ಪ್ರಸ್ತುತ ಜಾಗತಿಕ ಮಟ್ಟದ ಕೌಶಲ್ಯಕ್ಕೆ ನೂತನ ಶಿಕ್ಷಣ ನೀತಿ ಒತ್ತು
ಮೈಸೂರು

ಪ್ರಸ್ತುತ ಜಾಗತಿಕ ಮಟ್ಟದ ಕೌಶಲ್ಯಕ್ಕೆ ನೂತನ ಶಿಕ್ಷಣ ನೀತಿ ಒತ್ತು

October 20, 2020

ಮೈಸೂರು,ಅ.19(ಪಿಎಂ)-ಬದಲಾದ ಉದ್ಯೋಗಗಳ ಸ್ವರೂಪಕ್ಕೆ ಹೊಂದಿ ಕೊಳ್ಳುವಂತೆ ಯುವ ಪದವೀಧರರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‍ಇಪಿ-2020) ಇದಕ್ಕೆ ಪೂರಕವಾಗಿದ್ದು, ಶಿಕ್ಷಣ ವ್ಯವಸ್ಥೆಯ ಬಹು ಆಯಾಮದ ವಿಧಾನಕ್ಕೆ ಇದು ಹೆಚ್ಚಿನ ಉತ್ತೇಜನ ನೀಡಲಿದೆ. ಜೊತೆಗೆ ಏಕಕಾಲದಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ಸ್ಥಳೀಯ ಸಂಸ್ಕøತಿ ಅಧ್ಯಯನಕ್ಕೂ ಅನುವು ಮಾಡಿಕೊಡಲಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿ (ಕ್ರಾಫರ್ಡ್ ಭವನ) ವಿವಿಯಿಂದ ಸೋಮವಾರ ಹಮ್ಮಿಕೊಂಡಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿಗಳು ತಮ್ಮ ಕಚೇರಿಯಿಂದ ಆನ್‍ಲೈನ್ ಮೂಲಕ ಹಿಂದಿ ಭಾಷೆಯಲ್ಲಿ ಸುಮಾರು 25 ನಿಮಿಷ ಘಟಿಕೋತ್ಸವ ಭಾಷಣ ಮಾಡಿದರು. ಎನ್‍ಇಪಿ-2020 ಶಿಕ್ಷಣ ಕ್ಷೇತ್ರದಲ್ಲಿ ಮೂಲ ಭೂತ ಬದಲಾವಣೆ ತರುವ ಜೊತೆಗೆ ಯುವ ಸಮುದಾಯವನ್ನು ಸ್ಪರ್ಧಾತ್ಮಕ ಜಗತ್ತಿಗೆ ಕೊಂಡೊಯ್ಯಲಿದೆ. ಪ್ರಿ-ನರ್ಸರಿಯಿಂದ ಹಿಡಿದು ಪಿಹೆಚ್.ಡಿಯವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಬದಲಾವಣೆ ತರುವ ಆಶಯದಲ್ಲಿ ನೂತನ ಎನ್‍ಇಪಿ ರೂಪುಗೊಂಡಿದೆ. ಎನ್‍ಇಪಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೈಸೂರು ವಿವಿ ಕೆಲ ಕಾರ್ಯಕ್ರಮಗಳನ್ನು ರೂಪಿಸಿರುವುದು ಸಂತಸ ಉಂಟು ಮಾಡಿದೆ. ಜಾಗತಿಕ ತಂತ್ರಜ್ಞಾನದ ಮೂಲಕ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸಲು ನೂತನ ಎನ್‍ಇಪಿ ಸಹಕಾರಿಯಾಗಲಿದೆ ಎಂದು ಅಭಿ ಪ್ರಾಯಪಟ್ಟರು. ಸ್ಥಳೀಯ ಸಂಸ್ಕøತಿ, ಕಲೆ ಉತ್ತೇ ಜಿಸುವ ಜೊತೆಗೆ ಸಾಮಾಜಿಕ ವಿಷಯಗಳ ಅಧ್ಯಯನಕ್ಕೆ ವಿವಿ ಉತ್ತೇಜನ ನೀಡಬೇಕು. ನವ ಉದ್ಯಮಿಗಳಿಗೆ ಉತ್ತೇಜನ ನೀಡುವಂತಹ ಕೇಂದ್ರಗಳನ್ನು ಆರಂಭಿಸಲು ಮೈಸೂರು ವಿವಿ ಮುಂದೆ ಬರಬೇಕು. ಜೊತೆಗೆ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಿ, ಉದ್ಯಮ ಹಾಗೂ ಸಂಸ್ಥೆಗಳ ನಡುವಿನ ಅಂತರ-ಶಿಸ್ತಿನ ಅಧ್ಯಯನ ಹಾಗೂ ಸಂಶೋಧನೆಗೆ ಪೂರಕ ವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಗುರಿ ಕೇವಲ ಪದವಿ ಪಡೆಯಲು ಸೀಮಿತವಾಗದೇ ರಾಷ್ಟ್ರದ ಸೇವೆಗೆ ಪೂರಕವಾಗಿರಬೇಕು. ಜೊತೆಗೆ ಜ್ಞಾನ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸೀಮಿತ ರೇಖೆಯಿಂದ ಹೊರಬರಬೇಕು. ವೈಯಕ್ತಿಕ ಶಕ್ತಿ ಮತ್ತು ಸಾಮರ್ಥ್ಯದ ಆಧಾರದಲ್ಲಿ ಉನ್ನತ ಮಟ್ಟಕ್ಕೇರಲು ಶ್ರಮಿಸಬೇಕು. ವಿದ್ಯಾರ್ಥಿಗಳು ಆತ್ಮಾವಲೋಕನದೊಂ ದಿಗೆ ತಮ್ಮ ಸಾಮಥ್ರ್ಯ ಅರಿತುಕೊಳ್ಳಬೇಕು. ಇದರಿಂದ ಭವಿಷ್ಯದ ಜೀವನ ಉತ್ತಮವಾಗಿ ಸಲು ಸಹಕಾರಿಯಾಗು ತ್ತದೆ. ಭಾರತ, ಶ್ರಮ ವಹಿಸುವ ಎಲ್ಲರಿಗೂ ಅವಕಾಶ ನೀಡುವಷ್ಟು ಸಮೃದ್ಧವಾಗಿದೆ ಎಂದರು. ಕೋವಿಡ್-19ರ ಸಂದರ್ಭದಲ್ಲೂ ಹಲವು ಉತ್ಸಾಹಿ ಯುವ ಜನರು ನವ ಉದ್ಯಮಗಳನ್ನು ಆರಂಭಿಸಿದ್ದಾರೆ. ಆ ಮೂಲಕ ಸ್ವಾಲಂಭಿಯಾಗಲು ಹೊರಟ್ಟಿದ್ದಾರೆ. ಇದು ಉತ್ತಮ ಬೆಳ ವಣಿಗೆಯಾಗಿದ್ದು, ಪ್ರತಿಯೊಬ್ಬರ ಇಂತಹ ವೈಯಕ್ತಿಕ ಬೆಳವಣಿಗೆ ದೇಶದ ಬೆಳವಣಿ ಗೆಯೂ ಆಗಿದೆ. ನೀವು ಸ್ವಾವಲಂಬಿಯಾದರೆ ದೇಶವೂ ಸ್ವಾವಲಂಬಿಯಾಗಲಿದೆ ಎಂದರು.

