ಮೈಸೂರು, ಜೂ.4(ಪಿಎಂ)- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಯಲ್ಲಿ ಶಾಲೆಗಳನ್ನು ಜು.1ರಿಂದ ಪುನಾರಂಭಿಸುವ ಪ್ರಸ್ತಾಪ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಅಂಚೆ ಚಳವಳಿ ನಡೆಸಲಾಯಿತು. ಮೈಸೂರಿನ ಚಾಮುಂಡಿಪುರಂ ಅಂಚೆ ಕಚೇರಿ ಮುಂಭಾಗ ಅಂಚೆ ಪೆಟ್ಟಿಗೆಗೆ ಅಂಚೆ ಕಾರ್ಡ್ ಹಾಕಿದ ನಂತರ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು ಕೊರೊನಾ ಭೀತಿಯಲ್ಲೇ ಇದ್ದಾರೆ. ಜು.1ರಿಂದ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬಾರದು ಎಂದು ಆಗ್ರಹಿಸಿದರು. ಶಾಲೆಗಳಲ್ಲಿ ಮಕ್ಕಳ ನಡುವೆ ಅಂತರ…
ಆಟೋ ಚಾಲಕರಿಗೆ ಪರಿಹಾರ ಮೊತ್ತ ಜಮೆ
June 5, 2020ಮೈಸೂರು, ಜೂ.4- ಲಾಕ್‍ಡೌನ್ ಪರಿ ಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ 5 ಸಾವಿರ ರೂ. ಪರಿ ಹಾರ ಮೊದಲ ಕಂತಿನಲ್ಲಿ ರಾಜ್ಯದ 40 ಸಾವಿರ ಚಾಲಕರ ಖಾತೆಗೆ ಹಣ ಜಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಬೆಳಕು ಸಂಸ್ಥೆ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರಿಗೆ ಚಾಲಕರಿಂದ ಕೃತ ಜ್ಞತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಕು ಸಂಸ್ಥೆ ಸಂಸ್ಥಾಪಕ ಕೆ.ಎಂ. ನಿಶಾಂತ್ ನೇತೃತ್ವದಲ್ಲಿ ಹತ್ತಾರು ಆಟೋ ಚಾಲಕರು ಸಿಹಿ ವಿತರಿಸಿ…
ದಸಂಸ ಬಣ ಒಗ್ಗೂಡಿಸಲು ಪುನರಾವಲೋಕನ ಸಮಿತಿ ರಚನೆ
June 5, 2020ಮೈಸೂರು, ಜೂ.4 (ಪಿಎಂ)- ಹಲವು ಬಣಗಳಾಗಿ ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿ (ದಸಂಸ) ಮತ್ತೆ ಒಟ್ಟುಗೂಡಿಸಿ ಬಲಿಷ್ಠ ಸಂಘಟನೆಯಾಗಿ ರೂಪಿಸಲು `ದಲಿತ ಸಂಘರ್ಷ ಸಮಿತಿ ಪುನರ್ ಅವಲೋಕನ ಸಮಿತಿ’ ಅಸ್ತಿತ್ವಕ್ಕೆ ತರಲಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಪುನರಾವಲೋಕನ ಸಮಿತಿ ರಾಜ್ಯ ಸಂಚಾ ಲಕ ಹರಿಹರ ಆನಂದಸ್ವಾಮಿ, ದಸಂಸ 1970ರ ದಶಕದಲ್ಲಿ ಶೋಷಿತ ಸಮು ದಾಯದ ಶಕ್ತಿಯಾಗಿ ಮೊಳಕೆಯೊಡೆ ಯಿತು. ಸಂಘಟನೆ ಆರಂಭದಲ್ಲಿ ದಲಿತರ ಪಾಲಿಗೆ ಪ್ರತ್ಯೇಕ ಶಕ್ತಿ…
ಮೈಸೂರಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆ
June 4, 2020ಮೈಸೂರು, ಜೂ.3 (ಎಂಟಿವೈ)- ಮುಂಬೈನಿಂದ ವಾಪಸಾಗಿದ್ದ ತಾಯಿ ಮತ್ತು ಗರ್ಭಿಣಿ ಮಗಳಲ್ಲಿ ಕೊರೊನಾ ಸೋಂಕು ಪತ್ತೆ ಯಾಗಿದೆ. ಮೈಸೂರು ಜಿಲ್ಲೆ ಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಹೆಚ್ಚಳವಾಗಿದೆ. ಮುಂಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ಮೈಸೂರಿನ ರಾಮ ಕೃಷ್ಣನಗರದ ಜಿ ಬ್ಲಾಕ್‍ನ 7 ಕ್ರಾಸ್ ನಿವಾಸಿ 50 ವರ್ಷದ ಮಹಿಳೆ(ಪಿ-3990) ಹಾಗೂ ಅವರ ಪುತ್ರಿ (27) 6 ತಿಂಗಳ ಗರ್ಭಿಣಿ (ಪಿ-3989)ಗೆ ಕೋವಿಡ್-19 ಸೋಂಕು…
