ಮೈಸೂರು

ಮುಂಬೈ ನಂಟು: ಒಂದೇ ದಿನ ರಾಜ್ಯದಲ್ಲಿ 99 ಸೋಂಕಿತರು
ಮೈಸೂರು

ಮುಂಬೈ ನಂಟು: ಒಂದೇ ದಿನ ರಾಜ್ಯದಲ್ಲಿ 99 ಸೋಂಕಿತರು

May 19, 2020

ಬೆಂಗಳೂರು, ಮೇ 18- ಮುಂಬೈನಿಂದ ತವರಿಗೆ ಹಿಂದಿರುಗಿ ದವರಿಂದ ರಾಜ್ಯ ತತ್ತರಿಸಿದೆ. ಸೋಮವಾರದಂದು ರಾಜ್ಯದಲ್ಲಿ 99 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿದೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಮುಂಬೈನಿಂದ ತವರಿಗೆ ಹಿಂತಿರುಗಿದವರ ಸಂಖ್ಯೆಯೇ ಹೆಚ್ಚಾಗಿದ್ದು, ಕಳೆದ 20 ದಿನಗಳಿಂದ ಸೋಂಕು ಪತ್ತೆಯಾಗದೇ ಇದ್ದ ಮೈಸೂರು ಮತ್ತು ಕಳೆದ 60 ದಿನಗಳಿಂದಲೂ ಯಾವುದೇ ಸೋಂಕು ಇಲ್ಲದಿದ್ದ ಕೊಡಗು ಜಿಲ್ಲೆಗೆ ಇಂದು ಮತ್ತೇ ಕೊರೊನಾ ಮುಂಬೈ ಮೂಲದಿಂದ ವಕ್ಕರಿಸಿದೆ. ಮುಂಬೈನಿಂದ ಕೆ.ಆರ್.ನಗರ ತಾಲೂಕು…

ನಾಳೆಯಿಂದ ಪಾರ್ಸಲ್ ಬಂದ್ ಹೋಟೆಲ್ ಮಾಲೀಕರ ನಿರ್ಧಾರ
ಮೈಸೂರು

ನಾಳೆಯಿಂದ ಪಾರ್ಸಲ್ ಬಂದ್ ಹೋಟೆಲ್ ಮಾಲೀಕರ ನಿರ್ಧಾರ

May 19, 2020

ಬೆಂಗಳೂರು, ಮೇ 18- ಹೋಟೆಲ್‍ಗಳಲ್ಲಿ ಮೇ 20ರಿಂದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಘೋಷಿಸಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿ ಎಲ್ಲಾ ವ್ಯವಹಾರ ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಿರುವುದರಿಂದ ಹೋಟೆಲ್ ಮಾಲೀಕರು ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದರು.ಪಾರ್ಸಲ್ ಆರ್ಡರ್‍ಗಳು ಹೆಚ್ಚೇನು ಬರುತ್ತಿಲ್ಲ. ಆದರೂ ನಾವು ಹೋಟೆಲ್‍ನ ಬಾಡಿಗೆ ಮತ್ತು ತೆರಿಗೆ ಪಾವತಿಸಲೇಬೇಕಾಗಿದೆ….

