ಬೆಂಗಳೂರು,ನ.23-ರಾಜ್ಯ ರಾಜಕಾರಣದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಬದಲಾವಣೆಗಳಾಗಲಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟ ವಾಗಿದೆ. ಸೋಮವಾರ ದಿಢೀರನೇ ಇಂತಹದ್ದೊಂದು ವದಂತಿ ಹಬ್ಬಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ದಿಢೀರನೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಧಿಸೂಚನೆ ಹೊರಡಿಸಿದ್ದು, ಬರೋಬ್ಬರಿ ಐದು ನೂರು ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತಮ್ಮ ಬದಲಾವಣೆಯ ಕುರಿತ ಪ್ರಯತ್ನಗಳು ಬಿರುಸುಗೊಂಡಿ ರುವ ಹಿನ್ನೆಲೆಯಲ್ಲಿಯೇ…
ಇಂದು ದೆಹಲಿಯಲ್ಲಿ ಚಿತ್ರನಟಿ ವಿಜಯಶಾಂತಿ ಬಿಜೆಪಿ ಸೇರ್ಪಡೆ
November 24, 2020ನವದೆಹಲಿ,ನ.23- ಹಲವು ತಿಂಗಳ ಊಹಾಪೆÇೀಹಗಳ ನಂತರ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಮತ್ತು ಮಾಜಿ ಸಂಸದೆ ವಿಜಯಶಾಂತಿ ನಾಳೆ ದೆಹಲಿಗೆ ತೆರಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖ ದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಬಹುತೇಕ ಖಾತ್ರಿ ಯಾಗಿದೆ. ಚಿತ್ರನಟಿ ವಿಜಯಶಾಂತಿ ಬಿಜೆಪಿಗೆ ಮತ್ತೆ ಸೇರ್ಪಡೆ ಯಾಗುತ್ತಿರುವುದರಿಂದ ಡಿಸೆಂಬರ್ 1ರಂದು ನಡೆಯಲಿರುವ ಜಿಹೆಚ್‍ಎಂಸಿಯ 150 ವಾರ್ಡ್ ಗಳ ಚುನಾವಣೆಯ ಪ್ರಚಾರಕ್ಕೆ ಬಲ ಬಂದಂತಾಗಿದೆ. ವಿಜಯ ಶಾಂತಿ ಬಿಜೆಪಿಗೆ ಸೇರ್ಪಡೆಯಾದರೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನ…
ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಮರಿ ಮೊಮ್ಮಗ ಸತೀಶ್ ಕೊರೊನಾಗೆ ಬಲಿ
November 24, 2020ಜೋಹಾನ್ಸ್ ಬರ್ಗ್: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಮರಿ ಮೊಮ್ಮಗ ಸತೀಶ್ ಧುಪೇಲಿಯಾ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ ಸತೀಶ್ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ನ್ಯುಮೋನಿಯಾದಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸತೀಶ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸಹೋದರಿ ಉಮಾ ಧುಪೇ ಲಿಯಾ ಸ್ಪಷ್ಟಪಡಿಸಿದ್ದಾರೆ. ನ್ಯುಮೋನಿಯಾ ಕಾರಣದಿಂದ 1 ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನನ್ನ ಸಹೋದರ ಸತೀಶ್ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾ…
ವಿನಯ್ ಕುಲಕರ್ಣಿಗೆ ಮತ್ತೆ 14 ದಿನ ಜೈಲೇ ಗತಿ
