿಧ ಜಾತಿಯ ಆಯುರ್ವೇದ ಸಸಿಗಳ ವಿತರಣೆ 
ಮೈಸೂರು

ವಿವಿಧ ಜಾತಿಯ ಆಯುರ್ವೇದ ಸಸಿಗಳ ವಿತರಣೆ 

November 23, 2020

ಮೈಸೂರು, ನ.22(ಪಿಎಂ)- ಕೆ.ಎಂ. ಪ್ರವೀಣ್‍ಕುಮಾರ್ (ಕೆಎಂಪಿಕೆ) ಚಾರಿ ಟಬಲ್ ಟ್ರಸ್ಟ್ ವತಿಯಿಂದ ವಿಶ್ವ ಆಯು ರ್ವೇದ ದಿನಾಚರಣೆ ಅಂಗವಾಗಿ ಸಾರ್ವ ಜನಿಕರಿಗೆ ಉಚಿತವಾಗಿ ವಿವಿಧ ಜಾತಿಯ ಆಯುರ್ವೇದ ಸಸಿಗಳನ್ನು ನೀಡುವ ಮೂಲಕ ಆಯುರ್ವೇದ ಸಸ್ಯದಿಂ ದಾಗುವ ಉಪಯೋಗಗಳ ಬಗ್ಗೆ ಭಾನು ವಾರ ಅರಿವು ಮೂಡಿಸಲಾಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ರುವ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ ಎದುರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಶಾಸಕ ಎಲ್.ನಾಗೇಂದ್ರ ಸಸಿಗಳನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಆಯು ರ್ವೇದ ಬಹುತೇಕ ಎಲ್ಲಾ…

ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 
ಮೈಸೂರು

ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 

November 23, 2020

ಮೈಸೂರು, ನ.22(ಆರ್‍ಕೆಬಿ)- ಮೈಸೂರಿನ ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಭಾನುವಾರ ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ  ಅಭಿ ನಂದಿಸಲಾಯಿತು. ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮು ದಾಯದ ವಿದ್ಯಾರ್ಥಿಗಳು ಉನ್ನತ…

ಇಂದು ಪ್ರಧಾನಿ ಮೋದಿಯಿಂದ ಸಂಸದರ ಬಹುಮಹಡಿ ಫ್ಲಾಟ್‍ಗಳ ಉದ್ಘಾಟನೆ
ಮೈಸೂರು

ಇಂದು ಪ್ರಧಾನಿ ಮೋದಿಯಿಂದ ಸಂಸದರ ಬಹುಮಹಡಿ ಫ್ಲಾಟ್‍ಗಳ ಉದ್ಘಾಟನೆ

November 23, 2020

ನವದೆಹಲಿ,ನ.22- ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣ ಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‍ಗಳನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 23ರಂದು ಬೆಳಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಈ ಫ್ಲ್ಯಾಟ್‍ಗಳು ನವದೆಹಲಿಯ ಡಾ.ಬಿ.ಡಿ.ಮಾರ್ಗದಲ್ಲಿವೆ. ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್‍ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.  

ಕಬ್ಬು ದರ ನಿಗದಿ ಕುರಿತು ನಾಳೆ ಸಿಎಂಗೆ ಒತ್ತಾಯ ಪತ್ರ
ಮೈಸೂರು

ಕಬ್ಬು ದರ ನಿಗದಿ ಕುರಿತು ನಾಳೆ ಸಿಎಂಗೆ ಒತ್ತಾಯ ಪತ್ರ

November 23, 2020

ಮೈಸೂರು,ನ.22(ಆರ್‍ಕೆಬಿ)- ಕಬ್ಬು ದರ ನಿಗದಿ, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನ.24ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಕಳೆದ 2 ತಿಂಗಳಿಂದ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಾ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್‍ಆರ್‍ಪಿ ದರ ರೈತರಿಗೆ ನಷ್ಟ ಉಂಟು ಮಾಡುತ್ತಿದೆ. ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆಗಳು…

ಎರಡು ಕ್ಷೇತ್ರಗಳ ಉಪ ಚುನಾವಣೆ, ಅಭ್ಯರ್ಥಿ ಕಣಕ್ಕಿಳಿಸುವುದು ವ್ಯರ್ಥ
ಮೈಸೂರು

ಎರಡು ಕ್ಷೇತ್ರಗಳ ಉಪ ಚುನಾವಣೆ, ಅಭ್ಯರ್ಥಿ ಕಣಕ್ಕಿಳಿಸುವುದು ವ್ಯರ್ಥ

November 23, 2020

ಬೆಂಗಳೂರು,ನ.22-ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ವ್ಯರ್ಥ. ಆದರೂ ಆ ಎರಡೂ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ, ಮಂಡ್ಯ, ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪ ಚುನಾವಣೆಗಳ ಸೋಲಿನ ಬಳಿಕ ನಮಗೆ ಮತ್ತಷ್ಟು ಸವಾಲು…

ಸಿಎಂ ಯಡಿಯೂರಪ್ಪ ವಿರುದ್ಧ ವಾಟಾಳ್ ಹೇಳಿಕೆಗೆ ರೇಣುಕಾಚಾರ್ಯ ಗರಂ: ಕ್ಷಮೆ ಕೋರಲು ಒತ್ತಾಯ
ಮೈಸೂರು

