ಮೈಸೂರು, ಅ.19(ಎಂಟಿವೈ)- ಮೈಸೂರು ರಿಂಗ್ ರಸ್ತೆ ಅಕ್ಕಪಕ್ಕ ಕಟ್ಟಡ ತ್ಯಾಜ್ಯವೂ ಸೇರಿದಂತೆ ಕಸ ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪಸಿಂಹ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ನಗರವನ್ನು ಮತ್ತಷ್ಟು ಸುಂದರಗೊಳಿಸಲು ಕೇಂದ್ರ ಸರ್ಕಾರ ದಿಂದ ಹೆಚ್ಚಿನ ಅನುದಾನ ತರಲಾಗುತ್ತಿದೆ. ವಿವಿಧ ಯೋಜನೆ ಅನುಷ್ಠಾನಗೊಳಿಸಿದ್ದರೂ ಮೈಸೂರು ನಗರವನ್ನು ಸ್ವಚ್ಛ ಹಾಗೂ ಸುಂದರ…
2ನೇ ದಿನವೂ ಮುಂದುವರೆದ ರೇಷ್ಮೆ ನೇಯ್ಗೆ ಕಾರ್ಖಾನೆ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ
October 20, 2020ಮೈಸೂರು, ಅ.19(ಆರ್‍ಕೆಬಿ)- ಕೆಲಸ ಖಾಯಂಗೊಳಿಸಲು ಒತ್ತಾಯಿಸಿ ಮೈಸೂ ರಿನ ಮಾನಂದವಾಡಿ ರಸ್ತೆಯ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್ ಐಸಿ) ರೇಷ್ಮೆ ನೇಯ್ಗೆ ಕಾರ್ಖಾನೆಯ ಹೊರಗುತ್ತಿಗೆ ಕಾರ್ಮಿಕರು ಎರಡನೇ ದಿನವಾದ ಸೋಮವಾರವೂ ತಮ್ಮ ಪ್ರತಿಭಟನೆ ಮುಂದುವರೆಸಿದರು. ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾ ಯೀಸ್ ಯೂನಿಯನ್ ಪ್ರಧಾನ ಕಾರ್ಯ ದರ್ಶಿ ಅನಿಲ್‍ಕುಮಾರ್ ನೇತೃತ್ವದಲ್ಲಿ ಕಾರ್ಖಾನೆ ಎದುರು ಧರಣಿ ನಡೆಸಿದರು ಹೈಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆ ಯಲ್ಲಿ ಅನುಕಂಪದ ಆಧಾರದಲ್ಲಿ 48 ಮಂದಿಗೆ ಕೆಲಸ ನೀಡಬೇಕೆಂದು ನ್ಯಾಯಾ ಲಯ 2018ರ…
ದಂಡ ಪಡೆದ ಮೇಲೆ ಕನಿಷ್ಠ ಒಂದು ಮಾಸ್ಕ್ ನೀಡಬೇಕಲ್ಲವೇ?
October 20, 2020ಮೈಸೂರು, ಅ. 19- ಮಾಸ್ಕ್ ಧರಿಸ ದವರಿಗೆ ದಂಡ ವಿಧಿಸುವು ದರ ಜೊತೆಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಕಾರ್ಪೊ ರೇಟರ್ ಆರ್.ಸೋಮ ಸುಂದರ್ ಸಲಹೆ ನೀಡಿದ್ದಾರೆ. ಕೊರೊನಾ ಸೋಂಕು ತಡೆಗೆ ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವುದನ್ನು ತಡೆಯಬಹುದಾಗಿದೆ. ಈ ಕಾರಣದಿಂದಾಗಿಯೇ ಮಾಸ್ಕ್ ಧರಿಸ ದವರಿಗೆ ನಗರ ಪ್ರದೇಶದಲ್ಲಿ 250 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ. ದಂಡ ವಿಧಿಸುತ್ತಾರೆ ಎಂಬ ಭಯದಿಂದಲಾದರೂ…
ಪ್ರಾಣಿ ಬಲಿ ನಿರ್ಬಂಧಿಸಿದ್ದ ಒಡಿಶಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
October 20, 2020ನವದೆಹಲಿ, ಅ.19- ಒಡಿಶಾದಲ್ಲಿ ವಾರ್ಷಿಕವಾಗಿ ನಡೆಯುವ ಚತಾರ್ ಯಾತ್ರದಲ್ಲಿ ಪ್ರಾಣಿಬಲಿಯನ್ನು ನಿರ್ಬಂ ಧಿಸಿ ಒಡಿಶಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕಾಳಹಂಡಿ ಜಿಲ್ಲೆಯಲ್ಲಿ ಚತಾರ್ ಯಾತ್ರಾ ಹಬ್ಬದ ಭಾಗವಾಗಿ ಪ್ರಾಣಿ ಬಲಿ ಪದ್ಧತಿ ಇದೆ. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಾಗೂ ನ್ಯಾ. ಎ.ಎಸ್.ಬೋಪಣ್ಣ ಹಾಗೂ ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವನ್ನು ಭವಾನಿ ಶಂಕರ್ ನೈಲ್ ಅವರು ಪ್ರಶ್ನಿಸಿ ಸುಪ್ರೀಂ…