ಜೂ.8ರಿಂದ ಹೋಟೆಲ್, ದೇವಸ್ಥಾನ ತೆರೆಯಲು ಸಿದ್ಧತೆ
June 4, 2020ಮೈಸೂರು, ಜೂ.3(ಆರ್‍ಕೆ)- ಕೋವಿಡ್-19 ಲಾಕ್ ಡೌನ್‍ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಬಂದ್ ಆಗಿದ್ದ ಮೈಸೂರಿನ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್‍ಗಳು ಹಾಗೂ ದೇವಸ್ಥಾನಗಳನ್ನು ಜೂನ್ 8ರಿಂದ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿ ಯಂತೆ ರಾಜ್ಯ ಸರ್ಕಾರವು ಜೂ.8ರಿಂದ ದೇವಸ್ಥಾನ ಮತ್ತು ಹೋಟೆಲುಗಳನ್ನು ತೆರೆಯಲು ಅವಕಾಶ ನೀಡ ಲಾಗುವುದು ಎಂದು ಪ್ರಕಟಿಸಿದ್ದರಿಂದ ಹೋಟೆಲ್ ಮಾಲೀಕರು, ಮುಜರಾಯಿ ಇಲಾಖೆ ಅಧಿಕಾರಿಗಳು, ಖಾಸಗಿ ಧಾರ್ಮಿಕ ಟ್ರಸ್ಟ್‍ಗಳು ತಯಾರಿ ಆರಂಭಿಸಿವೆ. ದೇವಾಲಯಗಳು: ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ,…
ಮಹದೇವಪುರ; ಕಸದ ರಾಶಿಯ ಆಗರ!
June 4, 2020ಮೈಸೂರು, ಜೂ.3(ವೈಡಿಎಸ್)- ಒಂದೆಡೆ ಕೊರೊನಾ ಸೋಂಕಿನ ಭಯ. ಮತ್ತೊಂ ದೆಡೆ ವಿಲೇವಾರಿಯಾಗದ ಕಸದ ರಾಶಿ ಕೊಳೆತು ದುರ್ವಾಸನೆ ಬೀರುತ್ತಿದ್ದು, ಮಹದೇವ ಪುರ ನಿವಾಸಿಗಳಲ್ಲಿ ಅನಾರೋಗ್ಯದ ಭೀತಿ… ಜೆ.ಪಿ.ನಗರ ರೈಲ್ವೆ ಗೇಟ್ ಬಳಿಯ ಮಹ ದೇವಪುರದಿಂದ ಮುನಿಸ್ವಾಮಿ ನಗರದವ ರೆಗೆ ರಸ್ತೆಯ ಎರಡೂ ಬದಿ ಕಸದ ರಾಶಿ ಬಿದ್ದಿದ್ದು, ಶ್ರೀರಾಂಪುರ ಗ್ರಾಪಂ ವಿಲೇವಾರಿ ಗೋಜಿಗೇ ಹೋಗಿಲ್ಲ. ಇಲ್ಲಿನ ಯಾವುದೇ ಬ್ಲಾಕ್‍ಗೆ ಹೋದರೂ ಕಸದ ರಾಶಿಯೇ ಆಹ್ವಾನಿಸುತ್ತದೆ. ಮಹದೇವಪುರ ಕಸದ ರಾಶಿಯ ಆಗರವಾಗಿದೆ. ಕಸದ ರಾಶಿ: ಸಾರ್ವಜನಿಕರು ಮನೆ ಕಸವನ್ನು…
ಕಲಬುರಗಿಯಲ್ಲಿ 500 ಗಡಿ ದಾಟಿದ ಕೊರೊನಾ, ರಾಜ್ಯದಲ್ಲಿ ಹೊಸದಾಗಿ 267 ಪ್ರಕರಣ, ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆ
June 4, 2020ಬೆಂಗಳೂರು, ಜೂ. 3- ಲಾಕ್‍ಡೌನ್ ಸಡಿಲಗೊಳಿಸಿದ ನಂತರ ನೆರೆಯ ಮಹಾ ರಾಷ್ಟ್ರ ಕರುನಾಡಿಗೆ ಕಂಟಕವಾಗಿ ಕಾಡುತ್ತಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬುಧವಾರ ಒಂದೇ ದಿನ 267 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ ಬುಧವಾರ ಬರೋ ಬ್ಬರಿ 105 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500 ಗಡಿ ದಾಟಿದೆ. ಇನ್ನು ದಾವಣಗೆರೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ…