November 24, 2020ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧ ನದ ಅವಧಿ ಮತ್ತೆ ವಿಸ್ತರಣೆಯಾಗಿದೆ. ಧಾರವಾಡದ 3ನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಲ್ಲಿ ಇಂದು ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ವಿಚಾ ರಣೆ ಇತ್ತು. ಈ ವೇಳೆ ಸಿಬಿಐ ಅಧಿಕಾರಿಗಳು ಕೋರ್ಟಿಗೆ ನ್ಯಾಯಾಂಗ ಅವಧಿಯನ್ನು ವಿಸ್ತರಿ ಸುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ಹಿಂಡಲಗಾ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ ವಿಚಾರಣೆಗೆ ಹಾಜರಾದರು. ವಿಚಾರಣೆ ನಡೆಸಿದ ನ್ಯಾಯಾ…
ರೆಸಾರ್ಟ್‍ನಲ್ಲಿ ತಂಗಿದ್ದವರ ಲಕ್ಷಾಂತರ ರೂ. ಚಿನ್ನಾಭರಣ ಕಳವು 24 ಗಂಟೆಯೊಳಗೆ ಖದೀಮನ ಬಂಧನ
November 24, 2020ಮೈಸೂರು,ನ.23(ಎಸ್‍ಬಿಡಿ)- ರೆಸಾರ್ಟ್‍ವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದ್ದ ಪ್ರಕರಣವನ್ನು ಹೆಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿ ಠಾಣೆ ಪೊಲೀಸರು 24 ಗಂಟೆ ಯೊಳಗೆ ಭೇದಿಸಿದ್ದಾರೆ. ಬದನಕುಪ್ಪೆ ಗ್ರಾಮದ ಬಳಿಯಿರುವ ರೆಡ್ ಅರ್ಥ್ ರೆಸಾರ್ಟ್‍ನಲ್ಲಿ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿ ದಿನ ಕಳೆಯು ವಷ್ಟರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬದನಕುಪ್ಪೆ ಗ್ರಾಮದ ಜಯರಾಜು(35) ಬಂಧಿತನಾಗಿದ್ದು, ಆತನಿಂದ 20 ಸಾವಿರ ರೂ. ಹಣ ಸೇರಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ ಹಾಗೂ…
ಕೆಆರ್‍ಎಸ್ ಕಂದಾಯ ಗ್ರಾಮವಾಗಿ ಘೋಷಣೆ
November 23, 2020ಶ್ರೀರಂಗಪಟ್ಟಣ,ನ.22(ವಿನಯ್‍ಕಾರೇಕುರ)- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಗ್ರಾಮ ವನ್ನು ಸರ್ಕಾರ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದೆ. ಈ ಮೂಲಕ ಹಲವು ವರ್ಷಗಳ ಈ ಭಾಗದ ಜನರ ಮಹತ್ವಾಂಕಾಂಕ್ಷೆಯ ಕನಸು ನನಸಾಗಿದೆ. ಇದ ರೊಂದಿಗೆ ಜಿಲ್ಲೆಯ ಭೂಪಟದಲ್ಲಿ ಕೆಆರ್‍ಎಸ್ ಗ್ರಾಮ ತನ್ನದೇ ಆದ ಗ್ರಾಮ ನಕ್ಷೆಯನ್ನು ಸೇರಿಸಿಕೋಂಡಿದೆ. ಹೋಂಗಹಳ್ಳಿ ಹಾಗೂ ಹುಲಿಕೆರೆ ಗ್ರಾಮಗಳ ಸರಹ ದ್ದನ್ನು ಮಾರ್ಪಡಿಸಿ ಕೃಷ್ಣರಾಜಸಾಗರ ಎಂಬ ಹೊಸ ಕಂದಾಯ ಗ್ರಾಮವನ್ನು ರಚಿಸಲಾಗಿದೆ. ಹೋಂಗಹಳ್ಳಿ ಗ್ರಾಮದ ಗಡಿಯೊಳಗೆ ನೆಲೆಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯಪುರ ಎಂಬ ದಾಖಲೆ…
ಸಿಬಿಐನಿಂದ ರೋಷನ್ ಬೇಗ್ ಬಂಧನ
November 23, 2020ಬೆಂಗಳೂರು, ನ.22- ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಸಂಜೆ ಬಂಧಿಸಿದರು. ನಿನ್ನೆಯಷ್ಟೇ (ಶನಿವಾರ) ಐಎಂಎ ಅಧ್ಯಕ್ಷ ಮನ್ಸೂರ್ ಅಲಿ ಖಾನ್‍ನನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದ ಸಿಬಿಐ ಅಧಿಕಾರಿಗಳು, ಆತ ನೀಡಿದ ಹೇಳಿಕೆ ಯನ್ನಾಧರಿಸಿ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ರೋಷನ್ ಬೇಗ್ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದು ಗಂಗಾ ನಗರದಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದು ಸಂಜೆವರೆಗೂ ತೀವ್ರ ವಿಚಾರಣೆ ಗೊಳಪಡಿಸಿದರು. ಸಂಜೆ…
ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
November 23, 2020ಬೆಂಗಳೂರು, ನ.22-ಬೇರೆ ರಾಜ್ಯಗಳಿಗೆ ಹೋಲಿ ಸಿದರೆ ಕೊರೊನಾ ಕೇಸ್ ಕಡಿಮೆ ಎಂಬ ಕಾರಣಕ್ಕೆ ಇದೀಗ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸಲು ಮುಂದಾ ಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವರದಿ ಯನ್ನು ತಯಾರಿಸಿ ಮುಖ್ಯಮಂತ್ರಿಗೆ ಸಲ್ಲಿ ಸಿದೆ. ಈ ಹಿನ್ನೆಲೆ ನಾಳೆ (ಸೋಮವಾರ) ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಜೊತೆ ಜರುಗುವ ಸಭೆ ಸಾಕಷ್ಟು ಮಹತ್ವ ಪಡೆದಿದೆ. ರಾಜ್ಯದಲ್ಲಿ ಕಾಲೇಜು ನಂತರ ಶಾಲೆಗಳು ಆರಂಭವಾಗುತ್ತಾ? ಈ ಪ್ರಶ್ನೆಗೆ ವಿಧಾನಸೌಧದಲ್ಲಿ ನಾಳೆ ಸಿಎಂ ನೇತೃತ್ವದಲ್ಲಿ ಜರುಗುವ…
2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು: ಮುಂದಿನ ತಿಂಗಳಿನಿಂದ 120 ದಿನಗಳ ಕಾಲ ದೇಶಾದ್ಯಂತ ನಡ್ಡಾ ಪ್ರವಾಸ
November 23, 2020ನವದೆಹಲಿ,ನ.22-2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಪಕ್ಷ ಸಂಘಟನೆ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮುಂದಿನ ತಿಂಗಳಿನಿಂದ 120 ದಿನ ಗಳ ಕಾಲ ರಾಷ್ಟ್ರದಾದ್ಯಂತ ಪ್ರವಾಸ ಕೈಗೊಳ್ಳಲಿ ದ್ದಾರೆ. ಡಿಸೆಂಬರ್ ಮೊದಲ ವಾರದಿಂದ ಜೆ.ಪಿ. ನಡ್ಡಾ ಪ್ರವಾಸ ಆರಂಭಿಸಲಿದ್ದು, ಉತ್ತರ್‍ಖಂಡ್ ಮೊದಲ ರಾಜ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸುದ್ದಿಗಾರ ರಿಗೆ ತಿಳಿಸಿದರು. ಡಿಸೆಂಬರ್ 5ರಿಂದ ಜೆ.ಪಿ.ನಡ್ಡಾ ಪ್ರವಾಸ ಆರಂಭಿಸುವ ಸಾಧ್ಯತೆಯಿದ್ದು, ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ, ಎಲ್ಲಾ ಬೂತ್ ಮಟ್ಟದ…
ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‍ವೈ ಕೆಳಗಿಳಿಸಿದರೆ ರಾಜ್ಯದಲ್ಲಿ ಕ್ರಾಂತಿ
November 23, 2020ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬೇಕು ಎನ್ನುವ ವಿಚಾರ ಕೇಳಿ ಬರುತ್ತಿದೆ. ಅಕಸ್ಮಾತ್ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಕ್ರಾಂತಿಯೇ ಆಗಲಿದೆ ಎಂದು ಬೀದರ್ ಜಿಲ್ಲೆಯ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಶ್ರೀ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಬೀದರ್‍ನಲ್ಲಿ ಭಾನುವಾರ ಕನ್ನಡ ಭವನದ ಭೂಮಿ ಪೂಜೆ ಕಾರ್ಯ ಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ವಿಚಾರದಲ್ಲಿ ಎಲ್ಲರೂ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು. ಅಲ್ಲದೆ,…










