ಮೈಸೂರು,ಅ.20(ಪಿಎಂ)-ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ (ಎಸ್‍ಸಿ-ಎಸ್‍ಟಿ) ಸೇರಿದ ಐಟಿಐ ವಿದ್ಯಾರ್ಥಿಗಳಿಗೆ ಈ ಮೊದಲಿನಂತೆ ಸಮವಸ್ತ್ರ, ಟೂಲ್‍ಕಿಟ್ ಹಾಗೂ ಲ್ಯಾಪ್‍ಟಾಪ್ ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ (ಎಐಡಿವೈಓ) ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿ ಗಳು ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರ ಪ್ರತಿವರ್ಷ ಎಸ್‍ಸಿ-ಎಸ್‍ಟಿ ವರ್ಗಕ್ಕೆ ಸೇರಿದ ಐಟಿಐ ವಿದ್ಯಾರ್ಥಿಗಳಿಗೆ ಟೂಲ್‍ಕಿಟ್, ಸಮವಸ್ತ್ರ ಮತ್ತು ಲ್ಯಾಪ್‍ಟಾಪ್ ನೀಡುತ್ತಿತ್ತು. ಆದರೆ 2018-2020ನೇ ಸಾಲಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ…
ರೇಷ್ಮೆ ಕಾರ್ಖಾನೆ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ 3ನೇ ದಿನ
October 21, 2020ಮೈಸೂರು, ಅ.20(ಪಿಎಂ)- ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‍ಐಸಿ) ಕೆಲ ಖಾಯಂ ಹಾಗೂ ಹೊರ ಗುತ್ತಿಗೆ ಕಾರ್ಮಿಕರು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾರ್ಖಾನೆ ಆವರಣದಲ್ಲಿ ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಶನಿ ವಾರ ಪ್ರತಿಭಟನೆ ಆರಂಭಿಸಿದ್ದರು. ಸೇವೆಯಲ್ಲಿರು ವಾಗ ಕಾರ್ಮಿಕರು ಮೃತರಾದರೆ ಅವರ ಅವಲಂಬಿ ತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಹೊರಗುತ್ತಿಗೆಯ 48…
ಹಿರಿಯ ಕಾರ್ಮಿಕ ಹೋರಾಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ ಕೋವಿಡ್‍ನಿಂದ ನಿಧನ
October 21, 2020ಕಲಬುರಗಿ, ಅ.20- ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾರ್ಮಿಕ ಹೋರಾಟಗಾರ, ರೈತ ಮುಖಂಡ ಮಾರುತಿ ಮಾನ್ಪಡೆ (65) ನಿಧನರಾಗಿದ್ದಾರೆ. ಕೋವಿಡ್ ದೃಢಪಟ್ಟ ನಂತರ ಕಲ ಬುರಗಿಯ ಜಿಮ್ಸ್ ಹಾಗೂ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾರುತಿ ಮಾನ್ಪಡೆ ಮೂರು ದಿನಗಳಿಂದ ವೆಂಟಿಲೇಟರ್‍ನಲ್ಲಿದ್ದರು. ಕರ್ನಾಟಕ ಪ್ರಾಂತ ರೈತಸಂಘದ ಉಪಾ ಧ್ಯಕ್ಷರಾಗಿದ್ದ, ಸಿಪಿಐ(ಎಂ) ಪಕ್ಷದ ಸದಸ್ಯರೂ ಆಗಿದ್ದರು. ಮಾನ್ಪಡೆ 4 ದಶಕಗಳಿಂದ ರೈತಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದರು. ಮಾನ್ಪಡೆ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಮಲಾಪುರದ…
ಮೈಸೂರಲ್ಲಿ `ಅಂಬಾರಿ’ ಸೇವೆಗೆ ಅಡ್ಡಿಯಾದ ದೀಪಾಲಂಕಾರ!
