ರಾಮಾನುಜ ರಸ್ತೆ ಮನೆಯಲ್ಲಿ ಪತ್ತೆ ಮರದಿಂದ ಮರಕ್ಕೆ ಜಿಗಿಯುವ ಹಾವು ಬಲು ವರ್ಣರಂಜಿತ ಮೈಸೂರು, ಜೂ.5(ಎಂಟಿವೈ)- ಎಲ್ಲೆಡೆ ವಿಶ್ವ ಪರಿಸರ ದಿನಾಚರಣೆ ಸಂಭ್ರಮ ವಿದ್ದರೆ, ಮೈಸೂರಿನ ಮನೆಯೊಂದರಲ್ಲಿ ಪಶ್ಚಿಮ ಘಟ್ಟ ದಲ್ಲಿ ಕಂಡು ಬರುವ ಅಲಂಕೃತ ಹಾರುವ ಹಾವು (ಆರ್ನೆಟ್ ಫ್ಲೈಯಿಂಗ್ ಸ್ನೇಕ್) ಕಾಣಿಸಿಕೊಂಡು ಅಚ್ಚರಿಯೊಂದಿಗೆ ಕುತೂಹಲ ಕೆರಳಿಸಿದೆ. ಮೈಸೂರಿನ ರಾಮಾನುಜ ರಸ್ತೆಯ 7ನೇ ಕ್ರಾಸ್ ನಿವಾಸಿ ಎಸ್.ವೆಂಕಟರಾಮು ಎಂಬವರ ಮನೆಯ ಮುಂಬಾಗಿ ಲಿನ ಗ್ರಿಲ್‍ಗೆ ಸುತ್ತಿಕೊಂಡು ಈ ಹಾವು ದರ್ಶನ ನೀಡಿದೆ. 3-4 ಅಡಿ ಉದ್ದವಿದ್ದ…
ಸ್ಯಾಂಡಲ್‍ವುಡ್‍ನ 30 ಪೋಷಕ ಕಲಾವಿದರಿಗೆ ಆರ್ಥಿಕ ನೆರವು
June 6, 2020ಮೈಸೂರು, ಜೂ.5(ಎಸ್‍ಪಿಎನ್)- ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗದ 30 ಮಂದಿ ಹಾಸ್ಯ ನಟ-ನಟಿಯರು ಮತ್ತು ಪೋಷಕ ಕಲಾವಿದರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆರ್ಥಿಕ ನೆರವು ಹಸ್ತಾಂತರಿಸಿದರು. ಮೈಸೂರು ನಜರ್‍ಬಾದ್‍ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಫಲ ತಾಂಬೂಲದ ಜೊತೆಗೆ ಆರ್ಥಿಕ ನೆರವನ್ನು ವಿತರಿಸಿ ಮಾತನಾಡಿದ ಸಚಿವರು, ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ರಾಜ್ಯ ಸರ್ಕಾರ ಧಾವಿಸಲಿದೆ. ಕಲಾವಿದರು ಹೆದರುವ ಅಗತ್ಯವಿಲ್ಲ ಎಂದರು. ನಂತರ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಮಾತನಾಡಿ, ಲಾಕ್‍ಡೌನ್‍ನಿಂದಾಗಿ…
ಹಿರಿಯ ಅಧಿಕಾರಿಯಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಪ್ರಕರಣದ ತನಿಖೆ
June 5, 2020ಮೈಸೂರು, ಜೂ.4(ಎಂಟಿವೈ)- ಲಾಕ್‍ಡೌನ್ ವೇಳೆ ಎಲ್ಲರಿಗೂ ಪಡಿತರ ವಿತರಿಸಲೆಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರ ಪೂರೈಸಿದ್ದ ಪಡಿತರ ಅಕ್ಕಿಯನ್ನು ಗೋದಾಮಿ ನಿಂದಲೇ ಅಕ್ರಮವಾಗಿ ಸಾಗಿಸಿ ಕಾಳ ಸಂತೆಯಲ್ಲಿ ಮಾರುತ್ತಿದ್ದ ದಂಧೆಕೋರರ ವಿರುದ್ಧ ತನಿಖೆ ನಡೆಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ನಿಯೋ ಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್ ಇದ್ದ ವರು…
ರಾಮಕೃಷ್ಣನಗರದ ಜಿ-ಬ್ಲಾಕ್‍ನಲ್ಲಿ ಜನರ ಚಲನ-ವಲನದ ಮೇಲೆ ನಿರ್ಬಂಧ
June 5, 2020ಮೈಸೂರು, ಜೂ. 4(ಆರ್‍ಕೆ) ತಾಯಿ, ಗರ್ಭಿಣಿ, ಮಗಳಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿರುವ ಮೈಸೂ ರಿನ ರಾಮಕೃಷ್ಣನಗರದ ‘ಜಿ’ ಬ್ಲಾಕಿನ 6, 7 ಮತ್ತು 8ನೇ ಕ್ರಾಸ್‍ಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಬುಧವಾರ ಬೆಳಗ್ಗೆಯೇ ರಾಮಕೃಷ್ಣನಗ ರದ ‘ಜಿ’ ಬ್ಲಾಕ್ ಸಂಪರ್ಕ ಕಲ್ಪಿಸುವ ದಕ್ಷಿ ಣೇಶ್ವರ ಮುಖ್ಯರಸ್ತೆ ಸೇರಿದಂತೆ 6, 7 ಮತ್ತು 8 ಅಡಿ ಎತ್ತರಕ್ಕೆ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಳವಡಿಸಿ ಆ ಭಾಗದ ಸಂಚಾರ ವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ….