ಮೈಸೂರು ಮಹಾ ನಗರ ಪಾಲಿಕೆಯಲ್ಲಿ 878 ಕೋಟಿ ಗಾತ್ರದ ಆಯವ್ಯಯ ಮಂಡನೆ
ಮೈಸೂರು

ಮೈಸೂರು ಮಹಾ ನಗರ ಪಾಲಿಕೆಯಲ್ಲಿ 878 ಕೋಟಿ ಗಾತ್ರದ ಆಯವ್ಯಯ ಮಂಡನೆ

May 19, 2020

ಮೈಸೂರು, ಮೇ 18(ಆರ್‍ಕೆಬಿ)-ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ, ಎರಡು ಕಡೆ ಮಲ್ಟಿಲೆವೆಲ್ ಪಾರ್ಕಿಂಗ್ ಯೋಜನೆ, ದೇವ ರಾಜ ಅರಸು ರಸ್ತೆ ಅಭಿವೃದ್ಧಿ, ಪ್ರಮುಖ ವೃತ್ತಗಳ ಅಭಿ ವೃದ್ಧಿ ಹಾಗೂ ಸೌಂದರ್ಯೀಕರಣ, ಸೀವೆಜ್ ಫಾರಂ ಅನ್ನು ಉದ್ಯಾ ನವನವನ್ನಾಗಿ ಮಾರ್ಪಡಿಸುವುದು ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಒಳಗೊಂಡ 87,879.99 ಲಕ್ಷ ರೂ.ಗಳ 2020ರ ಆಯವ್ಯಯಕ್ಕೆ ಸೋಮವಾರ ಮೈಸೂರು ಮಹಾನಗರ ಪಾಲಿಕೆ ಸಭೆಯಲ್ಲಿ ಅನುಮೋದನೆ ದೊರೆಯಿತು. ಮೇಯರ್ ತಸ್ನೀಂ ಅಧ್ಯಕ್ಷತೆಯಲ್ಲಿ ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಆಯುಕ್ತ…

ಮೈಸೂರಲ್ಲಿ ಸಹಜಸ್ಥಿತಿಗೆ ಜನಜೀವನ
ಮೈಸೂರು

ಮೈಸೂರಲ್ಲಿ ಸಹಜಸ್ಥಿತಿಗೆ ಜನಜೀವನ

May 19, 2020

ಮೈಸೂರು, ಮೇ 18 (ಆರ್‍ಕೆ)- ಹಂತ ಹಂತವಾಗಿ ಕೋವಿಡ್-19 ಲಾಕ್ ಡೌನ್ ನಿರ್ಬಂಧವನ್ನು ಸಡಿಲಗೊಳಿ ಸುತ್ತಿದ್ದಂತೆಯೇ ಮೈಸೂರಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಯಂತಹ ಅತ್ಯವಶ್ಯಕ ವಸ್ತುಗಳ ಅಂಗಡಿ ಜೊತೆಗೆ ಮಾಲ್, ಹೋಟೆಲ್, ಸಿನಿಮಾ ಮಂದಿರಗಳನ್ನು ಹೊರತುಪಡಿಸಿ ಉಳಿ ದೆಲ್ಲಾ ಬಗೆಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಕಳೆದ ಎರಡು ತಿಂಗಳಿಂದ ಮನೆಯಲ್ಲೇ ಇದ್ದ ಜನರು ಹೊರ ಬರಲಾರಂಭಿಸಿದ್ದಾರೆ. ಬಟ್ಟೆ, ಮೊಬೈಲ್, ಜುವೆಲ್ಲರಿ, ಪಾತ್ರೆ, ಕಬ್ಬಿಣ, ಸಿಮೆಂಟ್, ಹಾರ್ಡ್‍ವೇರ್, ಲೇಖನ ಸಾಮಗ್ರಿ,…

ಕಾಂಗ್ರೆಸ್ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ, ಕೆಪಿಸಿಸಿ ಕೊರೊನಾ ವಿಪತ್ತು ಪರಿಹಾರ ನಿಧಿಗೆ ದೇಣಿಗೆ
ಮೈಸೂರು

ಕಾಂಗ್ರೆಸ್ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ, ಕೆಪಿಸಿಸಿ ಕೊರೊನಾ ವಿಪತ್ತು ಪರಿಹಾರ ನಿಧಿಗೆ ದೇಣಿಗೆ

May 19, 2020

ಮೈಸೂರು, ಮೇ 18(ಪಿಎಂ)- ಮೈಸೂರು ನಗರ ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತೆಯರಲ್ಲಿ ಆರ್ಥಿಕ ವಾಗಿ ಹಿಂದುಳಿದವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಅವರ ವತಿಯಿಂದ ಸೋಮವಾರ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುಮಾರು 100 ಮಂದಿಗೆ ಅಕ್ಕಿ, ಬೇಳೆ, ಟೀ ಪುಡಿ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ಹಾಗೂ ತರಕಾರಿ ಒಳಗೊಂಡ ಕಿಟ್‍ಗಳನ್ನು ಡಾ. ಪುಷ್ಪಾ ಅಮರನಾಥ್ ವಿತರಣೆ ಮಾಡಿ ದರು. ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರಿ ನ್ಯಾಪ್ಕಿನ್ ವಿತರಣೆ ಮಾಡಲಾಯಿತು….

