ಮೈಸೂರು

ನಾಳೆ ಮೈಸೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 
ಮೈಸೂರು

ನಾಳೆ ಮೈಸೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 

October 15, 2020

ಮೈಸೂರು,ಅ.14(ಆರ್‍ಕೆ)-ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅ.16 ರಂದು ಸಂಜೆ 6.05 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡ ಕಳ್ಳಿ ವಿಮಾನ ನಿಲ್ದಾ ಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು, ಸಂಜೆ 6.30 ಗಂಟೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್-19 ನಿಯಂತ್ರಣ ಮತ್ತು ದಸರಾ ಸಂಬಂಧ ಸಭೆ ನಡೆಸುವರು. ಅಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಯಡಿಯೂರಪ್ಪ, ಶನಿವಾರ (ಅ.16) ಬೆಳಗ್ಗೆ 7.35 ಗಂಟೆಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದಸರಾ…

ಮೈಸೂರಿನ 77 ರೆವಿನ್ಯೂ ಬಡಾವಣೆ ಸಕ್ರಮಕ್ಕೆ ಸಚಿವರಿಗೆ ಸಿಂಹ ಮನವಿ
ಮೈಸೂರು

ಮೈಸೂರಿನ 77 ರೆವಿನ್ಯೂ ಬಡಾವಣೆ ಸಕ್ರಮಕ್ಕೆ ಸಚಿವರಿಗೆ ಸಿಂಹ ಮನವಿ

October 15, 2020

ಮೈಸೂರು,ಅ.14(ಪಿಎಂ)-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 77 ರೆವಿನ್ಯೂ ಬಡಾವಣೆಗಳನ್ನು ಅಕ್ರಮ- ಸಕ್ರಮ ಯೋಜನೆಯಡಿ ಪಾಲಿಕೆಗೆ ಸೇರ್ಪಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಿ.ಎ.ಬಸವ ರಾಜ್ ಹಾಗೂ ಸಹಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದರು. ಉಭಯ ಸಚಿವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿ ಮಾಡಿದ ಸಂಸದರು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 77 ರೆವಿನ್ಯೂ ಬಡಾವಣೆಗಳು ಇವೆ. ಇವುಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ…

ದೀಪಾವಳಿ ಪಟಾಕಿ ಮಾರಾಟಕ್ಕೂ ಕೋವಿಡ್ ಮಾರ್ಗಸೂಚಿ
ಮೈಸೂರು

ದೀಪಾವಳಿ ಪಟಾಕಿ ಮಾರಾಟಕ್ಕೂ ಕೋವಿಡ್ ಮಾರ್ಗಸೂಚಿ

October 15, 2020

ಬೆಂಗಳೂರು, ಅ.14- ಕೋವಿಡ್ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ನಿಯಂ ತ್ರಣ ಹೇರಿರುವ ರಾಜ್ಯ ಸರ್ಕಾರ, ಈಗ ಮುಂಬರುವ ಬೆಳಕಿನ ಹಬ್ಬ ದೀಪಾವಳಿಯ ಪಟಾಕಿಗಳ ಮಾರಾಟಕ್ಕೂ ಹಲವು ಮಾರ್ಗ ಸೂಚಿಗಳನ್ನು ಬಿಡುಗಡೆಗೊಳಿಸಿದೆ. ಪಟಾಕಿ ಮಾರಾಟ ಮಾಡುವವರು ಸಂಬಂಧ ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿ ಪಡೆದಿರಬೇಕು. ನ.1ರಿಂದ 17ರವರೆಗೆ ಮಾತ್ರ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಪರವಾನಗಿಯಲ್ಲಿ ನಮೂದಿಸುವ ಸ್ಥಳದಲ್ಲಿಯೇ ಮಾರಾಟಗಾರರು ಅಂಗಡಿ ಇಡಬೇಕು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ…

ಗ್ರಾಹಕರ ಮೊಬೈಲ್ ಸಂಖ್ಯೆಗೆ ವಿದ್ಯುತ್ ಬಿಲ್!
ಮೈಸೂರು

ಗ್ರಾಹಕರ ಮೊಬೈಲ್ ಸಂಖ್ಯೆಗೆ ವಿದ್ಯುತ್ ಬಿಲ್!