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಪುತ್ರ ಕಡ್ಲೆಪುರಿ ತಿನ್ನುತ್ತಿದ್ರಾ?
June 5, 2020ಮೈಸೂರು, ಜೂ.4(ಆರ್‍ಕೆಬಿ)- `ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ರಾ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜ ಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಟೀಕಿಸಲು ಅವರಿಗೇನು ಹಕ್ಕಿದೆ?’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಇಂದಿಲ್ಲಿ ಕಿಡಿಕಾರಿದರು. `ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ, ಅವರ ಮಗ ಸೂಪರ್ ಮುಖ್ಯ ಮಂತ್ರಿ’ ಎಂಬ ಸಿದ್ದರಾಮಯ್ಯ ಟೀಕೆಗೆ ಸಚಿವ ಸೋಮಶೇಖರ್ ಖಾರವಾಗಿಯೇ ಪ್ರತಿ ಕ್ರಿಯಿಸಿದರು. ಗುರುವಾರ ಮೈಸೂ ರಿನಲ್ಲಿ ಸುದ್ದಿಗಾರರೊಂ ದಿಗೆ…
ಬೆಡ್ ರೂಮ್‍ನಲ್ಲಿದ್ದ ನಾಗರಹಾವು ರಕ್ಷಿಸಿದ ಸ್ನೇಕ್‍ಶ್ಯಾಂ
June 5, 2020ಮೈಸೂರು,ಜೂ.4-ತುಂಬು ಗರ್ಭಿಣಿಯೊಬ್ಬರ ಬೆಡ್ ರೂಮಿನಲ್ಲಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್‍ಶ್ಯಾಂ ಹಿಡಿದಿದ್ದಾರೆ. ಮೈಸೂರು ಸಮೀಪದ ಸಿದ್ದಲಿಂಗಪುರದ ಮಾದೇಶ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಗರಹಾವು ನುಗ್ಗಿತ್ತು. ತಾಯಿಯೊಂದಿಗೆ ತುಂಬು ಗರ್ಭಿಣಿ ಮಲಗಿದ್ದ ಕೊಠಡಿಯಲ್ಲಿ ರಾತ್ರಿ ಸುಮಾರು 12.45ರ ವೇಳೆಯಲ್ಲಿ ಬುಸುಗುಡುವ ಸದ್ದು ಕೇಳಿಸಿದೆ. ತಕ್ಷಣ ಲೈಟ್ ಆನ್ ಮಾಡಿ, ನೋಡಿದಾಗ ಹಾವು ಕಾಣಿಸಿದೆ. ಗಾಬರಿ ಯಿಂದ ಮನೆಯವರೆಲ್ಲಾ ಹೊರಗೆ ಬಂದಿದ್ದಾರೆ. ಗದ್ದಲ ಕೇಳಿ ಎಚ್ಚರವಾದ ನೆರೆಹೊರೆಯವರು ಮಾದೇಶ್ ಮನೆ ಮುಂದೆ ಜಮಾಯಿಸಿ, ಸ್ನೇಕ್ ಶ್ಯಾಂಗೆ ಕರೆ…
ಮೈಸೂರು ಮೃಗಾಲಯದಲ್ಲಿ ಜಿರಾಫೆ ಮರಿ ಜನನ
June 5, 2020ಮೈಸೂರು, ಜೂ.4(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯದಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಜಿರಾಫೆಯೊಂದು ಗಂಡು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ. ಮರಿ ಅದಾಗಲೇ ಲವಲವಿಕೆಯಿಂದ ಓಡಾಡುತ್ತಿದೆ. 5 ತಿಂಗಳ ಹಿಂದಷ್ಟೇ ಖುಷಿ-ಭರತ್ ಜೋಡಿಗೆ ಗಂಡು ಮರಿ ಜನಿಸಿತ್ತು. ಇದೀಗ (ಎರಡು ದಿನಗಳ ಹಿಂದೆ) ಮೇರಿ-ಭರತ್ ಜೋಡಿಗೆ ಗಂಡು ಮರಿ ಜನಿ ಸಿದ್ದು, ಒಂದು ವಾರ ನಿಗಾದಲ್ಲಿಡ ಲಾಗಿದೆ. ಮರಿ ಆರೋಗ್ಯದಿಂದ ಕೂಡಿದೆ. ಆವರಣದಲ್ಲಿ…
ಮೈಸೂರಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ ವಾಹನ ದಟ್ಟಣೆ
