ಮಡಿಕೇರಿ, ಅ.15- ತಲಕಾವೇರಿ ಯಲ್ಲಿ ಶನಿವಾರ (ಅ.17) ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ ವಾಗಲಿದೆ. ಈ ಪವಿತ್ರ ಘಳಿಗೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಅಂದು ತಲಕಾವೇರಿಗೆ ಬರುವ ಪ್ರತಿಯೊಬ್ಬರೂ ಅ.14ರ ನಂತರ ಮಾಡಿರುವ ಕೋವಿಡ್ ಟೆಸ್ಟ್ ನೆಗೆಟಿವ್ ವರದಿಯನ್ನು ಹೊಂದಿ ರಬೇಕು ಎಂಬುದನ್ನು ಕಡ್ಡಾಯಗೊಳಿಸ ಲಾಗಿದೆ. ಈ ಬಾರಿ ಕೊಳದಲ್ಲಿ ಪುಣ್ಯ ಸ್ನಾನ ಮಾಡಲು ಯಾರಿಗೂ ಅವಕಾಶವಿಲ್ಲ. ಅದೇ ರೀತಿ ಕೊಳದಲ್ಲಿ ತೀರ್ಥ ತೆಗೆದು…
ಅರಮನೆ ಅಂಗಳದಲ್ಲಿ ಅ.17ರಿಂದ ಸಾಂಸ್ಕøತಿಕ ಕಾರ್ಯಕ್ರಮ
October 16, 2020ಮೈಸೂರು, ಅ.15(ಎಸ್‍ಬಿಡಿ) -ದಸರಾ ಉತ್ಸವದ ಅಂಗ ವಾಗಿ ಅರಮನೆ ಅಂಗಳದ ವೇದಿಕೆಯಲ್ಲಿ ಅ.17ರಿಂದ 24ರವ ರೆಗೆ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಅ.17ರಂದು ರಾತ್ರಿ 8ರಿಂದ 9ರವರೆಗೆ ಶುಭ ಧನಂಜಯ ಮತ್ತು ತಂಡದ ಕಲಾವಿದರಿಂದ ನೃತ್ಯ ರೂಪಕ, ಅ.18ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಹಾಸನದ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದಿಂದ ಕೊಳಲು ವಾದನ, ಅ.19ರಂದು ಸಂಜೆ 7ರಿಂದ ರಾತ್ರಿ 8ರವರೆಗೆ ಬೆಂಗಳೂರಿನ ವಿದ್ವಾನ್ ರಾಹುಲ್ ವೆಲ್ಲಾಲ್ ಮತ್ತು ತಂಡದಿಂದ ಭಕ್ತಿ ಸಂಗೀತ, ರಾತ್ರಿ…
224 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ನಮ್ಮದು
October 16, 2020ಮೈಸೂರು, ಅ.15(ಆರ್‍ಕೆಬಿ)- ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲುವ ಗುರಿಯೊಂ ದಿಗೆ ಮುಂದಡಿ ಇಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದರು. ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ ಸಭಾಂಗಣ ದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾ ಟಿಸಿ, ಅವರು ಮಾತನಾಡಿದರು. ರಾಜ್ಯದ 224 ಸ್ಥಾನಗಳನ್ನು ಹಿಡಿಯಲು ತಾಯಿ ಚಾಮುಂಡೇ ಶ್ವರಿಯ ಸನ್ನಿಧಿ ಮೈಸೂರಿನಲ್ಲಿ ರಾಜ್ಯ ಪದಾಧಿಕಾರಿ ಗಳ ಸಭೆಯ ಮೂಲಕ ಯಾತ್ರೆ ಆರಂಭಿಸಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ನಮ್ಮ ಗುರಿ…
ಇದು ಪರಿವರ್ತನೆಯ ಯುಗ: ಸಿ.ಟಿ.ರವಿ
October 16, 2020ಮೈಸೂರು, ಅ.15(ಆರ್‍ಕೆಬಿ)-ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುವುದನ್ನು ತಡೆದಿದ್ದು, ದಲ್ಲಾಳಿಗಳಿಂದ ರೈತರಿಗಾಗುತ್ತಿದ್ದ ಕಿರುಕುಳ ತಪ್ಪಿಸಿದ್ದು, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ರುದ್ರಪ್ಪ, ಸುಂದರೇಷನ್ ಅವರ ಆಶಯಕ್ಕೆ ತಕ್ಕಂತೆ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಸರ್ಕಾರ ರೈತರ ವಿರೋಧಿ ಹೇಗಾಗುತ್ತದೆ? ಎಂದು ಪ್ರಶ್ನಿಸಿದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರವಿ, ಮೋದಿ ಅವರು ಸ್ವಾಮಿನಾಥನ್ ವರದಿ ಪ್ರಕಾರವೇ ಫಸಲ್ ಭಿಮಾ ಯೋಜನೆ ಮೂಲಕ ರೈತರಿಗೆ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. `ಒಂದು…
