ಮೈಸೂರು, ಜೂ.3(ಆರ್‍ಕೆ)-ಜೂನ್ 25ರಿಂದ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಗುಡ್ ಷೆಫರ್ಡ್, ಭಾರತೀಯ ವಿದ್ಯಾಭವನ, ಪಡು ವಾರಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಬಹುತೇಕ ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಆನ್‍ಲೈನ್‍ನಲ್ಲಿ ಜûೂಮ್ ಆ್ಯಪ್, ಯು-ಟ್ಯೂಬ್ ಮೂಲಕ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ(ಉತ್ತರ) ಡಿ.ಉದಯಕುಮಾರ್, ಇಂದು ಮೈಸೂರಿನ ಗುಡ್ ಷೆಫರ್ಡ್ ಶಾಲೆಗೆ ತೆರಳಿ ಆನ್‍ಲೈನ್ ತರಗತಿಯ ಪ್ರಗತಿ ಪರಿಶೀಲನೆ ನಡೆಸಿದರು. ಎಸ್‍ಎಸ್‍ಎಲ್‍ಸಿ…
ಮೈಸೂರು ವಿವಿಯಲ್ಲಿ ಚೀನಾ ವಿದ್ಯಾರ್ಥಿಗಳಿಗೆ ಎಂಎಸ್ಸಿ ಪರೀಕ್ಷೆ ಆರಂಭ
June 4, 2020ಮೈಸೂರು, ಜೂ.3(ಆರ್‍ಕೆ)- ಮೈಸೂರು ವಿಶ್ವವಿದ್ಯಾನಿಲಯವು ಚೀನಾ ವಿದ್ಯಾರ್ಥಿ ಗಳಿಗೆ ಅವಧಿಗೆ ಮುಂಚೆಯೇ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸುತ್ತಿದೆ. ಚೀನಾ ಉನ್ನತ ಶಿಕ್ಷಣ ಇಲಾಖೆ ಮನವಿ ಮೇರೆಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಎಂಎಸ್ಸಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ 70 ಮಂದಿ ಚೀನಾ ವಿದ್ಯಾರ್ಥಿ ಗಳಿಗೆ ಜೂ.1ರಿಂದ ಪ್ರತೀ ದಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ನಿತ್ಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ…
ನಾಳೆ ವಿದ್ಯುತ್ ವ್ಯತ್ಯಯ
June 4, 2020ಮೈಸೂರು, ಜೂ.3- ನಿರ್ವಹಣಾ ಕಾರ್ಯ ನಿಮಿತ್ತ ಜೂ. 5ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 11ಕೆ.ವಿ ಮಲ್ಕುಂಡಿ (ಎನ್.ಜೆ.ವೈ) ಫೀಡರ್‍ನ ಯಡಹಳ್ಳಿ, ಮಡಿಕೆಹುಂಡಿ, ಕಗ್ಗಲಿ ಹುಂಡಿ, ಹಲ್ಲರೆ, ಮಲ್ಕುಂಡಿ, ಎಂ.ಕೊಂಗಳ್ಳಿ, ಕಗ್ಗಲ್ಲೂರು, ಅಂಬಳೆ, ಅಂಬಳೆ ಹುಂಡಿ ಗ್ರಾಮಗಳು ಹಾಗೂ 11ಕೆ.ವಿ ಚನ್ನಪಟ್ಟಣ (ಐ.ಪಿ) ಫೀಡರ್‍ನ ಹುರಾ, ಸಿದ್ದೇಗೌಡನಹುಂಡಿ, ಮಲ್ಲಹಳ್ಳಿ, ಕೆಲ್ಲೂಪುರ, ಚನ್ನಪಟ್ಟಣ, ಕೊತ್ತನಹಳ್ಳಿ, ಹಂಚಿಪುರ, ನಾಗಣಪುರ, ಬಳ್ಳೂರುಹುಂಡಿ, ಇಂದಿರಾನಗರ, ರಾಜನಗರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನ ಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಕ್ಕೆ ಕೊರೊನಾಘಾತ: ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆ
June 4, 2020ನವದೆಹಲಿ, ಜೂ. 3- ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಒಂದೇ ದಿನ 8,909 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಕೇವಲ 15 ದಿನಗಳಲ್ಲಿ ವೈರಸ್ ಪೀಡಿತರು 1 ಲಕ್ಷದಷ್ಟು ಹೆಚ್ಚಾಗಿ ದ್ದಾರೆ. ಕಳೆದ 24 ಗಂಟೆಗಳಲ್ಲಿ ಒಟ್ಟು 8,909 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 207,615ಕ್ಕೆ ಏರಿಕೆಯಾಗಿದೆ. ಇನ್ನು…
ಲಕ್ಷ ವೃಕ್ಷ ಅಭಿಯಾನ; ಹಸಿರು ಮೈಸೂರು ಫಾರಂನಿಂದ 15 ಸಾವಿರ ಗಿಡ ವಿತರಣೆ
June 4, 2020ಮೈಸೂರು, ಜೂ.3(ಎಂಟಿವೈ)- `ಲಕ್ಷ ವೃಕ್ಷ’ ಅಭಿಯಾನದಲ್ಲಿ ವಿವಿಧೆಡೆ ಗಿಡ ನೆಡಲು ಹಸಿರು ಮೈಸೂರು ಫಾರಂನಿಂದ 15 ಸಾವಿರ ಗಿಡ ವಿತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಹಸಿರು ಮೈಸೂರು ಫಾರಂನಲ್ಲಿ ಬುಧ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂ ರನ್ನು `ಹಸಿರು ನಗರ’ವಾಗಿಸುವ ನಿಟ್ಟಿನಲ್ಲಿ ಕಳೆದ ವರ್ಷ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆ ನಡೆಸ ಲಾಗಿತ್ತು. ಎಲ್ಲರ…
ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‍ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು
June 4, 2020ಬೆಂಗಳೂರು, ಜೂ.3(ಕೆಎಂಶಿ)- ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಮಾಸಾಂತ್ಯದಲ್ಲಿ ನಡೆಯುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಮುಖಂಡರ ಸಭೆ ಕರೆ ದಿದೆ. ಜೂನ್ 6ರಂದು ಚುನಾವಣಾ ಪ್ರಕ್ರಿಯೆ ಆರಂಭ ಗೊಳ್ಳಲಿದ್ದು, ಇದಕ್ಕೂ ಮುನ್ನವೇ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕಾಂಗ್ರೆಸ್ ಜೂನ್ 5ರಂದು ಮುಖಂಡರ ಸಭೆ ಕರೆದಿದೆ. ಆಡಳಿತಾರೂಢ ಬಿಜೆಪಿ ಜೂ.6ರಂದು ಪಕ್ಷದ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್…
ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
June 4, 2020ಮೈಸೂರು, ಜೂ.3- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಜೂ.4ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ಅವರು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆ.ಆರ್.ವೃತ್ತದಲ್ಲಿ ರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡು ವರು. ಬೆಳಿಗ್ಗೆ 9.30 ಗಂಟೆಗೆ ಅರಸು ಮಂಡಳಿ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿ ಸಂಘದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತ್ಯುತ್ಸವ ಆಚರಣೆ…
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂದನೆ: ಯುವಕನ ವಿರುದ್ಧ ದೂರು
June 4, 2020ಮೈಸೂರು, ಜೂ.3(ಪಿಎಂ)- ಪುನೀತ್ ಕೆರೆಹಳ್ಳಿ ಎಂಬ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್‍ನ ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ಎಂಬಾತ 2-3 ದಿನಗಳ ಹಿಂದೆ ಸಿದ್ದ ರಾಮಯ್ಯ ಅವರ ಕುರಿತು ಫೇಸ್‍ಬುಕ್‍ನಲ್ಲಿ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳ ಭಾವನೆಗೆ ಧಕ್ಕೆಯುಂಟು…
ದೇಶದಲ್ಲಿ ಒಂದೇ ದಿನ 8,380 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೆ ಏರಿಕೆ, 5,394 ಮಂದಿ ಸಾವು
June 2, 2020ನವದೆಹಲಿ, ಜೂ. 1- ದೇಶದಲ್ಲಿ ಕೊರೊನಾ ರಣಕೇಕೆ ಹೆಚ್ಚಾಗು ತ್ತಲೇ ಇದ್ದು, ಒಂದೇ ದಿನ ಬರೋಬ್ಬರಿ 8,380 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೇರಿದೆ, ಅಲ್ಲದೆ, ಸಾವಿನ ಸಂಖ್ಯೆ 5,394ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 8,380 ಮಂದಿಯಲ್ಲಿ ಸೋಂಕು ಪತ್ತೆಯಾ ಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 190,535ಕ್ಕೆ ಏರಿಕೆಯಾಗಿದ್ದು, ಈ ಮೂಲಕ ವಿಶ್ವದ ಟಾಪ್…
ಎಲ್‍ಪಿಜಿ ದರ ಏರಿಕೆ: ಜೂನ್ ಮೊದಲ ದಿನವೇ ಸಾರ್ವಜನಿಕರಿಗೆ ಶಾಕ್ ನೀಡಿದ ಸರ್ಕಾರ!
June 2, 2020ನವದೆಹಲಿ, ಜೂ. 1- ಎಲ್‍ಪಿಜಿ ದರವನ್ನು ಏರಿಕೆ ಮಾಡುವ ಮೂಲಕ ಜೂನ್ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಸಾರ್ವಜನಿಕರಿಗೆ ಶಾಕ್ ನೀಡಿವೆ. ತೈಲ ಮಾರುಕಟ್ಟೆ ಕಂಪನಿಗಳು (ಹೆಚ್‍ಪಿ, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತೀ ಸಿಲಿಂಡರ್‍ಗೆ ರೂ. 12 ಹೆಚ್ಚಿಸಿದೆ. ಇದರ ಬಳಿಕ ದೆಹಲಿ ನಿವಾಸಿಗಳು 14.2 ಕೆಜಿ ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ರೂ. 596ಕ್ಕೆ ಏರಿಕೆಯಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಸಿಲಿಂಡರ್ ಬೆಲೆ ರೂ….