October 15, 2020

ಮೈಸೂರು, ಅ. 14(ಆರ್‍ಕೆ)- ಇನ್ನು ಮುಂದೆ ಗ್ರಾಹಕರ ವಿದ್ಯುತ್ ಮಾಸಿಕ ಬಿಲ್ ಅನ್ನು ಮೊಬೈಲ್ ಮೂಲಕ ರವಾನಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ)ವು ಸಿದ್ಧತೆ ನಡೆಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿ ಮೈಸೂರಿನಲ್ಲಿ ಮನೆ ಮನೆಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಿ ನಿಗಮವು ಸ್ಮಾರ್ಟ್ ಗ್ರಿಡ್ ಯೋಜನೆಯನ್ನು ಅನು ಷ್ಠಾನಗೊಳಿಸಿದೆ. ಅದರಂತೆ ಮೈಸೂರಿನ ಸುಮಾರು 24,532 ಸ್ಥಾವರಗಳ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಆನ್‍ಲೈನ್ ಸ್ಮಾರ್ಟ್ ಗ್ರಿಡ್ ತಂತ್ರಾಂಶದ ಮೂಲಕ ನಿಯಂ ತ್ರಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ…

ಕೃಷಿ ಇಲಾಖೆ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಯ್ತು!
ಮೈಸೂರು

ಕೃಷಿ ಇಲಾಖೆ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಯ್ತು!

October 15, 2020

ಮೈಸೂರು, ಅ.14(ಆರ್‍ಕೆಬಿ)- ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿರುವ ರೈತರ ಸಂಕಷ್ಟಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಾವಯವ ಕೃಷಿಕ ಬ್ಯಾತಹಳ್ಳಿ ಬಿ.ಎಸ್. ಮಾದಪ್ಪ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ರೈತರು ಯಾವುದೇ ಸಲಹೆ ಪಡೆಯಲು ಅಥವಾ ಮಾಹಿತಿ ಪಡೆಯಲು ಹೋದರೆ ಅಧಿಕಾರಿಗಳು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ. ರೈತರಿಗೆ ನೆರವಿನ ಹಸ್ತ ಚಾಚಬೇಕಾದ ಕೃಷಿ, ವಿದ್ಯುತ್, ನೀರಾವರಿ ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ರೈತರ ಯಾವುದೇ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು….

ಇಂದಿನಿಂದ ಚಿತ್ರಮಂದಿರಗಳ ತೆರೆಯಲು ಅವಕಾಶ
ಮೈಸೂರು

ಇಂದಿನಿಂದ ಚಿತ್ರಮಂದಿರಗಳ ತೆರೆಯಲು ಅವಕಾಶ

October 15, 2020

ಮೈಸೂರು,ಅ.14(ಆರ್‍ಕೆ)- ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡು ತ್ತಿದ್ದರೂ, ಅನ್‍ಲಾಕ್ 5.0 ಮಾರ್ಗಸೂಚಿ ಯನ್ವಯ ನಾಳೆ (ಅ.15)ಯಿಂದ ಚಿತ್ರ ಮಂದಿರಗಳ ತೆರೆಯಲು ಅವಕಾಶ ನೀಡ ಲಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ವಯ ರಾಜ್ಯ ಸರ್ಕಾರವು ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಮಿತಿ ಗೊಳಿಸಿ ಗುರುವಾರದಿಂದ ಚಿತ್ರಮಂದಿರ ಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವುದರಿಂದ ಥಿಯೇಟರ್ ಮಾಲೀ ಕರು ಸಕಲ ಸಿದ್ಧತೆ ನಡೆಸಿದ್ದಾರೆ. ಒಂದು ಆಸನಕ್ಕೂ ಇನ್ನೊಂದು ಆಸ ನಕ್ಕೂ ನಡುವೆ ಖಾಲಿ ಬಿಡಬೇಕು. ಪ್ರದ ರ್ಶನ ಆರಂಭವಾಗುವ ಮುನ್ನ…

