ಮೈಸೂರು

ಮಾಲ್‍ಗಳಲ್ಲಿ ಕೋವಿಡ್-19 ಪರೀಕ್ಷೆ ಆರಂಭ
ಮೈಸೂರು

ಮಾಲ್‍ಗಳಲ್ಲಿ ಕೋವಿಡ್-19 ಪರೀಕ್ಷೆ ಆರಂಭ

November 9, 2020

ಮೈಸೂರು,ನ.8(ಎಂಟಿವೈ)-ಮೈಸೂರಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ ಇದೀಗ ನಗರದ ಮಾಲ್‍ಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲು ಮುಂದಾಗಿದೆ. ಎರಡನೇ ಹಂತದ ಕೊರೊನಾ ಅಲೆಯಿಂದ ಮೈಸೂರಿಗರನ್ನು ರಕ್ಷಿಸಲು ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಿದೆ. ಅಲ್ಲದೆ ಒಂದೇ ದಿನದಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳ ಲಾಗಿದ್ದು, ನಾಳೆಯಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೋಟಿ ರೂ. ಮೌಲ್ಯದ `ಲಿಕ್ವಿಡ್ ಹ್ಯಾಂಡಲಿಂಗ್ ಸಿಸ್ಟಮ್’ ಯಂತ್ರದ ಮೂಲಕ ಟೆಸ್ಟ್ ಆರಂಭಿಸಲಾಗುತ್ತಿದೆ. ಒಟ್ಟಾರೆ ಒಂದು ದಿನ ದಲ್ಲಿ 4 ಸಾವಿರ ಕೊರೊನಾ ಸೋಂಕಿತರ…

ಮೈಸೂರು ರೈಲ್ ಮ್ಯೂಸಿಯಂಗೆ ಅಕ್ಟೋಬರ್‍ನಲ್ಲಿ ಅತಿಹೆಚ್ಚು ವೀಕ್ಷಕರು!
ಮೈಸೂರು

ಮೈಸೂರು ರೈಲ್ ಮ್ಯೂಸಿಯಂಗೆ ಅಕ್ಟೋಬರ್‍ನಲ್ಲಿ ಅತಿಹೆಚ್ಚು ವೀಕ್ಷಕರು!

November 9, 2020

ಮೈಸೂರು, ನ.8(ಪಿಎಂ)- ಮೈಸೂರು ಮಹಾರಾಜರು ಮತ್ತು ಬ್ರಿಟಿಷರ ಕಾಲದ ರೈಲ್ವೆ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಮೈಸೂ ರಿನ ಕೆಆರ್‍ಎಸ್ ರಸ್ತೆಯ `ಮೈಸೂರು ರೈಲ್ ಮ್ಯೂಸಿಯಂ (ಮೈಸೂರು ರೈಲು ವಸ್ತು ಸಂಗ್ರಹಾಲಯ)’ ನವರಾತ್ರಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿತ್ತು. ಪರಿಣಾಮ ದಸರಾ ವೇಳೆಯ 10 ದಿನ ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಮ್ಯೂಸಿಯಂನ ಅಂದ-ಚೆಂದ ಕಣ್ತುಂಬಿಕೊಂಡರು. ಪ್ರವೇಶ ಶುಲ್ಕದಿಂ ದಲೇ ಮ್ಯೂಸಿಯಂಗೆ ಅಕ್ಟೋಬರ್‍ನಲ್ಲಿ 3.60 ಲಕ್ಷ ರೂ. ವರಮಾನ ಬಂದಿದೆ. 1979ರಲ್ಲಿ ಸ್ಥಾಪನೆಯಾಗಿರುವ, 3…

