ಮೈಸೂರು, ಅ.19(ಎಂಟಿವೈ)- ಮೈಸೂರು ರಿಂಗ್ ರಸ್ತೆ ಅಕ್ಕಪಕ್ಕ ಕಟ್ಟಡ ತ್ಯಾಜ್ಯವೂ ಸೇರಿದಂತೆ ಕಸ ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪಸಿಂಹ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ನಗರವನ್ನು ಮತ್ತಷ್ಟು ಸುಂದರಗೊಳಿಸಲು ಕೇಂದ್ರ ಸರ್ಕಾರ ದಿಂದ ಹೆಚ್ಚಿನ ಅನುದಾನ ತರಲಾಗುತ್ತಿದೆ. ವಿವಿಧ ಯೋಜನೆ ಅನುಷ್ಠಾನಗೊಳಿಸಿದ್ದರೂ ಮೈಸೂರು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಸಾಧ್ಯವಾಗಿಲ್ಲ. ಪಾಲಿಕೆ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣೆ ವೇಳೆ ಮಾತ್ರ ಚುರುಕಾಗಿರುತ್ತಾರೆ. ಸರ್ವೆ ಮಾಡಲು ಬಂದ ತಂಡವನ್ನು ಸ್ವಚ್ಛವಾಗಿ ರುವ ಸ್ಥಳಗಳಿಗಷ್ಟೇ ಕರೆದೊಯ್ಯಲಾಗು ತ್ತದೆ. ಅನೈರ್ಮಲ್ಯ, ಸ್ವಚ್ಛತೆ ಕಾಣದ ಹಲವು ಬಡಾವಣೆಗಳಿವೆ. ಮೈಸೂರು ನಗರ ಪೂರ್ಣ ಪ್ರಮಾಣದಲ್ಲಿ ಸ್ವಚ್ಛವಾಗಿಲ್ಲ ಎನ್ನುವುದು ಅಧಿಕಾರಿಗಳಿಗೂ ತಿಳಿದಿದೆ. ಆದರೂ ಮೈಸೂ ರಿಗೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ದೊರೆ ತಿದೆ. ಇದಕ್ಕನುಗುಣವಾಗಿ ಕೆಲಸ ಮಾಡಿ ಸ್ವಚ್ಛತೆ ಕಾಪಾಡುವುದರೊಂದಿಗೆ ನಗರ ವನ್ನು ಸುಂದರಗೊಳಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ರಿಂಗ್ ರಸ್ತೆಗೆ ಡಾಂಬರೀಕರಣ ಸೇರಿ ದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರ 168 ಕೋಟಿ ರೂ. ಬಿಡು ಗಡೆ ಮಾಡಿದೆ. ಶೀಘ್ರದಲ್ಲಿಯೇ ಕಾಮ ಗಾರಿ ಆರಂಭವಾಗಲಿದೆ. ಹಲವು ಕೋಟಿ ರೂ. ವೆಚ್ಚ ಮಾಡಿ ರಿಂಗ್ ರಸ್ತೆಯನ್ನು ಅಭಿ ವೃದ್ಧಿ ಮಾಡಿದರೂ ಕೆಲವರು ರಿಂಗ್‍ರಸ್ತೆಯ ಅಕ್ಕಪಕ್ಕ ಕಟ್ಟಡ ತ್ಯಾಜ್ಯ, ಕಸ ಹಾಗೂ ಇನ್ನಿ ತರ ತ್ಯಾಜ್ಯ ಸುರಿಯುತ್ತಿದ್ದಾರೆ. ಇದರಿಂದ ಮೈಸೂರಿನ ಸೌಂದÀರ್ಯಕ್ಕೆ ಧಕ್ಕೆಯಾಗು ತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸ ಬೇಕು. ಹಗಲಾಗಲೀ, ರಾತ್ರಿ ವೇಳೆಯಾಗಲೀ ತ್ಯಾಜ್ಯ ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೈಸೂರು ನಗರದ ಸೌಂದರ್ಯ ಹಾಳಾಗಲಿದೆ. ಈಗಾ ಗಲೇ ರಿಂಗ್ ರಸ್ತೆ ಸುತ್ತಮುತ್ತ ಬಿದ್ದಿರುವ ತ್ಯಾಜ್ಯ ತೆರವುಗೊಳಿಸುವಂತೆ ಸೂಚನೆ ನೀಡ ಲಾಗಿದೆ. ಅಲ್ಲದೆ ತ್ಯಾಜ್ಯ ಸಂಗ್ರಹಕ್ಕಾಗಿ ನಗರ ಪಾಲಿಕೆ ಅಧಿಕಾರಿಗಳು ಪ್ರತ್ಯೇಕ ಸ್ಥಳ ನೀಡು ವಂತೆ ಕೋರಿದ್ದಾರೆ. ಇದಕ್ಕೆ ಕ್ರಮ ಕೈಗೊಂಡು, ಜಿ.ಪಂ ಸಿಇಓ ಸ್ಥಳ ಪರಿಶೀಲನೆ ಮಾಡು ವುದಾಗಿ ತಿಳಿಸಿದ್ದಾರೆ. ಮೈಸೂರು ನಗರ ದಲ್ಲಿ ಸಂಗ್ರಹವಾಗುವ ಕಸದೊಂದಿಗೆ ಹೆಚ್ಚುವರಿಯಾಗಿ 50 ಟನ್ ಕಸ ರಿಂಗ್ ರಸ್ತೆ ಸುತ್ತಮುತ್ತ ಸಂಗ್ರಹವಾಗಬಹುದು. ಅದರ ನಿರ್ವಹಣೆಯೇನು ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದರು.