June 5, 2020ಮೈಸೂರು, ಜೂ.4(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸ್ಥಗಿತಗೊಂಡಿದ್ದ ವಾಹನಗಳ ಸಂಚಾರ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಮೈಸೂರು ನಗರದಲ್ಲಿ ಹೆಚ್ಚಾಗ ತೊಡಗಿದೆ. ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಕೆಎಸ್‍ಆರ್ ಟಿಸಿ, ಖಾಸಗಿ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ ವಾದರೂ ಖಾಸಗಿ ವಾಹನಗಳ ಸಂಚಾರ ಮಾತ್ರ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಹಾಗೂ ರೈಲು ಸಂಚಾರ ವಿರಳವಾಗಿದ್ದಾಗಲೇ ಇನ್ನೂ ಹೋಟೆಲ್, ದೇವಸ್ಥಾನ ಹಾಗೂ ಪ್ರವಾಸಿ ತಾಣಗಳೇ ಆರಂಭವಾಗ ದಿದ್ದರೂ, ಈ ಪ್ರಮಾಣದಲ್ಲಿ ವಾಹನ ದಟ್ಟಣೆ ಕಾಣಿಸುತ್ತಿದೆ. ಒಂದು ವೇಳೆ ಎಲ್ಲಾ ಬಗೆಯ ಸಾರಿಗೆ ಸೇವೆ ಆರಂಭವಾದಲ್ಲಿ…
ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ದಿನಾಂಕ ಮುಂದೂಡಿಕೆ
June 5, 2020ಮೈಸೂರು, ಜೂ.4- ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದ ದಿನಾಂಕವನ್ನು ಜೂ.8ಕ್ಕೆ ಮುಂದೂಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಶಿಕ್ಷಕರು ದೂರದ ಊರುಗಳಿಗೆ ಅಥವಾ ಸ್ವಗ್ರಾಮಕ್ಕೆ ತೆರಳಿದ್ದಾರೆ. ಸದ್ಯಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಸೂಚಿತ ದಿನಾಂಕದಂದು ಕರ್ತವ್ಯಕ್ಕೆ ಹಾಜ ರಾಗಲು ಸಾಧ್ಯವಾಗುವುದಿಲ್ಲ ಎಂದು ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಮಾತ್ರ ಜೂ.5ರಂದು ಶಾಲೆಗೆ ಹಾಜರಾಗಬೇಕು….
ಉಪನ್ಯಾಸಕರ ಬಹಿಷ್ಕಾರ: ವಿಭಾಗ ಮಟ್ಟದಲ್ಲಿ ಮೌಲ್ಯಮಾಪನಕ್ಕೆ ಆಗ್ರಹ
June 5, 2020ಮೈಸೂರು, ಜೂ. 4 (ಆರ್‍ಕೆ)- ವಿಭಾಗ ಮಟ್ಟದಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಷಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಉಪನ್ಯಾಸಕರು ಮೌಲ್ಯಮಾಪನ ಪ್ರಕ್ರಿಯೆ ಬಹಿಷ್ಕರಿಸಿದ್ದಾರೆ. ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಪಿಯುಸಿ ಉಪನ್ಯಾಸಕರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಯೋಗಾನಂದ, ದ್ವಿತೀಯ ಪಿಯುಸಿ ಪರೀಕ್ಷಾ ಕಲಾ ಮತ್ತು ವಾಣಿಜ್ಯ ವಿಭಾಗದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ರಾಜ್ಯದ ಎಲ್ಲಾ ವಿಭಾಗ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ವಿಜ್ಞಾನ ವಿಷಯ ಪತ್ರಿಕೆಗಳನ್ನು…