ಕೃಷಿಯಲ್ಲಿ ಪರಿಸರ ಸ್ನೇಹಿ ಆವಿಷ್ಕಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಕರೆ
October 20, 2020ಬೆಂಗಳೂರು, ಅ.19-ಕೃಷಿ ಕ್ಷೇತ್ರದಲ್ಲಿ ನಿರಂತರ ವಾಗಿ ಅವಿಷ್ಕಾರಗಳು ನಡೆಯುತ್ತಿರಬೇಕು. ಆದರೆ ಅವು ಪರಿಸರ ಸ್ನೇಹಿಯಾಗಿರಬೇಕು. ಬೇಸಾಯ ಸುಸ್ಥಿರ ವಾಗಿರಬೇಕು ಎಂದಾದರೆ ರೈತರು ರಸಗೊಬ್ಬರ ಬಳಕೆ ತಗ್ಗಿಸಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಕರೆ ನೀಡಿದ್ದಾರೆ. ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಆಶ್ರಯ ದಲ್ಲಿ ಸಂಘಟಿಸಲಾಗಿರುವ “ಸಿಐಐ ಆಗ್ರೋ & ಫುಡ್ ಟೆಕ್ 2020” ವರ್ಚುವಲ್ ಕಾನ್ಫರೆನ್ಸ್ ಉದ್ದೇಶಿಸಿ ಬೆಂಗ ಳೂರಿನಿಂದ ಮಾತನಾಡಿದ ಸಚಿವರು, `ದೀರ್ಘಕಾಲ ದವರೆಗೆ ಮಣ್ಣಿನ…
ಇಂದು ಮೈಸೂರು ವಿವಿ 100ನೇ ಘಟಿಕೋತ್ಸವ
October 19, 2020ಮೈಸೂರು,ಅ.18(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾ ನಿಲಯದ 100ನೇ ಘಟಿಕೋತ್ಸವ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಆರಂಭ ಗೊಳ್ಳಲಿದ್ದು, ಬೆಳಗ್ಗೆ 11.20ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದಲೇ ಡಿಜಿಟಲ್ ಮಾಧ್ಯಮದ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಶತಮಾನದ ಘಟಿಕೋತ್ಸವ ವಾಗಿರುವುದರಿಂದ ವಿವಿಯ ಕಾರ್ಯಸೌಧ ಕ್ರಾಫರ್ಡ್ ಭವನವನ್ನು ಬಲು ಆಕರ್ಷಕ ವಾಗಿ ಸಿದ್ಧಗೊಳಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರು, ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿ ಸದಸ್ಯರು ಹಾಗೂ 30 ಮಂದಿ ಚಿನ್ನದ ಪದಕ ವಿಜೇತ…
ಮರದ ಅಂಬಾರಿ ಹೊತ್ತು ಯಶಸ್ವಿ ತಾಲೀಮು ನಡೆಸಿದ ಅಭಿಮನ್ಯು
October 19, 2020ಮೈಸೂರು,ಅ.18(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ, ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಅಂಬಾರಿ ಆನೆ ಅಭಿಮನ್ಯುಗೆ ಭಾನುವಾರದಿಂದ ಮರದ ಅಂಬಾರಿ ಹೊರಿಸುವ ತಾಲೀಮು ಆರಂಭಿಸಲಾಯಿತು. ಈ ಸಾಲಿನ ಜಂಬೂಸವಾರಿ ಅ.26ರಂದು ನಡೆಯಲಿದ್ದು, ಇದಕ್ಕಾಗಿ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಅ.2ರಂದು ಅರಮನೆ ಆವರಣ ಪ್ರವೇಶಿಸಿದ್ದ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಆಹಾರ ನೀಡುವ ಮೂಲಕ ಆರೈಕೆ ಮಾಡ ಲಾಗುತ್ತಿದೆ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿರುವ ಅಭಿಮನ್ಯು ಅದಕ್ಕಾಗಿ ಸಜ್ಜಾಗುತ್ತಿದ್ದಾನೆ. ಕಳೆದ 10 ದಿನದಿಂದ ತೊಟ್ಟಿಲೊಂದಿಗೆ 600 ಕೆಜಿ ತೂಕದ…