ಗ.ನಾ.ಭಟ್ಟರದ್ದು ಸದ್ದಿಲ್ಲದ ಸಾಹಿತ್ಯ ಕೃಷಿ ಕಾಯಕ
ಮೈಸೂರು

ಗ.ನಾ.ಭಟ್ಟರದ್ದು ಸದ್ದಿಲ್ಲದ ಸಾಹಿತ್ಯ ಕೃಷಿ ಕಾಯಕ

November 9, 2020

ಮೈಸೂರು, ನ.8(ಆರ್‍ಕೆಬಿ)- ವಿದ್ವಾನ್ ಗ.ನಾ.ಭಟ್ಟರು ಸದ್ದಿಲ್ಲದೆ ಸಾಹಿತ್ಯ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಬಹು ದೊಡ್ಡ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದ ನಟನ ರಂಗಶಾಲೆಯ ರಂಗ ವೇದಿಕೆಯಲ್ಲಿ ಭಾನು ವಾರ ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ.ನಾ.ಭಟ್ಟರ `ನೆಲದ ತಾರೆಗಳು’, `ರಂಗಸ್ಪಂದ’ ಮತ್ತು `ಪ್ರಬೋಧ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪುಸ್ತಕದಲ್ಲಿನ ವಿವಿಧ ಲೇಖನಗಳ ಬಗ್ಗೆ ಮಾತನಾಡಿದ ಅವರು, ಇವರ…

ಸೇವಾ ಕಾರ್ಯಗಳ ಮೂಲಕ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು ಹುಟ್ಟುಹಬ್ಬ ಆಚರಣೆ
ಮೈಸೂರು

ಸೇವಾ ಕಾರ್ಯಗಳ ಮೂಲಕ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು ಹುಟ್ಟುಹಬ್ಬ ಆಚರಣೆ

November 9, 2020

ಮೈಸೂರು,ನ.8(ಪಿಎಂ)-ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ, ನಗರ ಜೆಡಿಎಸ್ ಉಪಾಧ್ಯಕ್ಷ ಹಾಗೂ ಅಶ್ವಿನಿ ಗೋಲ್ಡ್ ಕಂಪನಿ ಮಾಲೀಕ ಜಿ.ಮಂಜು (ಮಂಜುಗೌಡ) ಭಾನುವಾರ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿ ಕೊಂಡರು. ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಅಶ್ವಿನಿ ಗೋಲ್ಡ್ ಕಂಪನಿ ಕಚೇರಿ ಆವರಣದಲ್ಲಿ ಕೊರೊನಾ ವಾರಿ ಯರ್ಸ್ ಆದ ಪೌರಕಾರ್ಮಿಕರು ಮತ್ತು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಭದ್ರತಾ ಸಿಬ್ಬಂದಿ ಹಾಗೂ ವಿವಿಧ ವಲಯದ ಕಾರ್ಮಿಕರಿಗೆ ಸಿಹಿಯೊಂದಿಗೆ ಬಟ್ಟೆ ಮತ್ತು ಮಾಸ್ಕ್ ವಿತರಿಸಲಾಯಿತು….

ಮಾರುತಿ ಮಾನ್ಪಡೆ ಅವರಿಗೆ ಗ್ರಾಪಂ ನೌಕರರ ಸಂಘದ ಶ್ರದ್ಧಾಂಜಲಿ
ಮೈಸೂರು

ಮಾರುತಿ ಮಾನ್ಪಡೆ ಅವರಿಗೆ ಗ್ರಾಪಂ ನೌಕರರ ಸಂಘದ ಶ್ರದ್ಧಾಂಜಲಿ

November 9, 2020

ಮೈಸೂರು, ನ.8(ಆರ್‍ಕೆಬಿ)- ಇತ್ತೀಚೆಗೆ ನಿಧನರಾದ ಹಿರಿಯ ರೈತ-ಕಾರ್ಮಿಕ ಹೋರಾಟಗಾರ, ಗ್ರಾಮ ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದ ಮಾರುತಿ ಮಾನ್ಪಡೆ ಅವರಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಮೈಸೂರು ಜಿಲ್ಲಾ ಸಮಿತಿ ನಗರದಲ್ಲಿ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿತು. ಮೈಸೂರಿನ ಬಲ್ಲಾಳ್ ವೃತ್ತದ ಬಳಿಯ ಬುದ್ಧವಿಹಾರ ಆವರಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜ್ ಮಾತನಾಡಿ, ಮಾರುತಿ ಮಾನ್ಪಡೆ ಅವರು ರೈತರು, ಕಾರ್ಮಿಕರು ಮತ್ತು ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳಿಗೆ ತೀವ್ರ ಹೋರಾಟ…