ಕೆಆರ್ ಕ್ಷೇತ್ರದ ಬಾಡಿಗೆ ಮನೆ ನಿವಾಸಿಗಳಿಗೆ 2022 ಆಗಸ್ಟ್‍ಗೆ ಸ್ವಂತ ಸೂರು: ಶಾಸಕ ರಾಮದಾಸ್ ಘೋಷಣೆ
ಮೈಸೂರು

ಕೆಆರ್ ಕ್ಷೇತ್ರದ ಬಾಡಿಗೆ ಮನೆ ನಿವಾಸಿಗಳಿಗೆ 2022 ಆಗಸ್ಟ್‍ಗೆ ಸ್ವಂತ ಸೂರು: ಶಾಸಕ ರಾಮದಾಸ್ ಘೋಷಣೆ

October 15, 2020

ಮೈಸೂರು, ಅ.14(ಆರ್‍ಕೆಬಿ)- ಕೃಷ್ಣ ರಾಜ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ವಾಸವಿದ್ದು, `ಸ್ವಂತ ಸೂರು’ ಕನಸು ಕಾಣುತ್ತಿರುವ ಬಡ ಜನರಿಗಾಗಿ ಶಾಸಕ ಎಸ್.ಎ.ರಾಮದಾಸ್ ಬುಧವಾರ ಆಯೋಜಿಸಿದ್ದ `ಕೆ.ಆರ್.ಕ್ಷೇತ್ರ -ಹೌಸಿಂಗ್ ಫಾರ್ ಆಲ್’ ಕಾರ್ಯಕ್ರಮವನ್ನು ಮಂಗಳಮುಖಿ ಪ್ರಣತಿ ಪ್ರಕಾಶ್, ಹಿರಿಯ ನಾಗರಿಕರಾದ ಲಕ್ಷ್ಮಮ್ಮ, ಹೂವಿನ ವ್ಯಾಪಾರಿ ಗಾಯತ್ರಿದೇವಿ ಉದ್ಘಾಟನೆ ನೆರವೇರಿಸಿದರು. ಮೈಸೂರಿನ ಉತ್ತರಾದಿ ಮಠದ ರಸ್ತೆಯಲ್ಲಿ ರುವ ಕೆ.ಆರ್.ಕ್ಷೇತ್ರ ಆಶ್ರಯ ಕಚೇರಿ ಆವರಣ ದಲ್ಲಿ ಪಿಎಂಎವೈ-ಆಫೋರ್ಡಬಲ್ ಹೌಸಿಂಗ್ ಮತ್ತು ಆಶ್ರಯ ವಸತಿ ಯೋಜನೆ ಗಳಡಿ ನಡೆದ ಕಾರ್ಯಕ್ರಮದಲ್ಲಿ…

