ಮೈಸೂರು, ಅ.19(ಆರ್‍ಕೆಬಿ)- ಕೆಲಸ ಖಾಯಂಗೊಳಿಸಲು ಒತ್ತಾಯಿಸಿ ಮೈಸೂ ರಿನ ಮಾನಂದವಾಡಿ ರಸ್ತೆಯ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್ ಐಸಿ) ರೇಷ್ಮೆ ನೇಯ್ಗೆ ಕಾರ್ಖಾನೆಯ ಹೊರಗುತ್ತಿಗೆ ಕಾರ್ಮಿಕರು ಎರಡನೇ ದಿನವಾದ ಸೋಮವಾರವೂ ತಮ್ಮ ಪ್ರತಿಭಟನೆ ಮುಂದುವರೆಸಿದರು.
ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾ ಯೀಸ್ ಯೂನಿಯನ್ ಪ್ರಧಾನ ಕಾರ್ಯ ದರ್ಶಿ ಅನಿಲ್‍ಕುಮಾರ್ ನೇತೃತ್ವದಲ್ಲಿ ಕಾರ್ಖಾನೆ ಎದುರು ಧರಣಿ ನಡೆಸಿದರು ಹೈಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆ ಯಲ್ಲಿ ಅನುಕಂಪದ ಆಧಾರದಲ್ಲಿ 48 ಮಂದಿಗೆ ಕೆಲಸ ನೀಡಬೇಕೆಂದು ನ್ಯಾಯಾ ಲಯ 2018ರ ಸೆ.15ರಂದು ತೀರ್ಪು ನೀಡಿದೆ. ಈ ತೀರ್ಪಿನಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧೀನ ಕಾರ್ಯದರ್ಶಿ ಗಳು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಿಗೆ ಪತ್ರ ಸಹ ಬರೆದಿದ್ದರೂ ಖಾಯಂ ಮಾಡದೇ ಕಾಲ ದೂಡುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮಲ್ಲಿ ಅನೇಕರು ವಯೋಮಿತಿ ಮೀರುತ್ತಿದ್ದಾರೆಂಬ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ನಿಗಮದಲ್ಲಿ ಸೇವೆಯಲ್ಲಿರುವಾಗ ಮೃತ ಪಟ್ಟ ನೌಕರರ ಅವಲಂಬಿತರಿಗೆ ಅನು ಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಕಾರ್ಮಿಕ ಸಂಘಟನೆಗಳು ಹಾಗೂ ನಿಗಮದ ವ್ಯವಸ್ಥಾಪಕ ಮಂಡಳಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ 1980ರಿಂದ 99ರವರೆಗೆ ನಡೆ ದಿದ್ದು, ಆ ಬಳಿಕ ನಿಗಮ ನಷ್ಟ ಅನುಭವಿ ಸಿದ ಕಾರಣಕ್ಕೆ ಈ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಈ ವೇಳೆ ಅನುಕಂಪದ ಆಧಾರದಲ್ಲಿ ಕೆಲಸ ದೊರೆಯಬೇಕಿದ್ದ ನಾವು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದೇವೆ. ಈಗ ನಿಗಮ ಲಾಭದಾಯಕವಾಗಿ ನಡೆಯು ತ್ತಿರುವ ಹಿನ್ನೆಲೆಯಲ್ಲಿ ನಮ್ಮನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಉಪಮೇಯರ್ ಶೈಲೇಂದ್ರ, ನಗರಪಾಲಿಕೆ ಸದಸ್ಯೆ ಬೇಗಂ ಪಲ್ಲವಿ, ಕಾಂಗ್ರೆಸ್ ಯುವ ಮುಖಂಡ ನವೀನ್ ಇನ್ನಿತರರು ಬಂದು ಬೆಂಬಲ ವ್ಯಕ್ತಪಡಿಸಿದರು. ಕೂಡಲೇ ಅಧಿಕಾರಿಗಳು ಇವರ ಬೇಡಿಕೆ ಈಡೇರಿಸ ದಿದ್ದರೆ ತಾವೂ ಪ್ರತಿಭಟನೆಯಲ್ಲಿ ಪಾಲ್ಗೊ ಳ್ಳುವ ಜೊತೆಗೆ ಬೇಡಿಕೆ ಈಡೇರುವವರೆಗೆ ಸತತ ಹೋರಾಟ ಹಮ್ಮಿಕೊಳ್ಳಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿ ಭಟನೆಯಲ್ಲಿ ಎಸ್.ಕಿಶೋರ್, ನಾಗೇಶ್, ಚಂದ್ರಶೇಖರ್, ರಜನೀಕಾಂತ್, ಮಹದೇವ ಸ್ವಾಮಿ ಇನ್ನಿತರರು ಭಾಗವಹಿಸಿದ್ದರು.