ಕಾರಿನ ಮೇಲೆ ಬಿದ್ದ ಮರದ ಕೊಂಬೆ
ಮೈಸೂರು

ಕಾರಿನ ಮೇಲೆ ಬಿದ್ದ ಮರದ ಕೊಂಬೆ

November 9, 2020

ಕಾರಿಗೆ ಹಾನಿ; ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರು ಮೈಸೂರು, ನ.8(ಆರ್‍ಕೆಬಿ)- ಮರದ ದೊಡ್ಡ ಕೊಂಬೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು, ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿ ನಡೆದಿದೆ. ಮೈಸೂರಿನ ವಿಜಯ ನಗರದ ತಿಲಕ್‍ರಾಜ್ ತನ್ನ ಸ್ನೇಹಿತನನ್ನು ಬೋಗಾದಿಗೆ ಬಿಟ್ಟು ಬರಲು ತಮ್ಮ ಸ್ವಿಫ್ಟ್ ಕಾರಿನಲ್ಲಿ ವಾಲ್ಮೀಕಿ ರಸ್ತೆ ಯಲ್ಲಿ ಆದಿಪಂಪ ರಸ್ತೆ ಕೂಡುವ ಜಂಕ್ಷನ್‍ನಲ್ಲಿ ತೆರಳುತ್ತಿದ್ದಾಗ ಬೃಹತ್ ಮರದ ಕೊಂಬೆ ಯೊಂದು ಮುರಿದು ಕಾರಿನ ಬಾನೆಟ್ ಬಿತ್ತು. ಕಾರು ಮುಂದೆ…

ಕೊಳ್ಳೇಗಾಲ ನಗರಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅಮಾನತು
ಮೈಸೂರು

ಕೊಳ್ಳೇಗಾಲ ನಗರಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅಮಾನತು

November 9, 2020

ಕೊಳ್ಳೇಗಾಲ, ನ.8(ನಾಗೇಂದ್ರ)-ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಬಳಸಿಕೊಂಡು ಅಕ್ರಮ ವಾಗಿ ಏಕ ನಿವೇಶನವನ್ನು ಬಹುನಿವೇಶನಗಳ ನ್ನಾಗಿ ವಿಂಗಡಿಸಿ ಇ-ಸ್ವತ್ತುಗಳನ್ನು ನೀಡಿದ ಆರೋಪದ ಮೇರೆಗೆ ಕೊಳ್ಳೇಗಾಲ ನಗರ ಸಭೆಯ ಹಿಂದಿನ ಪೌರಾಯುಕ್ತ ನಾಗಶೆಟ್ಟಿ ಅವರನ್ನು ಅಮಾನತುಪಡಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ. ಕೊಳ್ಳೇಗಾಲ ನಗರ ಸಭೆಯ ವಾರ್ಡ್ ನಂ.18 ರಲ್ಲಿರುವ ಸರ್ವೆ ನಂ.739/1 ಮತ್ತು 740ಕ್ಕೆ ಸೇರಿದ 2.63 ಸೆಂಟ್ ಭೂಮಿಯನ್ನು 1980ರ ಮಾರ್ಚ್ 20ರಂದು ಅಂದಿನ ತಹಸೀಲ್ದಾರರು ಚಿತ್ರಮಂದಿರ ಮತ್ತು ಡೈರಿ ಫಾರಂ…

ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್ ಅಭಿನಂದನೆ
ಮೈಸೂರು

ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್ ಅಭಿನಂದನೆ

November 9, 2020

ಮೈಸೂರು,ನ.8(ಪಿಎಂ)-ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿ ಕಾರಿಗಳಾಗಿ ಆಯ್ಕೆಯಾದ ಎಲ್ಲಾ ಪತ್ರಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಎಸ್.ಎ.ರಾಮದಾಸ್ ಅಭಿನಂದನೆ ಸಲ್ಲಿಸಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಪತ್ರಕರ್ತ ಎಸ್.ಟಿ.ರವಿಕುಮಾರ್ ಮತ್ತು ಅವರ ತಂಡಕ್ಕೆ ಶುಭಾ ಶಯಗಳನ್ನು ತಿಳಿಸುತ್ತಾ ಅವರ ನೇತೃತ್ವದಲ್ಲಿ ಸಂಘದಿಂದ ಇನ್ನಷ್ಟು ಜನಪ್ರಿಯ ಕೆಲಸಗಳಾಗಲಿ, ಜನಪರ ಕಾಳಜಿಗಳನ್ನು ತೋರಲಿ. ಜೊತೆಗೆ ಇನ್ನುಳಿ ದಂತೆ ಆಯ್ಕೆಯಾದ ಉಪಾಧ್ಯಕ್ಷರಾದಿಯಾಗಿ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರಿಗೂ ಶುಭ ಕೋರುತ್ತೇನೆ. ಈ ಹಿಂದೆ ಅನೇಕ ಉತ್ತಮ ಕೆಲಸಗಳನ್ನು…

ಜೋ ಬಿಡೆನ್ ಅಮೆರಿಕ ನೂತನ ಅಧ್ಯಕ್ಷ
ಮೈಸೂರು

ಜೋ ಬಿಡೆನ್ ಅಮೆರಿಕ ನೂತನ ಅಧ್ಯಕ್ಷ

November 8, 2020

ವಾಷಿಂಗ್ಟನ್, ನ.7- ವಿಶ್ವಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯ ಕ್ಷೀಯ ಚುನಾವಣೆಯ ಸ್ಪಷ್ಟ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿ ಕ್ಕಿದ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಅವರು ಭರ್ಜರಿ ಜಯ ದಾಖಲಿಸಿ ದ್ದಾರೆ. ಆ ಮೂಲಕ ಮುಂದಿನ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾಗಿ ದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿದ್ದಾರೆ. `ಸ್ವಿಂಗ್ ಸ್ಟೇಟ್ಸ್’ ಎಂದೇ ಗುರುತಿಸ ಲಾಗಿರುವ ರಾಜ್ಯಗಳಲ್ಲಿ ಪ್ರಮುಖವಾದ ಪೆನ್ಸಿಲ್ವೇನಿಯಾದಲ್ಲಿ ಬಿಡೆನ್…

ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ
ಮೈಸೂರು

ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ

November 8, 2020

ಮೈಸೂರು,ನ.7(ಪಿಎಂ)- ಮೈಸೂರು ನಗರಕ್ಕೆ ಹೊಂದಿ ಕೊಂಡಿರುವ ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ ಹಾಗೂ ಹಿನಕಲ್ ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರಪಾಲಿಕೆಗೆ ಸೇರ್ಪಡೆಗೊಳಿಸಲು ಹಾಗೂ ಕೂರ್ಗಳ್ಳಿ ಮತ್ತು ಕಡಕೊಳ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗಳ ನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸಮ್ಮತಿಸಿದ್ದು, ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಇದಕ್ಕೆ ಹಸಿರು ನಿಶಾನೆ ದೊರೆಯುದೊಂದೇ ಬಾಕಿ. ಬೆಂಗಳೂರಿನ ವಿಕಾಸಸೌಧದಲ್ಲಿ ಮೈಸೂರು ನಗರದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ…

1 374 375 376 377 378 1,611
Translate »