ಆಸ್ತಿ ತೆರಿಗೆ ವಸೂಲಿ ಸಪ್ತಾಹಕ್ಕೆ ಶಾಸಕ ನಾಗೇಂದ್ರ ಚಾಲನೆ
October 16, 2020ಮೈಸೂರು, ಅ.15(ಆರ್‍ಕೆಬಿ)- ನಗರದ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲವಾಗಿ ರುವ ಆಸ್ತಿ ತೆರಿಗೆ ಸಂಗ್ರಹಣೆಗೆ ನೂತನ ವಿಧಾನ ಕಂಡು ಕೊಂಡಿರುವ ಮೈಸೂರು ಮಹಾನಗರ ಪಾಲಿಕೆಯು ಈಗ `ಪಾಲಿಕೆ ನಡೆ-ಜನತೆ ಕಡೆ’ ಅಭಿಯಾನ ಕೈಗೊಂ ಡಿದೆ. ಇದೇ ನಿಟ್ಟಿನಲ್ಲಿ ಗುರುವಾರ ಚಾಮ ರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-3ರ ವ್ಯಾಪ್ತಿಯ 42ನೇ ವಾರ್ಡ್‍ನ ಕನ್ನೇಗೌಡನ ಕೊಪ್ಪಲಿನಲ್ಲಿ `ಪಾಲಿಕೆ ನಡೆ-ಕೆ.ಜಿ.ಕೊಪ್ಪಲು ಕಡೆ’ ಆರಂಭಿಸಿದೆ. ಆನ್‍ಲೈನ್ ಮೂಲಕ ಕಂದಾಯ ಪಾವ ತಿಸಿಕೊಳ್ಳಲು ಕೆ.ಜಿ.ಕೊಪ್ಪಲಿನ ಚಾಮುಂ ಡೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಆಸ್ತಿ ತೆರಿಗೆ ವಸೂಲಿ…
ಸಂವಿಧಾನದ ಸವಲತ್ತುಗಳು ವಂಚಿತರಿಗೆ ಸಿಗುತ್ತಿಲ್ಲ: ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಿಷಾದ
October 16, 2020ಮೈಸೂರು, ಅ.15(ಆರ್‍ಕೆಬಿ)- ಸಂವಿಧಾನದ ಸವಲತ್ತು ಗಳು ಮೂಲ ಸೌಕರ್ಯ ವಂಚಿತರಿಗೆ ಸಿಗುತ್ತಿಲ್ಲ. ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದಿಸಿದರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ ಹಾಗೂ ಬುಡಕಟ್ಟು ಮೂಲನಿವಾಸಿಗಳ ಪುನಶ್ಚೇತನ ಸಮಿತಿ ಗುರುವಾರ ಆಯೋಜಿಸಿದ್ದ `ಬುಡಕಟ್ಟು ಮೂಲ ನಿವಾಸಿಗಳ ಬದುಕು-ಬವಣೆ ಕುರಿತ ವಿಚಾರ ಮಂಥನ’ಕ್ಕೆ ಕೆಎಸ್‍ಆರ್ ಅವರು ಬಿರ್ಸಾಮುಂಡ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಬುಡಕಟ್ಟು ಹಾಗೂ ಶೋಷಿತ…
ಅ.19ರಂದು ಶ್ರೀ ಮಲೈ ಮಹದೇಶ್ವರಸ್ವಾಮಿ ನೂತನ ದೇವಾಲಯ ಉದ್ಘಾಟನೆ
October 16, 2020ಮೈಸೂರು, ಅ.15(ಪಿಎಂ)- ಮೈಸೂರಿನ ಮಾನಂದವಾಡಿ ರಸ್ತೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಲೈ ಮಹದೇಶ್ವರ ಸ್ವಾಮಿ ದೇವಾಲಯವು ಅ.19ರ ಸಂಜೆ 5ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ದೇವಾಲಯದ ನಿರ್ಮಾತೃ ಆರ್.ರಂಗಸ್ವಾಮಿ ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ಶ್ರೀ ಯೋಗನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಶ್ರೀ ಭಾಷ್ಯಂ ಸ್ವಾಮೀಜಿ, ಶಾಸಕ ಎಸ್.ಎ.ರಾಮದಾಸ್ ದೇವಾಲಯವನ್ನು ಉದ್ಘಾಟಿಸುವರು. ಶಿವನ ಸನ್ನಿಧಿಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ತಹಸಿಲ್ದಾರ್ ಕೆ.ಆರ್.ರಕ್ಷಿತ್, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮಾಜಿ…
ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಹೊಸ ಕಾರ್ಯತಂತ್ರ
October 16, 2020ಮೈಸೂರು, ಅ.15(ಆರ್‍ಕೆಬಿ)- ಮುಂಬರುವ ಸಹ ಕಾರ ಸಂಘಗಳು, ಕೆಎಂಎಫ್ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಂಭೀರವಾಗಿ ಪರಿ ಗಣಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢ ಗೊಳಿಸಲು ಹೊಸ ಕಾರ್ಯತಂತ್ರ ರೂಪಿಸಲು ಮೈಸೂ ರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಕಾಂಗ್ರೆಸ್‍ನ ಪ್ರಮುಖ ಮುಖಂಡರ ಸಭೆ ತೀರ್ಮಾ ನಿಸಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿ ಗೊಳಿಸಲು ತಳಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಆರ್.ಧರ್ಮಸೇನಾ, ಅನಿಲ್…
ದಸರಾ ಕಾರ್ಯಕ್ರಮಗಳಲ್ಲಿ ತೀವ್ರ ಕಟ್ಟೆಚ್ಚರ
October 15, 2020ಬೆಂಗಳೂರು,ಅ.14(ಕೆಎಂಶಿ)-ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವ ಪ್ರತಿಯೊಬ್ಬರು ಕೋವಿಡ್ -19 ತಪಾಸಣೆಗೊಳಪಟ್ಟು, ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಪಡೆ ಯುವುದನ್ನು ಕಡ್ಡಾಯಗೊಳಿಸಿ, ರಾಜ್ಯದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಇಂದಿಲ್ಲಿ ಆದೇಶ ಹೊರಡಿಸಿದ್ದಾರೆ. ಕೇಂದ್ರ ಗೃಹ ಇಲಾಖೆ ಆದೇಶದಂತೆ ಆಚರಣೆಯಲ್ಲಿ ಭಾಗವಹಿಸುವ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿ, ಕಲಾವಿದರು, ರಕ್ಷಣಾ ಸಿಬ್ಬಂದಿ ಹಾಗೂ ಮಾಧ್ಯಮದವರು ಒಳಗೊಂಡಂತೆ ಅ.14ರ ನಂತರ ತಪಾಸಣೆಗೊಳಪಟ್ಟು, ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲನೆ ಮಾಡದವರಿಗೆ ಸಮಾರಂಭದ ಯಾವುದೇ ಸಭೆಗಳಿಗೂ…
ನ.1ರವರೆಗೆ ಮೈಸೂರು, ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
October 15, 2020ಮೈಸೂರು, ಅ.14(ಆರ್‍ಕೆ)-ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರವಾಸಿತಾಣಗಳಲ್ಲಿ ನವೆಂಬರ್ 1ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಬಾರಿಯ ನಾಡಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಮೈಸೂರು ಮತ್ತು ಸುತ್ತಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗ ಮಿಸದಂತೆ ಮನವಿ ಮಾಡಿದ್ದಾರೆ….










