ಮೈಸೂರು, ನ.5(ಪಿಎಂ)- ಕೇಂದ್ರ ಸರ್ಕಾರ ರೈತ-ಕಾರ್ಮಿಕ ಹಾಗೂ ಜನವಿರೋಧಿ ಮಸೂದೆ ಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಈ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗುರುವಾರ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಇಲ್ಲಿನ ಎಪಿಎಂಸಿ ಬಳಿಯ ರಿಂಗ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‍ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವೃತ್ತದಲ್ಲಿನ 4 ಮಾರ್ಗಗಳನ್ನು ಮಾನವ ಸರಪಳಿ ನಿರ್ಮಿಸಿ ತಡೆದ ಪ್ರತಿಭಟನಾಕಾರರು ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘದ ಪ್ರತಿಭಟನೆ
November 6, 2020ಮೈಸೂರು, ನ.5(ಪಿಎಂ)- ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿ ಭಟನೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನು ಸರಿಸುತ್ತಿವೆ. ತಿದ್ದುಪಡಿ ಕಾಯ್ದೆ ಜಾರಿಯಾದರೆ ರೈತರ ಜಮೀನು ಮೊದಲಿಗೆ ದಲ್ಲಾಳಿಗಳ ಪಾಲಾಗಿ, ಬಳಿಕ ಬಂಡವಾಳಶಾಹಿ ಕುಳಗಳ ಒಡೆತನಕ್ಕೆ ಸೇರಲಿವೆ. ಆ ಮೂಲಕ ರೈತರು ಜಮೀನು ಕಳೆದುಕೊಂಡು ಕೂಲಿ ಆಳುಗಳಾಗಿ ದುಡಿಯುವ ಕೆಟ್ಟ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ…
ಮೋದಿ ಕಪಿಮುಷ್ಟಿಯಲ್ಲಿ ತನಿಖಾ ಸಂಸ್ಥೆಗಳು: ಮಾಜಿ ಸಂಸದ ಧ್ರುವನಾರಾಯಣ್ ಕಿಡಿ
November 6, 2020ಮೈಸೂರು, ನ.5(ಎಂಟಿವೈ)- ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿ ಕೊಳ್ಳು ತ್ತಿದ್ದು, ಅಧಿಕಾರಿಗಳು ಪಕ್ಷದ ಏಜೆಂಟರ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಕಿಡಿಕಾರಿದರು. ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ವಿನಯ್ ಕುಲಕರ್ಣಿ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋ ವಿಶ್ವಾಸ ನಮಗಿದೆ. ಈ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಯಬೇಕು. ಕೇಂದ್ರದ ಮೋದಿ ಸರ್ಕಾರ ಕೇಂದ್ರ ಸ್ವಾಮ್ಯದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ತನ್ನ…
ವರುಣಾ ತಾಲೂಕು ರಚನೆ ಅಸಮಂಜಸ: ಡಾ.ಯತೀಂದ್ರ
November 6, 2020ಮೈಸೂರು,ನ.5(ಎಂಟಿವೈ)-ವರುಣಾ ಗ್ರಾಮವನ್ನು ಹೊಸ ತಾಲೂಕು ಕೇಂದ್ರವಾಗಿಸುವುದು ಸಮಂಜಸ ವಾದ ಆಲೋಚನೆ ಅಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಮೈಸೂರಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ವರುಣಾ ಗ್ರಾಮ ಮೈಸೂರು ನಗರಕ್ಕೆ ಸಮೀಪವಿದೆ. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿಂದ ವರುಣಾ ಕ್ಷೇತ್ರವನ್ನು ಬೇರ್ಪಡಿಸಿ ಹೊಸ ತಾಲೂಕು ರಚನೆ ಮಾಡುವ ಆಲೋಚನೆ ಸರಿಯಲ್ಲ. ಜನರನ್ನು ದಿಕ್ಕು ತಪ್ಪಿಸುವ ಪ್ರತ್ಯೇಕ ತಾಲೂಕು ರಚನೆಯ ಹೇಳಿಕೆ ನೀಡಬಾರದು ಎಂದರು. ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ….
