ದಂಡ ಪಡೆದ ಮೇಲೆ ಕನಿಷ್ಠ ಒಂದು ಮಾಸ್ಕ್ ನೀಡಬೇಕಲ್ಲವೇ?
ಮೈಸೂರು

ದಂಡ ಪಡೆದ ಮೇಲೆ ಕನಿಷ್ಠ ಒಂದು ಮಾಸ್ಕ್ ನೀಡಬೇಕಲ್ಲವೇ?

October 20, 2020

ಮೈಸೂರು, ಅ. 19- ಮಾಸ್ಕ್ ಧರಿಸ ದವರಿಗೆ ದಂಡ ವಿಧಿಸುವು ದರ ಜೊತೆಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಕಾರ್ಪೊ ರೇಟರ್ ಆರ್.ಸೋಮ ಸುಂದರ್ ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕು ತಡೆಗೆ ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವುದನ್ನು ತಡೆಯಬಹುದಾಗಿದೆ. ಈ ಕಾರಣದಿಂದಾಗಿಯೇ ಮಾಸ್ಕ್ ಧರಿಸ ದವರಿಗೆ ನಗರ ಪ್ರದೇಶದಲ್ಲಿ 250 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ. ದಂಡ ವಿಧಿಸುತ್ತಾರೆ ಎಂಬ ಭಯದಿಂದಲಾದರೂ ಜನರು ಮಾಸ್ಕ್ ಧರಿಸಲಿ ಎಂಬ ಉದ್ದೇಶ ಇದಾಗಿರಬಹುದು.

ಮಾಸ್ಕ್ ಧರಿಸದವರಿಂದ ಕೇವಲ ದಂಡ ವಸೂಲಿ ಮಾಡದೇ ದಂಡದ ಜೊತೆಗೆ ಅವರಿಗೆ ಉತ್ತಮ ಗುಣಮಟ್ಟದ ಮಾಸ್ಕ್‍ನ್ನು ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿ ಸುವುದು ಉತ್ತಮ ಎಂದಿರುವ ಅವರು, ಈ ರೀತಿ ಜಾಗೃತಿ ಮೂಡಿಸಿದರೆ ಮಾಸ್ಕ್ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪದಿಂದಲೂ ಪೊಲೀಸರು ಮುಕ್ತರಾಗ ಬಹುದು. ಅಲ್ಲದೇ ಜನತೆಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಂತೆಯೂ ಆಗುತ್ತದೆ ಎಂದು ಸೋಮಸುಂದರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

Translate »