ಮೈಸೂರಲ್ಲಿ ಕೊರೊನಾ ಸೋಂಕು ಮುಕ್ತ ಸ್ವಚ್ಛತಾ ವ್ಯವಸ್ಥೆ!
ಮೈಸೂರು

ಮೈಸೂರಲ್ಲಿ ಕೊರೊನಾ ಸೋಂಕು ಮುಕ್ತ ಸ್ವಚ್ಛತಾ ವ್ಯವಸ್ಥೆ!

May 19, 2020

ಮೈಸೂರು, ಮೇ 18(ಆರ್‍ಕೆ)- ನೋವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಕೊರೊನಾ ವಾರಿಯರ್ಸ್ ಸ್ವಯಂಸೇವಕರು, ಟ್ಯಾಪ್(ನಲ್ಲಿ) ಬಳಸದೇ ಕೈ ತೊಳೆದುಕೊಳ್ಳುವ ವಿನೂತನ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆರಂಭವಾದ ಲಾಕ್‍ಡೌನ್ ಸಂದರ್ಭ ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಮೈಸೂರಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ, ಕಾರ್ಮಿಕ ಇಲಾಖೆಯಿಂದ ಕೊರೊನಾ ವಾರಿಯರ್ಸ್ ತಂಡಗಳನ್ನು ರಚಿಸಲಾಗಿತ್ತು. ಸುಮಾರು 70…

ಜಿಲ್ಲಾ ಗಡಿಗಳಲ್ಲಿ ವಾಹನ ತಪಾಸಣೆ ಮತ್ತಷ್ಟು ಬಿಗಿ
ಮೈಸೂರು

ಜಿಲ್ಲಾ ಗಡಿಗಳಲ್ಲಿ ವಾಹನ ತಪಾಸಣೆ ಮತ್ತಷ್ಟು ಬಿಗಿ

May 19, 2020

ಮೈಸೂರು, ಮೇ 18(ಆರ್‍ಕೆ)- ಲಾಕ್‍ಡೌನ್ ಸಡಿಲಗೊಂಡು ಅಂತರ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾ ಗಡಿಯ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನ ತಪಾಸಣೆ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಮೊದಲಿದ್ದ ಕ್ಲಿಯರ್ ಪಾಸ್ ವ್ಯವಸ್ಥೆಯನ್ನು ರದ್ದುಪಡಿಸಿ ಸೇವಾ ಸಿಂಧು ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ವಾಹನಗಳ ಮೂಲಕ ಖಾಸಗಿ ವ್ಯಕ್ತಿಗಳು ಅಂತರ ಜಿಲ್ಲಾ ಪ್ರಯಾಣಕ್ಕೆ ಅರ್ಜಿ ಸಲ್ಲಿಸಿ ಇ-ಪಾಸ್ ಪಡೆಯಲು ಅವಕಾಶ ನೀಡಿರುವುದ ರಿಂದ ಬೈಕು, ಕಾರು, ಟ್ಯಾಕ್ಸಿಗಳಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಜನರು ಪ್ರಯಾಣಿಸುತ್ತಿರುವುದು…

88ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ
ಮೈಸೂರು

88ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ

May 19, 2020

ಬೆಂಗಳೂರು, ಮೇ 18(ಕೆಎಂಶಿ)-ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಪ್ರಧಾನಿ ನರೇಂದ್ರಮೋದಿ, ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಸೇರಿದಂತೆ ಅನೇಕ ಗಣ್ಯರು ಜನ್ಮದಿನದ ಶುಭಾಶಯ ಕೋರಿ ದ್ದಾರೆ. 88ನೇ ವರ್ಷಕ್ಕೆ ಕಾಲಿಟ್ಟಿರುವ ಗೌಡರು ತಮ್ಮ ಹುಟ್ಟು ಹಬ್ಬ ವನ್ನು ಸರಳವಾಗಿ ಆಚರಿಸಿಕೊಂಡರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಅಭಿಮಾನಿಗಳು ತಮ್ಮ ಹುಟ್ಟು ಹಬ್ಬ ವನ್ನು ಆಚರಿಸದಂತೆ ಕರೆ ನೀಡಿದ್ದಲ್ಲದೆ, ತಮ್ಮ ನಿವಾಸಕ್ಕೂ ಯಾರನ್ನು ಬರಬಾರದೆಂದು ಮನವಿ ಮಾಡಿಕೊಂಡಿದ್ದರು. ಪ್ರಧಾನಿ ಅಲ್ಲದೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‍ನಾರಾಯಣ್…

ವಲಸೆ ಕಾರ್ಮಿಕರಿಗೆ ಮೇ 26ರಿಂದ 5 ಕೆಜಿ ಉಚಿತ ಅಕ್ಕಿ ವಿತರಣೆ
ಮೈಸೂರು

ವಲಸೆ ಕಾರ್ಮಿಕರಿಗೆ ಮೇ 26ರಿಂದ 5 ಕೆಜಿ ಉಚಿತ ಅಕ್ಕಿ ವಿತರಣೆ

May 19, 2020

ಬೆಂಗಳೂರು, ಮೇ 18(ಕೆಎಂಶಿ)-ನಾಳೆಯಿಂದ ನಾಲ್ಕನೇ ಹಂತದ ಲಾಕ್‍ಡೌನ್ ಜಾರಿ ಹಿನ್ನೆಲೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾ ಲಯ್ಯ ಆಹಾರ ಇಲಾಖೆಯಿಂದ ಪಡಿತರದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ-ಪ್ಯಾಕೇಜ್ 2 ಜಾರಿಯಾಗಿದ್ದು, ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ. ಉಚಿತ ಅಕ್ಕಿ ನೀಡಲಾಗುತ್ತಿದೆ ಎಂದರು. ಜೂನ್ ತಿಂಗಳಿನ 1ರಿಂದ 10ನೇ ತಾರೀಖಿನವರೆಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು…

ಮದ್ಯ ನಿಷೇಧಕ್ಕೆ ಆಗ್ರಹ: ಮನಿ ಆರ್ಡರ್ ಚಳವಳಿ
ಮೈಸೂರು

ಮದ್ಯ ನಿಷೇಧಕ್ಕೆ ಆಗ್ರಹ: ಮನಿ ಆರ್ಡರ್ ಚಳವಳಿ

May 19, 2020

ಚಾಮರಾಜನಗರ, ಮೇ 18(ಎಸ್‍ಎಸ್)- ಮದ್ಯ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಮದ್ಯ ನಿಷೇಧ ಆಂದೋಲನ ಸಮಿತಿ ವತಿಯಿಂದ ನಗರದಲ್ಲಿ ಮನಿ ಆರ್ಡರ್ ಚಳವಳಿ ನಡೆಸ ಲಾಯಿತು. ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಸಂದೇಶ ರವಾನಿಸುವ ಸಲುವಾಗಿ ಅಂಚೆ ಕಚೇರಿಯಲ್ಲಿ ಹೆಣ್ಣು ಮಕ್ಕಳಿಂದ ಮುಖ್ಯಮಂತ್ರಿಗಳಿಗೆ 10, 20 ರೂ.ಗಳನ್ನು ಮನಿ ಆರ್ಡರ್ ಮಾಡಿಸುವ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರವನ್ನು…

1 568 569 570 571 572 1,611
Translate »