ಬೆಂಗಳೂರು,ಅ.18-ಕೊರೊನಾ ಆತಂ ಕದ ನಡುವಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೊನಾ ಸೋಂಕಿಗೆ ಹೆದರಿ ಇಷ್ಟು ದಿನ ಬಸ್‍ಗಳಲ್ಲಿ ಪ್ರಯಾಣಿಸಲು ಹಿಂಜ ರಿಯುತ್ತಿದ್ದ ಜನರು ನಿಧಾನಗತಿಯಲ್ಲಿ ಮತ್ತೆ ಬಸ್ ಪ್ರಯಾಣದತ್ತ ಮುಖ ಮಾಡುತ್ತಿದ್ದು, ಆನ್‍ಲೈನ್ ಟಿಕೆಟ್ ಬುಕಿಂಗ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಟಿಕೆಟ್ ಬುಕಿಂಗ್ ಸಂಖ್ಯೆ ಯಲ್ಲಿ ಏರಿಕೆಯಾಗುತ್ತಿದೆ ಎಂದು ರೆಡ್ ಬಸ್ ಸಂಸ್ಥೆ ತಿಳಿಸಿದೆ. ಅ.2ರವರೆಗೂ ವಾರಾಂತ್ಯದ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಅಹ್ಮದಾಬಾದ್‍ಗೆ ಹೆಚ್ಚು ಟಿಕೆಟ್‍ಗಳು ಬುಕ್ ಆಗುತ್ತಿವೆ. ಬೆಂಗಳೂರು-ಹೈದರಾಬಾದ್, ದೆಹಲಿ-ಚಂಡೀಗಢ, ಹೈದರಾಬಾದ್-ವಿಜಯವಾಡ, ಅಸನ್ಸೋಲ್- ಕೋಲ್ಕತಾ ಮತ್ತು ಗೋರಖ್‍ಪುರ- ದೆಹಲಿಗೆ ರೆಡ್‍ಬಸ್ ಬುಕಿಂಗ್‍ನಲ್ಲಿ ಗಮನಾರ್ಹ ಏರಿಕೆ ಕಾಣುತ್ತಿರುವ ಪ್ರಮುಖ ಐದು ಮಾರ್ಗಗಳಾಗಿವೆ.
ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಟಿಕೆಟ್‍ಗಳು ಬುಕ್ ಆಗಿವೆ. ಲಾಕ್‍ಡೌನ್‍ಗೂ ಮುನ್ನ ಶೇ.11ರಷ್ಟಿದ್ದ ಆನ್‍ಲೈನ್ ಟಿಕೆಟ್ ಬುಕಿಂಗ್ ಪ್ರಮಾಣ ಇದೀಗ ಶೇ.21ಕ್ಕೆ ಏರಿಕೆಯಾಗಿದೆ ಎಂದು ರೆಡ್ ಬಸ್ ಸಂಸ್ಥೆ ಮಾಹಿತಿ ನೀಡಿದೆ.