ಅಪ್ಪಾ… ಐ ಲವ್ ಯು…
ಮೈಸೂರು,ಅ.19(ಆರ್‍ಕೆಬಿ)-ಮೈಸೂರು ವಿವಿ ಘಟಿಕೋತ್ಸವದಲ್ಲಿ ಎಂ.ಎ. ರಾಜ್ಯ ಶಾಸ್ತ್ರ ವಿಭಾಗದಲ್ಲಿ 2 ಚಿನ್ನದ ಪದಕ ಗಳಿಸಿದ ಅಂಧ ವಿದ್ಯಾರ್ಥಿನಿ ಕಾವ್ಯ ಎಸ್.ಭಟ್ ಇಂದು ಪದಕ ಪಡೆದ ಸಂತಸದ ನಡುವೆ ಭಾವುಕರಾ ದರು. ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡ ಅವರು ತನ್ನ ಅಪ್ಪನೇ ನನಗೆ ಗೆಳೆಯ, ಮಾರ್ಗದರ್ಶಕ ಮತ್ತು ದೇವರಾಗಿದ್ದರು. ಇಂದಿನ ನನ್ನ ಗೆಲುವಿಗೆ ಅಪ್ಪನೇ ಪ್ರೇರಣೆ. ಇಂತಹ ಸಂದರ್ಭದಲ್ಲಿ ನನ್ನಪ್ಪ ಜೊತೆಗಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು. ಬ್ರೈನ್ ಟ್ಯೂಮರ್ ಆಗಿದ್ದರೂ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು. ನನ್ನೊಂದಿಗೆ ಓದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಸಂಗೀತದಲ್ಲಿ ನಾನು ಸಾಧನೆ ಮಾಡಬೇಕೆಂಬ ಆಸೆ ಅವರಿಗಿತ್ತು. ಹೀಗಾಗಿಯೇ ಕರ್ನಾಟಕ ಸಂಗೀತದಲ್ಲಿ ಜೂನಿಯರ್, ಸೀನಿ ಯರ್ ಮುಗಿಸಿದೆ. ಸದಾ ನನ್ನ ಕಣ್ಣುಗಳಂ ತಿದ್ದ ಅಪ್ಪ ಇಲ್ಲ ಎಂದು ಭಾವುಕರಾದರು.