2021ರ ಫೆಬ್ರವರಿ ವೇಳೆಗೆ ಕೋವಿಡ್-19 ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ: ತಜ್ಞರ ಸಮಿತಿ ಅಭಿಮತ
October 19, 2020ನವದೆಹಲಿ, ಅ.18- ಸೆಪ್ಟೆಂಬರ್ 17ರಿಂದ ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿ ದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣ ಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ. ಕೋವಿಡ್-19 ಪ್ರಗತಿಗೆ ರಾಷ್ಟ್ರೀಯ ಸೂಪರ್ ಮಾಡೆಲ್‍ನ್ನು ವಿಕಸಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಮಿತಿಯನ್ನು ಜೂನ್, 2020ರಂದು ರಚಿಸಿತು. ಪೆÇ್ರ.ಎಂ.ವಿದ್ಯಾಸಾಗರ್, ಎಫ್‍ಆರ್‍ಎಸ್ (ಐಐಟಿ ಹೈದ್ರಾ ಬಾದ್ ಮುಖ್ಯಸ್ಥ) ಪೆÇ್ರ….
ರಾಜ್ಯೋತ್ಸವ ನಂತರ ಸಚಿವ ಸ್ಥಾನದಿಂದ ಸಿ.ಟಿ.ರವಿ ಮುಕ್ತ?
October 19, 2020ಬೆಂಗಳೂರು, ಅ.18- ನವೆಂಬರ್ 1ರ ಕನ್ನಡ ರಾಜ್ಯೋತ್ಸವ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನ ಜವಾಬ್ದಾರಿಯಿಂದ ಸಿ.ಟಿ.ರವಿಯವರನ್ನು ಮುಕ್ತಗೊಳಿಸುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡ ಹಿನ್ನೆಲೆಯಲ್ಲಿ ಕಳೆದ ಅ.2 ರಂದು ಸಿ.ಟಿ.ರವಿಯವರು ಸಲ್ಲಿಸಿದ್ದ ರಾಜೀನಾಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುಂದಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿಯವರು ಜೆ.ಪಿ.ನಡ್ಡಾ ತಂಡಕ್ಕೆ ಸೇರಿದ ನಂತರ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ, ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಸಿ.ಟಿ. ರವಿ…
ಆನ್‍ಲೈನ್ ಬಸ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಗಣನೀಯ ಏರಿಕೆ
October 19, 2020ಬೆಂಗಳೂರು,ಅ.18-ಕೊರೊನಾ ಆತಂ ಕದ ನಡುವಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೊನಾ ಸೋಂಕಿಗೆ ಹೆದರಿ ಇಷ್ಟು ದಿನ ಬಸ್‍ಗಳಲ್ಲಿ ಪ್ರಯಾಣಿಸಲು ಹಿಂಜ ರಿಯುತ್ತಿದ್ದ ಜನರು ನಿಧಾನಗತಿಯಲ್ಲಿ ಮತ್ತೆ ಬಸ್ ಪ್ರಯಾಣದತ್ತ ಮುಖ ಮಾಡುತ್ತಿದ್ದು, ಆನ್‍ಲೈನ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಟಿಕೆಟ್ ಬುಕಿಂಗ್ ಸಂಖ್ಯೆ ಯಲ್ಲಿ ಏರಿಕೆಯಾಗುತ್ತಿದೆ ಎಂದು ರೆಡ್ ಬಸ್ ಸಂಸ್ಥೆ ತಿಳಿಸಿದೆ. ಅ.2ರವರೆಗೂ ವಾರಾಂತ್ಯದ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು,…