ವೃತ್ತ, ರಸ್ತೆಗಳಿಗೆ ಮಾಜಿ ಕಾರ್ಪೊರೇಟರ್‍ಗಳ ಹೆಸರು ನಾಮಕರಣಕ್ಕೆ ಪ್ರತಾಪ್ ಸಿಂಹ ಆಕ್ಷೇಪ
ಮೈಸೂರು, ಅ.19(ಎಂಟಿವೈ)- ಮೈಸೂರಿನ ವೃತ್ತ, ರಸ್ತೆಗಳಿಗೆ ಪಾಲಿಕೆ ಮಾಜಿ ಸದಸ್ಯರ ಹೆಸರು ನಾಮ ಕರಣ ಮಾಡುವುದು ಸರಿಯಾದ ಕ್ರಮವಲ್ಲ. ದೊಡ್ಡ ಸಾಧನೆ ಮಾಡಿರುವವರ ಹೆಸರನ್ನು ಮಾತ್ರ ನಾಮ ಕರಣ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಲಲಿತಮಹಲ್ ರಸ್ತೆಯ ವೃತ್ತಕ್ಕೆ ಪಾಲಿಕೆ ಮಾಜಿ ಸದಸ್ಯರೊಬ್ಬರ ಹೆಸರಿಡಲು ಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಕೈಗೊಂಡಿರುವ ನಿರ್ಣಯವನ್ನು ತಿರಸ್ಕರಿ ಸುವಂತೆ ಸಂಸದ ಪ್ರತಾಹ ಸಿಂಹ ಸೂಚಿಸಿದ್ದಾರೆ.
ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಲಲಿತ ಮಹಲ್ ರಸ್ತೆಯ ವೃತ್ತವೊಂದಕ್ಕೆ ಪಾಲಿಕೆ ಮಾಜಿ ಸದಸ್ಯರೊಬ್ಬರ ಹೆಸರಿಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಆ ವೃತ್ತ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಡುವುದರಿಂದ ಸ್ಥಳೀಯ ಸಂಸ್ಥೆಗಳು ನಾಮಕರಣ ಮಾಡಲು ಬರುವುದಿಲ್ಲ. ಮೈಸೂರು ನಗರ ಪಾಲಿಕೆಯಲ್ಲಿ 65 ಸದಸ್ಯರಿದ್ದಾರೆ. ಎಲ್ಲರೂ ಒಂದಲ್ಲಾ ಒಂದು ದಿನ ಸಾಯಲೇಬೇಕು. ಮೃತಪಟ್ಟ ಪಾಲಿಕೆ ಮಾಜಿ ಸದಸ್ಯರೆಲ್ಲರ ಹೆಸರನ್ನು ರಸ್ತೆ, ವೃತ್ತ, ಉದ್ಯಾನವನಕ್ಕೆ ನಾಮಕರಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೌರಾಡಳಿತ ನಿಯಮಾನುಸಾರ ರಸ್ತೆ, ವೃತ್ತಗಳಿಗೆ ನಾಮಕರಣ ಮಾಡುವ ಹಕ್ಕು ಸ್ಥಳೀಯ ಸಂಸ್ಥೆಗಳಿಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಅನುದಾನದ ಕಾಮಗಾರಿಗೆ ಸಂಸದರನ್ನು ಆಹ್ವಾನಿಸಿ: 14 ಮತ್ತು 15ನೇ ಫೈನಾನ್ಸ್‍ನಲ್ಲಿ ಕೇಂದ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಅನುದಾನ ದಲ್ಲಿ ನಡೆಸುವ ಕಾಮಗಾರಿ ಅನುಷ್ಠಾನಕ್ಕೆ ಸಂಸದರನ್ನು ಆಹ್ವಾನಿಸುವುದು ಕಡ್ಡಾಯ. ಬೀರಿಹುಂಡಿ ಜಿ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರದ ಅನುದಾನದಿಂದ ನಡೆ ಸುತ್ತಿರುವ ಕಾಮಗಾರಿಗೆ ಜಿ.ಪಂ ಸದಸ್ಯರ ಆಕ್ಷೇಪಕ್ಕೆ ಮನ್ನಣೆ ನೀಡಬಾರದು. ನಿಮ್ಮ ಕೆಲಸ ನೀವು ಮಾಡಿ. ಮುಂದಿನ ಚುನಾವಣೆಗೆ ಮತ ಕೇಳಲು ನಾವು ಗ್ರಾಮಗಳಿಗೆ ಹೋದಾಗ ಅಲ್ಲಿನ ಜನರು ನಮ್ಮೂರಿಗೆ ಏನು ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಇದರಿಂದ ನಾವು ಏನೇನು ಕೆಲಸ ಮಾಡಿದ್ದೇವೆ ಎಂದು ಜನರಿಗೆ ಹೇಳುವುದಕ್ಕಾ ದರೂ ಕೇಂದ್ರ ಸರ್ಕಾರದ ಯೋಜನೆಗಳ ಕಾಮ ಗಾರಿಗೆ ಕಡ್ಡಾಯವಾಗಿ ಸಂಸದರನ್ನು ಕರೆಯುವ ಪರಿಪಾಠ ಬೆಳೆಸಿಕೊಳ್ಳಿ. ಕೆ.ಆರ್.ನಗರ, ಹೆಚ್.ಡಿ. ಕೋಟೆ. ತಿ.ನರಸೀಪುರ ತಾಲೂಕಲ್ಲಿ ನಡೆ ಯುವ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ಅಲ್ಲಿನ ಸಂಸದರನ್ನು ಕರೆಯಲೇಬೇಕೆಂದು ಆಗ್ರಹಿಸಿದರು.