October 21, 2020ಮೈಸೂರು, ಅ.20(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ `ಅಂಬಾರಿ’ ವೇಳೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವ ಮೈಸೂರು ನಗರದ ಸೌಂದÀರ್ಯ ಕಣ್ತುಂಬಿಕೊಳ್ಳಲು ಕಾದಿದ್ದ ಪ್ರವಾಸಿಗರು ಮತ್ತು ಮೈಸೂರಿಗರಿಗೆ ನಿರಾಸೆಯಾಗಿದೆ. ವಿದ್ಯುತ್ ತಂತಿ ಹಾಗೂ ದೀಪಾಲಂಕಾರಕ್ಕಾಗಿ ಜೋಡಿಸಿದ ವೈರ್‍ಗಳು ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿರುವುದರಿಂದಾಗಿ ಈ ಬಾರಿ ಅಂಬಾರಿ ಸಂಚಾರ ವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ) ಈ ಬಾರಿಯೂ ದಸರೆ ವೇಳೆ ಡಬ್ಬಲ್‍ಡೆಕ್ಕರ್ ಬಸ್ `ಅಂಬಾರಿ’ ಸಂಚರಿಸಲು ಕ್ರಮ ಕೈಗೊಂಡಿತ್ತು. ಛಾವಣಿರಹಿತÀ ಮಹಡಿ…
ಕೋವಿಡ್ ಸುರಕ್ಷತಾ ಮಾರ್ಗಸೂಚಿ ಜಾಗೃತಿ ಅಭಿಯಾನಕ್ಕೆ ಚಾಲನೆ
October 21, 2020ಮೈಸೂರು, ಅ.20- ದಸರಾ ಮತ್ತು ಆಯುಧ ಪೂಜೆ ಸಂದರ್ಭದಲ್ಲಿ ಕೋವಿಡ್ -19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜಾಗೃತಿ ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿತು. ಈ ಅಭಿಯಾನದಲ್ಲಿ ಉಜ್ಜೀವನ್ ಎಸ್‍ಎಫ್‍ಬಿ ವ್ಯಾನ್‍ಗಳು ಕರ್ನಾಟಕದ ಸಾಂಪ್ರದಾಯಿಕ ಗೊಂಬೆಗಳನ್ನು ಪ್ರದರ್ಶಿಸ ಲಿವೆ. ರಾಜ್ಯದ 16 ನಗರಗಳಲ್ಲಿ ಸಂಚರಿಸುವ ಈ ವಾಹನಗಳು ಕೋವಿಡ್-19 ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಿವೆ. ಉಜ್ಜೀವನ್ ಎಸ್‍ಎಫ್‍ಬಿ ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ…
ಎಸ್‍ಟಿ ಮೀಸಲು ಶೇ.7.50ಕ್ಕೆ ಹೆಚ್ಚಿಸಲು ಆಗ್ರಹಿಸಿ ಇಂದಿನಿಂದ ಪ್ರಸನ್ನಾನಂದ ಶ್ರೀ ಅಹೋರಾತ್ರಿ ಧರಣಿ
October 21, 2020ಮೈಸೂರು, ಅ.20(ಪಿಎಂ)- ಪರಿಶಿಷ್ಟ ಪಂಗಡಕ್ಕೆ ಇದೇ ಅ.31ರೊಳಗೆ ಮೀಸ ಲಾತಿ ಪ್ರಮಾಣವನ್ನು ಶೇ.7.50ಕ್ಕೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾ ಯಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂ ಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅ.21 ರಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಿದ್ದು, ಸಮುದಾಯ ಹೆಚ್ಚಿನ ಬೆಂಬಲ ನೀಡಬೇಕೆಂದು ಕರ್ನಾಟಕ ರಾಜ್ಯ ನಾಯ ಕರ ಹಿತರಕ್ಷಣಾ ವೇದಿಕೆ ಕೋರಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ…
ಕರ್ನಾಟಕದ ಮಾಜಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ಮೈವಿವಿ ಡಾಕ್ಟರೇಟ್ ಪ್ರದಾನ
October 21, 2020ಮೈಸೂರು, ಅ.20(ಆರ್‍ಕೆಬಿ)- ಕರ್ನಾಟಕದ ಮಾಜಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಸೋಮವಾರ ವಿವಿ ಕ್ರಾಫರ್ಡ್ ಭವನದಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿತು. ಸಂಜೀವ್‍ಕುಮಾರ್ ಅವರು ವಿವಿಯ `ಅಭಿವೃದ್ಧಿ ಅಧ್ಯಯನಗಳು’ ವಿಭಾಗದಲ್ಲಿ ಶ್ರೀಜಯದೇವರಾಜ್ ಅರಸ್ ಮಾರ್ಗದರ್ಶನದಲ್ಲಿ ಮಂಡಿಸಿದ MGNREGA-Rights, Processes and Sustainable Livelihood: A Critical Study in Karnataka’ಮಹಾಪ್ರಬಂಧಕ್ಕೆ ಮೈವಿವಿ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.
ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಆಗ್ರಹ-ಪ್ರತಿಭಟನೆ
October 21, 2020ಮೈಸೂರು, ಅ.20(ಪಿಎಂ)- ನಂಜನಗೂಡು ತಾಲೂಕು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಂಪನಿಗೆ ಕೆಐಎಡಿಬಿ ಮೂಲಕ ಜಮೀನು ನೀಡಿದ ರೈತರ ಮಕ್ಕಳಿಗೆ ಕಂಪನಿಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಇಮ್ಮಾವು ಗ್ರಾಮದಲ್ಲಿ 175 ಎಕರೆಗೂ ಹೆಚ್ಚಿನ ಭೂಮಿಯನ್ನು ಏಷ್ಯನ್ ಪೇಂಟ್ಸ್ ಕಂಪನಿಗೆ ನೀಡಲು ರೈತರಿಂದ ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಂಡಿತು. ಈ ವೇಳೆ ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದವರಿಗೆ…
ಪ್ರಸ್ತುತ ಜಾಗತಿಕ ಮಟ್ಟದ ಕೌಶಲ್ಯಕ್ಕೆ ನೂತನ ಶಿಕ್ಷಣ ನೀತಿ ಒತ್ತು
October 20, 2020ಮೈಸೂರು,ಅ.19(ಪಿಎಂ)-ಬದಲಾದ ಉದ್ಯೋಗಗಳ ಸ್ವರೂಪಕ್ಕೆ ಹೊಂದಿ ಕೊಳ್ಳುವಂತೆ ಯುವ ಪದವೀಧರರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‍ಇಪಿ-2020) ಇದಕ್ಕೆ ಪೂರಕವಾಗಿದ್ದು, ಶಿಕ್ಷಣ ವ್ಯವಸ್ಥೆಯ ಬಹು ಆಯಾಮದ ವಿಧಾನಕ್ಕೆ ಇದು ಹೆಚ್ಚಿನ ಉತ್ತೇಜನ ನೀಡಲಿದೆ. ಜೊತೆಗೆ ಏಕಕಾಲದಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ಸ್ಥಳೀಯ ಸಂಸ್ಕøತಿ ಅಧ್ಯಯನಕ್ಕೂ ಅನುವು ಮಾಡಿಕೊಡಲಿದೆ ಎಂದು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿ (ಕ್ರಾಫರ್ಡ್ ಭವನ) ವಿವಿಯಿಂದ ಸೋಮವಾರ ಹಮ್ಮಿಕೊಂಡಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿಗಳು…
ನಟಿಯರಾದ ರಾಗಿಣಿ, ಸಂಜನಾಗೆ ಜಾಮೀನು ನೀಡಬೇಕು, ಡಿಜೆ ಹಳ್ಳಿ ಪ್ರಕರಣದ ಬಂಧಿತರ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಜಡ್ಜ್, ಅಧಿಕಾರಿಗಳ ಸ್ಫೋಟಿಸುವ ಬೆದರಿಕೆ
October 20, 2020ಬೆಂಗಳೂರು, ಅ. 19- ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರಿಗೆ ಜಾಮೀನು ನೀಡಬೇಕು. ಡಿಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮತ್ತು ಪೊಲೀಸ್ ಆಯುಕ್ತರ ಕಚೇರಿಗೆ ಬೆದರಿಕೆ ಪತ್ರಗಳ ಜೊತೆ ಕಿಡಿಗೇಡಿಗಳು ಸ್ಫೋಟಕವನ್ನು ರವಾನೆ ಮಾಡಿದ್ದಾರೆ. ಸಿಟಿ ಸಿವಿಲ್ ಕೋರ್ಟ್‍ಗೆ ಬಂದಿರುವುದು ಹುಸಿ ಸ್ಫೋಟಕ ವಲ್ಲ, ಅದು ಜೀವಂತ ಡಿಟೋನೇಟರ್ ಎಂದು ತಜ್ಞರು ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ…










