ಮೈಸೂರಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆ
ಮೈಸೂರು

ಮೈಸೂರಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆ

June 4, 2020

ಮೈಸೂರು, ಜೂ.3 (ಎಂಟಿವೈ)- ಮುಂಬೈನಿಂದ ವಾಪಸಾಗಿದ್ದ ತಾಯಿ ಮತ್ತು ಗರ್ಭಿಣಿ ಮಗಳಲ್ಲಿ ಕೊರೊನಾ ಸೋಂಕು ಪತ್ತೆ ಯಾಗಿದೆ. ಮೈಸೂರು ಜಿಲ್ಲೆ ಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 98ಕ್ಕೆ ಏರಿಕೆಯಾಗಿದೆ.

ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಹೆಚ್ಚಳವಾಗಿದೆ. ಮುಂಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ಮೈಸೂರಿನ ರಾಮ ಕೃಷ್ಣನಗರದ ಜಿ ಬ್ಲಾಕ್‍ನ 7 ಕ್ರಾಸ್ ನಿವಾಸಿ 50 ವರ್ಷದ ಮಹಿಳೆ(ಪಿ-3990) ಹಾಗೂ ಅವರ ಪುತ್ರಿ (27) 6 ತಿಂಗಳ ಗರ್ಭಿಣಿ (ಪಿ-3989)ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ.

ಈ ಮಹಿಳೆಯರಿಬ್ಬರ ಸ್ವ್ಯಾಬ್ ಸ್ಯಾಂಪಲ್ ಅನ್ನು ಬೆಂಗಳೂರಿನಲ್ಲಿಯೇ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋ ಗಾಲಯಕ್ಕೆ ಕಳುಹಿಸಲಾಗಿತ್ತು. ಒಂದೊಮ್ಮೆ ಪಾಸಿಟಿವ್ ಬಂದರೆ ಎರಡೂ ಪ್ರಕರಣಗಳೂ ಬೆಂಗಳೂರಿನ ಲೆಕ್ಕಕ್ಕೆ ಸೇರುತ್ತವೆ ಎನ್ನಲಾಗಿತ್ತು. ಆದರೆ ಇಬ್ಬರೂ ಮಹಿಳೆಯರು ಮೈಸೂರಿನ ನಿವಾಸಿಗಳಾದ್ದರಿಂದ ಮೈಸೂರಿನ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್‍ನಲ್ಲಿ ಇದ್ದುದ್ದರಿಂದ ಮೈಸೂರಿನ ಸೋಂಕು ಪೀಡಿತರ ಲೆಕ್ಕಕ್ಕೇ ಈ ಪ್ರಕರಣಗಳನ್ನೂ ಸೇರಿಸಲಾಗಿದೆ.

ಇದುವರೆಗೆ ವರದಿಯಾದ 98 ಪಾಸಿಟಿವ್ ಪ್ರಕರಣಗಳಲ್ಲಿ ಈವರೆಗೆ ಒಟ್ಟು 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 6 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಅವರಲ್ಲಿ ಐವರು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲೂ, ಒಬ್ಬರು (ಐಲ್ರ್ಯಾಂಡ್‍ನಿಂದ ಬಂದವರು) ಕೊರೊನಾದೊಂದಿಗೆ ಕಿಡ್ನಿ ಸಮಸ್ಯೆಗೂ ತುತ್ತಾಗಿದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

866 ಮಂದಿ ಕ್ವಾರಂಟೈನ್‍ನಲ್ಲಿ: ಮೈಸೂರು ಜಿಲ್ಲೆ ಯಲ್ಲಿ ಹೊರ ರಾಜ್ಯ ಮತ್ತು ವಿದೇಶದಿಂದ ಬಂದಿರುವ 866 ಮಂದಿ ಕ್ವಾರಂಟೈನ್‍ನಲ್ಲಿ ಇದ್ದಾರೆ. ಅವರಲ್ಲಿ 729 ಮಂದಿ 14 ದಿನಗಳ ಐಸೊಲೇಟೆಡ್ ಹೋಮ್ ಕ್ವಾರಂಟೈನ್‍ನಲ್ಲೂ, 137 ಮಂದಿ ಐಸೊಲೇಟೆಡ್ ಫೆಸಿಲಿಟಿ ಕ್ವಾರಂಟೈನ್‍ನಲ್ಲಿಯೂ ಇದ್ದಾರೆ. ಈವರೆಗೂ 6441 ಮಂದಿ ಮೇಲೆ ನಿಗಾ ಇಡಲಾಗಿದ್ದು, ಅವರಲ್ಲಿ 5569 ಮಂದಿ 14 ದಿನಗಳ ಅವಧಿಯ ಕ್ವಾರಂಟೈನ್ ಮುಗಿಸಿದ್ದಾರೆ. 9734 ಮಂದಿಯ ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು, 9636 ಸ್ಯಾಂಪಲ್ ನೆಗೆಟಿವ್ ಬಂದಿವೆ. 98 ಸ್ಯಾಂಪಲ್ ಪಾಸಿಟಿವ್ ಆಗಿವೆ

Translate »