2021ರ ಫೆಬ್ರವರಿ ವೇಳೆಗೆ ಕೋವಿಡ್-19 ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ: ತಜ್ಞರ ಸಮಿತಿ ಅಭಿಮತ
ಮೈಸೂರು

2021ರ ಫೆಬ್ರವರಿ ವೇಳೆಗೆ ಕೋವಿಡ್-19 ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ: ತಜ್ಞರ ಸಮಿತಿ ಅಭಿಮತ

October 19, 2020

ನವದೆಹಲಿ, ಅ.18- ಸೆಪ್ಟೆಂಬರ್ 17ರಿಂದ ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿ ದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣ ಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ.

ಕೋವಿಡ್-19 ಪ್ರಗತಿಗೆ ರಾಷ್ಟ್ರೀಯ ಸೂಪರ್ ಮಾಡೆಲ್‍ನ್ನು ವಿಕಸಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಮಿತಿಯನ್ನು ಜೂನ್, 2020ರಂದು ರಚಿಸಿತು.

ಪೆÇ್ರ.ಎಂ.ವಿದ್ಯಾಸಾಗರ್, ಎಫ್‍ಆರ್‍ಎಸ್ (ಐಐಟಿ ಹೈದ್ರಾ ಬಾದ್ ಮುಖ್ಯಸ್ಥ) ಪೆÇ್ರ. ಎಂ.ಅಗರ್‍ವಾಲ್ (ಐಐಟಿ ಕಾನ್ಫುರ ಮುಖ್ಯಸ್ಥ) ಪೆÇ್ರ. ಬಿ.ಬಾಗ್ಚಿ (ಐಐಎಸ್‍ಸಿ ಬೆಂಗಳೂರು) ಪೆÇ್ರ.ಎ.ಬೊಸ್ (ಎಸ್‍ಐಸ್‍ಐ ಕೊಲ್ಕತ್ತಾ) ಡಾ. ಜಿ.ಕಂಗ್, ಎಫ್‍ಆರ್‍ಎಸ್ (ಸಿಎಂಸಿ ವೆಲ್ಲರೂ) ಲೆಫ್ಟಿನೆಂಟ್ ಜನರಲ್ ಕಾನಿಟ್ಕರ್ ಮತ್ತು ಪೆÇ್ರ.ಎಸ್.ಕೆ.ಪಾಲ್
(ಐಎಸ್‍ಐ ಕೊಲ್ಕತ್ತಾ) ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಮುಂಬರುವ ಹಬ್ಬದ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಮತ್ತು ಮುನ್ನೆಚ್ಚರಿಕಾ ಕ್ರಮಗಳಲ್ಲಿ ಉದಾಸೀನತೆಯಿಂದಾಗಿ ತಿಂಗಳೊಳಗೆ 26 ಲಕ್ಷ ಸೋಂಕುಗಳಿಗೆ ಕಾರಣವಾಗಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿರುವುದನ್ನು ಉದಾಹರಣೆಯಾಗಿ ನೀಡಿರುವ ಸಮಿತಿ,ಲಾಕ್ ಡೌನ್ ಆರಂಭದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಗಳು ಉಳಿದಿವೆ. ನಿರ್ಲಕ್ಷ್ಯ ಹೆಚ್ಚಿನ ತೊಂದರೆಗೆ ಕಾರಣವಾಗಿದೆ ಎಂದು ತಿಳಿಸಿದೆ. ಮೇ-ಜೂನ್ ತಿಂಗಳಲ್ಲಿ ಕಾರ್ಮಿಕರ ವಲಸೆ ಕೋವಿಡ್-ಪ್ರಕರಣಗಳ ಹೆಚ್ಚಾಗುವಿಕೆಗೆ ಕಾರಣವಾಗಿಲ್ಲ, ಲಾಕ್‍ಡೌನ್ ಮೊದಲು ವಲಸೆಗೆ ಅನುಮತಿಸಿದ್ದರೆ ಗಮನಾರ್ಹ ಪ್ರತಿಕೂಲ ಪರಿಣಾಮ ಉಂಟಾಗುತಿತ್ತು ಎಂದು ಸಮಿತಿ ಹೇಳಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ, ಮುಂದಿನ ವರ್ಷದ ಫೆಬ್ರವರಿ ಅಂತ್ಯದ ವೇಳೆಗೆ 40,000ಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಬಹುದು ಎಂದು ತಜ್ಞರ ಸಮಿತಿ ತಿಳಿಸಿದೆ.