ಹೊರ ಜಿಲ್ಲೆ ಮೌಲ್ಯಮಾಪಕರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಿ, ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ
June 4, 2020ಮೈಸೂರು, ಜೂ.3(ಪಿಎಂ)- ಬೆಂಗಳೂರಿನಲ್ಲಿ ಜೂ.5ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆ ಮೌಲ್ಯಮಾಪ ನಕ್ಕೆ ಹೊರ ಜಿಲ್ಲೆಗಳಿಂದ ಬರುವ ಉಪನ್ಯಾಸಕರಿಗೆ ವಾಸ್ತವ್ಯ, ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕು. ಜೊತೆಗೆ ಮೌಲ್ಯಮಾಪನಕ್ಕೆ ಹಾಜರಾಗದವರಿಗೆ ವಿನಾಯಿತಿ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕೋರಿದ್ದಾರೆ. ಈ ಸಂಬಂಧ ಸಚಿವರಿಗೆ ಪತ್ರ ಬರೆದಿರುವ ಪರಿ ಷತ್ ಸದಸ್ಯ ಮರಿತಿಬ್ಬೇಗೌಡ, ಹೊರ ಜಿಲ್ಲೆಗಳಿಂದ ಮೌಲ್ಯಮಾಪನಕ್ಕೆ…
ಚೆಕ್‍ಪೋಸ್ಟ್‍ಗಳಲ್ಲಿ ಮುಂದುವರೆದ ತಪಾಸಣೆ ಕಾರ್ಯ
June 4, 2020ಮೈಸೂರು, ಜೂ. 3(ಆರ್‍ಕೆ)- ಕೊರೊನಾ ವೈರಸ್ ಹರಡದಂತೆ ತಡೆ ಯಲು ಮೈಸೂರು ನಗರ ಸಂಪರ್ಕ ಕಲ್ಪಿ ಸುವ ಎಲ್ಲಾ ಹೆದ್ದಾರಿ ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳ ಚೆಕ್‍ಪೋಸ್ಟ್‍ಗಳಲ್ಲಿ ತಪಾ ಸಣೆ ಕಾರ್ಯ ಮುಂದುವರಿದಿದೆ. ಲಾಕ್‍ಡೌನ್ ನಿರ್ಬಂಧ ಆದೇಶ ಹೊರ ಬಂದ ದಿನದಿಂದಲೇ ಆರಂಭವಾದ ಚೆಕ್ ಪೋಸ್ಟ್‍ಗಳ ತಪಾಸಣೆ ಲಾಕ್‍ಡೌನ್ ಸಡಿಲ ಗೊಂಡರೂ, ಮುಂದುವರಿದಿದ್ದು, ಪೊಲೀ ಸರು ಇದೀಗ ಹೊರರಾಜ್ಯಗಳ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ಹಾಗೂ ಅಂತರರಾಜ್ಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ವಹಿಸುತ್ತಿದ್ದಾರೆ. ಅಂತಹ ವಾಹನ…
ರಾಜ್ಯದಲ್ಲಿ ಅಸಂವಿಧಾನಿಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕಾರ್ಯ ನಿರ್ವಹಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ
June 4, 2020ಬೆಂಗಳೂರು, ಜೂ.3(ಕೆಎಂಶಿ)- ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಡಿಯೂರಪ್ಪ ಹೆಸರಿ ಗಷ್ಟೇ ಮುಖ್ಯಮಂತ್ರಿ, ಅವರ ಪುತ್ರ ವಿಜೆ ಯೇಂದ್ರ ಸಹಿ ಮಾಡುವುದು ಮತ್ತು ಆಡಳಿ ತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ವಿಜಯೇಂದ್ರರ ಹಸ್ತಕ್ಷೇಪದಿಂದ ಆಡಳಿತ ಪಕ್ಷದ ಶಾಸಕರು ಅಸಮಾಧಾನಗೊಂಡು, ಇದೀಗ ಬಂಡಾಯವಾಗಿ ಪರಿವರ್ತನೆಗೊಂಡಿದೆ. ಬಂಡಾಯ ಎದ್ದಿರುವವರಲ್ಲಿ ಕೆಲವು ಬಿಜೆಪಿ ಶಾಸಕರು ನನ್ನನ್ನು ಖುದ್ದಾಗಿ ಭೇಟಿ ಮಾಡಿ, ಮುಖ್ಯಮಂತ್ರಿ ಪುತ್ರನ ಆಡ ಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾಗಿ ಹುಡುಗನ ಮುಂದೆ ಹೋಗಿ,…