ಸಿಎಂ ಯಡಿಯೂರಪ್ಪ ವಿರುದ್ಧ ವಾಟಾಳ್ ಹೇಳಿಕೆಗೆ ರೇಣುಕಾಚಾರ್ಯ ಗರಂ: ಕ್ಷಮೆ ಕೋರಲು ಒತ್ತಾಯ

November 23, 2020

ಬೆಂಗಳೂರು, ನ.22- ಮುಖ್ಯಮಂತ್ರಿ ವಿರುದ್ಧ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಬಳಸಿರುವ ಪದ ಅಕ್ಷಮ್ಯ ಪದವಾಗಿದ್ದು, ಕೂಡಲೇ ಅವರು ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮುಖ್ಯಮಂತ್ರಿ ಗಳ ಕ್ಷಮೆ ಕೋರಬೇಕೆಂದು ಮುಖ್ಯಮಂತ್ರಿ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಗೃಹ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸರ್ಕಾರದ ಎಚ್ಚರಿಕೆ ನಡುವೆಯೂ ಒಂದು ವೇಳೆ ಬಂದ್ ನಡೆಸಿ ಜನಸಾಮಾನ್ಯರಿಗೆ ತೊಂದರೆ ಆದಲ್ಲಿ ಅದಕ್ಕೆ ನೀವೇ ಹೊಣೆ ಎಂದರು. ಕನ್ನಡಪರ ಸಂಘಟನೆಗಳ ಬಗ್ಗೆ ಶಾಸಕ…

ಜನವರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪರೀಕ್ಷೆ ಉಚಿತ
ಮೈಸೂರು

ಜನವರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪರೀಕ್ಷೆ ಉಚಿತ

November 22, 2020

ಬೆಳಗಾವಿ,ನ.21- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನೂ ಒಂದೇ ಇಲಾಖೆ ಯಾಗಿಸುವ ಚಿಂತನೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನ ವರಿಯಿಂದಲೇ ಎಲ್ಲ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸ ಆಕ್ಸಿಜನ್ ಘಟಕ, 200 ಹಾಸಿಗೆಗಳ ನೇತ್ರ, ಇಎನ್‍ಟಿ ವಾರ್ಡ್, 90 ಹಾಸಿಗೆಗಳ ಮಕ್ಕಳ ವಾರ್ಡ್ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಈ…

ಮುಡಾದಲ್ಲಿ ನಿವೇಶನಗಳ `ಗೋಲ್‍ಮಾಲ್’: ಎಸಿಬಿ ತನಿಖೆ
ಮೈಸೂರು

ಮುಡಾದಲ್ಲಿ ನಿವೇಶನಗಳ `ಗೋಲ್‍ಮಾಲ್’: ಎಸಿಬಿ ತನಿಖೆ

November 22, 2020

ಮೈಸೂರು, ನ.21(ಆರ್‍ಕೆ)-ಮುಡಾಗೆ ನಿವೇಶನ ಮರಳಿಸಿದ್ದರೂ, ನಿವೃತ್ತ ಐಎಫ್‍ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪತ್ನಿಗೆ ಮತ್ತೆ ಸುಮಾರು ಮೂರೂವರೆ ಕೋಟಿ ರೂ. ಬೆಲೆಬಾಳುವ ಸದರಿ ನಿವೇ ಶನದ ಕ್ರಯಪತ್ರ ನೀಡಿರುವುದೂ ಸೇರಿದಂತೆ ಮುಡಾ ದಿಂದ ಮಂಜೂರಾಗಿದ್ದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿರುವ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಐಎಫ್‍ಎಸ್ ಅಧಿಕಾರಿ…

ಮೈಸೂರು-ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ
ಮೈಸೂರು

ಮೈಸೂರು-ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ

November 22, 2020

ಮೈಸೂರು,ನ.21(ಎಸ್‍ಬಿಡಿ)- ಬಹುನಿರೀಕ್ಷಿತ ಮೈಸೂರು-ಮಂಗಳೂರು ನಡು ವಿನ ವಿಮಾನಯಾನ ಸೇವೆಗೆ ಅಂತೂ ಕಾಲ ಕೂಡಿಬಂದಿದೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಉಡಾನ್ ಯೋಜನೆಯಡಿ ಡಿಸೆಂಬರ್ 10ರಿಂದ ಈ ಮಾರ್ಗದಲ್ಲಿ ಸೇವೆ ಆರಂಭಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರ ಡುವ ವಿಮಾನ ಮಧ್ಯಾಹ್ನ 12. 15ಕ್ಕೆ ಮಂಗಳೂರು ತಲುಪಲಿದೆ. ಮತ್ತೆ ಅಲ್ಲಿಂದ ಮಧ್ಯಾಹ್ನ 12. 40ಕ್ಕೆ ಹೊರಟು 1.40ಕ್ಕೆ ಮೈಸೂರಿಗೆ ವಾಪಸ್ಸಾಗಲಿದೆ. ಈ ವಿಷಯವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಸಂಸದ…

1 365 366 367 368 369 1,611
Translate »