ಅಂಧರಿಗೆ ಸಂಗೀತ ಕ್ಷೇತ್ರವೊಂದೇ ಅಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡ ಬಹುದು ಎಂಬುದನ್ನು ತೋರಿಸಬೇಕು ಎಂಬ ನನ್ನ ಗುರಿ ಚಿನ್ನದ ಪದಕ ಪಡೆಯು ವುದರೊಂದಿಗೆ ಸಫಲವಾಗಿದೆ ಎಂಬುದು ಕಾವ್ಯ ಅವರ ಅಭಿಪ್ರಾಯ.

ವಿಶೇಷ ಚೇತನರ ಜೀವನವೆಂದರೆ ಇನ್ನೊ ಬ್ಬರ ಮೇಲೆ ಆಸರೆಯಾಗಿ ಬದುಕಲು ನನಗಿಷ್ಟ ವಿಲ್ಲ. ಎಲ್ಲರಂತೆ ನಾನೂ ಬದುಕು ನಡೆಸಬೇಕು. ಅದಕ್ಕೆಂದೇ ನಾನು ರಾಜ್ಯಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದರು. ಬೋಧನ ಕ್ಷೇತ್ರದ ಬಗ್ಗೆ ಅಪಾರ ಇಷ್ಟ ಎನ್ನುವ ಕಾವ್ಯ ಅವರು ಎನ್‍ಇಟಿ ಮುಗಿಸಿದ್ದು, ಜೆಆರ್‍ಎಫ್ ಸಿಕ್ಕಿದೆ. ಪಿಹೆಚ್‍ಡಿಗೆ ಪ್ರಯತ್ನಿ ಸಿದ್ದು, ಕೆಪಿಎಸ್‍ಸಿ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತಿರುದಾಗಿ ತಿಳಿಸಿದರು.

ಅನುಪಸ್ಥಿತಿಯಲ್ಲಿ ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಘಟಿಕೋತ್ಸವದಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ ಎಂದು ಘೋಷಿಸಲಾಯಿತು.

ಬಳಿಕ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಸಭಿಕರಿಗೆ ಡಾ.ಸುಧಾಮೂರ್ತಿ ಯವರನ್ನು ಪರಿಚಯಿಸಿ, ಅವರ ಜೀವನ ಹಾಗೂ ಸಾಧನೆಗಳನ್ನು ಅನಾವರಣಗೊಳಿಸಿದರು.

 

 

Translate »