ಚಳಿಗಾಲದಲ್ಲಿ 2ನೇ ಅಲೆ ಸಾಧ್ಯತೆ ತಳ್ಳಿಹಾಕುವಂತಿಲ್ಲ: ವಿ.ಕೆ.ಪೌಲ್
ನವದೆಹಲಿ, ಅ.18- ಕೋವಿಡ್-19 ರೋಗ ಹರಡುವಿಕೆ ಹೆಚ್ಚಿನ ರಾಜ್ಯಗಳಲ್ಲಿ ಸ್ಥಿರವಾಗಿರುವುದರಿಂದ ಕಳೆದ 3 ವಾರಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವು ಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿರುವ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಚಳಿಗಾಲ ದಲ್ಲಿ 2ನೇ ಅಲೆ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.

ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿ ಸುವ ತಜ್ಞರ ಸಮನ್ವಯದ ಮುಖ್ಯಸ್ಥರೂ ಆಗಿರುವ ಪೌಲ್, ಒಮ್ಮೆ ಕೋವಿಡ್-19 ಲಸಿಕೆ ಲಭ್ಯವಾದರೆ, ಅದನ್ನು ನಾಗರಿಕರಿಗೆ ತಲುಪಿಸಲು ಸಾಕಷ್ಟು ಸಂಪನ್ಮೂಲಗಳಿವೆ ಎಂದರು. ದೇಶದಲ್ಲಿ ಕಳೆದ 3 ವಾರಗಳಲ್ಲಿ ಹೊಸ ಪ್ರಕರಣ ಗಳು ಮತ್ತು ಸಾವಿನ ಪ್ರಕರಣಗಳ ಸಂಖ್ಯೆ ಕುಸಿದಿದೆ. ಆದರೂ, ಕೇರಳ, ಕರ್ನಾಟಕ, ರಾಜಸ್ಥಾನ, ಛತ್ತೀಸ್‍ಗಢ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮತ್ತು ಮೂರ್ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಲೂ ಸಹ ಸೋಂಕು ಹೆಚ್ಚಾಗುತ್ತಿದೆ ಎಂದು ಪೌಲ್ ತಿಳಿಸಿದರು. ಪೌಲ್ ಪ್ರಕಾರ, ದೇಶ ಈಗ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ ಆದರೆ, ದೇಶವು ಇನ್ನೂ ಬಹಳ ದೂರ ಸಾಗ ಬೇಕಿದೆ ಏಕೆಂದರೆ ಶೇ.90ರಷ್ಟು ಜನರು ಇನ್ನೂ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಚಳಿ ಗಾಲದ ಆರಂಭದೊಂದಿಗೆ 2ನೇ ಅಲೆಯನ್ನು ನೋಡ ಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೌಲ್, ಯುರೋಪಿನ ರಾಷ್ಟ್ರಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಕಂಡು ಬರುತ್ತಿರುವುದನ್ನು ನೋಡುತ್ತಿದ್ದೇವೆ.ದೇಶದಲ್ಲಿ 2ನೇ ಅಲೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಈ ಸೋಂಕಿನ ಬಗ್ಗೆ ಇನ್ನೂ ತಿಳಿಯುತ್ತಿರುವುದಾಗಿ ತಿಳಿಸಿದರು.

 

 

Translate »