ಪ್ರಾಣಿಗಳ ದತ್ತು ಸ್ವೀಕಾರ
November 6, 2020ಮೈಸೂರು, ನ.5-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೇಧ ಸಿದ್ಧಾರ್ಥ 18,500 ರೂ. ಪಾವತಿಸಿ ಫ್ಲೆಮಿಂಗೊ, ಚೇತನ್ ಚುತುರ್ವೇದಿ 20,000 ರೂ. ಪಾವತಿಸಿ ಫ್ಲೆಮಿಂಗೊ, ಮೋನಾ ಡೋನಾ ರಾಜೇಶ್ 5,000 ರೂ. ಪಾವತಿಸಿ ಲೆಪರ್ಡ್ ಕ್ಯಾಟ್, ವಯಾನ್ ಅಗರ್ವಾಲ್ 2,000 ರೂ. ಪಾವತಿಸಿ ಮೌಸ್ಟಚ್ ಪ್ಯಾರಕೀಟ್, ಮೈಸೂರಿನ ರಮ್ಯ ಭಂಡಾಟರಿ 1,000 ರೂ. ಪಾವತಿಸಿ ರೆಡ್ ಅವಡವಿಟ್ ದತ್ತು ಪಡೆದಿದ್ದಾರೆ. ಬೆಂಗಳೂರಿನ ಬೆನ್ ಅಜರೆಲ್ 1,000 ರೂ. ಪಾವತಿಸಿ ರೆಡ್ ಅವಡವಿಟ್, ಮೈಸೂರಿನ…
ಕೋವಿಡ್-19 ಹಿನ್ನೆಲೆ ದೂರ ಶಿಕ್ಷಣವೀಗ ಬಲು ಸಮೀಪ
November 6, 2020ಮೈಸೂರು, ನ.5(ಆರ್‍ಕೆಬಿ)- ಎಲ್ಲ ರಿಗೂ, ಎಲ್ಲೆಡೆ ಶಿಕ್ಷಣ ಎಂಬ ಉದ್ದೇಶ ದೊಂದಿಗೆ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕರಾಮುವಿ) ದೂರ ಶಿಕ್ಷಣದ ಮಹತ್ವ ಇಂದು ವಿಶ್ವದೆಲ್ಲೆಡೆ ವ್ಯಾಪಿಸಿದೆ ಎಂದು ಕರಾಮುವಿ ಕುಲಸಚಿವ ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು. ಮೈಸೂರಿನ ಕರಾಮುವಿ ಕಾವೇರಿ ಸಭಾಂಗಣದಲ್ಲಿ ಗುರುವಾರ ಕರಾಮುವಿ ಆಯೋಜಿಸಿದ್ದ `ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ’ (ಸಿಬಿಸಿಎಸ್) ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಕೋವಿಡ್-19 ಸಂದರ್ಭ ಇಡೀ ಜಗತ್ತಿಗೆ ದೂರ ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ವ ಅರಿವಾಗಿದೆ. ದೂರ…
ಒಂದು ವರ್ಷ ವಿದ್ಯುತ್ ದರ ಏರಿಕೆ ಮಾಡದಂತೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ
November 6, 2020ಬೆಂಗಳೂರು, ನ.5(ಕೆಎಂಶಿ)- ಕೊರೊನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ವಿದ್ಯುತ್ ದರ ಏರಿಕೆ ಪ್ರಸ್ತಾಪ ಮಾಡಿ ರುವ ಅವರು, ಕೊರೊನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ವಿದ್ಯುತ್…
ರಾಜ್ಯದ ಜನತೆಗೆ ಕರೆಂಟ್ `ಶಾಕ್’
November 5, 2020ಬೆಂಗಳೂರು, ನ.4-ಶಿರಾ ಮತ್ತು ರಾಜರಾಜೇಶ್ವರಿನಗರ ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿ.ಎಸ್.ಯಡಿ ಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ಕರೆಂಟ್ ಶಾಕ್ ನೀಡಿದ್ದು, ಯೂನಿಟ್‍ಗೆ 40 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ದರ ಹೆಚ್ಚಳ ಮಾಡುವಂತೆ ಕಳೆದ ಫೆಬ್ರವರಿಯಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆ ಯನ್ನು ಪರಿಗಣಿಸಿರಲಿಲ್ಲ. ಈಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆ ಮೇರೆಗೆ ಪ್ರತಿ…
ಉಪ ಚುನಾವಣೆ ಫಲಿತಾಂಶದ ನಂತರ ಸಿಎಂ ಬದಲಾಗ್ತಾರೆ
November 5, 2020ಮೈಸೂರು,ನ.4(ಎಂಟಿವೈ)-ಬೆಂಗಳೂರಿನ ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳÀ ಉಪಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಬೇರೊಬ್ಬರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದ ರಾಮಯ್ಯ ಭವಿಷ್ಯ ನುಡಿದಿದ್ದಾರೆÉ. 2 ದಿನದ ಪ್ರವಾಸಕ್ಕೆ ಬುಧವಾರ ಮೈಸೂರಿಗೆ ಆಗಮಿ ಸಿದ ಬಳಿಕ ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಮುಂದು ವರೆಯುವುದಿಲ್ಲ. ಮುಖ್ಯಮಂತ್ರಿ ಬದಲಾಯಿಸಬೇಕೆಂದು…
ಮಾಜಿ ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ, ಪ್ರಸಾದ್‍ಗೆ ಬಿಗ್ ರಿಲೀಫ್
November 5, 2020ಬೆಂಗಳೂರು, ನ.4-ಡಿವೈಎಸ್‍ಪಿ ಎಂ.ಕೆ.ಗಣ ಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಎ.ಎಂ.ಪ್ರಸಾದ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿ, ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ವಜಾಗೊಳಿಸುವ ಮೂಲಕ ಈ ಮೂವರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಈ ಹಿಂದೆ ಸಿಐಡಿ ಮತ್ತು ಸಿಬಿಐ…