ಪೇಯಿಂಗ್ ಗೆಸ್ಟ್ ನೋಂದಣಿಗೆ ಅ.31ರ ಗಡುವು
ಮೈಸೂರು

ಪೇಯಿಂಗ್ ಗೆಸ್ಟ್ ನೋಂದಣಿಗೆ ಅ.31ರ ಗಡುವು

October 15, 2020

ಮೈಸೂರು,ಅ.14(ಆರ್‍ಕೆ)-ಮೈಸೂರು ನಗರದಲ್ಲಿ ಪೇಯಿಂಗ್ ಗೆಸ್ಟ್(ಪಿಜಿ) ನಡೆಸುವವರು ಉದ್ದಿಮೆ ಪರವಾನಗಿ ಪಡೆಯಲು ನೋಂದಾಯಿಸಿಕೊಳ್ಳಿ ಎಂದು ಮೈಸೂರು ಮಹಾನಗರ ಪಾಲಿಕೆ ಕಂದಾಯಾಧಿಕಾರಿಗಳು ಕರೆ ನೀಡಿದ್ದಾರೆ. ಪಾಲಿಕೆಗೆ ಆದಾಯ ಕಡಿಮೆಯಾಗುತ್ತಿದ್ದು, ಅದರಿಂದ ಮೈಸೂರು ನಗರದ ನಾಗರಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗುತ್ತಿದೆ ಎಂದು ಪಾಲಿಕೆ ಉಪ ಆಯುಕ್ತ(ಕಂದಾಯ) ಕುಮಾರ ನಾಯಕ ತಿಳಿಸಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಪೇಯಿಂಗ್ ಗೆಸ್ಟ್ ನಡೆಸುವುದೂ ಒಂದು ಉದ್ದಿಮೆಯಾಗಿದ್ದು, ಅಂತಹವರು ಮೈಸೂರು ಮಹಾನಗರ ಪಾಲಿಕೆಯಿಂದ ಟ್ರೇಡ್…

ಆರ್‍ಆರ್ ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ವರಸೆ
ಮೈಸೂರು

ಆರ್‍ಆರ್ ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ವರಸೆ

October 15, 2020

ಬೆಂಗಳೂರು, ಅ.14(ಕೆಎಂಶಿ)- ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಆಟ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆರ್‍ಆರ್ ನಗರ ಜೆಡಿಎಸ್ ಅಭ್ಯರ್ಥಿಯಾಗಿ ವಿ.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಈ ಬಾರಿ ನಾನು ನಿಷ್ಠಾವಂತ ಕಾರ್ಯಕರ್ತನ ಪರ ಇರ್ತೇನೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ಮಾಡುತ್ತೇನೆ. ಈ ಕ್ಷೇತ್ರ ಉಸ್ತುವಾರಿ ನಾನೇ ವಹಿಸಿಕೊಂಡಿದ್ದೇನೆ. ಆರ್.ಆರ್. ನಗರ 2008ರಲ್ಲಿ ರಚನೆಯಾಗಿತ್ತು. ಈವರೆಗೆ ಬಿಜೆಪಿ ಒಂದು ಬಾರಿ, ಕಾಂಗ್ರೆಸ್ ಎರಡು…

ಡಿಸಿ ವರ್ಗಾವಣೆ; ವಿಚಾರಣೆ ಮತ್ತೆ ನಾಳೆಗೆ ಮುಂದೂಡಿಕೆ
ಮೈಸೂರು

ಡಿಸಿ ವರ್ಗಾವಣೆ; ವಿಚಾರಣೆ ಮತ್ತೆ ನಾಳೆಗೆ ಮುಂದೂಡಿಕೆ

October 15, 2020

ಮೈಸೂರು,ಅ.14(ಆರ್‍ಕೆ)-ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರ ವರ್ಗಾವಣೆ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೇಂದ್ರೀಯ ಆಡಳಿತ ನ್ಯಾಯಾಧಿಕರಣ(ಅಂಖಿ)ವು ಮತ್ತೆ ಅಕ್ಟೋಬರ್ 16ಕ್ಕೆ ಮುಂದೂಡಿದೆ. ಆನ್‍ಲೈನ್ ಮೂಲಕ ಇಂದು ಅರ್ಜಿ ಮೇಲಿನ ವಿಚಾರಣೆ ನಡೆಯಿ ತಾದರೂ, ಆ ವೇಳೆ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೇಳಿಕೆಗಳು ಸ್ಪಷ್ಟವಾಗಿ ಕೇಳಿಸದಿರುವುದರಿಂದ ನ್ಯಾಯಾಧೀಶರು ಮುಂದಿನ ವಿಚಾ ರಣೆಯನ್ನು ಶುಕ್ರವಾರ (ಅ.16)ಕ್ಕೆ ಮುಂದೂಡಿದ್ದು, ಅಂದು ಅರ್ಜಿದಾರ ಮತ್ತು ಪ್ರತಿವಾದಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಕಲಬುರ್ಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಿ.ಶರತ್ ಅವರನ್ನು ಆಗಸ್ಟ್ 29ರಂದು…

1 402 403 404 405 406 1,611
Translate »